ಪೋಸ್ಟ್‌ಗಳು

#culture ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಒಡಿಶಾ ವಾಸ್ತುಶಿಲ್ಪದ ರತ್ನ - ಮುಕ್ತೇಶ್ವರ ದೇವಾಲಯ

ಇಮೇಜ್
೧. ಮುಕ್ತೇಶ್ವರ ದೇವಾಲಯದ ಕುರಿತಾಗಿ :  ಭಾರತದಲ್ಲಿ ಶಿವನಿಗಾಗಿ ಕಟ್ಟಿದ ಆಕರ್ಷಕ ಹಿಂದೂ ದೇವಾಲಯಗಳಲ್ಲಿ ಮುಕ್ತೇಶ್ವರ ದೇವಸ್ಥಾನವವೂ ಒಂದು. ಈ ದೇವಾಲಯದ ವಾಸ್ತುಶಿಲ್ಪವೇ ಇದರ ಮುಖ್ಯ ಆಕರ್ಷಣೆ. ಹೆಚ್ಚಾಗಿ ಎಲ್ಲಾ ದೇವಸ್ಥಾನಗಳು ಪೂರ್ವಾಭಿಮುಖವಾಗಿದ್ದರೆ, ಇಲ್ಲಿನ ದೇವಸ್ಥಾನ ಪಾಶ್ಚಿಮಾಭಿಮುಖವಾಗಿದೆ. ಮುಕ್ತೇಶ್ವರ ಎಂದರೆ ಮುಕ್ತಿ ಅಥವಾ ಸ್ವಂತಂತ್ರ್ಯವನ್ನು ನೀಡುವ ದೇವರೆಂದರ್ಥ. ಕೋನಾರ್ಕ್ ಸೂರ್ಯದೇವಾಲಯಕ್ಕೆ ಹೋಲಿಸಿದರೆ ಹೆಚ್ಚು ಎತ್ತರದ ದೇವಾಲಯ ಇದಲ್ಲದಿದ್ದರೂ, ಇಲ್ಲಿನ ದೇವಾಲಯದ ಕೆತ್ತನೆ ಅತ್ಯದ್ಭುತವಾಗಿದೆ. ದೇವಾಲಯದ ಹೊರಾಂಗಣ ಕೆತ್ತನೆ ಕೆಂಪು ಕಲ್ಲಿನ ಮೇಲಿದ್ದರೆ, ಒಳಾಂಗಣ ಕೆತ್ತನೆ ಕಪ್ಪು ಕಲ್ಲುಗಳ ಮೇಲೆ ಮಾಡಲಾಗಿದೆ. 'ಕಳಿಂಗ' ವಾಸ್ತುಶಿಲ್ಪವನ್ನು ಅಧ್ಯಯನ ಮಾಡಲು ಇದಕ್ಕಿಂತ ಉತ್ತಮವಾದ ದೇವಾಲಯ ಸಿಗಲಿಕ್ಕಿಲ್ಲ. ದೇವಾಲಯದಲ್ಲಿನ ವಾಸ್ತುಶಿಲ್ಪದ ಹೊಸ ಮಾದರಿಯ ಪ್ರಯೋಗವು ಅದರ ಪೂರ್ವವರ್ತಿಗಳಿಗೆ ತೋರಿಸಿರುವ ಪ್ರಬುದ್ಧ ಹಂತವನ್ನು ಮುಕ್ತೇಶ್ವರ ದೇವಾಲಯದಲ್ಲಿನ ಕೆತ್ತನೆಗಳಲ್ಲಿ ನಾವು ಕಾಣಬಹುದು. "ಒಡಿಶಾ ವಾಸ್ತುಶಿಲ್ಪದ ರತ್ನ" ಎಂಬ ಪ್ರಸಿದ್ಧತೆ ಈ ದೇವಾಲಯಕ್ಕಿದೆ. ಈ ದೇವಾಲಯವು 950–975 CE ಸಮಯದಲ್ಲಿ ಸೋಮವಂಶಿ ಕಾಲದಲ್ಲಿ ರಾಜ ಪ್ರಥಮ ಯಯಾತಿ ನಿರ್ಮಾಣ ಮಾಡಿದನು ಎಂಬ ಉಲ್ಲೇಖವಿದೆ. ಈ ದೇವಸ್ಥಾನಕ್ಕೆ ಪ್ರವೇಶ ಶುಲ್ಕವಿಲ್ಲ. ದೇವಸ್ಥಾನದ ಆವರಣದಲ್ಲಿ ಎರಡು ಮುಖ್ಯ ದೇವಾಲಯಗಳಿವೆ. ಒಂದು ಮುಕ್ತೇಶ್ವರ...

