ಪೋಸ್ಟ್‌ಗಳು

ನೆನಪಿನ ಬುತ್ತಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

'ವ್ಯಾಲಿ ಆಫ್ ಫ್ಲವರ್ಸ್'

ಇಮೇಜ್
ಅಲ್ಲಿ ನಿಂತು ನೋಡಿದರೆ, ೩೬೦ ಡಿಗ್ರಿ ಸುತ್ತಲೂ ಆವರಿಸಿದ ಮಂಜಿನ ಬೆಟ್ಟಗಳ ಸಾಲು,ಅದರಾಚೆಗೆ ಹಿಮ ಹೊತ್ತ ರುದ್ರ ರಮಣೀಯ ಪರ್ವತ,  ಹಿ ಮ ಕರಗಿ ನೀರಾಗಿ, ಕಾಲ್ಬದಿಗೆ ಹರಿವ ಸಣ್ಣ ತೊರೆ, ಅಲ್ಲೇ ಪಕ್ಕದ ಹಚ್ಚ ಹಸಿರ ಬೆಟ್ಟದಿಂದ ದುಮ್ಮಿಕ್ಕುವ ಬೆಳ್ನೊರೆಯ ಜಲಪಾತ, ನೀಲಾಕಾಶ, ಬಿಳಿ ಮೋಡಗಳ ಚಿತ್ತಾರ.. ಸೂರ್ಯ ನೆತ್ತಿ ಮೇಲಿದ್ದರೂ ಮೈಸೋಕುವ ತಂಗಾಳಿ ,  ಇದೆಲ್ಲದರ ಮಧ್ಯೆ  ಭೂಮಿಯ ಮೇಲೆ ಪುಷ್ಪ ವೃಷ್ಟಿಯಾಗಿದೆಯೇನೋ ಎಂದು ಭಾಸವಾಗುವಂತೆ  ಆ ಹುಲ್ಲುಗಾವಲಿನ ಕಣಿವೆಯ  ತುಂಬಾ ಕಣ್ಣು ಹಾಯಿಸಿದಷ್ಟು ದೂರಕ್ಕೂ  ಬಣ್ಣ ಬಣ್ಣದ ಹೂಗಳ ಹಾಸು..!! ಇಂತದ್ದೊಂದು ಸಮ್ಮೋಹನಗೊಳಿಸುವಂತಹ  ನೈಸರ್ಗಿಕ ಸೌಂದರ್ಯ ಕಾಣಸಿಗುವುದು, ಉತ್ತರಾಂಚಲದ ಪ್ರಸಿದ್ಧ ಚಾರಣ ಸ್ಥಳ 'ವ್ಯಾಲಿ ಆಫ್ ಫ್ಲವರ್ಸ್' ನಲ್ಲಿ.   ವ್ಯಾಲಿ ಆಫ್ ಫ್ಲವರ್ಸ್ ನಲ್ಲೇನಿದೆ ?  ವ್ಯಾಲಿ ಆಫ್ ಫ್ಲವರ್ಸ್  ಪ್ರಾರಂಭಿಕ ಹಂತದ ಪರ್ವತಾರೋಹಣರಿಗೆ ಹೇಳಿ ಮಾಡಿಸಿದಂತಹ ಚಾರಣ.  ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೊಬರ್ ಕೊನೆಯವರೆಗೂ ಮಾತ್ರ ಟ್ರೆಕಿಂಗ್ ಮಾಡಬಹುದಾದ ಈ ಸ್ಥಳಗಳು, ನಂತರದ ೬ ತಿಂಗಳು ಸಂಪೂರ್ಣ ಹಿಮಾವೃತ್ತವಾಗುತ್ತದೆ.  ಸಮುದ್ರ ಮಟ್ಟಕ್ಕಿಂತ ೧೨೦೦೦ ಅಡಿಗಳಷ್ಟು ಎತ್ತರದಲ್ಲಿರುವ ವ್ಯಾಲಿ ಆಫ್ ಫ್ಲವರ್ ಕಣಿವೆಯು ದಟ್...

