ಪೋಸ್ಟ್‌ಗಳು

#odisha #orissa #travelogue #tribalmuseum #culture ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ದೇಶದಲ್ಲೇ ಅತ್ಯುತ್ತಮ ಆದಿವಾಸಿ ಸಂಗ್ರಹಾಲಯ, ಒರಿಸ್ಸಾ

ಇಮೇಜ್
ನಮ್ಮ ಒರಿಸ್ಸಾ ಪ್ರವಾಸದಲ್ಲಿ ತಪ್ಪಿಸಲೇ ಬಾರದು ಎಂದುಕೊಂಡು ಭೇಟಿ ನೀಡಿದ ಸ್ಥಳ - ಒರಿಸ್ಸಾ ಸ್ಟೇಟ್ ಟ್ರೈಬಲ್ ಮ್ಯೂಸಿಯಂ! ಒರಿಸ್ಸಾ ಮೂಲತಃ ಆದಿವಾಸಿಗಳ ನಾಡಾಗಿದ್ದರಿಂದ, ಅಲ್ಲಿನ ಅನೇಕ ಆದಿವಾಸಿಗಳ ಜೀವನಶೈಲಿ ಸಂಸ್ಕೃತಿ ಆಚರಣೆ ಕುರಿತಾದ ಹಲವು ಕುರುಹುಗಳನ್ನು ಕಾಪಿಟ್ಟುಕೊಂಡ ಅದ್ಭುತ ಸಂಗ್ರಹಾಲಯವಿದು. ತಾಳ್ಮೆಯಿಂದ ನೋಡುತ್ತಾ ಹೋದರೆ ಕನಿಷ್ಠ ೩ ತಾಸುಗಳ ಕಾಲ ಇಲ್ಲಿನ ಸಂಗ್ರಹಾಲಯವನ್ನು ನೋಡಬಹುದು. ಹಿಂದೆ ಆದಿವಾಸಿಗಳು ಯಾವ ಮೂಲ ಭೂತ ಸೌಕರ್ಯವೂ ಇಲ್ಲದಿದ್ದ ಸಮಯದಲ್ಲಿ ಗುಡ್ಡ ಬೆಟ್ಟ, ಕಾಡನ್ನಾವರಿಸಿದ ನಾಡುಗಳಲ್ಲಿ ವಾಸಿಸುವಾಗ ತಮ್ಮ ದಿನಬಳಕೆಗೆ ಮತ್ತು ಕೆಲಸ ಕಾರ್ಯಗಳಿಗೆ ಯಾವ್ಯಾವ ರೀತಿಯ ವಸ್ತುಗಳ ಬಳಕೆ ಮಾಡುತ್ತಿದ್ದರು, ಯಾವ್ಯಾವ ಉಪಕರಣಗಳ ಆವಿಷ್ಕಾರ ಮಾಡಿಕೊಂಡಿದ್ದರು, ಹಬ್ಬಹರಿದಿನಗಳು ಆಚರಣೆಗಳ ಕುರಿತು ಜನರ ವೈವಿದ್ಯತೆ ಹೇಗಿತ್ತು ಇತ್ಯಾದಿ ವಿಷಯಗಳನ್ನು ತಿಳಿಯಲು ಇಂತಹದೊಂದು ಸಂಗ್ರಹಾಲಯ ಮಾಡಿರುವುದು ನಿಜಕ್ಕೂ ಪ್ರಶಂಸನೀಯ.  ಉತ್ತಮ ಬುಡಕಟ್ಟು ಚಿತ್ತಾರದೊಂದಿಗೆ ಅನಾವರಣಗೊಳ್ಳುತ್ತದೆ ಸಂಗ್ರಹಾಲಯ. ಸುತ್ತಮುತ್ತಲು ಹಚ್ಚಹಸುರಿನ ಹುಲ್ಲು ಹಾಸು ಚಂದದ ಉದ್ಯಾನವನ ಅವುಗಳ ಜೊತೆಗೆ ಕಾಂಪೌಂಡ್ ಗೋಡೆಗಳು, ಮರದ ಬುಡಗಳು, ಸಂಗ್ರಹಾಲಯದ ಕಟ್ಟಡದ ಗೋಡೆಗಳು ಎಲ್ಲವೂ ಜಾನಪದ ಚಿತ್ತಾರದ ಪೇಂಟಿಂಗ್ಗಳು ಮ್ಯೂಸಿಯಂನ ಹೊರಾಂಗಣ ವಿನ್ಯಾಸವನ್ನು ಮೆಚ್ಚುವಂತೆ ಮಾಡಿದೆ.   ಮ್ಯೂಸಿಯಂ ಕಟ್ಟಡವನ್ನು, ವ್ಯವಸ್ಥಿತವಾಗಿ ಆದಿವಾಸಿ...