ಪೋಸ್ಟ್‌ಗಳು

ಅನುಭವ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

'ವ್ಯಾಲಿ ಆಫ್ ಫ್ಲವರ್ಸ್'

ಇಮೇಜ್
ಅಲ್ಲಿ ನಿಂತು ನೋಡಿದರೆ, ೩೬೦ ಡಿಗ್ರಿ ಸುತ್ತಲೂ ಆವರಿಸಿದ ಮಂಜಿನ ಬೆಟ್ಟಗಳ ಸಾಲು,ಅದರಾಚೆಗೆ ಹಿಮ ಹೊತ್ತ ರುದ್ರ ರಮಣೀಯ ಪರ್ವತ,  ಹಿ ಮ ಕರಗಿ ನೀರಾಗಿ, ಕಾಲ್ಬದಿಗೆ ಹರಿವ ಸಣ್ಣ ತೊರೆ, ಅಲ್ಲೇ ಪಕ್ಕದ ಹಚ್ಚ ಹಸಿರ ಬೆಟ್ಟದಿಂದ ದುಮ್ಮಿಕ್ಕುವ ಬೆಳ್ನೊರೆಯ ಜಲಪಾತ, ನೀಲಾಕಾಶ, ಬಿಳಿ ಮೋಡಗಳ ಚಿತ್ತಾರ.. ಸೂರ್ಯ ನೆತ್ತಿ ಮೇಲಿದ್ದರೂ ಮೈಸೋಕುವ ತಂಗಾಳಿ ,  ಇದೆಲ್ಲದರ ಮಧ್ಯೆ  ಭೂಮಿಯ ಮೇಲೆ ಪುಷ್ಪ ವೃಷ್ಟಿಯಾಗಿದೆಯೇನೋ ಎಂದು ಭಾಸವಾಗುವಂತೆ  ಆ ಹುಲ್ಲುಗಾವಲಿನ ಕಣಿವೆಯ  ತುಂಬಾ ಕಣ್ಣು ಹಾಯಿಸಿದಷ್ಟು ದೂರಕ್ಕೂ  ಬಣ್ಣ ಬಣ್ಣದ ಹೂಗಳ ಹಾಸು..!! ಇಂತದ್ದೊಂದು ಸಮ್ಮೋಹನಗೊಳಿಸುವಂತಹ  ನೈಸರ್ಗಿಕ ಸೌಂದರ್ಯ ಕಾಣಸಿಗುವುದು, ಉತ್ತರಾಂಚಲದ ಪ್ರಸಿದ್ಧ ಚಾರಣ ಸ್ಥಳ 'ವ್ಯಾಲಿ ಆಫ್ ಫ್ಲವರ್ಸ್' ನಲ್ಲಿ.   ವ್ಯಾಲಿ ಆಫ್ ಫ್ಲವರ್ಸ್ ನಲ್ಲೇನಿದೆ ?  ವ್ಯಾಲಿ ಆಫ್ ಫ್ಲವರ್ಸ್  ಪ್ರಾರಂಭಿಕ ಹಂತದ ಪರ್ವತಾರೋಹಣರಿಗೆ ಹೇಳಿ ಮಾಡಿಸಿದಂತಹ ಚಾರಣ.  ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೊಬರ್ ಕೊನೆಯವರೆಗೂ ಮಾತ್ರ ಟ್ರೆಕಿಂಗ್ ಮಾಡಬಹುದಾದ ಈ ಸ್ಥಳಗಳು, ನಂತರದ ೬ ತಿಂಗಳು ಸಂಪೂರ್ಣ ಹಿಮಾವೃತ್ತವಾಗುತ್ತದೆ.  ಸಮುದ್ರ ಮಟ್ಟಕ್ಕಿಂತ ೧೨೦೦೦ ಅಡಿಗಳಷ್ಟು ಎತ್ತರದಲ್ಲಿರುವ ವ್ಯಾಲಿ ಆಫ್ ಫ್ಲವರ್ ಕಣಿವೆಯು ದಟ್...

