ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಲಿವಿಂಗ್ ರೂಟ್ ಬ್ರಿಡ್ಜ್

ಪ್ರಪಂಚದಾದ್ಯಂತ ಅದೆಷ್ಟೋ ಸೇತುವೆಗಳು, ತಮ್ಮ ನಿರ್ಮಾಣದ  ಐತಿಹಾಸಿಕತೆಗೆ, ವಿಜ್ಞಾನ ಮತ್ತು ತಂತ್ರವಿದ್ಯೆಗೆ ಪ್ರಸಿದ್ಧಿಯನ್ನು ಪಡೆದಿದೆ. ಮಾನವನ ಆವಿಷ್ಕಾರಗಳ ಚಾಣಾಕ್ಷ್ಯತೆಯ ಇಂತಹ ಕೊಡುಗೆಗಳ ಪೈಕಿ, ಕಲ್ಲು, ಇಟ್ಟಿಗೆ, ಕಬ್ಬಿಣ, ಉಕ್ಕು, ಕಾಂಕ್ರೀಟ್ ಇತ್ಯಾದಿ ಯಾವುದೇ ವಸ್ತುಗಳನ್ನು ಬಳಸದೇ,  ಪ್ರಕೃತಿಯನ್ನೇ ಸಂಪರ್ಕ ಕೊಂಡಿಯಾಗಿ ಬಳಸಿಕೊಂಡು ನಿರ್ಮಿಸಿರುವ, ನೂರಾರು ವರ್ಷಗಳಷ್ಟು ಹಳೆಯ ಆದರೂ ಸುಧೃಡವಾಗಿ ಚಾಲ್ತಿಯಲ್ಲಿರುವ, ಸೇತುವೆಗಳ ದಾಖಲೆಯೊಂದು ನಮ್ಮ ಭಾರತದಲ್ಲಿದೆ. ಅದುವೇ ಪ್ರಪಂಚದ ಅದ್ಭುತ ಅಚ್ಚರಿಗಳಲ್ಲಿ ಒಂದಾದ ಮೇಘಾಲಯದ ನಿಸರ್ಗವುದು ಕೇವಲ ಮರಗಳ ಬೇರುಗಳಿಂದ! ಭಾರತದ ಆರ್ದ್ರ ಸ್ಥಳ ಎಂಬ ಮನ್ನಣೆಗೆ ಪಾತ್ರಗೊಂಡಿರುವ ಮೇಘಾಲಯದ ಚಿರಾಪುಂಜಿಯಲ್ಲಿ ವರ್ಷವಿಡೀ ಮಳೆ. ಸರ್ವ ನಿರ್ಮಿತ ಸೇತುವೆ - ಲಿವಿಂಗ್ ರೂಟ್ ಬ್ರಿಡ್ಜ್. 'ಲಿವಿಂಗ್ ರೂಟ್ ಬ್ರಿಡ್ಜ್' ಹೆಸರೇ ಸೂಚಿಸುವಂತೆ, ಈ ಸೇತುವೆಗಳು ನಿರ್ಮಾಣಗೊಂಡಿರುವುದು ಜೀವಂತ ಮರದ ಬೇರುಗಳಿಂದ! ಸಂಪನ್ನ ಅರಣ್ಯ ರಾಶಿ ಇಲ್ಲಿನ ವರವೇನೋ ಹೌದು. ಆದರೆ ಈ ಮಳೆ ನಾಡಿನಲ್ಲಿ ಮೂಲನಿವಾಸಿಗಳ ಕಾಲದಿಂದಲೂ ನದಿ ಮತ್ತು ಹೊಳೆಗಳನ್ನು ದಾಟಲು ಸಂಪರ್ಕ ಕೊಂಡಿಯ ವ್ಯವಸ್ಥೆ ಅತ್ಯಂತ ದೊಡ್ಡ ಸವಾಲು. ಹಿಂದೆ, ಬಿದಿರು ಮತ್ತು ಇತರ ಮರಮುಟ್ಟುಗಳನ್ನು ನೀರಿಗ...

