ಪೋಸ್ಟ್‌ಗಳು

#temples ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ರಾಕ್ಷಸಿಗೊಂದು ದೇವಾಲಯ - ಹಡಿಂಬ ದೇವಿ ದೇವಾಲಯ, ಮನಾಲಿ

ಇಮೇಜ್
ಚಂದ್ರಕಾಣಿ ಪಾಸ್ ಚಾರಣದ ನೆಪದಲ್ಲಿ ಕುಲು ತಲುಪಿಯಾಗಿತ್ತು. ಚಾರಣದ ಹಿಂದಿನ acclimatisation ಟ್ರೆಕ್ ದಿನವನ್ನು ಅರ್ಧ ದಿನ ಮುಗಿಸಿ ಇನ್ನರ್ಧ ದಿನ, ೪-೫ ತಾಸುಗಳ ಮಟ್ಟಿಗೆ ಹಿಮಾಚಲ ಪ್ರದೇಶದ ಸುಂದರ ಗಿರಿಧಾಮ ಮನಾಲಿ ಸುತ್ತುವುದು ಎಂಬ ಪ್ಲಾನ್ ಮಾಡಿಕೊಂಡೆವು. ಅಲ್ಲಿ ಭೇಟಿ ನೀಡಬೇಕೆಂದು ಸೂಚಿಸಲಾದ ಸ್ಥಳಗಳು ಹಡಿಂಬ ದೇವಿ ದೇವಾಲಯ ಮತ್ತು ಒಂದಷ್ಟು ಶಾಪಿಂಗ್ಗಾಗಿ ಮಾಲ್ ರೋಡ್ ಸುತ್ತುವುದು ಎಂದು ತಿಳಿಸಿದರು. ಯಾಕೋ ಅನುಮಾನವಾಯಿತು ಮತ್ತೆ ಮತ್ತೆ ಕೇಳಿದೆ. ಮಹಾಭಾರತದಲ್ಲಿ, ಭೀಮ ಮದುವೆಯಾಗಿದ್ದ ಆ  ರಾಕ್ಷಸ ಕುಲದ ಹಿಡಿಂಬೆಗೆ ದೇವಸ್ಥಾನವೇ ? ಎಂದು ಎರಡು-ಮೂರು ಗೈಡ್ ಗಳನ್ನು ಕೇಳಿದೆ. ಹೌದು ಹೌದು ಎಂದರು. ೧೪ ವರ್ಷಗಳ ಹಿಂದೊಮ್ಮೆ ಮನಾಲಿಗೆ ಬಂದಿದ್ದಾಗ ವಿಷ್ಣುವಿನ ದೇವಾಲಯದಕ್ಕೆ ಭೇಟಿ ನೀಡಿದ್ದೆವು, ಈ ದೇವಾಲಯದ ಬಗ್ಗೆ ಕೇಳಿರಲಿಲ್ಲ. ಆಶ್ಚರ್ಯವಾಯಿತು.  ೧೨ನೇ ಮೈಲು ಎಂಬ ಊರಿಂದ ಸ್ಥಳೀಯ ಬಸ್ಸಿನಲ್ಲಿ ಪ್ರಯಾಣ. ೩೦ ನಿಮಿಷಕ್ಕೆಲ್ಲ ಮನಾಲಿಯಲ್ಲಿದ್ದೆವು. ಸ್ಥಳೀಯ ಬಸ್ಸುಗಳಲ್ಲಿ ಕೇಳಸಿಗುವ ಅಲ್ಲಿಯ  ಜನರ ಪಹಾಡಿ ಭಾಷೆ, ಡ್ರೈವರುಗಳ ಜೊತೆ ಮಾತುಕತೆ ಎಲ್ಲವೂ ಮಜಾ ಕೊಡುತ್ತದೆ. ಹಿಮಾಲಯ ಪರ್ವತಗಳ ನಡುವೆ ಇರುವ ಸುಂದರ ಗಿರಿಧಾಮ ಮನಾಲಿ.  ಜೂನ್ ತಿಂಗಳು, ಚುಮು ಚುಮು ಚಳಿ, ತುಂತುರು ಮಳೆ. ಪ್ರವಾಸೋದ್ಯಮವೇ ಮುಖ್ಯ ಆದಾಯವಾದ ಮನಾಲಿ ಒಂದು ಚಿಕ್ಕ ಊರು. ನಮಗೆ ಮನಾಲಿ ೧೪ ವರ್ಷಗಳ ನಂತರ ಎರಡನೇ ಸಲ ನೋಡುತ್ತಿರುವ ಅನುಭವ...

