ರಾಖಿಯಾಗಲಿ ಪರಿಸರಮುಖಿ
ಶ್ರಾವಣ ಪೂರ್ಣಿಮೆಯ ದಿನದಂದು, ಸಹೋದರಿಕೆಯ ಪ್ರಾಮುಖ್ಯತೆಯನ್ನು ಸಾರಲು ರಕ್ಷಾಬಂಧನ ಹಬ್ಬವನ್ನುಆಚರಿಸಲಾಗುತ್ತದೆ. ಅಕ್ಕ ತಂಗಿಯರು ಅಣ್ಣ ತಮ್ಮಂದಿರಿಗೆ ಈ ದಿನ ರಾಖಿ ಕಟ್ಟಿ ಅವರ ದೀರ್ಘಾಯುಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಕೆಲವರು ಸಹೋದರನ ಹಣೆಗೆ ತಿಲಕವನ್ನಿಟ್ಟು, ಆರತಿ ಬೆಳಗಿ ಆತನ ಯೋಗಕ್ಷೇಮಕ್ಕಾಗಿ ದೇವರಲ್ಲಿ ಬೇಡುತ್ತಾರೆ. ಸಹೋದರರು ಸಹೋದರಿಯರನ್ನು ಇಂದಿನ ದಿನ ಹರಸಿ ಆಶೀರ್ವದಿಸಿ, ಅವರ ರಕ್ಷಣೆಗಾಗಿ ಪಣ ತೊಟ್ಟು, ಹಣ ಅಥವಾ ಉಡುಗೊರೆಯನ್ನು ನೀಡಿ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಾರೆ. ರಾಖಿ ಹಬ್ಬದ ಇತಿಹಾಸವೇನು? ಹಿಂದೂ ಧರ್ಮದಲ್ಲಿ ರಕ್ಷಾಬಂಧನ ಆಚರಣೆಗೆ ಸಾಕಷ್ಟು ಮಹತ್ವವಿದೆ. ಪುರಾಣದ ದಂತಕಥೆಗಳಲ್ಲಿ ಒಂದಾದ ಮಹಾಭಾರತದ ಪ್ರಕಾರ, ಒಮ್ಮೆ ಶ್ರೀಕೃಷ್ಣನ ಬೆರಳು ಆಕಸ್ಮಿಕವಾಗಿ ಸುದರ್ಶನ ಸಿಲುಕಿ ಕತ್ತರಿಸಿ ಹೋಗುತ್ತದೆ. ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ದ್ರೌಪದಿ ಹಿಂದೆ ಮುಂದೆ ನೋಡದೆ, ಓಡಿ ಹೋಗಿ, ತನ್ನ ಸೀರೆಯ ತುಂಡನ್ನು ಹರಿದು, ಕೃಷ್ಣನ ಬೆರಳಿಗೆ ಕಟ್ಟಿ ರಕ್ತ ಸುರಿಯುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಾಳೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಆ ಪೋಷಿಸುವ ಗುಣವನ್ನು ಕಂಡು ಕೃಷ್ಣ ದ್ರೌಪದಿಯನ್ನು ತನ್ನ ತಂಗಿಯಾಗಿ ಮನಸ್ಸಿನಲ್ಲೇ ಸ್ವೀಕರಿಸುತ್ತಾನೆ. ಅದೇ ಕಾರಣಕ್ಕಾಗಿ, ಮುಂದೆ ಕೌರವರು ತುಂಬು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹಾರಣ ಮಾಡುವ ಪ್ರಯತ್ನ ಪಟ್ಟಾಗ, ತಂಗಿಯ ಮಾನ ಕಾಪಾಡಲು ಕೃಷ್...