ಹೇಮಕುಂಡ್ ಸಾಹಿಬ್ - ಹಿಮಾಲಯ ಟ್ರೆಕ್

ಇಮೇಜ್
ಜಿಟಿ ಜಿಟಿ ಮಳೆ, ಹಿಮಾಲಯದ ಶೃಂಗಗಳಿಂದ ಬೀಸುವ ಶೀತಗಾಳಿ, ಹಾದಿಯ ಅಕ್ಕಪಕ್ಕದಲ್ಲೆಲ್ಲ ಮಳೆಯಲ್ಲಿ ತೋಯ್ದು ತೆಪ್ಪೆಯಾದ ಹಸಿರು ಗಿಡ ಮರಗಳು, ಸೂರ್ಯನ ಪ್ರಕಾಶಕ್ಕೆ, ಹವಳಗಳಂತೆ ಹೊಳೆವ ಹೂವಿನ ಮೇಲಿನ ಮಳೆ ಹನಿಗಳು, ಕಣ್ಣೆತ್ತಿ ನೋಡಿದಷ್ಟೂ ಪರ್ವತಾವಳಿ,  ಕ್ಪಣ ಕ್ಷಣಕ್ಕೂ ಸುತ್ತಲಿನ ನಿಸರ್ಗವನ್ನು ಮಾಂತ್ರಿಕವಾಗಿ ಬದಲಾಯಿಸುವ  ಇಬ್ಬನಿ, ಮಂಜು ಮತ್ತು ಮೋಡಗಳ ಆಟ, ದೊಡ್ಡ ದೊಡ್ಡ ಪರ್ವತಗಳನ್ನು ಹಾದು,ಬೆಳ್ಳಗೆ ಹಾಸಿ ಬಂದು ನಿಂತಿರುವ ಹಿಮನದಿ, ಆ ಬ್ರಹತ್ ಹಿಮನದಿಗಳ ಪಕ್ಕದಲ್ಲೇ, ಮೈಯ ಕೊರೆಯುವ ಚಳಿಯಲ್ಲಿ ನಮ್ಮ ನೆಡಿಗೆ.. ಅಬ್ಬಾಬ್ಬಾ..ಅನುಭವಿಸಿಯೇ ತೀರಬೇಕು ಆ ರಮ್ಯತೆಯನ್ನು! ಹೀಗೊಂದು ರೋಚಕ ಚಾರಣದ ಅನುಭವವನ್ನು ಕಳೆದ ಅಗಸ್ಟ್ ತಿಂಗಳಿನಲ್ಲಿ ಉತ್ತರಾಂಚಲದ 'ಹೇಮಕುಂಡ್ ಸಾಹಿಬ್' ಗೆ ಭೇಟಿ ನೀಡುವ ಸಂದರ್ಭದಲ್ಲಿ ನಾವು ಪಡೆದೆವು.  'ಹೇಮಕುಂಡ್ ಸಾಹಿಬ್' -ಸ್ಥಳ ಇತಿಹಾಸ : ಸಂಸ್ಕೃತದಲ್ಲಿ 'ಹೇಮ್' ಎಂದರೆ ಹಿಮ ಮತ್ತು 'ಕುಂಡ್' ಎಂದರೆ ಬಟ್ಟಲು. ಹೌದು, ಹೇಮಕುಂಡ್ ಸಾಹಿಬ್ ಒಂದು ಹಿಮದ ಬೋಗುಣಿಯಲ್ಲಿರುವ ಗುರುದ್ವಾರ.  ಈಗಿನ ಹೇಮಕುಂಡ್ ಸಾಹಿಬ್ ಗುರುದ್ವಾರವಿರುವ ಸ್ಥಳದಲ್ಲಿ, ಹಿಂದಿನಿಂದಲೂ ರಾಮನ ತಮ್ಮ ಲಕ್ಷ್ಮಣ ತನ್ನ ಹಿಂದಿನ ಜನ್ಮದವತಾರದಲ್ಲಿ ದೈವಕೃಪೆಗಾಗಿ ಕುಳಿತು ತಪಸ್ಸು ಮಾಡಿದ್ದನು ಎಂಬ ಪ್ರತೀತಿಯಿಂದ ಜೋಷಿಮಠದ ...

ಈ ಸರ್ತಿಯ ರಜೆ ಹೀಗಿದ್ದರೆ ಹೇಗೆ ಮುದ್ದು ಮಕ್ಕಳೇ..?

