ಪೋಸ್ಟ್‌ಗಳು

#parenting ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಕ್ಕಳಿರಲಿ ಅಡುಗೆ ಅರಮನೆಯಲ್ಲಿ..

ಇಮೇಜ್
ಇನ್ನೇನು ಮಕ್ಕಳ ಬೇಸಿಗೆ ರಜೆಪ್ರಾರಂಭವಾಗಲಿದೆ. ಮಕ್ಕಳ ಪಾಲಿಸಬೇಕಾದ ನಿತ್ಯದ ದಿನಚರಿಯಿಂದ ವಿರಾಮವನ್ನು ನೀಡುತ್ತದೆ. ಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ವಿಶ್ರಮಿಸಲು, ಹೊಸ ವಿಷಯಗಳ ಅನ್ವೇಷಿಸಲು ಮತ್ತು ಶಾಶ್ವತವಾದ ನೆನಪುಗಳನ್ನು ರಚಿಸಲು ಉತ್ತಮ ಸಮಯ. ಇಂತಹ  ದಿನಗಳಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಬಹುದಾದ ಚಟುವಟಿಕೆಗಳಲ್ಲಿ ಅಡುಗೆಯೂ ಒಂದು. ಮಕ್ಕಳನ್ನು ಅಡುಗೆ ಮನೆಯಿಂದ ಹೊರಗಿಡುವ ದಿನಗಳು ಹೋಗಿವೆ. ಇಂದಿನ ಪಾಲನೆ ಶೈಲಿಯು ಮಕ್ಕಳು ಅಡುಗೆ ಮತ್ತು ಶುಚಿಗೊಳಿಸುವಿಕೆಯ ಕೌಶಲ್ಯಗಳನ್ನು ಕಲಿತಿರಬೇಕು ಎನ್ನುತ್ತದೆ. ಅಡುಗೆ ಲಿಂಗ ನಿರ್ಧಿಷ್ಟವೇನಲ್ಲ. ಅದು ಕೇವಲ ಹೊಟ್ಟೆ ತುಂಬಿಸುವ ಕಾರ್ಯವಲ್ಲದೆ, ವ್ಯಕ್ತಿತ್ವ ಅಭಿವೃದ್ಧಿಗೆ ಸಹಾಯ ಮಾಡುವಂತಹ  ಹವ್ಯಾಸ. ಇದನ್ನು ಚಿಕ್ಕಂದಿನಿಂದಲೇ ಅನುಸರಿಸುವುದರಿಂದ ಮಕ್ಕಳು ಬಹಳಷ್ಟು ವಿಷಯಗಳನ್ನು ಕಲಿಯಬಹುದು.  ಮಕ್ಕಳು ಅಡುಗೆ ಕಲಿಯುವುದರ ಉಪಯೋಗ :  ಪ್ರಾಯೋಗಿಕ ಜ್ಞಾನ : ಅಡುಗೆ ಪದಾರ್ಥವನ್ನು ಮಾಡಲು ಬೇಕಾಗುವ ಸಲಕರಣೆಗಳ ಕುರಿತಾದ ಜ್ಞಾನ ವೃದ್ಧಿಯಾಗುತ್ತದೆ.  ಸಂಯೋಜನಾ ಕೌಶಲ್ಯ ಮತ್ತು ಗ್ರಹಿಕೆ :  ಆಹಾರ ವಸ್ತುಗಳ ಎತ್ತುವ, ಮಡಚುವ, ಮಗಚುವಾಗ ಕಣ್ಣು ಕೈಗಳ ಸಂಯೋಜನೆ, ಹಿಟ್ಟನ್ನು ಕಲೆಸುವಾಗ, ಕಾಯಿ ತುರಿಯಬೇಕಾದಾಗ, ತರಕಾರಿ ಹೆಚ್ಚುವಾಗ, ಕ್ಯಾರೆಟ್ ತುರಿಯುವಾಗ, ಬೆಂಕಿ ಹಚ್ಚುವಾಗ, , ಯಾವ ವಸ್ತು ಯಾವ ಪ್ರಮಾಣದಲ್ಲಿ ಹಾಕಬೇಕು, ಎಷ್ಟು ವಸ್ತುಗಳು ಬೇಕು...