ಚೌಸಟ್ ಯೋಗಿನಿ ದೇವಾಲಯ

ಇಮೇಜ್
ಭುವನೇಶ್ವರದ ನಗರದೊಳಗಿನ ಪ್ರಮುಖ ದೇವಾಲಯಗಳನ್ನೆಲ್ಲ ಮುಗಿಸಿ, ಮತ್ತಿನ್ಯಾವ ವಿಶಿಷ್ಟ ಸ್ಥಳವನ್ನು ನೋಡಬಹುದು ಎಂದು ಹುಡುಕಿದಾಗ ಗೂಗಲಮ್ಮ ಹೇಳಿದ್ದು, ಚೌಸ ಯೋಗಿನಿ ದೇವಾಲಯದ ಬಗ್ಗೆ. ಬೇರೆ ದೇವಾಲಯಗಳಷ್ಟು ಪ್ರಸಿದ್ಧ ಮಾಹಿತಿಗಳು ಇರದಿದ್ದರೂ, ಯೋಗಿನಿ ದೇವಾಲಯ ಭೇಟಿ ನೀಡಲೇ ಬೇಕು ಎಂದುಕೊಂಡು ಹೋಟೆಲ್ಲಿನಿಂದ ಆಕ್ಷಣಕ್ಕೆ ಕಾಲ್ಕಿತ್ತೆವು. ಗೂಗಲ್ ಮ್ಯಾಪ್ ಪ್ರಕಾರ ಪಟ್ಟಣದಿಂದ ಸುಮಾರು ೧೫ ಕಿಮೀ ಹೊರಭಾಗದಲ್ಲಿ ಇತ್ತು ಈ ದೇವಾಲಯ. ಹಾದಿ ಸಾಗುತ್ತ ಹೋದಂತೆ, ಮುಂದಕ್ಕೆ ಯಾರೂ ಹೆಚ್ಚು ಓಡಾಡದ ಹಳ್ಳಿಯ ರಸ್ತೆಗಳಲ್ಲಿ ನಮ್ಮ ಗಾಡಿಚಲಿಸುತ್ತಿತ್ತು. ಭೈರವಿ ನದಿಯ ಪಕ್ಕದಲ್ಲಿ ಹಾದುಹೋಗುವ ಈ ಹಾದಿಯಲ್ಲಿ ಎಡ ಬಲಗಳ ತಿರುಗಾಟವಾಗಿ, ಸ್ವಲ್ಪ ಸಮಯಕ್ಕೆ  ಗೂಗಲ್ ಮ್ಯಾಪ್ ಕೂಡ ಹಾದಿ ತೋರಿಸುತ್ತಿಲ್ಲ ಎಂದಾಗ ಹೇಗೆ ತಲುಪುವುದಪ್ಪಾ ಎಂದು ತುಸು ಆತಂಕವಾದರೂ, ಯಾರನ್ನಾದರೂ ಕೇಳುತ್ತಲೇ ಸಾಗುವುದು ಎಂದು ನಿರ್ಧರಿಸಿ ಮುಂದೆ ಸಾಗಿದೆವು. ತುಸು ಹೊತ್ತಿಗೆ ಮತ್ತೆ ಗೂಗಲ್ ಮ್ಯಾಪ್ಸ್ ಮಾಹಿತಿ ನೀಡಿ ಸಹಕರಿಸಿತು.  ಅದೊಂದು ಪುಟ್ಟ ಹಳ್ಳಿ ಹಿರಾಪುರ. ಊರ ಮನೆಗಳ ಮುಂದೆ ಹಾದು ಹೋಗುವ ಸಣ್ಣ ರಸ್ತೆಗಳ ದಾಟಿದಂತೆ ಮುಂದೆ ಅನಾವರಣ ಗೊಂಡಿದ್ದು ಒಂದು ಪುರಾತನ ಸಣ್ಣ ದೇವಾಲಯದ ವರಾಂಗಣ. ದೂರದಿಂದ ಕಲ್ಲಿನ ಸಣ್ಣ ವರ್ತುಲದಂತೆ ಕಾಣುತ್ತಿದ್ದ ಕಲ್ಲಿನ ಸ್ಮಾರಕದಲ್ಲಿ ಅಂತಹದ್ದೇನಿರಬಹುದು ಎಂದುಕೊಂಡು ಹೋದವಳಿಗೆ, ಹೊರಬರುವಾಗ ಇಂತದ್ದೊಂದು ಸ್ಥಳವನ್ನು ನೋಡದೇ...