ಇಮೇಜ್
ಮುದ್ದು ಮಕ್ಕಳೇ ಪರೀಕ್ಷೆಗಳು ಮುಗಿದು ರಜೆ ಪ್ರಾರಂಭವಾಗಿದೆ. ರಜೆ ಎಂದರೆ ಪಠ್ಯಪುಸ್ತಕ ಹೊಂವರ್ಕ್ ಗಳಿಂದ ಬಿಡುಗಡೆ, ಟಿ.ವಿ, ಮೊಬೈಲು, ಕೈಯಲ್ಲಿ ಕುರುಕಲು ತಿಂಡಿ ಮಾತ್ರ ಅಲ್ಲ ಪುಟಾಣಿಗಳೇ.. ಅದಕ್ಕಿಂತ ಮಿಗಿಲಾಗಿ ನಿಮ್ಮನ್ನು ರಂಜಿಸುವ ಅನೇಕ ವಿಷಯಗಳು ಹೊರಗಿನ ಪ್ರಪಂಚದಲ್ಲಿವೆ. ಈ ಸರ್ತಿ ಅವೆಲ್ಲವನ್ನು ಹುಡುಕಿ ಇಂಟರೆಸ್ಟಿಂಗ್ ಹಾಲಿಡೆ ಮಾಡಿಕೊಳ್ಳೋಣವೆ? ಈ ರಜೆಯನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳಲು, ಮತ್ತಷ್ಟು ರಂಗು ರಂಗಾಗಿಸಲು ನಿಮಗೆ ಇಲ್ಲಿವೆ ಕೆಲವು ಹಾಲಿಡೇ ಟಿಪ್ಸ್ ನಿಮಗೆ ದೊರಕಿರುವ ಈ ದಸರಾ ರಜೆಯ ಉದ್ದೇಶ, ಹಬ್ಬ ಹರಿದಿನಗಳ ಆಚರಣೆ, ಹಿನ್ನಲೆಗಳ ಬಗ್ಗೆ ಹಿರಿಯರಿಂದ ಕೇಳಿ ತಿಳಿದುಕೊಳ್ಳಿ. 'ನಿಮ್ಮದೇ ಹಾಬಿ ಪುಸ್ತಕವಿದ್ದರೆ ಅದರಲ್ಲಿ ತಿಳಿದುಕೊಂಡಿದ್ದನ್ನು ಬರೆದಿಟ್ಟುಕೊಂಡು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.  ದೊಡ್ಡವರ ಜೊತೆ ಚರ್ಚಿಸಿ, ಆಟದ ಮೂಲಕ ಒಂದು ದಿನ ನಿಮ್ಮ 'ಅಮ್ಮ' ನ ರೋಲ್ ನೀವು ತೆಗೆದುಕೊಳ್ಳಿ. ಅಮ್ಮ ತರಹ ಆಕ್ಟ್ ಮಾಡುವುದು, ಅಮ್ಮನ ತರಹ ಮನೆಯಲ್ಲಿನ  ಎಲ್ಲ ಕೆಲಸ ಮಾಡುವುದು, ಎಲ್ಲವೂ ಅಮ್ಮನಂತೆ.. ! ಬೇಕಾಗುವ ಕೆಲವು ಜವಾಬ್ಧಾರಿಯುತ ಕೆಲಸಕ್ಕೆ ಕೇಳಿ ಸಹಾಯ ಪಡೆದುಕೊಳ್ಳಿ ಆದರೆ ನಿಮ್ಮ ಪ್ರಯತ್ನ ಮೊದಲು ಇರಲಿ.  ಪ್ರತಿದಿನ ನಿಮ್ಮಿಂದ ಸಾಧ್ಯವಾಗುವ ಯಾವುದಾದರೂ ಒಂದು ಮನೆಗೆಲಸವನ್ನು ಮುಂಚಿತವಾಗಿಯೇ ದೊಡ್ಡವರಿಗೆ ತಿಳಿಸಿ ಮಾಡಿ ಕೊಡಿ ಮತ್ತು ಮಾಡಿಯಾದ ನಂತರಆ ಕೆಲಸ...

