ಪೋಸ್ಟ್‌ಗಳು

#odisha ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹೆರಿಟೇಜ್ ವಿಲೇಜ್ - ರಘುರಾಜ್ಪುರ

ಇಮೇಜ್
ಒಡಿಶಾ ಪ್ರವಾಸ ಮಾಡಿದ್ದ ಗೆಳೆಯನೊಬ್ಬ, ನೀ ಅಲ್ಲಿ ಆರ್ಟ್ ವಿಲ್ಲೇಜ್ ಗೆ ಹೋಗಕ್ಕೇ.. ನಿಂಗ್ ಭಾರೀ ಇಷ್ಟ ಆಗ್ತು ಎಂದು ಹೇಳಿದ್ದು ವರ್ಷಗಳಿಂದ ಮನಸ್ಸಿನಲ್ಲಿ ಬರೆದಿಟ್ಟ ಷರಾ ಆಗಿತ್ತು. ಕಲೆಯ ಕುರಿತು ಆಸಕ್ತಿ ಇರುವ ನನಗಂತೂ, ಇಡೀ ಊರಿಗೆ ಊರೇ ಪೇಂಟಿಂಗ್ ಮತ್ತು ಆರ್ಟ್ ಗಳಿಂದ ತುಂಬಿರುತ್ತದೆ, ಎಂಬ ವಿಷಯವೇ  ಪುಳಕವಾಗಿತ್ತು. ನಮ್ಮ ಪ್ರವಾಸದ ಸಮಯದಲ್ಲಿ ಇಂಟರ್ನೆಟ್ ಮಾಹಿತಿ ಒಟ್ಟು ಮಾಡಿಕೊಂಡು ತಯಾರಾಗಿ ಹೋದೆವು. ಪುರಿ ನಗರಿಯ ಹೊರಗೆ, ಭುವನೇಶ್ವರ್ ಕಡೆಗೆ ಹೈವೆಯಲ್ಲಿ ೧೪ ಕಿಮೀ ಮುಂದಕ್ಕೆ ಹೋದರೆ, ಚಂದನಾಪುರ್ ಸಿಗುತ್ತದೆ, ಅಲ್ಲಿಯ ಮಾರುಕಟ್ಟೆಯ ಪಕ್ಕದಲ್ಲಿ ಒಳ ರಸ್ತೆ ಹಿಡಿದು ೨೦೦ ಮೀ ಮುಂದಕ್ಕೆ ಹೋದರೆ ಸಿಗುವುದೇ ರಘರಾಜಪುರ್ ಹಳ್ಳಿ. ೧೦೦-೧೨೦ ಸಣ್ಣ ದೊಡ್ಡ ಮನೆಗಳಿರುವ ಈ ಊರಿನ ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಬ್ಬರಾದರೂ ಕಲಾವಿದರು! ಇಡೀ ಊರಿನ ಎಲ್ಲ ಮನೆಗಳ ಗೋಡೆಗಳ ಮೇಲೂ ಸಾಂಪ್ರದಾಯಿಕ ಚಿತ್ರಕಲೆಗಳು! ಕೆಲವರ ಮನೆ ಎಷ್ಟು ಸಣ್ಣದೆಂದರೆ, ಮನೆ ಹೊರಗಿನ ಜಗಲಿಯಲ್ಲೇ ಕಾಲವಸ್ತುಗಳ ನೇತು ಹಾಕಿ ಪ್ರದರ್ಶನಕ್ಕಿಟ್ಟಿರುತ್ತಾರೆ.  ಭಾರತೀಯ ರಾಷ್ಟ್ರೀಯ ರಾಷ್ಟ್ರೀಯ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟ್ಯಾಚ್) ರಘುರಾಜ್ಪುರವನ್ನು ಒಂದು ಪರಂಪರೆ ಗ್ರಾಮವಾಗಿ ಅಭಿವೃದ್ಧಿಪಡಿಸಿದೆ, ' ಹೆರಿಟೇಜ್ ವಿಲೇಜ್' ಎಂದು ಘೋಷಿಸಿದೆ. ಇದನ್ನು ಒಡಿಶಾದ ಪ್ರಾಚೀನ ಗೋಡೆ ವರ್ಣಚ...

ಸೂರ್ಯನಿಗೊಂದು ದೇವಾಲಯ!!