ಲೇಡೀಸ್ ಟ್ರಿಪ್ - ಅನುಭವ

ಇಮೇಜ್
ಅದೊಂದು ದಿನ ಫೋನಿನಲ್ಲಿ ಮಾತನಾಡುತ್ತ, "ಸುಮಾ ಇನ್ನೊಂದೆರಡು ದಿನಕ್ಕೆ ಸಾಗರಕ್ಕೆ ಬತ್ತ ಅಲ್ದಾ..ರಾಣಿ ಮತ್ತೆ ಹುಡ್ರು ಹೆಂಗಂದ್ರೂ ಇದ್ದ.. ನನ್ನ ಕಸಿನ್ ಪಲ್ಲವಿ ಕೂಡ ಇದ್ದ, ಎಲ್ಲಾ ಸೇರಿ ಹುಡ್ರು ಕಟ್ಕ್ಯಂಡು ನಾವ್ ನಾವೇ ಒಂದು ಲೇಡೀಸ್ ಟ್ರಿಪ್ ಹೋಗಿ ಬರನ.." ಎಂದು  ಕೇಳಿದಳು ಚಿನ್ನಕ್ಕ. "ಖಂಡಿತ ಹೋಪನ, ಅಡ್ಡಿಲ್ಲೆ.." ಎಂದೆಲ್ಲ ಖುಷಿಯಿಂದ ಹೂಂಗುಟ್ಟಿದೆ  ನಾನು. ಆದ್ರೆ ಮನಸ್ಸಿನಲ್ಲಿ ಅನುಮಾನವಿದ್ದೇ ಇತ್ತು. ಸುಮಾರಾಗಿ ಎಲ್ಲಾ ಲೇಡೀಸು ಗೂ ಆಗುವಂತೆ - ಇನ್ನೇನು ಹೋಗೆ ಬಿಟ್ಟೆವು ಅನ್ನೋ ಲೆವೆಲ್ ವರೆಗೆ ಆಸೆಯಿಂದ ಎಲ್ರೂ ಟ್ರಿಪ್ ಪ್ಲಾನ್ ಡಿಸ್ಕಷನ್  ಮಾಡೋದು, ಆಮೇಲೆ ಯಾವ್ಡ್ಯಾವ್ದೋ ಕಾರಣಕ್ಕೆ ಒಬ್ಬೊಬ್ಬರೇ ಕಳಚಿಕೊಂಡು ಟ್ರಿಪ್ ಕ್ಯಾನ್ಸಲ್ ಆಗುವುದು, ಪುಂಡತನದಲ್ಲಿ ಪ್ರಚಂಡತೆ ಪಡೆದುಕೊಂಡಿರುವ ನಮ್ಮ ಮಕ್ಕಳ ಸೈನ್ಯ ಕಟ್ಟಿಕೊಂಡು ನೀರಿಗೆ ಹೋಗುವ ಸಾಹಸ ಬೇಡ ಎಂದು ಮನೇಲಿ ಖಡಾಖಂಡಿತವಾಗಿ ನಿರಾಕರಿಸುವುದು, ನಾವೇ ಕಾರು ಲಾಂಗ್ ಡ್ರೈವ್ ಮಾಡಿಕೊಂಡು ಹೋಗುವುದು ಕಷ್ಟ ಸಾಧ್ಯ ಎಂಬಿತ್ಯಾದಿ ನಕಾರದ ಸಾಧ್ಯತೆಗಳನ್ನು ಆಲೋಚಿಸಿ ಏನೇನೂ ತಯಾರಿ ಮಾಡಿಕೊಳ್ಳದೇ ಕುಳಿತಿದ್ದು ಮೊದಲ ಸತ್ಯವಾಗಿತ್ತು. ಆಶ್ಚರ್ಯವೆಂಬಂತೆ ಎಲ್ಲರ ಮನೆಯವರಿಂದ ಗ್ರೀನ್ ಸಿಗ್ನಲ್ ಸಿಕ್ಕಿತು. ಆದರೆ ದುರದೃಷ್ಟವಶಾತ್ ಭಾಗ್ಯಕ್...