ನವರಾತ್ರಿ ಎಟ್ ಗುವಾಹಟಿ

ಇಮೇಜ್
ನವರಾತ್ರಿ ಸಮಯದಲ್ಲೇ ಈ ಸರ್ತಿ ಅಸ್ಸಾಂ ಗೆ ಪ್ರವಾಸ ಹೋಗಿದ್ದರಿಂದ, ಅಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವ 'ದುರ್ಗಾ ಪೂಜಾ' ಹಬ್ಬವನ್ನು ಕಣ್ಣಾರೆ ಕಾಣುವ ಅದೃಷ್ಟ ನಮಗೆ ಸಿಕ್ಕಿತು. ನಮ್ಮಲ್ಲಿ ಗಣಪತಿ ಹಬ್ಬದ ಸಮಯದಲ್ಲಿ, ಸ್ಪರ್ಧಾತ್ಮಕ ಅಲಂಕಾರ, ವಿವಿಧ ಥೀಮ್ ಗಳೊಂದಿಗೆ ಸ್ಥಾಪಿತವಾಗುವ ಗಣಪನಂತೆ, ಅಲ್ಲಿ ದುರ್ಗೆ ರಾರಾಜಿಸುತ್ತಾಳೆ.. ಈ ಸಮಯದಲ್ಲಿ ಊರಿಗೆ ಊರೇ, ಸಣ್ಣ ದೊಡ್ಡ ದುರ್ಗಾ ಪೂಜಾ ಪೆಂಡಾಲ್ಗಳು, ಲೈಟಿನ ಸರಗಳಿಂದ ಕೋರೈಸುತ್ತದೆ..ನಾವು ಉಳಿದುಕೊಂಡಿದ್ದ ಹೋಟೆಲ್ ನಿಂದ, ಹತ್ತಿರದಲ್ಲಿದ್ದ ಒಂದು ದುರ್ಗಾ ಪೂಜಾ ಸ್ಥಳಕ್ಕೆ ಭೇಟಿ ನೀಡಿದ್ದೆವು. ಒಂದು ಅದ್ಭುತವಾದ ಮತ್ತು ವಿಶೇಷತೆಯನ್ನು ಹೊಂದಿದ್ದ ಉತ್ಸವ ಕಾರ್ಯಕ್ರಮವದು..ಮುಖ್ಯ ರಸ್ತೆಯಿಂದ ಹಿಡಿದು, ಒಳಗಿನ ಮಾರ್ಗ, ಪೆಂಡಾಲ್, ಸುತ್ತಮುತ್ತಲಿನ ಅಲಂಕಾರ, ಸರ್ವಂ 'ಸೆಣಬು' ಮಯಂ!! ಈ ಸರ್ತಿಯ ಅಸ್ಸಾಂ ಪೂಜಾ ಕಮಿಟಿ ಯವರಿಂದ, ಸಾಧ್ಯವಾದಷ್ಟು ಪ್ಲಾಸ್ಟಿಕ್ ಮತ್ತಿತರ ಮಾಲಿನ್ಯ ವಸ್ತುಗಳ ಬಳಸದೇ ದುರ್ಗಾ ಪೂಜಾ ಅರೇಂಜ್ಮೆಂಟ್ ಕಾಂಪಿಟಿಷನ್ ಗೆ ಕರೆ ಕೊಟ್ಟಿದ್ದರಿಂದ, ಈ ಸಂಸ್ಥೆಯವರು ಕೊಲ್ಕತ್ತಾ ಕಲಾವಿದರನ್ನು ಕರೆಸಿ ಕೇವಲ ಮರದ ಚೂರು, ಸೆಣಬು, ಭತ್ತದ ನಾರು, ಹಣ್ಣುಗಳ ಬೀಜ, ಮಣ್ಣು ಇತ್ಯಾದಿ ವಸ್ತುಗಳನ್ನು ಬಳಸಿ ಈ ಮಂಟಪವನ್ನು ತಯಾರು ಮಾಡಿದ್ದರಂತೆ.. ಪ್ರಸಾದ ವಿತರಣೆಗೆ ಕೇವಲ ನೈಸರ್ಗಿಕ ಎಲೆ ಮತ್ತು ಬಾಳೆಎಲೆಗಳ ಬಳಕೆ ಮಾಡಿದ್ದರು. ಇದು ಅಸ್ಸಾಂ ದುರ್ಗಾ ಪೂಜಾ ಅರ...

