ಪೋಸ್ಟ್‌ಗಳು

#published #kannadapaper #drawing #kids #parenting ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಕ್ಕಳಿಗೆ ಚಿತ್ರಕಲೆ ಏಕೆ ಮುಖ್ಯ?

ಇಮೇಜ್
ಚಿತ್ರಕಲೆ ಒಂದು ವಿಶ್ವ ಭಾಷೆ. ಎಲ್ಲ ಜಾತಿ, ಧರ್ಮ, ಲಿಂಗ, ವಯಸ್ಸಿನ ಬೇಧವಿಲ್ಲದೆ ಎಲ್ಲರನ್ನೂ ಸೆಳೆದುಕೊಳ್ಳುವ ಭಾಷೆಯಿದು. ಅದರಲ್ಲೂ ಮುಖ್ಯವಾಗಿ ಮಕ್ಕಳು ಅತ್ಯಂತ ಸಹಜವಾಗಿಯೇ ತಮ್ಮನ್ನು ತಾವೇ ತೊಡಗಿಸಿಕೊಳ್ಳಬಹುದಾದಂತಹ ಚಟುವಟಿಕೆಯಿದು. ಚಿತ್ರಕಲೆಗಳಲ್ಲಿ ಆಸಕ್ತಿಯಿಲ್ಲ ನಮ್ಮ ಮಗುವಿಗೆ ಎನ್ನುವ ಪೋಷಕರಿಗಾಗಿ ಇಂದಿನ ಈ ಲೇಖನ.  ಕಲೆ ಎಂದರೆ ವಿಶಿಷ್ಟವಾದ ಚಟುವಟಿಕೆ ಮತ್ತು ಚಿತ್ರಕಲೆ ಎಂದರೆ, ಚಿತ್ರಗಳ ಮೂಲಕ ಆ ಭಾವವನ್ನು ಬಿಂಬಿಸುವ ಪ್ರಯತ್ನ ಎಂದರ್ಥ. ಮನುಷ್ಯನಾಗಿ ರೂಪಿತವಾಗುತ್ತಿರುವ ಹಂತದಲ್ಲೇ, ಗುಹೆಗಳ ಮೇಲೆ ಚಿತ್ರಗಳ ಕೆತ್ತನೆ ಮಾಡುತ್ತ ಆನಂದವನ್ನು ಕಾಣುತ್ತಿದ್ದ ನಮ್ಮ ಪೂರ್ವಿಕರ ಇತಿಹಾಸವಿದೆ. ಪ್ರತಿ  ಮಗುವಿನಲ್ಲೂ ಹುಟ್ಟಿನಿಂದಲೇ ಕಲಾಜ್ಞಾನ ಇರುತ್ತದೆ. ಅದಕ್ಕೆ ಪೆನ್ಸಿಲ್ಲು, ಕುಂಚ-ಬಣ್ಣಗಳ ಬಳಕೆಯೇ ಆಗಿರಬೇಕೆಂದಿಲ್ಲ. ನೈಜತೆಗೆ ಹತ್ತಿರುವಾಗುವಂತಹ ಚಿತ್ರಗಳು ಬರೆದರೆ ಮಾತ್ರ ಅದು ಚಿತ್ರಕಲೆಯಲ್ಲ. ಅಮ್ಮ ಆರಿಸುವ ಅಕ್ಕಿಯ ಬಟ್ಟಲಲ್ಲಿ ಮಗು ಬೆರಳಿನಿಂದ ಗುಂಡನೆಯ ಸೂರ್ಯನನ್ನು ಯೋಚಿಸಿಕೈಯಾಡುತ್ತದೆ. ಆಡುವ ಮಣ್ಣಿನಲ್ಲಿ, ಕೋಲಿನಿಂದ ಕೋಳಿ ಬರೆದಿರುತ್ತಾರೆ ನಮ್ಮ ಮಕ್ಕಳು. "ಛೀ! ಮಣ್ಣಾಡಬೇಡ", "ನೀರು ಪೋಲು ಮಾಡ್ತೀಯ", "ಕೊಡಿಲ್ಲಿ ಅಕ್ಕಿ ಹಾಳು ಮಾಡ್ತೀಯ ನೀನು" ಎಂಬಿತ್ಯಾದಿ ಸ್ವಚ್ಛತೆಯೆಡೆಗಿನ ಪೂರ್ವನಿರ್ಧಾರಿತ ಮಾತುಗಳು, ಆ ಸಮಯಕ್ಕೆ ಎಳೆಗೂಸುಗಳ ಚಿತ್ರ...