ಮದುವೆಮನೆ ಮತ್ತು ಕಾಲಮಾನ

ಇಮೇಜ್
ಈಗ ಊರ ಕಡೆ ಶುಭಕಾರ್ಯಗಳ ಸೀಸನ್. ಕರುಳು ಬಳ್ಳಿ, ನೆಂಟರಿಷ್ಟರು, ಆತ್ಮೀಯರು, ಸ್ನೇಹಿತರ ಮನೆಗಳಿಂದ ಹತ್ತು ಹಲವು ಕಾರ್ಯಕ್ರಮಗಳ ಆಹ್ವಾನದ ಮಹಾಪೂರವೇ ಇರುತ್ತದೆ.ನಮ್ಮಂತಹ ನಗರವಾಸಿಗರಿಗೆ, ವೃತ್ತಿಪರರಿಗೆ ಕೆಲಸಕ್ಕೆ ಮಧ್ಯೆ ಮಧ್ಯೆ ಪಡೆಯಬಹುದಾದ ರಜೆ, ಜೀವನೋಪಾಯಕ್ಕೆ ನಡೆಸುತ್ತಿರುವ ಬಿಸಿನೆಸ್ ನ ಮಾರ್ಕೆಟಿಂಗ್ ಅನುಕೂಲ/ಅನಾನುಕೂಲಗಳು, ಮಕ್ಕಳ ಶಾಲಾ-ಕಾಲೇಜು  ಪಠ್ಯೇತರ ಕ್ಲಾಸುಗಳು ಎಲ್ಲವನ್ನೂ ಪರಿಗಣಿಸಿಕೊಳ್ಳಬೇಕಾದ ಪರಿಸ್ಥಿತಿ. ಸಮಾಜದ ಕಟ್ಟುಪಾಡು, ಇರುವ ಅಲ್ಪಸ್ವಲ್ಪ ಭಾಂದವ್ಯಕ್ಕೆ ಗೌರವವಿಟ್ಟು, ಸಲಿಗೆಗೆ ಕಟ್ಟುಬಿದ್ದು, ಒಂದು ದಿನದ ಮಟ್ಟಿಗೆ ಊರಿಗೆ ಹೋಗಿ ಕಾರ್ಯಕ್ರಮಗಳನ್ನು ಮುಗಿಸಿ ಸಂಜೆಗೆ ವಾಪಸು ಬಸ್ಸು ಹತ್ತಿ ಮರುದಿನದ ಕರ್ತವ್ಯಕ್ಕೆ ಹಾಜಾರಾಗುವ ಅನಿವಾರ್ಯತೆ ಒಂದು ಕಡೆಯಾದರೆ, ಕೆಲವೊಮ್ಮೆ ಆಹ್ವಾನ ನೀಡಿದವರು ತಮಗೆ ಎಷ್ಟು ಮುಖ್ಯ/ಅಮುಖ್ಯರು, ಆಹ್ವಾನವಿರುವ ಕಾರ್ಯಕ್ರಮದ ಸ್ಥಳವನ್ನು ತಲುಪಲು ತಾವು ವ್ಯಯಿಸಬೇಕಾದ ಶ್ರಮ ಸಮಯ ಎಂಬಿತ್ಯಾದಿ ಜರಡಿ ಹಿಡಿದು, ಕಡೆಗೆ ನಮ್ಮದು ಬ್ಯುಸಿ ಲೈಫ್ ಎಂಬ ಮುಸುಕಣ್ಣೆಳೆದುಕೊಂಡು ಬರಲಾಗುವುದಿಲ್ಲ ಎಂದು ಫೋನಿನಲ್ಲೇ ಶುಭಾಶಯ ಕೋರಿ ಮದುವೆ ಸಮಾರಂಭ ಸಮಾಪ್ತಿಗೊಳಿಸುವುದು ಇತ್ತೀಚಿನ ಇನ್ನೊಂದು ಬಗೆಯ ಬಾಳರೀತಿಯಾಗುತ್ತಿದೆ. ಇದು ಕೇವಲ ನಗರ ಪ್ರದೇಶದವರಿಗೆ ಮಾತ್ರ ಸೀಮಿತವಾಗಿಲ್ಲ. ನಾವೇ ಕಾಣುವಂತೆ ಇತ್ತೀ...

ಯೂ ಟರ್ನ್..