ಪರಿಸರದಿನ_ಆಗಲಿಪ್ರತಿದಿನ

ಒಂದೆರಡು ಅನುಭವಗಳೊಂದಿಗೆ: ಬಂಧು ಒಬ್ಬರ ಮನೆಗೆ ಹೋಗಿದ್ದೆವು. ಎಲ್ಲರೂ ಕೂತು ಮಾತನಾಡುತ್ತ ಇರುವಾಗ ಅದು ಇದು ಸುದ್ದಿ ಬಂದು, ಒಂದು ಸುಂದರವಾದ ಆಕರ್ಷಣೀಯ ಬಣ್ಣದ ಪ್ಲಾಸ್ಟಿಕ್ ಬೌಲ್ ಒಂದನ್ನು ತೋರಿಸಿ, "ಈ ಬೌಲ್ ಅಂಗಡಿಲಿ ನೋಡಿ ಎಷ್ಟು ಇಷ್ಟ ಆತು ಅಂದ್ರೆ, ಈ ಬೌಲ್ ಗಾಗಿಯೇ ೪ ದೊಡ್ಡ ಪ್ಯಾಕೆಟ್ ಮ್ಯಾಗಿ ತಗಂಡಿದ್ದು ನಾನು, ಅದರಲ್ಲಿ ಫ್ರೀ ಬತ್ತು .." ಎಂದು ಅವರು ಹೆಮ್ಮೆಯಿಂದ ಹೇಳುವಾಗ ಒಮ್ಮೆಲೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯಲಿಲ್ಲ. ಆದರೆ ಪರಿಸರಕ್ಕೆ ನಮ್ಮ ಕೊಡುಗೆ ಎನ್ನುವುದು - ಕೇವಲ ನಮ್ಮ ಸ್ವಂತ ಪ್ರಯತ್ನ ಒಂದೇ ಅಲ್ಲದೆ, ಅದರ ಕುರಿತಾಗಿ ಒಂದಷ್ಟು ಅರಿವು ನೀಡಬೇಕ್ಕಾದ್ದು ಕೂಡ ಅಷ್ಟೇ ಮುಖ್ಯ. ಸಂದರ್ಭ ನೋಡಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ನಮ್ಮಲ್ಲೇ ಇರುವಂತಹ ವಸ್ತುಗಳ ಮರುಬಳಕೆಯ ಕುರಿತು ವಿನಂತಿಸಿಯೇ ಬಂದೆ. ಈಗ ಸಂತೋಷದ ವಿಚಾರವೆಂದರೆ, ಅವರು ತರಕಾರಿ ಚೀಲಗಳನ್ನು ಬಟ್ಟೆಯಿಂದಲೇ ಹೊಲೆದು ಪ್ಲಾಸ್ಟಿಕ್ ಕಡಿಮೆ ಮಾಡಿದ್ದರ ಕುರಿತಾಗಿ ಹೇಳಿಕೊಂಡಿದ್ದಾರೆ. ಉತ್ತರಾಖಂಡ್ ಟ್ರೆಕ್ ಹೋದ ಸಮಯದಲ್ಲಿ, ಚಾರಣದ ಹಾದಿಯ ಮಧ್ಯೆ ಚಾ ಅಂಗಡಿಯಲ್ಲಿ ಒಂದು ಸ್ಟಾಪು ಕೊಟ್ಟುಕೊಂಡೆವು. ಸಾಕಷ್ಟು ಸಿಖ್ಖ ಯಾತ್ರಿಗಳು ಅಲ್ಲಿ ಇದ್ದರು. ಅವರಲ್ಲೊಬ್ಬ 'ಚಿರಯುವಕ' ಅಂಗಡಿಯವನ ಬಳಿ ಬಿಸ್ಕತ್ತಿನ ಪಟ್ಟಣ ಕೊಂಡುಕೊಂಡು ಅಲ್ಲೇ ನಾಲಿಗೆ ಚಾಚಿ ಮುಖ ಮುಖ ನೋಡುತ್ತಿದ್ದ ನಾಯಿಗೆ ಅಷ್ಟೂ ಬಿಸ್ಕತ್...