ನೇಪಾಳಿಗರ ದಶೈನ್ ಹಬ್ಬ

ಇಮೇಜ್
 One India one festival many celebrations.. ಕನ್ನಡಿಗರ ದಸರಾ ನೇಪಾಳಿಗರ ದಶೈನ್ ಹಬ್ಬ. ಒಂಭತ್ತು ದಿನಗಳ ನವರಾತ್ರಿಯ ಜೊತೆಗೆ, ಹತ್ತನೇ ದಿನದ ವಿಜಯದಶಮಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಹಬ್ಬಗಳೆಲ್ಲ ಒಂದೇ ಆದರೂ ಆಚರಣೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಅದೆಷ್ಟು ವಿಭಿನ್ನ ಮತ್ತು ವೈವಿಧ್ಯಮಯ. ನವರಾತ್ರಿ ಕೊನೆಯಲ್ಲಿ ದಾರ್ಜೀಲಿಂಗ್ನಲ್ಲಿದ್ದೆವು. ಬಾಗ್ದೋಗ್ರಾ ಏರ್ಪೋರ್ಟ್ ನಿಂದ ಹೊರಟ ಲಾಗಾಯ್ತು ಒಂದು ವಿಶೇಷತೆ ಗಮನಿಸಿದ್ದೆವು.ಅನೇಕ ಜನರ ಹಣೆಯ ಮೇಲೆ ಕೆಂಪು ಬಣ್ಣದ ಅಕ್ಕಿಯನ್ನು 'ಬಳಿದು'ಕೊಂಡಿದ್ದರು. ಸಣ್ಣಕೆ ಹಚ್ಚಿಕೊಂಡ ಕುಂಕಿ ಅಲ್ಲ ಅದು, ಕೆಲವರ ಹಣೆಯ ಮೇಲೆ ದೊಡ್ಡ ರೌಂಡ್ ಇದ್ದರೆ, ಇನ್ನು ಕೆಲವರು ಇಡೀ ಹಣೆಯ ತುಂಬಾ ಈ ಕೆಂಪು ಅಕ್ಕಿಯನ್ನು ಬಳಿದುಕೊಂಡಿದ್ದರು. "ಅದು ದಶೈನ್ ಹಬ್ಬ ನಡೆಯುತ್ತಿದೆಯಲ್ಲ ಅದಕ್ಕಾಗಿ ನಾವು ಟೀಕಾ ಹಾಕಿಕೊಳ್ಳುತ್ತೇವೆ" ಎಂದ ಡ್ರೈವರಣ್ಣ. ವಿಜಯದಶಮಿಯ ದಿನವಂತೂ ಬೆಳಿಗ್ಗೆ ವಾಕ್ ಹೋದಾಗ ಸಾಕಷ್ಟು ಜನರ ಹಣೆಯಲ್ಲಿ ಈ ಸುಂದರ ದೊಡ್ಡ 'ಟೀಕಾ' ರಾರಾಜಿಸುತ್ತಿತ್ತು. ದೇವಸ್ಥಾನದಿಂದ ಬರುತ್ತಿದ್ದ ಇಬ್ಬರು ಮಹಿಳೆಯರನ್ನು ಮಾತನಾಡಿಸಿದಾಗ ಅಲ್ಲಿನ ಆಚರಣೆಯ ಕುರಿತು ಅವರು ವಿವರವಾಗಿ ತಿಳಿಸಿದರು. ವಿಜಯದಶಮಿ ಇಲ್ಲಿನವರ ಅದರಲ್ಲೂ ನೇಪಾಳಿಗರಿಗೆ ದೊಡ್ಡ ಹಬ್ಬವೆಂದೇ ಹೇಳಬಹುದು. ಅಂದು ಬೇಗನೆ ಎದ್ದು ಸ್ನಾನ ಮಾಡಿ ಪೂಜೆ ಮಾಡಿ, ಈ 'ಟೀಕಾ' ...