ಪುರ ಲುಹುರ್ ಉಲುವಾಟು, ಬಾಲಿ

ಇಮೇಜ್
ಅದೊಂದು ದ್ವೀಪದ ತುತ್ತತುದಿ. ಅಲ್ಲಿದೆ ಒಂದು ಸಮುದ್ರ ಮಟ್ಟಕ್ಕಿಂತ ಸಾಕಷ್ಟು ಎತ್ತರದಲ್ಲಿರುವ  ಬ್ರಹತ್ ಕಡಿಬಂಡೆ. ಅದರ ಮೇಲೆ, ಮನಸ್ಸು ಪ್ರಫುಲ್ಲಗೊಳ್ಳುವಂತಹದೊಂದು ದೇವಾಲಯ. ದೇವಾಲಯದಾಚೆಗೆ ಕಣ್ಣು ಹಾಯಿಸಿದಷ್ಟು ದೂರವೂ, ಮುಗಿಯದ ಸಾಗರದ ತುಂಬು ನೋಟ. ಕೆಳಗಡೆ ನಿರಂತರವಾಗಿ ಬಂಡೆಗೆ ಬಂದಪ್ಪಳಿಸುವ ಶುಭ್ರ ಅಲೆಗಳ ಮೋಹಕ ಆಟ. ಕಿವಿಗೊಟ್ಟು ಆಲೈಸಲು, ತನ್ನತಾನದಲಿ ಶಬ್ದ ಮಾಡುವ ನೀಲ ಶಾಂತ ಅಲೆಗಳ ಹೊಯ್ದಾಟ.. ಅಲ್ಲೆಲ್ಲೋ ಆಗಾಧ ಸಾಗರದ ಮಧ್ಯದಲ್ಲಿ ಸಣ್ಣ ಬಿಳಿ ಹರಳಿನಂತೆ ಕಂಡು, ಕ್ರಮೇಣ ಪುಟ್ಟ ಚುಕ್ಕೆಯಂತೆ ಮಾಯವಾಗುವ ಹಡಗು. ಸೂರ್ಯ ತಂಪಾಗುವ ಸಮಯಕ್ಕೆ, ಆಕಾಶದ ತುಂಬೆಲ್ಲ ರಂಗಿನ ಕೆಂಬಣ್ಣ; ಅದನ್ನು ಪ್ರತಿಫಲಿಸುವ ಸಮುದ್ರವೋ ಬಂಗಾರದ ಬಣ್ಣ.. ಸಂಜೆಯ ತಣ್ಣನೆ ಬೀಸುವ ಗಾಳಿಗೆ ಮೈ ಒಡ್ಡಿ ನಿಂತರೆ ಸಾಕು, ನಮ್ಮ ಸುತ್ತಮುತ್ತಲು ನಮ್ಮಂತೆಯೇ ಸಾವಿರಾರು ವೀಕ್ಷಕರಿದ್ದರೂ, ಆ ಸ್ಥಳದ ಸೌಂದರ್ಯಕ್ಕೆ ಮನಸೋತು ನಮ್ಮ ಉಪಸ್ಥಿತಿಯೇ ಮರೆಯುವಂತಹ ಅನುಭಾವ.. ದಿಗಂತದಂಚಿನಲ್ಲಿ ಅಸ್ತಮಿಸುವ ದಿನಕರನನ್ನು ಮನದಣಿಯೆ ನೋಡುವಾಗ, ಮಹಾಸಾಗರದ ಅಲೆಗಳ ನಿನಾದವನ್ನು ಆಲೈಸುವಾಗ, ಪ್ರಕೃತಿಯೇ ದೈವವೆಂದು ಆರಾಧಿಸುವ ದೇಗುಲದ ಶಕ್ತಿ ತರಂಗಗಳನ್ನು ಅನುಭವಿಸುವಾಗ ಉಂಟಾಗುವ ವಿಸ್ಮಿತ ಮೌನ ಮತ್ತು ಈ ಎಲ್ಲ ಚೆಲುವನ್ನು ಹೀರಿಕೊಂಡು ಮನಸ್ಸಿಗೆ ಸಿಗುವ...