'ವ್ಯಾಲಿ ಆಫ್ ಫ್ಲವರ್ಸ್'

ಇಮೇಜ್
ಅಲ್ಲಿ ನಿಂತು ನೋಡಿದರೆ, ೩೬೦ ಡಿಗ್ರಿ ಸುತ್ತಲೂ ಆವರಿಸಿದ ಮಂಜಿನ ಬೆಟ್ಟಗಳ ಸಾಲು,ಅದರಾಚೆಗೆ ಹಿಮ ಹೊತ್ತ ರುದ್ರ ರಮಣೀಯ ಪರ್ವತ,  ಹಿ ಮ ಕರಗಿ ನೀರಾಗಿ, ಕಾಲ್ಬದಿಗೆ ಹರಿವ ಸಣ್ಣ ತೊರೆ, ಅಲ್ಲೇ ಪಕ್ಕದ ಹಚ್ಚ ಹಸಿರ ಬೆಟ್ಟದಿಂದ ದುಮ್ಮಿಕ್ಕುವ ಬೆಳ್ನೊರೆಯ ಜಲಪಾತ, ನೀಲಾಕಾಶ, ಬಿಳಿ ಮೋಡಗಳ ಚಿತ್ತಾರ.. ಸೂರ್ಯ ನೆತ್ತಿ ಮೇಲಿದ್ದರೂ ಮೈಸೋಕುವ ತಂಗಾಳಿ ,  ಇದೆಲ್ಲದರ ಮಧ್ಯೆ  ಭೂಮಿಯ ಮೇಲೆ ಪುಷ್ಪ ವೃಷ್ಟಿಯಾಗಿದೆಯೇನೋ ಎಂದು ಭಾಸವಾಗುವಂತೆ  ಆ ಹುಲ್ಲುಗಾವಲಿನ ಕಣಿವೆಯ  ತುಂಬಾ ಕಣ್ಣು ಹಾಯಿಸಿದಷ್ಟು ದೂರಕ್ಕೂ  ಬಣ್ಣ ಬಣ್ಣದ ಹೂಗಳ ಹಾಸು..!! ಇಂತದ್ದೊಂದು ಸಮ್ಮೋಹನಗೊಳಿಸುವಂತಹ  ನೈಸರ್ಗಿಕ ಸೌಂದರ್ಯ ಕಾಣಸಿಗುವುದು, ಉತ್ತರಾಂಚಲದ ಪ್ರಸಿದ್ಧ ಚಾರಣ ಸ್ಥಳ 'ವ್ಯಾಲಿ ಆಫ್ ಫ್ಲವರ್ಸ್' ನಲ್ಲಿ.   ವ್ಯಾಲಿ ಆಫ್ ಫ್ಲವರ್ಸ್ ನಲ್ಲೇನಿದೆ ?  ವ್ಯಾಲಿ ಆಫ್ ಫ್ಲವರ್ಸ್  ಪ್ರಾರಂಭಿಕ ಹಂತದ ಪರ್ವತಾರೋಹಣರಿಗೆ ಹೇಳಿ ಮಾಡಿಸಿದಂತಹ ಚಾರಣ.  ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೊಬರ್ ಕೊನೆಯವರೆಗೂ ಮಾತ್ರ ಟ್ರೆಕಿಂಗ್ ಮಾಡಬಹುದಾದ ಈ ಸ್ಥಳಗಳು, ನಂತರದ ೬ ತಿಂಗಳು ಸಂಪೂರ್ಣ ಹಿಮಾವೃತ್ತವಾಗುತ್ತದೆ.  ಸಮುದ್ರ ಮಟ್ಟಕ್ಕಿಂತ ೧೨೦೦೦ ಅಡಿಗಳಷ್ಟು ಎತ್ತರದಲ್ಲಿರುವ ವ್ಯಾಲಿ ಆಫ್ ಫ್ಲವರ್ ಕಣಿವೆಯು ದಟ್...