ಇಮೇಜ್
ಅದೊಂದು ದಿನ ಸಂಜೆ, ರಭಸವಾಗಿ ಹೆಜ್ಜೆ ಹಾಕುತ್ತ ನನ್ನ ನಿಯಮಿತ ವಾಕಿಂಗ್ ರಸ್ತೆಯ ಬದಿಯಲ್ಲಿ ನಡೆಯುತ್ತಲಿದ್ದೆ. ಆ ರಸ್ತೆಯ ತಿರುವಿಗೆ ಒಂದು ಕಟ್ಟಡ ನಿರ್ಮಾಣ ಹಂತದಲ್ಲಿದೆ. ಸಾಮಾನ್ಯವಾಗಿ ಗೃಹ ನಿರ್ಮಾಣ ಕೆಲಸಕ್ಕೆ ಇರುವ ಕಾರ್ಮಿಕರು ಸಂಸಾರ ಸಮೇತವಾಗಿ ಅಲ್ಲಲ್ಲಿಯೇ ತಾತ್ಕಾಲಿಕ ಸೂರು ಮಾಡಿಕೊಂಡು ವಾಸ ಮಾಡುತ್ತಾರೆ. ಬಿಲ್ಡಿಂಗ್ ಕೆಲಸ ಮುಗಿಯುತ್ತಿದ್ದಂತೆಯೇ ಮತ್ತೊಂದೆಡೆಗೆ ಅವರ ಮನೆಮಠ ಎತ್ತಂಗಡಿಯಾಗುತ್ತದೆ. ಹಾಗೇ ಕಣ್ಣಾಡಿಸುತ್ತಾ ಹೋಗುತ್ತಿರುವಾಗ, ಬಿಲ್ಡಿಂಗ್ ನ ಗ್ರೌಂಡ್ ಫ್ಲೋರಿನಲ್ಲಿ ಓರ್ವ ಕಾರ್ಮಿಕ  ಮಹಿಳೆ ಒಂದು ಮೂಲೆಯಲ್ಲಿ ಕಲ್ಲಿನ ಒಲೆಯ ಮೇಲೆ ಕಾವಲಿ ಇಟ್ಟು ರೊಟ್ಟಿ ಮಾಡುತ್ತಲಿದ್ದಳು. ಪಕ್ಕದಲ್ಲೊಂದು ಪುಟ್ಟ ಮಗುವಿತ್ತು. ಯಾರೋ ದಾನ ಮಾಡಿದ ಹಳೆಯ ಯೂನಿಫಾರ್ಮ್ ಶರ್ಟು ಮತ್ತು ಹಾಫ್ ಪ್ಯಾಂಟ್ ಚಡ್ಡಿಯ ತೊಡುಗೆ, ಎತ್ತಿ ಕಟ್ಟಿದ ಗುಂಗುರು ಜುಟ್ಟಿ, ಮೈಕೈ ತುಂಬಾ ಜಲ್ಲಿಕಲ್ಲಿನಲ್ಲಿ ಓಡಾಡಿ ಆಟಾಡಿದ ಗುರುತುಗಳನ್ನು ಮಾಡಿಕೊಂಡ ಒರಟು ಚರ್ಮದ ಆ ಸಣ್ಣ ಮಗುವು ಕೈಯಲ್ಲಿ ತನಗೆ ಸಿಕ್ಕಿದ್ದ ರೊಟ್ಟಿಯ ಸ್ವಲ್ಪಸ್ವಲ್ಪವೇ ತಿನ್ನುತ್ತಲಿತ್ತು. ಅಲ್ಲಿ ಪಕ್ಕದಲ್ಲೇ ಇನ್ನೂ ಒಂದು ಮಗುವೂ ಈ ಮಗುವಿನ ಜೊತೆಯಲ್ಲಿದ್ದುದ್ದನ್ನು ನಾನು ಗಮನಿಸಿದೆ. ಒಳ್ಳೆಯ ಬಣ್ಣದ ಟೀ ಶರ್ಟ್, ಸ್ಪೋರ್ಟ್ಸ್ ಷೂ ಹಾಕಿಕೊಂಡ ಆ ಮಗು ಕೂಡ  ಅಲ್ಲೇ ಖುಷಿಯಾಗಿ ಓಡಾಡಿಕೊಂಡಿತ್ತು..ಆ ಮಗುವಿನ  ವೇಷ ಭೂಷಣದಿಂದ ಅದ...