ಇಮೇಜ್
ನಮಗೆಲ್ಲ ಬೆಳೆಗೆದ್ದ ಕೂಡಲೇ ಮನೆಯ ಬಾಗಿಲ ಮುಂದೆ ಹೋಗಿ ಸೂರ್ಯನ ಕಂಡು ನಮಸ್ಕರಿಸಿ ಬರಲು ಚಿಕ್ಕಂದಿನಲ್ಲಿ ಹೇಳಿಕೊಡುತ್ತಿದ್ದರು. ಅದೆಷ್ಟೋ ಸುಂದರ ಸೂರ್ಯೋದಯ, ಸೂರ್ಯಾಸ್ತಗಳನ್ನು ಕಂಡು ಕೊಂಡಾಡಿಯಾಗಿದೆ ಇನ್ನು ಸೂರ್ಯ ನಮಸ್ಕಾರ ಆಸನಗಳ ಅಭ್ಯಾಸ ಇವೆಲ್ಲವೂ ಸಾಮಾನ್ಯ ಬಳಕೆಯಲ್ಲಿದ್ದರೂ, ಸೂರ್ಯನಿಗಾಗಿಯೇ ಬ್ರಹತ್ ದೇವಾಲಯವನ್ನು ಕಾಣುವಾಗ ಮಾತ್ರ ರೋಮಾಂಚವಾದ್ದು ಸುಳ್ಳಲ್ಲ. ಹೀಗೊಂದು ಸೂರ್ಯನ ದೇವಾಲಯಕ್ಕೆ ಭೇಟಿಯ ಅವಕಾಶ ಸಿಕ್ಕಿದ್ದು ನಮಗೆ ನಮ್ಮ ಒಡಿಶಾ ಪ್ರವಾಸದಲ್ಲಿ.. ಕೊನಾರ್ಕ್ ಸೂರ್ಯ ದೇವಾಲಯವಿರುವುದು, ಭಾರತದ ಪೂರ್ವ ಕರಾವಳಿ ಒಡಿಸ್ಸಾದ ಪುರಿಯಲ್ಲಿ.  ಇದು ಯುನೆಸ್ಕೋ ದ ವಿಶ್ವ ಪರಂಪರೆಯಲ್ಲಿ ಪಟ್ಟಿ ಮಾಡಿರುವ ಸುಂದರ ಸಂರಕ್ಷಿತ ತಾಣಗಳಲ್ಲಿ ಒಂದಾಗಿದ್ದು,ಇದು  ತನ್ನ ಸೊಗಸಾದ ಕಳಿಂಗ ವಾಸ್ತು ಶಿಲ್ಪ ಮತ್ತು ಕೆತ್ತನೆಗಳಿಗೆ ಪ್ರಖ್ಯಾತವಾಗಿದೆ. ಸೂರ್ಯನು ಶಕ್ತಿಯ ಸ್ವರೂಪ. ಭಾರತದಲ್ಲಿರುವ ಸೂರ್ಯದೇವನಿಗೆ ಸಮರ್ಪಿತ ಮೂರು ದೇವಾಲಯಗಳ ಪೈಕಿ ಇದು ಒಂದು. ಗುಜರಾತ್ನ ಮೊಧೇರಾ ಸೂರ್ಯ ದೇವಾಲಯ ಮತ್ತು ಕಾಶ್ಮೀರದ ಮಾರ್ಥಾಂಡ ದೇವಾಲಯವು ಕೂಡ ಇದರಷ್ಟೇ ಜನಪ್ರಿಯವಾಗಿದೆ. 12ನೇ ಶತಮಾನದಲ್ಲಿ ನರಸಿಂಹ ದೇವನಿಂದ ಕಟ್ಟಿಸ ಕಟ್ಟಿಸಲ್ಪಟ್ಟ ಈ ದೇವಾಲಯ, ಸಮುದ್ರದ ತುದಿಯಲ್ಲಿದ್ದು ಶಿಥಿಲಗೊಂಡಿದ್ದರೂ ಕೂಡ 2,000 ಕ್ಕೂ ಹೆಚ್ಚು ವರ್ಷಗಳಿಂದ ಸ್ಥಿರವಾಗಿ ನಿಂತಿದೆ. ಭಾರತದ ವಿಶಿಷ್ಟ ದೇವಾಲಯಗಳಲ್ಲಿ ಒಂದಾದ ಈ ದೇವಾಲಯ ವಾಸ್ತವವಾಗಿ ಹೇಳಬೇಕೆಂ...

