ಪೋಸ್ಟ್‌ಗಳು

#dushain ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೇಪಾಳಿಗರ ದಶೈನ್ ಹಬ್ಬ

ಇಮೇಜ್
 One India one festival many celebrations.. ಕನ್ನಡಿಗರ ದಸರಾ ನೇಪಾಳಿಗರ ದಶೈನ್ ಹಬ್ಬ. ಒಂಭತ್ತು ದಿನಗಳ ನವರಾತ್ರಿಯ ಜೊತೆಗೆ, ಹತ್ತನೇ ದಿನದ ವಿಜಯದಶಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಬ್ಬಗಳೆಲ್ಲ ಒಂದೇ ಆದರೂ ಆಚರಣೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅದೆಷ್ಟು ವಿಭಿನ್ನ ಮತ್ತು ವೈವಿಧ್ಯಮಯ. ನವರಾತ್ರಿ ಕೊನೆಯಲ್ಲಿ ದಾರ್ಜೀಲಿಂಗ್ನಲ್ಲಿದ್ದೆವು. ಬಾಗ್ದೋಗ್ರಾ ಏರ್ಪೋರ್ಟ್ ನಿಂದ ಹೊರಟ ಲಾಗಾಯ್ತು ಒಂದು ವಿಶೇಷತೆ ಗಮನಿಸಿದ್ದೆವು.ಅನೇಕ ಜನರ ಹಣೆಯ ಮೇಲೆ ಕೆಂಪು ಬಣ್ಣದ ಅಕ್ಕಿಯನ್ನು 'ಬಳಿದು'ಕೊಂಡಿದ್ದರು. ಸಣ್ಣಕೆ ಹಚ್ಚಿಕೊಂಡ ಕುಂಕಿ ಅಲ್ಲ ಅದು, ಕೆಲವರ ಹಣೆಯ ಮೇಲೆ ದೊಡ್ಡ ರೌಂಡ್ ಇದ್ದರೆ, ಇನ್ನು ಕೆಲವರು ಇಡೀ ಹಣೆಯ ತುಂಬಾ ಈ ಕೆಂಪು ಅಕ್ಕಿಯನ್ನು ಬಳಿದುಕೊಂಡಿದ್ದರು. "ಅದು ದಶೈನ್ ಹಬ್ಬ ನಡೆಯುತ್ತಿದೆಯಲ್ಲ ಅದಕ್ಕಾಗಿ ನಾವು ಟೀಕಾ ಹಾಕಿಕೊಳ್ಳುತ್ತೇವೆ" ಎಂದ ಡ್ರೈವರಣ್ಣ. ವಿಜಯದಶಮಿಯ ದಿನವಂತೂ ಬೆಳಿಗ್ಗೆ ವಾಕ್ ಹೋದಾಗ ಸಾಕಷ್ಟು ಜನರ ಹಣೆಯಲ್ಲಿ ಈ ಸುಂದರ ದೊಡ್ಡ 'ಟೀಕಾ' ರಾರಾಜಿಸುತ್ತಿತ್ತು. ದೇವಸ್ಥಾನದಿಂದ ಬರುತ್ತಿದ್ದ ಇಬ್ಬರು ಮಹಿಳೆಯರನ್ನು ಮಾತನಾಡಿಸಿದಾಗ ಅಲ್ಲಿನ ಆಚರಣೆಯ ಕುರಿತು ಅವರು ವಿವರವಾಗಿ ತಿಳಿಸಿದರು. ವಿಜಯದಶಮಿ ಇಲ್ಲಿನವರ ಅದರಲ್ಲೂ ನೇಪಾಳಿಗರಿಗೆ ದೊಡ್ಡ ಹಬ್ಬವೆಂದೇ ಹೇಳಬಹುದು. ಅಂದು ಬೇಗನೆ ಎದ್ದು ಸ್ನಾನ ಮಾಡಿ ಪೂಜೆ ಮಾಡಿ, ಈ 'ಟೀಕಾ' ...