ಸೆಂಚುರಿ ಆಫ್ ಟ್ರುಥ್

ಇಮೇಜ್
ಥಾಯ್ಲೆಂಡಿನ ಪಟ್ಟಾಯ ದಲ್ಲಿನ ಒಂದು ಪ್ರಸಿದ್ಧ ಪ್ರವಾಸಿ ತಾಣ - ' ಸೆಂಚುರಿ ಆಫ್ ಟ್ರುಥ್'.  ಸುಮಾರು ೩೬೦೦ ಚದರ ಮೀಟರ್ ಜಾಗದ ವ್ಯಾಪ್ತಿಯಲ್ಲಿ ನಿರ್ಮಿತವಾದ ಸಂಪೂರ್ಣ ಮರದಿಂದ ಮಾಡಲ್ಪಟ್ಟ ಈ ಒಂದು ದೇವಾಲಯ ಅಥವಾ ಮ್ಯಾನ್ಷನ್ ಯಾವುದೇ ನಿರ್ಧಿಷ್ಟವಾದ ದೇವರಿಗೆ ಅರ್ಪಿತವಾದ ದೇಗುಲವಲ್ಲ. ಬಹುಮುಖ್ಯವಾಗಿ ಏಷ್ಯಾ ಖಂಡದ ಧಾರ್ಮಿಕತೆಯ ಭವ್ಯ ಬುನಾದಿಯನ್ನು ಪ್ರತಿಬಿಂಬಿಸುವ ಉದ್ದೇಶದಿಂದ ೧೯೮೧ ರಿಂದ ಪ್ರಾರಂಭಗೊಂಡಿರುವ ಈ ದೇವಾಲಯದಲ್ಲಿ ಬಹುತೇಕವಾಗಿ ಬೌದ್ಧ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳ ಶಿಲ್ಪಕಲೆಗಳ ಜೊತೆಯಲ್ಲಿ ಇಸ್ಲಾಮಿಕ್ ಮತ್ತು ಕ್ರೋಷಿಯಾದ ಕ್ಯಾಥೋಲಿಕ್ ಕ್ರಿಶ್ಚಿಯನ್ ಸಮುದಾಯದ ಸಿದ್ಧಾಂತಗಳನ್ನೂ ಕೂಡ ಕೆತ್ತನೆಯ ರೂಪದಲ್ಲಿ ರೂಪಿಸಲಾಗಿದೆ. ಎದುರಿಗೆ ನೋಡುವಾಗ ಪರಿಪೂರ್ಣ ಎಂಬ ಅನುಭಾವ ದೊರಕಿದರೂ, ಇದೊಂದು ನಿರಂತರವಾಗಿ ನಿರ್ಮಾಣಗೊಳ್ಳುತ್ತಿರುವ ಖಾಸಗೀ ದೇವಾಲಯ. ನಾವು ಭೇಟಿ ನೀಡಿದ ಸಮಯಕ್ಕೆ, ದೇವಾಲಯದ ವಿಸ್ತರಿಕೆಯ ಕಾರ್ಯದ ಜೊತೆ ಜೊತೆಯಲ್ಲೇ, ಈ ದೇವಾಲಯದ ೪೦% ಭಾಗ ಮರುನಿರ್ಮಾಣದ ಹಂತದಲ್ಲಿದೆ ಎಂದು ತಿಳಿದೆವು. ಸಮುದ್ರ ತೀರದಲ್ಲಿರುವ ಈ ದೇವಾಲಯದ ನಿರ್ಮಾಣ ಕೇವಲ ಮರದ ದಿಮ್ಮಿಗಳಿಂದ ಆಗಿರುವುದಕ್ಕಾಗಿ, ಮರಗಳ ಸಂರಕ್ಷಣೆಗೆ ರಾಸಾಯನಿಕ ಲೇಪನವಿದ್ದರೂ  ಕಾಲಮಿತಿಗೆ ತಕ್ಕಂತೆ ಉಂಟಾದ ಹಲವು ಭಾಗಗಳ ಶಿಥಿಲತೆ ಇದಕ್ಕೆ ಕಾರಣ ಎಂದು...