ನಾವು ಮತ್ತು ಮಕ್ಕಳ 'ಫೆವಿಕಾಲ್ ಬಾಂಡಿಂಗ್'

ಇಮೇಜ್
ಇದೊಂದು ಘಟನೆ ನೆನಪಿದೆ ನನಗೆ. ಆ ದಿನ ಸಂಜೆ, ಎಡಬಿಡದೆ ತೊಂದರೆ ಕೊಡುತ್ತಿದ್ದ ಶೀತಕ್ಕೆ ಸುಸ್ತಾಗಿ ಮಲಗಿದ್ದೆ. ಒಬ್ಬಳೇ ಆಟವಾಡಿಕೋ ಎಂಬ ಉತ್ತರ ಪದೇ ಪದೇ ಸಿಗುತ್ತ್ತಿದ್ದ ಕಾರಣಕ್ಕೋ ಅಥವಾ ಅಮ್ಮನ ಅವಸ್ಥೆ ನೋಡಿ ಕರುಣೆ ಬಂದೋ, "ಅಮ್ಮ ನಾನು ನಿಂಗೆ ಥಂಡಿ ಹೋಗಕ್ಕೆ ಹೆಲ್ಪ್ ಮಾಡ್ತಿ" ಎಂದಳು ಮಗಳು. "ಸರಿ, ಏನು ಮಾಡ್ತ್ಯಪ..?" ಎಂಬ ಪ್ರಶ್ನೆಗೆ "ನಾನು ಬಿಶಿನೀರ್ ಮಾಡ್ಕೊಡ್ತಿ.." ಎಂದು ಧೈರ್ಯವಾಗಿ ಉತ್ತರಿಸಿದಳು. ಮೂರಡಿಯೂ ಇಲ್ಲದ ಕೂಸಿಗೆ ಅಡುಗೆ ಮನೆಯ ಕಟ್ಟೆ ಕೂಡ ಎಟುಕದ ಸತ್ಯ ನನಗೆ ತಿಳಿದಿದ್ದರಿಂದ ಏನು ಮಾಡುತ್ತಾಳೆ ಎಂಬ ಸಹಜ ಕುತೂಹಲ ನನ್ನಲ್ಲೂ ಇತ್ತು. ಮಗಳು ಅಡುಗೆ ಮನೆಗೆ ಹೋಗಿ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ, "ಅಮ್ಮ, ಓವನ್ ಲೈಟ್ ಹಚ್ಕೊಡು ಬಾ.." ಎಂದು ಕೂಗಿ ಕರೆದಳು. ತಲೆನೋವಿನಿಂದ ತಲೆ ಒಂದೇ ಸಮನೆ ಸಿಡಿಯುತ್ತಿತ್ತು. ಶಬ್ದ, ಪ್ರಖರ ಬೆಳಕು, ದೈಹಿಕ ಶ್ರಮ ಯಾವುದೂ ಸಹ್ಯವಿರಲಿಲ್ಲ..ಅನಿವಾರ್ಯ, ಎದ್ದು ಹೋಗಿ ಮೈಕ್ರೋ ಓವನ್ ಆನ್ ಮಾಡಿಕೊಟ್ಟೆ. ನನ್ನ ಪಿಂಗಾಣಿಯ ಟೀ ಕಪ್ಪನ್ನು ಹುಡುಕಿ ಕೈಯಲ್ಲಿ ಹಿಡಿದುಕೊಂಡು ರೆಡಿ ನಿಂತಿದ್ದಳು ಮಗಳು. "ಅಮ್ಮ, ನೀರು ಹಿಡ್ಕೋಡ್ತ್ಯ ಪ್ಲೀಸ್..' ಎಂಬ ಮತ್ತೊಂದು ಕೋರಿಕೆ. ನೀರಿನ ಜಗ್ಗಿನಲ್ಲಿ ನೀರು ಖಾಲಿಯಾದ್ದಕ್ಕಾಗಿ, ಅವಳಿಗೆ ಕೈಗೆಟುಕದ ಎತ್ತರದ ಫಿಲ್ಟರ್ ನಿಂದ ನೀರು ತೆಗೆಯಲು ನನ್ನ ಸಹಾಯ ಬೇಕಿತ್ತು. ಮಗ್ ಗೆ ನೀರು ತ...