'ಮದುವೆಯ ಮನೆ' - ಓಡಿಶಾದ ಮನೆ ಮನೆಗಳಲ್ಲೂ ಚಿತ್ರಕಲೆ

ಇಮೇಜ್
ಓಡಿಸಾ ಪ್ರವಾಸದ ಸಂದರ್ಭದಲ್ಲಿ ನಾವು ಜನರ ಇನ್ನೊಂದು ವಿಶಿಷ್ಟ ಸಂಪ್ರದಾಯ ವನ್ನು ಗಮನಿಸಿದವು. ನಮ್ಮ ಮಲೆನಾಡ ಕಡೆ ಹಸಿ ಚಿತ್ತಾರವಿದ್ದಂತೆ, ಮಹಾರಾಷ್ಟ್ರದ ವರ್ಲಿ ಚಿತ್ರಕಲೆ, ಬಿಹಾರದ ಮಧುಬನಿ ಇದ್ದಂತೆ, ಶುಭ ಸಾಂಕೇತಿಕ ವಸ್ತುಗಳ ಚಿತ್ರಕಲೆಯ ಪರಂಪರೆ ಮದುವೆ ಸಾಂಪ್ರದಾಯಿಕ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ಯಾರ ಮನೆಯಲ್ಲಿ ಮದುವೆಯ ಆಚರಣೆ ಇರುತ್ತದೆಯೋ, ಅವರ ಮನೆಯ ಹೊರಗಿನ ಗೋಡೆಯ ಮೇಲೆ, ಕಳಶದ ಮೇಲಿರುವ ತೆಂಗಿನ ಕಾಯಿ, ಬಾಳೆ ಮರ, ಮೀನು, ವಾದ್ಯಗಳು ಇತ್ಯಾದಿ ನಿಸರ್ಗ ಆರಾಧನೆಯ ಫಲವಂತಿಕೆಯ ಸಾಂಕೇತಿಕ ವಸ್ತುಗಳ ಪೈಂಟಿಂಗ್ ಮಾಡಿಸುತ್ತಾರೆ. ಸಮೃದ್ಧಿ ಮತ್ತು ಶುಭವನ್ನು ಸೂಚಿಸುವ, ಈ ರೀತಿಯ ಪೇಂಟಿಂಗಳನ್ನು, ನೋಡಲು ನಿಜವಾಗಿಯೂ ಖುಷಿಯಾಗುತ್ತಿತ್ತು. ವಧು ವರರ ಹೆಸರುಗಳನ್ನು ಸೂಚಿಸಿ ಮದುವೆಯ ಮಾಹಿತಿಯನ್ನು ನೀಡಲು ಕೂಡ ಈ ರೀತಿಯ ಸಂಪ್ರದಾಯ ಬೆಳೆದು ಬಂದಿರಬಹುದು. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಗಳು ಬದಲಾದರೂ, ಮನುಷ್ಯನ ಖುಷಿ ಮತ್ತು ಸಂಭ್ರಮಾಚರಣೆಗೆ, ಚಿತ್ರಕಲೆ, ಹಾಡು-ನೃತ್ಯ ಇನ್ನಿತರ ಕಲೆಗಳ ಮುಖೇನ ನಡೆಸಿಕೊಂಡು ಹೋಗುವ ಇಂತಹ ಪುಟ್ಟ ಪುಟ್ಟ ಸಂಪ್ರದಾಯಗಳು, ಆ ಪ್ರದೇಶದ ಸಂಸ್ಕೃತಿಯ ಉಳಿವಿಗೆ ಸಹಾಯಕ ಅಂಶಗಳಾಗಿರುತ್ತವೆ.  #marriagepainting #artandculture #odisha