ಪುರ ಲುಹುರ್ ಉಲುವಾಟು, ಬಾಲಿ

ಇಮೇಜ್
ಅದೊಂದು ದ್ವೀಪದ ತುತ್ತತುದಿ. ಅಲ್ಲಿದೆ ಒಂದು ಸಮುದ್ರ ಮಟ್ಟಕ್ಕಿಂತ ಸಾಕಷ್ಟು ಎತ್ತರದಲ್ಲಿರುವ  ಬ್ರಹತ್ ಕಡಿಬಂಡೆ. ಅದರ ಮೇಲೆ, ಮನಸ್ಸು ಪ್ರಫುಲ್ಲಗೊಳ್ಳುವಂತಹದೊಂದು ದೇವಾಲಯ. ದೇವಾಲಯದಾಚೆಗೆ ಕಣ್ಣು ಹಾಯಿಸಿದಷ್ಟು ದೂರವೂ, ಮುಗಿಯದ ಸಾಗರದ ತುಂಬು ನೋಟ. ಕೆಳಗಡೆ ನಿರಂತರವಾಗಿ ಬಂಡೆಗೆ ಬಂದಪ್ಪಳಿಸುವ ಶುಭ್ರ ಅಲೆಗಳ ಮೋಹಕ ಆಟ. ಕಿವಿಗೊಟ್ಟು ಆಲೈಸಲು, ತನ್ನತಾನದಲಿ ಶಬ್ದ ಮಾಡುವ ನೀಲ ಶಾಂತ ಅಲೆಗಳ ಹೊಯ್ದಾಟ.. ಅಲ್ಲೆಲ್ಲೋ ಆಗಾಧ ಸಾಗರದ ಮಧ್ಯದಲ್ಲಿ ಸಣ್ಣ ಬಿಳಿ ಹರಳಿನಂತೆ ಕಂಡು, ಕ್ರಮೇಣ ಪುಟ್ಟ ಚುಕ್ಕೆಯಂತೆ ಮಾಯವಾಗುವ ಹಡಗು. ಸೂರ್ಯ ತಂಪಾಗುವ ಸಮಯಕ್ಕೆ, ಆಕಾಶದ ತುಂಬೆಲ್ಲ ರಂಗಿನ ಕೆಂಬಣ್ಣ; ಅದನ್ನು ಪ್ರತಿಫಲಿಸುವ ಸಮುದ್ರವೋ ಬಂಗಾರದ ಬಣ್ಣ.. ಸಂಜೆಯ ತಣ್ಣನೆ ಬೀಸುವ ಗಾಳಿಗೆ ಮೈ ಒಡ್ಡಿ ನಿಂತರೆ ಸಾಕು, ನಮ್ಮ ಸುತ್ತಮುತ್ತಲು ನಮ್ಮಂತೆಯೇ ಸಾವಿರಾರು ವೀಕ್ಷಕರಿದ್ದರೂ, ಆ ಸ್ಥಳದ ಸೌಂದರ್ಯಕ್ಕೆ ಮನಸೋತು ನಮ್ಮ ಉಪಸ್ಥಿತಿಯೇ ಮರೆಯುವಂತಹ ಅನುಭಾವ.. ದಿಗಂತದಂಚಿನಲ್ಲಿ ಅಸ್ತಮಿಸುವ ದಿನಕರನನ್ನು ಮನದಣಿಯೆ ನೋಡುವಾಗ, ಮಹಾಸಾಗರದ ಅಲೆಗಳ ನಿನಾದವನ್ನು ಆಲೈಸುವಾಗ, ಪ್ರಕೃತಿಯೇ ದೈವವೆಂದು ಆರಾಧಿಸುವ ದೇಗುಲದ ಶಕ್ತಿ ತರಂಗಗಳನ್ನು ಅನುಭವಿಸುವಾಗ ಉಂಟಾಗುವ ವಿಸ್ಮಿತ ಮೌನ ಮತ್ತು ಈ ಎಲ್ಲ ಚೆಲುವನ್ನು ಹೀರಿಕೊಂಡು ಮನಸ್ಸಿಗೆ ಸಿಗುವ...