ಅಡುಗೆ ಸಂಭ್ರಮ

ಇಮೇಜ್
ನಾನು ನಮ್ಮ ಮನೆಯಲ್ಲಿನ ಮುದ್ದಿನ ತನುಜೆ, ಅಕ್ಕನ ಅನುಜೆ. ಚಿಕ್ಕಂದಿನಲ್ಲಿ ಅಮ್ಮ ಎಲ್ಲಾದರೂ ಹೊರಗಡೆ ಹೋದರೆ ಅಪ್ಪಾಜಿಯ ನಳಪಾಕ, ಅಪ್ಪಾಜಿಯೂ ಇಲ್ಲದಿದ್ದ ಪಕ್ಷದಲ್ಲಿ ಅಕ್ಕನ ಅಡುಗೆ ಪ್ರಯೋಗಗಳಿಂದ ನನ್ನ ಹೊಟ್ಟೆ ತುಂಬಿಸಿಕೊಳ್ಳಲು ಯಾವ ಕೊರತೆಯೂ ಆಗುತ್ತಿರಲಿಲ್ಲ. ಇದೆ ಕಾರಣಕ್ಕೋ ಏನೋ ಸುಮಾರು ೭-೮ ನೇ ತರಗತಿಗೆ ಬರುವ ವರೆಗೂ ಅಡುಗೆ ತಯಾರಿಸಲು ಸಹಾಯ ಮಾಡುವ ಕೆಲಸ ಮಾಡಿದ್ದಿದ್ದರೂ, ನಾನಾಗಿಯೇ ಯಾವುದೇ ಮುಖ್ಯ ಅಡುಗೆ ತಯಾರಿಸುವ ಗೋಜಿಗೆ ಹೋಗಿಯೇ ಇರಲಿಲ್ಲ. ಹಾಗೊಂದು ದಿನ ಅಪ್ಪಾಜಿ ಅಮ್ಮ ಕಡೆಗೆ ಅಕ್ಕನೂ ಮನೆಯಲ್ಲಿರದ ದಿನ. ಅಂದು ಗೆಳತಿಯೊಬ್ಬಳನ್ನು ಮನೆಗೆ ಕರೆತಂದಿದ್ದೆ. ಮನೆಯಲ್ಲಿ ಅಮ್ಮ ಅಡುಗೆ ತಯಾರಿಸಿಟ್ಟಿದ್ದರೆಂಬ ನೆನಪು. ಯಾವುದೋ ಮಾತಿನ ಮಧ್ಯೆ ಗೆಳತಿಯು ತನಗೆ ಅಲ್ಪಸ್ವಲ್ಪ ಪದಾರ್ಥಗಳನ್ನು ಮಾಡಲು ಬರುತ್ತದೆ ಎಂದು ತನ್ನ ಬಗ್ಗೆ ಹೇಳಿಕೊಂಡಾಗ, ನನ್ನ ಬಗ್ಗೆ ನನಗೆ ಸಂಕೋಚವೆನಿಸಿತು. ನಂತರಕ್ಕೆ, ಅದೆಲ್ಲಿಂದ ಬಂದ ಶೂರತನವೋ ತಿಳಿಯದು, "ನೀನು ನನಗೆ ಗೈಡ್ ಮಾಡು , ನಾನು ಪದಾರ್ಥ ತಯಾರು ಮಾಡುತ್ತೇನೆ" ಎಂದು ಅವಳಲ್ಲಿ ಕೇಳಿಕೊಂಡು, ಬದನೆ ಮತ್ತು ಬೆಳ್ಳುಳ್ಳಿ ಹಾಕಿ ಕಾಯಿ ಗೊಜ್ಜು ಮಾಡುವ ಪ್ಲಾನ್ ಮಾಡಿದೆವು. ತೆಂಗಿನ ತುರಿ ಸಿದ್ಧವಾಯಿತು. ಬದನೇಕಾಯಿ ಪಾತ್ರೆಯಲ್ಲಿಟ್ಟು ಬೇಯಿಸಿಕೊಂಡಿದ್ದಾಯಿತು. ಬೆಳ್ಳುಳ್ಳಿ ತಂದು ಬಿಡಿಸಿಕೊಂಡಿದ್ದಾಯಿತು. ಏನೂ ಅಡುಗೆ ಬಾರದ ನಾನು, ಚಿಟಿಕೆ ಉಪ್ಪಿಗೂ  ಗೆಳತಿಯ ಸೂಚನೆಗಳನ್ನು ತೆಗೆದ...