ಸೋಲಲಿ ಮಕ್ಕಳ ಸೋಲಿನ ಭಯ

ಇಮೇಜ್
ಮಗು ಬಿಸಿನೀರ ಕಾಯಿಸಿ, ಇಕ್ಕಳದಿಂದ ಲೋಟಕ್ಕೆ ನೀರನ್ನು ಎರಸುವಾಗ, ನೀರು ಕೆಳಗೆ ಚೆಲ್ಲಿತೋ.. "ನೀರು ಚೆಲ್ಲಿದ್ಯಾ? ಎದ್ದೇಳು ಮಾರಾಯ್ತಿ, ನಾನು ಮಾಡಿ ಕೊಡ್ತೀನಿ, ನಿಂಗೆ ಒಂದು ಕೆಲಸವೂ ನೆಟ್ಟಗೆ ಮಾಡಲು ಬರುವುದಿಲ್ಲ. ಸುಮ್ನೆ ನನಗಿಲ್ಲಿ ಒಂದಷ್ಟು ತೊಂದರೆ ಕೊಡಕ್ಕೆ.. " ಆಟದಲ್ಲಿ ನಾಲ್ಕು ರೌಂಡ್ ಭಾಗವಹಿಸಿ, ಐದನೇ ರೌಂಡ್ ಗೆ ಸೋಲಾಗಿ ಬಂದ ಮಗುವಿಗೆ, "ಇನ್ನೊಂಚೂರು ಗಮನ ಇಟ್ಟು  ಆಡಿದ್ರೆ ಏನಾಗ್ತಿತ್ತು ನಿಂಗೆ? ಅಲ್ಲಿ ಇಲ್ಲಿ ನೋಡ್ತಾ ಕೂರ್ತೀಯ ಲೇಜಿ ತರ, ಏನ್ ಪ್ರಯೋಜನ ಈಗ ಅತ್ರೆ, ಸೀರಿಯಸ್ ಇಲ್ಲ ನೀನು ಸ್ಪೋರ್ಟ್ಸ್ ಕಡೆ, ಈ ಚಂದಕ್ಕೆ ಕೋಚಿಂಗ್ ಯಾಕೆ ನಿಂಗೆ? ಎಲ್ಲ ದುಡ್ಡು ವೇಸ್ಟ್" "ಅಯ್ಯೋ ಅಲ್ಲಿ ಹತ್ತಬೇಡ, ಬಿದ್ದೋಗ್ತೀಯ, ಬಿದ್ದರೆ ನಾನು ಬರಲ್ಲ ಆಮೇಲೆ ಎತ್ತಕ್ಕೆ" "ಚೆನ್ನಾಗಿ ಓದಿದ್ದೆಅಂತೀಯಾ,  ಎಕ್ಷಾಮ್ ಟೆನ್ಶನ್ ಮಾಡ್ಕೊಂಡ್ರೆ ಇನ್ನೇನಾಗತ್ತೆ, ಈಗ ಇಲ್ಲಿ ಆನ್ಸರ್ ಬರ್ತ್ತಿತ್ತು ಅಂದ್ರೆ ಏನು ಪ್ರಯೋಜನ, ಯು ಜಸ್ಟ್ ಲಾಸ್ಟ್ ಯುವರ್ ಗೋಲ್ಡನ್ಚಾನ್ಸ್"  "ಅಯ್ಯೋ ಏನು ಕೆಟ್ಟವರು ಆ ಕೋಚ್, ಕೈ ಕಾಲಿಗೆ ನೋವಾಗಿದೆ ಅಂತಿದಾಳೆ ಮಗಳು, ಆದ್ರೂನೂ ಆಡು ಅಂತಾರಲ್ಲ, ಸ್ವಲ್ಪನೂ ಕರುಣೇನೇ ಇಲ್ಲ. ಇದೇ ತರ ನೋವಾಗಿ ನೋವಾಗಿ ಕೈ ಕಾಲು ಮುರ್ಕೊಂಡ್ರೆ?"  "ಲಕ್ಷಗಟ್ಟಲೆ ದುಡ್ಡು ಕೊಟ್ಟು ಇಷ್ಟು ಫೇಮಸ್ಸ್ಕೂಲ್ ಗೆ ಹಾಕಿದೀವಿ,  ಗೇರ್ ಸೈಕಲ್, VR ಗೇಮ್ಸು, ಎಲ್ಲಾ ಕೊಟ್ಟಾ...