ಟ್ರೆಕ್ ಟು ಘಾನ್ಗ್ಹರಿಯ

ಟ್ರೆಕಿಂಗ್ ಟೀಮಿನವರನ್ನು ಸೇರಿಕೊಂಡು ಹೃಷಿಕೇಶದಿಂದ ಹೊರಟು, ಜೋಷಿಮಠ ದೇವಪ್ರಾಯಗದ ಮೂಲಕ ಹಾದು, ಸುಧೀರ್ಘ ೧೨.೫ ತಾಸುಗಳ ಘಾಟಿ ರೋಡಿನ ಪ್ರಯಾಣ. ಬೆಂಗಳೂರಿನಿಂದ ಹೊರಡುವಾಗ ನೋಡಿಕೊಂಡ ವೆದರ್ ರಿಪೋರ್ಟ್ ಪ್ರಕಾರ ನಾವು ಟ್ರೆಕ್ ಹೋಗುವ ಸ್ಥಳದಲ್ಲಿ ಎಲ್ಲಾ ದಿನವೂ ಮಳೆ ಎಂದಿತ್ತು. ನಮ್ಮದು ಪೂರಾ ಮಾನ್ಸೂನ್ ಟ್ರೆಕ್ಕೇ ಆಗಲಿಕ್ಕಿದೆ ಎಂದು ಗಟ್ಟಿ ಮನಸ್ಸು ಮಾಡಿಯೇ ಹೊರಟಿದ್ದರಿಂದ, ಆಗಾಗ್ಗೆ ಹನಿಯುತ್ತಿದ್ದ ಜುಮುರು ಮಳೆ, ಒಮ್ಮೊಮ್ಮೆ ಕಗ್ಗತ್ತಲು ಅವರಿಸುವಂತಹ ಮೋಡ ಮತ್ತು ಕೆಲವೊಮ್ಮೆ ಶುಭ್ರ ಬಿಳಿ ಮಂಜಿನ ಮುಸುಕು ಹೀಗೆ ಕ್ಷಣ ಕ್ಷಣಕ್ಕೆ ಬದಲಾಗುತ್ತಿದ್ದ ವಾತಾವರಣ ಕಂಡರೂ ಆತಂಕವೆನಿಸಲಿಲ್ಲ. ಹಿಂದಿ ಸುಲಲಿತವಾದ್ದರಿಂದ ಮಾತುಕತೆಗೆನೂ ತೊಂದರೆಯಾಗಲಿಲ್ಲ. ವಾಹನ ಚಾಲಕ ಶೈಲೇಂದರ್, ಅಲ್ಲಿನ ಭೌಗೋಳಿಕತೆ, ಜನಜೀವನ ಇತ್ಯಾದಿ ಕುರಿತಾಗಿ ಹೊಸ ವಿಷಯಗಳನ್ನು ತಿಳಿಸುತ್ತ, ನಮ್ಮೆಲ್ಲ ಪ್ರಶ್ನೆಗಳಿಗೆ, ಕುತೂಹಲಕ್ಕೆ ಉತ್ಸುಕತೆಯಿಂದಲೇ ಉತ್ತರಿಸುತ್ತ ಹೋಗುತ್ತಿದ್ದರು. ಗಾಡಿಯ ಕಿಟಕಿಯಾಚೆಗಿನ ಪ್ರತಿಯೊಂದು ವಿಹಂಗಮ ನೋಟವೂ ಒಂದೊಂದು ಕಥೆ ಸಾರುವಂತಿತ್ತು. ಮತ್ತವಷ್ಟೂ ಅಗಾಧ ಹಿಮಾಲಯದ ಒಂದು ಸಣ್ಣ ಭಾಗವಷ್ಟೇ ಎಂಬುದು ನಮ್ಮನ್ನು ಮತ್ತಷ್ಟು ಬೆರಗಾಗುವಂತೆ ಮಾಡುತ್ತಿತ್ತು. ದಿನದ ಕೊನೆಯಲ್ಲಿ ತಲುಪಿದ್ದು ಪಾಂಡುಕೇಶ್ವರ ಎಂಬ ಊರಿಗೆ. ಟ್ರೆಕಿಂಗ್ ಗೈಡ್ಗಳು ತಮ್ಮ ಪರಿಚಯ, ಟ್ರೆಕಿಂಗ್ ಸಮಯದ ಅನುಕೂಲ/ಅನಾನುಕೂಲಗಳು, ಸೌಲಭ್ಯಗಳು, ಟ್ರೆಕಿಂಗ್ ನ ನಿಯಮಗ...