Odisha - Land of Art

ಇಮೇಜ್
ನಮ್ಮ ಓಡಿಶಾ ಪ್ರವಾಸದಲ್ಲಿ, ನಾವು ಮೊದಲು ಮೆಟ್ಟಿದ ನಗರ ರಾಜಧಾನಿ ಭುವನೇಶ್ವರ. ಸುಮಾರು  400+ sq. Km ಇರುವ ಈ ನಗರದಲ್ಲಿ, ಏರ್ಪೋರ್ಟ್ನಿಂದ ಹೊರಟು ಹೋಟೆಲ್ ತಲುಪುವವರೆಗೂ ಕಣ್ಣಾಡಿಸಿದ ಜಾಗದಲ್ಲೆಲ್ಲಾ ನಮ್ಮನ್ನು ಆಕರ್ಷಿಸಿದ ಎರಡು ಮುಖ್ಯ ವಸ್ತು ವಿಷಯಗಳು ಒಂದು ನಗರದ ಅದ್ಭುತ ಸ್ವಚ್ಛತೆ ಮತ್ತೊಂದು, ರಸ್ತೆಯ ಬದಿಯ ಗೋಡೆಗಳಿಂದ ಹಿಡಿದು, ರಸ್ತೆಯ ಬದಿಯ ಮನೆಗಳ ಗೋಡೆಗಳು ಸೇರಿದಂತೆ ಎಲ್ಲವೂ ಕೂಡ ಚಿತ್ರಕಲೆಗಳಿಂದ ಸಿಂಗರಿಸಿ ಹೋಗಿತ್ತು, ಇಡೀ ಊರಿಗೆ ಊರಿನ ಗೋಡೆಗಳೆಲ್ಲವೂ ಪೇಂಟಿಂಗ್ ಕ್ಯಾನ್ವಾಸ್ಗಳೇ!! ಕಣ್ಣು ಹಾಯಿಸಿದಲ್ಲೆಲ್ಲ ರಸ್ತೆಯ ಬದಿ ಕಾಂಪೌಂಡಿನ ಮೇಲೆಲ್ಲಾ, ಒಡಿಸ್ಸಾದ ಇತಿಹಾಸ, ನೃತ್ಯ, ಜಾನಪದ ಕಲೆ, ಸಂಸ್ಕೃತಿ-ಸಾಹಿತ್ಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಕುರಿತಾದ, ಒಂದಕ್ಕಿಂತ ಒಂದು ಚೆಂದದ ಪೇಂಟಿಂಗ್ಗಳು!! ಪೌರಾಣಿಕ ನಿರೂಪಣೆ ಮತ್ತು ಜಾನಪದ ಕಥೆಗಳನ್ನು ಚಿತ್ರಗಳ ಮೂಲಕ ಪ್ರತಿಬಿಂಬಿಸುವ ಪಟ್ಟ ಚಿತ್ರಗಳ ಡಿಸೈನ್ಗಳು ನೋಡಿದಲ್ಲೆಲ್ಲ ಮನಸ್ಸಿಗೆ ಮುದವನ್ನು ನೀಡುವಂತಿದೆ. ಶಾಲಾ ಕಾಲೇಜುಗಳು, ಪೋಸ್ಟ್ ಆಫೀಸ್, ಪೊಲೀಸ್ ಠಾಣೆ, ಆಸ್ಪತ್ರೆ, ಫ್ಲೈ ಓವರ್, ಟ್ರಾಫಿಕ್ ಜಂಕ್ಷನ್ಗಳು ಇತ್ಯಾದಿ ಕಟ್ಟಡಗಳ ಜೊತೆಗೆ ಇನ್ನಿತರ ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ಮೇಲೆ ಅವುಗಳ ಕಾರ್ಯನಿರ್ವಹಣೆಯ ಕುರಿತಾದ ವಿಷಯಗಳ ಪೇಂಟಿಂಗ್ಗಳು ಎಲ್ಲೆಡೆ ಕಾಣಸಿಗುತ್ತಿದ್ದವು. ಇಲ್ಲಿನ ದೇವಾಲಯಗಳು ಮತ್ತು ದೈವಿಕತೆಗೆ ಸಂಬಂಧಪಟ್ಟಂತಹ ಚಿತ್ರಗಳು, ಜಾನಪದ ...