ನಾವು ಮತ್ತು ಮಕ್ಕಳ 'ಫೆವಿಕಾಲ್ ಬಾಂಡಿಂಗ್'

ಇಮೇಜ್
ಇದೊಂದು ಘಟನೆ ನೆನಪಿದೆ ನನಗೆ. ಆ ದಿನ ಸಂಜೆ, ಎಡಬಿಡದೆ ತೊಂದರೆ ಕೊಡುತ್ತಿದ್ದ ಶೀತಕ್ಕೆ ಸುಸ್ತಾಗಿ ಮಲಗಿದ್ದೆ. ಒಬ್ಬಳೇ ಆಟವಾಡಿಕೋ ಎಂಬ ಉತ್ತರ ಪದೇ ಪದೇ ಸಿಗುತ್ತ್ತಿದ್ದ ಕಾರಣಕ್ಕೋ ಅಥವಾ ಅಮ್ಮನ ಅವಸ್ಥೆ ನೋಡಿ ಕರುಣೆ ಬಂದೋ, "ಅಮ್ಮ ನಾನು ನಿಂಗೆ ಥಂಡಿ ಹೋಗಕ್ಕೆ ಹೆಲ್ಪ್ ಮಾಡ್ತಿ" ಎಂದಳು ಮಗಳು. "ಸರಿ, ಏನು ಮಾಡ್ತ್ಯಪ..?" ಎಂಬ ಪ್ರಶ್ನೆಗೆ "ನಾನು ಬಿಶಿನೀರ್ ಮಾಡ್ಕೊಡ್ತಿ.." ಎಂದು ಧೈರ್ಯವಾಗಿ ಉತ್ತರಿಸಿದಳು. ಮೂರಡಿಯೂ ಇಲ್ಲದ ಕೂಸಿಗೆ ಅಡುಗೆ ಮನೆಯ ಕಟ್ಟೆ ಕೂಡ ಎಟುಕದ ಸತ್ಯ ನನಗೆ ತಿಳಿದಿದ್ದರಿಂದ ಏನು ಮಾಡುತ್ತಾಳೆ ಎಂಬ ಸಹಜ ಕುತೂಹಲ ನನ್ನಲ್ಲೂ ಇತ್ತು. ಮಗಳು ಅಡುಗೆ ಮನೆಗೆ ಹೋಗಿ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ, "ಅಮ್ಮ, ಓವನ್ ಲೈಟ್ ಹಚ್ಕೊಡು ಬಾ.." ಎಂದು ಕೂಗಿ ಕರೆದಳು. ತಲೆನೋವಿನಿಂದ ತಲೆ ಒಂದೇ ಸಮನೆ ಸಿಡಿಯುತ್ತಿತ್ತು. ಶಬ್ದ, ಪ್ರಖರ ಬೆಳಕು, ದೈಹಿಕ ಶ್ರಮ ಯಾವುದೂ ಸಹ್ಯವಿರಲಿಲ್ಲ..ಅನಿವಾರ್ಯ, ಎದ್ದು ಹೋಗಿ ಮೈಕ್ರೋ ಓವನ್ ಆನ್ ಮಾಡಿಕೊಟ್ಟೆ. ನನ್ನ ಪಿಂಗಾಣಿಯ ಟೀ ಕಪ್ಪನ್ನು ಹುಡುಕಿ ಕೈಯಲ್ಲಿ ಹಿಡಿದುಕೊಂಡು ರೆಡಿ ನಿಂತಿದ್ದಳು ಮಗಳು. "ಅಮ್ಮ, ನೀರು ಹಿಡ್ಕೋಡ್ತ್ಯ ಪ್ಲೀಸ್..' ಎಂಬ ಮತ್ತೊಂದು ಕೋರಿಕೆ. ನೀರಿನ ಜಗ್ಗಿನಲ್ಲಿ ನೀರು ಖಾಲಿಯಾದ್ದಕ್ಕಾಗಿ, ಅವಳಿಗೆ ಕೈಗೆಟುಕದ ಎತ್ತರದ ಫಿಲ್ಟರ್ ನಿಂದ ನೀರು ತೆಗೆಯಲು ನನ್ನ ಸಹಾಯ ಬೇಕಿತ್ತು. ಮಗ್ ಗೆ ನೀರು ತ...