some-ಬಂಧಗಳು

ಇಮೇಜ್
 ಉತ್ತರಾಖಂಡದ ಕೆಲವು ಸ್ಥಳಗಳಿಗೆ ಟ್ರೆಕ್ಕಿಂಗ್ ಹೋಗಲು ಏಜೆನ್ಸಿ ಒಂದರಿಂದ ಬುಕ್ ಮಾಡಿಕೊಂಡಿದ್ದೆವು. ಹೃಷಿಕೇಶ್ ಹತ್ತಿರದ ತಪೋವನ್ ಎಂಬ ಸ್ಥಳದಿಂದ ನಮ್ಮ ಪಿಕ್ಅಪ್ ನಿಗದಿಯಾಗಿತ್ತು. ಹರಿದ್ವಾರದಿಂದ ಚಾರಣಿಗರನ್ನೆಲ್ಲ ಕರೆದುಕೊಂಡು ಹೊರ ಟ ಟಿ.ಟಿ ಯಲ್ಲಿ ಸ್ಥಳವಿಲ್ಲದ್ದರಿಂದ, ಅವರದ್ದೇ ಇನ್ನೊಂದು ವಾಹನ, ಹಿಂದಕ್ಕಿದ್ದ ಟಾಟಾ ಸುಮೋದಲ್ಲಿ ನನ್ನನ್ನು ಮತ್ತು (ಲಕ್ಷ್ಮಿ) ಚಿನ್ನಕ್ಕಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದರು.ಅನೇಕ ಸ್ಥಳಗಳಿಗೆ ಫ್ಯಾಮಿಲಿ ಟ್ರಿಪ್ಸ್ ಓಡಾಡಿದ್ದೆ ಆದರೆ ಮನೆಯಿಂದ ಈ ರೀತಿಯಾಗಿ ಒಬ್ಬಳೇ ಹೊರಟಿದ್ದು ಇದೇ ಮೊದಲ ಅನುಭವ. ಚಾರಣದ ಸ್ಥಳ, ಚಾರಣಿಗರ ಸಂಗಡ, ಅಲ್ಲಿ ದೊರಕಬಹುದಾದ ಸುರಕ್ಷೆ, ವ್ಯವಸ್ಥೆ ಅವ್ಯವಸ್ಥೆಗಳ ಕುರಿತು ಒಂದು ಚೂರು ಅಳುಕು ಇದ್ದದ್ದೂ ನಿಜ.. ಮಳೆಯ ಪರಿಣಾಮವಾಗಿ (ಮಳೆ ಹೆಚ್ಚಾದಾಗ ಯಾವ ಸಮಯಕ್ಕೆ ಯಾವ ರಸ್ತೆಗೆ ಯಾವ ಗುಡ್ಡಗಳು ಕುಸಿದು ಬೀಳುತ್ತವೆ ಎಂದು ಹೇಳಲಾಗದಂತಹ ಪರಿಸ್ಥಿತಿ) ಸುಧೀರ್ಘ 1.5 ತಾಸಿನ ಕಾಯ್ವಿಕೆಯ ನಂತರ ಬಂದು ತಲುಪಿದ ಗಾಡಿಯನ್ನು ಹತ್ತಿ ಕುಳಿತೆವು. ಪಕ್ಕಕ್ಕೆ ನೋಡಿದರೆ ಇಬ್ಬರು ದೈತ್ಯಾಕಾರದ ವ್ಯಕ್ತಿಗಳು. ಮಳೆಯ ರೈನ್ಕೋಟ್, ಬೆನ್ನಿಗೆ ಹೊತ್ತಿದ್ದ ದೊಡ್ಡ ಬ್ಯಾಗ್, ನಮ್ಮ ನೀರಿನ ಬಾಟಲ್, ಕ್ಯಾಮೆರಾ ಎಲ್ಲವನ್ನೂ ಒಂದು ಹಂತಕ್ಕೆ  ಜೋಡಿಸಿ ಎತ್ತಿಟ್ಟು, ಕುಳಿತುಕೊಳ್ಳಲು ಸ್ಥಳವನ್ನೆಲ್ಲ ಸರಿ ಮಾಡಿಕೊಂಡದ್ದಾಯಿತು. ನಮಗೋ ಆ ಕಡೆ ಈ ಕಡೆ ಪ್ರಕೃತಿಯ...