ಬಾಲ್ಯದ ಯುಗಾದಿ

ಇಮೇಜ್
ನನ್ನ ವಯಸ್ಸಿನ ಆಸುಪಾಸಿನವರೇ ಮಾವನ ಮಕ್ಕಳು ಇರ್ತಿದ್ರಿಂದ  ನನ್ನ ಬಾಲ್ಯದ  ದಿನಗಳೆಲ್ಲ ಹೆಚ್ಚು ಕಳೆದದ್ದು ಅಜ್ಜನ ಮನೆಯಲ್ಲೇ. ಬೆಳಕು ಹರಿಯುವುದಕ್ಕೂ ಮುಂಚೆ ಪ್ರಾರಂಭವಾಗುತ್ತಿದ್ದ ಹಕ್ಕಿಪಿಕ್ಕಿಗಳ ಚಿಲಿಪಿಲಿ, 'ನಂಗಳನ್ನ ಮಾತಾಡ್ಸೋ' ಎಂದು ಮಾವನನ್ನು ಕೂಗಿ ಕರೆಯುತ್ತಿದ್ದ ದನಕರ್ಗಗಳ ಏರು ಧ್ವನಿಗೆ ನಾವು ಮಕ್ಕಳಿಗೂ ಕೂಡ ಎಚ್ಚರವಾಗಿ ಹೋಗುತ್ತಿತ್ತು. ೪. ೩೦ - ೫ ಗಂಟೆಗೆ ಎದ್ದುಕೊಂಡು, ಕತ್ತಲಲ್ಲಿ ಅಜ್ಜ ಅಮ್ಮುಮ್ಮ ಚುಂನೆಣ್ಣೆ ದೀಪ ಹಿಡ್ಕೊಂಡು ಅವ್ರವ್ರ ಕೆಲ್ಸ ಮಾಡ್ಕೋತ ಇದ್ರೆ, ಅರೆಗಣ್ಣು ಮಾಡಿಕೊಂಡು ಅವರ ಹಿಂಬಾಲಕರಾಗಿ ನಾವೆಲ್ಲಾ ಓಡಾಡ್ಕೊಂಡು ಇರುತ್ತಿದ್ದೆವು. ಹಿತ್ಲಕಡೆ ಒಲೆ ಉರಿಯ ಚಿಟಿ ಚಿಟಿ ಶಬ್ದ, ಅಡ್ಗೆ ಮನೆಲಿ ಅಮ್ಮುಮ್ಮ ಮಜ್ಜಿಗೆ ಕಡೆಯುವ ಶಬ್ದ, ಅತ್ತೆ ಹೆಬ್ಬಾಗಿಲ ಅಂಗಳವನ್ನು ಚರ್ ಚರ್ ಎಂದು ಕಡ್ಡಿಹಿಡಿಲಿ ಗುಡಿಸಿ ಸಗಣಿ ಹಾಕಿ ಹಾಳೆಕುಂಟಿನಿಂದ ಸಾರಿಸುವ ಶಬ್ದ, ದೇವ್ರ ಕೋಣೇಲಿ ಅಜ್ಜನ ಪೂಜೆಯ ಮಂತ್ರ,  ದನಕರುಗಳ ಕತ್ತಿನ ಗಂಟೆಗಳ ನಾದ ಇವೆಲ್ಲಾ ನನ್ನಲ್ಲಿ ಅಂತರ್ಗತವಾಗಿರುತ್ತಿದ್ದ ಅಜ್ಜನಮನೆಯ ನಿತ್ಯದ ದಿನಚರಿಯ ಶಬ್ದಗಳು. ಇವೆಲ್ಲದರ ಮಧ್ಯೆ,  "ಇವತ್ತು ತೋಲಾಗಿ ಹೂವು ಕೊಯ್ಕ್ಯ ಬನ್ನಿ ಹುಡ್ರಾ, ಹಬ್ಬ ಇವತ್ತು.. " ಎಂದೆನ್ನುವ ಅಮ್ಮಮ್ಮನ ಧ್ವನಿಗೆ ಥಟ್ ಎಂದು ಎಚ್ಚರಗೊಳ್ಳುತಿತ್ತು ಮನಸ್ಸು.   ಸಣ್ಣಾಕಿದ್ದ...