ಚೌಸಟ್ ಯೋಗಿನಿ ದೇವಾಲಯ

ಇಮೇಜ್
ಭುವನೇಶ್ವರದ ನಗರದೊಳಗಿನ ಪ್ರಮುಖ ದೇವಾಲಯಗಳನ್ನೆಲ್ಲ ಮುಗಿಸಿ, ಮತ್ತಿನ್ಯಾವ ವಿಶಿಷ್ಟ ಸ್ಥಳವನ್ನು ನೋಡಬಹುದು ಎಂದು ಹುಡುಕಿದಾಗ ಗೂಗಲಮ್ಮ ಹೇಳಿದ್ದು, ಚೌಸ ಯೋಗಿನಿ ದೇವಾಲಯದ ಬಗ್ಗೆ. ಬೇರೆ ದೇವಾಲಯಗಳಷ್ಟು ಪ್ರಸಿದ್ಧ ಮಾಹಿತಿಗಳು ಇರದಿದ್ದರೂ, ಯೋಗಿನಿ ದೇವಾಲಯ ಭೇಟಿ ನೀಡಲೇ ಬೇಕು ಎಂದುಕೊಂಡು ಹೋಟೆಲ್ಲಿನಿಂದ ಆಕ್ಷಣಕ್ಕೆ ಕಾಲ್ಕಿತ್ತೆವು. ಗೂಗಲ್ ಮ್ಯಾಪ್ ಪ್ರಕಾರ ಪಟ್ಟಣದಿಂದ ಸುಮಾರು ೧೫ ಕಿಮೀ ಹೊರಭಾಗದಲ್ಲಿ ಇತ್ತು ಈ ದೇವಾಲಯ. ಹಾದಿ ಸಾಗುತ್ತ ಹೋದಂತೆ, ಮುಂದಕ್ಕೆ ಯಾರೂ ಹೆಚ್ಚು ಓಡಾಡದ ಹಳ್ಳಿಯ ರಸ್ತೆಗಳಲ್ಲಿ ನಮ್ಮ ಗಾಡಿಚಲಿಸುತ್ತಿತ್ತು. ಭೈರವಿ ನದಿಯ ಪಕ್ಕದಲ್ಲಿ ಹಾದುಹೋಗುವ ಈ ಹಾದಿಯಲ್ಲಿ ಎಡ ಬಲಗಳ ತಿರುಗಾಟವಾಗಿ, ಸ್ವಲ್ಪ ಸಮಯಕ್ಕೆ  ಗೂಗಲ್ ಮ್ಯಾಪ್ ಕೂಡ ಹಾದಿ ತೋರಿಸುತ್ತಿಲ್ಲ ಎಂದಾಗ ಹೇಗೆ ತಲುಪುವುದಪ್ಪಾ ಎಂದು ತುಸು ಆತಂಕವಾದರೂ, ಯಾರನ್ನಾದರೂ ಕೇಳುತ್ತಲೇ ಸಾಗುವುದು ಎಂದು ನಿರ್ಧರಿಸಿ ಮುಂದೆ ಸಾಗಿದೆವು. ತುಸು ಹೊತ್ತಿಗೆ ಮತ್ತೆ ಗೂಗಲ್ ಮ್ಯಾಪ್ಸ್ ಮಾಹಿತಿ ನೀಡಿ ಸಹಕರಿಸಿತು.  ಅದೊಂದು ಪುಟ್ಟ ಹಳ್ಳಿ ಹಿರಾಪುರ. ಊರ ಮನೆಗಳ ಮುಂದೆ ಹಾದು ಹೋಗುವ ಸಣ್ಣ ರಸ್ತೆಗಳ ದಾಟಿದಂತೆ ಮುಂದೆ ಅನಾವರಣ ಗೊಂಡಿದ್ದು ಒಂದು ಪುರಾತನ ಸಣ್ಣ ದೇವಾಲಯದ ವರಾಂಗಣ. ದೂರದಿಂದ ಕಲ್ಲಿನ ಸಣ್ಣ ವರ್ತುಲದಂತೆ ಕಾಣುತ್ತಿದ್ದ ಕಲ್ಲಿನ ಸ್ಮಾರಕದಲ್ಲಿ ಅಂತಹದ್ದೇನಿರಬಹುದು ಎಂದುಕೊಂಡು ಹೋದವಳಿಗೆ, ಹೊರಬರುವಾಗ ಇಂತದ್ದೊಂದು ಸ್ಥಳವನ್ನು ನೋಡದೇ...