ಪರಂಪರೆಯ ಪೊರೆವುದು ಹ್ಯಾಂಗ?

ಇಮೇಜ್
ಏಪ್ರಿಲ್ ೧೮, 'ವಿಶ್ವ ಪಾರಂಪರಿಕ ದಿನಾಚರಣೆ' ಅಂತಾರಪ. ವರ್ಷಪೂರ್ತಿ ಏನೇನೋ ದಿನಾಚರಣೆ ಅದ್ರಲ್ಲಿ ಇದೂ ಒಂದು. ಆದ್ರೆ ಏನು ದಿನಾಚರಣೆ ಇದು?  ಯಾವುದೋ ಇಲಾಖೆಗೆ ಸಂಬಂಧ ಪಟ್ಟಿದ್ದಿರಬೇಕು.. ಏನಂದ್ರಿ..? ನಾವೆಲ್ಲಾ ಆಚರಿಸೋ ಹಬ್ಬನಾ? ಯಾವ್ ಧರ್ಮದ ಹಬ್ಬರೀ ಇದು? ನೋಡ್ರಿ, ನಾವು ಸಾಮಾನ್ಯ ಮನುಷ್ಯರು, ಮನೇಲಿ ಕೂತೋರು, ಆಫೀಸ್ ಹೋಗೋರು, ಮಕ್ಕಳು ದೊಡ್ಡೋರು ಎಲ್ಲ ಇದೀವಿ, 'ಪಾರಂಪರಿಕ ದಿನ' ನ ಹೆಂಗೆ 'ಆಚರಣೆ' ಮಾಡ್ಬೇಕು ಅಂತೆಲ್ಲ ನಮಗೆ ಗೊತ್ತೇ ಇಲ್ಲಪಾ.. ಅಷ್ಟಕ್ಕೂ ಯಾಕೆ ಬೇಕಿದು? ಯಾಕೆ ಬೇಕಿದು? ನಮ್ಮ ಜೀವನದಲ್ಲಿ ನಮ್ಮ ಇರುವಿಕೆ, ನಮ್ಮ ವ್ಯಕ್ತಿತ್ವದ ಗುರುತು ಮತ್ತು ಮುಂದುವರೆಸುವ ಜೀವನ ಶೈಲಿಗೆ, ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮವರು ಹಿಂದಿನಿಂದಲೂ ಪರಂಪರೆಯನ್ನು, ಅದಕ್ಕೆ ಸಂಬಂಧ ಪಟ್ಟ ಸ್ಥಳ, ವಾಸ್ತು ಶಿಲ್ಪ, ಭೌಗೋಳಿಕ ಪುರಾವೆ, ಆಚಾರ ವಿಚಾರ, ಆಚರಣೆಗಳ ಮೂಲಕ ದಾಖಲಿಸುತ್ತಾ ಬಂದಿದ್ದಾರೆ ಮತ್ತು ಅವರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಅದನ್ನು ಸಂರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾರಂಪರಿಕ ವಿಷಯಗಳ ಕುರಿತಾಗಿ ಮಾಹಿತಿ ಕೊರತೆ, ಅದರ ಬಗ್ಗೆ ತಿಳಿದುಕೊಳ್ಳುವ ಮತ್ತು ಆಚರಣೆ ಮಾಡುವ ನಿರಾಸಕ್ತಿಯಿಂದಾಗಿ, ನಾವು ನಮ್ಮ ಅದೆಷ್ಟೋ ಅತ್ಯಮೂಲ್ಯ ಸಂಪತ್ತನ್ನು ಕಳೆದುಕೊಳ್ಳುತ್ತಿ...