ಮರೆಯಲಾಗದ ಘಟನೆಗಳು...

ಇಮೇಜ್
'ಮರೆಯಲಾಗದ' ಎನ್ನುವುದಕ್ಕಿಂತ ಮರೆಯಲೇ ಇಷ್ಟವಿಲ್ಲದ ಕೆಲವು ಸಂದರ್ಭಗಳನ್ನು ಇಲ್ಲಿ ಬರೆಯಲಿಚ್ಚಿಸುತ್ತೇನೆ. ನನ್ನ ಬ್ಲಾಗ್ನಲ್ಲಿ, ನನ್ನದೇ ಆದ ಜಾಗ ಇರುವುದರಿಂದ ಈ ಕೆಲವು ಘಟನೆಗಳನ್ನು ಶೇಖರಿಸಿಡಲೇನು ಅಡ್ಡಿ ನನಗೆ?? ಹಂಚಿಕೊಳ್ಳುತ್ತಿದ್ದೇನೆ, ಭಾವನೆಗಳು ಇಮ್ಮಡಿಗೊಳ್ಳಲಿ ಎಂದು :) :) ಘಟನೆ ೧.       ಮಗಳನ್ನು ಅವಳ ಪ್ಲೇ ಹೋಂ ಗೆ ಕರೆದುಕೊಂಡು ಹೋಗುವ ಸಂದರ್ಭ. ಸಾನ್ವಿಗೆ ಆಗ ೨ ವರ್ಷ ೩ ತಿಂಗಳು  ಇದ್ದಿತ್ತೇನೋ. ಹೋಗುವ ದಾರಿ ಬದಿಯಲ್ಲಿ ಕೆಲವೊಂದು ಕಡೆ ಇರುವ ಮರಗಳ ನೆರಳು ಬೀಳುವ ಜಾಗ ಅವಳಿಗೆ ಹಾಯ್ ಎನಿಸುತ್ತಿತ್ತೇನೋ.. ಸುಡು ಬಿಸಿಲಿಗೆ ಬಂದ ತಕ್ಷಣ, "ಅಮ್ಮಾ , ಬಿಸ್ಲು ..." ಎಂದಳು. ಎಷ್ಟಂದರೂ ಅಮ್ಮ ಅಲ್ಲವೇ, ಮಗಳೇ ನೆರಳಿಗೆ ಬಾ ಎಂದು ಸೂಚನೆ ನೀಡಿದೆ. ಸರಿ ಆ ಮರದ ನೆರಳೆನೋ ಮುಗಿಯಿತು, ಮತ್ತೆ ಮುಂದೆ ಸ್ವಲ್ಪ ಹಾದಿ ಬಿಸಿಲು. ಬಿಸಿಲು ನೆರಳುಗಳ ಅನುಭವದ ವ್ಯತ್ಯಾಸ ಸರಿಯಾಗಿ ತಿಳಿದ ಅವಳು ನಂತರದಲ್ಲಿ ಹೇಳಿದ ಎರಡು ಸಾಲು, ನನ್ನಲ್ಲಿ ದಿಗ್ಭ್ರಮೆ ಮೂಡಿಸಿತು. "ಅಮ್ಮಾ, ಬಿಸ್ಲು.. ಇಲ್ಲೆಲ್ಲಾ ಯಾಕೆ ಮರ ಇಡಲ್ಲೇ ನೀನು?? ಜಾಸ್ತಿ ಮರ ತಪ್ಪನ ಅಡ್ಡಿಲ್ಯಾ ?? ಅವಾಗ ಬಿಸ್ಲು ಹೋಗ್ತು". (ಒಹ್! ನಮಗೆ ಈ ವಿಷಯ ತಿಳಿದೇ ಇರಲಿಲ್ಲವಲ್ಲ..!!!) ಘಟನೆ ೨.        ಮನೆಯ ಬಾಲ್ಕನಿ ಇಂದ ಹೊರಗಡೆ ನೋಡುತ್ತಾ ಇ...