'ಮದುವೆಯ ಮನೆ' - ಓಡಿಶಾದ ಮನೆ ಮನೆಗಳಲ್ಲೂ ಚಿತ್ರಕಲೆ

ಇಮೇಜ್
ಓಡಿಸಾ ಪ್ರವಾಸದ ಸಂದರ್ಭದಲ್ಲಿ ನಾವು ಜನರ ಇನ್ನೊಂದು ವಿಶಿಷ್ಟ ಸಂಪ್ರದಾಯ ವನ್ನು ಗಮನಿಸಿದವು. ನಮ್ಮ ಮಲೆನಾಡ ಕಡೆ ಹಸಿ ಚಿತ್ತಾರವಿದ್ದಂತೆ, ಮಹಾರಾಷ್ಟ್ರದ ವರ್ಲಿ ಚಿತ್ರಕಲೆ, ಬಿಹಾರದ ಮಧುಬನಿ ಇದ್ದಂತೆ, ಶುಭ ಸಾಂಕೇತಿಕ ವಸ್ತುಗಳ ಚಿತ್ರಕಲೆಯ ಪರಂಪರೆ ಮದುವೆ ಸಾಂಪ್ರದಾಯಿಕ ಪರಂಪರೆಯೊಂದಿಗೆ ಬೆಸೆದುಕೊಂಡಿದೆ. ಯಾರ ಮನೆಯಲ್ಲಿ ಮದುವೆಯ ಆಚರಣೆ ಇರುತ್ತದೆಯೋ, ಅವರ ಮನೆಯ ಹೊರಗಿನ ಗೋಡೆಯ ಮೇಲೆ, ಕಳಶದ ಮೇಲಿರುವ ತೆಂಗಿನ ಕಾಯಿ, ಬಾಳೆ ಮರ, ಮೀನು, ವಾದ್ಯಗಳು ಇತ್ಯಾದಿ ನಿಸರ್ಗ ಆರಾಧನೆಯ ಫಲವಂತಿಕೆಯ ಸಾಂಕೇತಿಕ ವಸ್ತುಗಳ ಪೈಂಟಿಂಗ್ ಮಾಡಿಸುತ್ತಾರೆ. ಸಮೃದ್ಧಿ ಮತ್ತು ಶುಭವನ್ನು ಸೂಚಿಸುವ, ಈ ರೀತಿಯ ಪೇಂಟಿಂಗಳನ್ನು, ನೋಡಲು ನಿಜವಾಗಿಯೂ ಖುಷಿಯಾಗುತ್ತಿತ್ತು. ವಧು ವರರ ಹೆಸರುಗಳನ್ನು ಸೂಚಿಸಿ ಮದುವೆಯ ಮಾಹಿತಿಯನ್ನು ನೀಡಲು ಕೂಡ ಈ ರೀತಿಯ ಸಂಪ್ರದಾಯ ಬೆಳೆದು ಬಂದಿರಬಹುದು. ಪ್ರದೇಶದಿಂದ ಪ್ರದೇಶಕ್ಕೆ ಆಚರಣೆಗಳು ಬದಲಾದರೂ, ಮನುಷ್ಯನ ಖುಷಿ ಮತ್ತು ಸಂಭ್ರಮಾಚರಣೆಗೆ, ಚಿತ್ರಕಲೆ, ಹಾಡು-ನೃತ್ಯ ಇನ್ನಿತರ ಕಲೆಗಳ ಮುಖೇನ ನಡೆಸಿಕೊಂಡು ಹೋಗುವ ಇಂತಹ ಪುಟ್ಟ ಪುಟ್ಟ ಸಂಪ್ರದಾಯಗಳು, ಆ ಪ್ರದೇಶದ ಸಂಸ್ಕೃತಿಯ ಉಳಿವಿಗೆ ಸಹಾಯಕ ಅಂಶಗಳಾಗಿರುತ್ತವೆ.  #marriagepainting #artandculture #odisha