ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್
"ಪ್ಲಾಸ್ಟಿಕ್ ಫ್ರೀ ಜುಲೈ ಕ್ಯಾಲೆಂಡರ್" ಎಂಬ ಅಭಿಯಾನದ ಬಗ್ಗೆ ಯಾರಾದರೂ ಕೇಳಿದ್ದೀರಾ? ಒಂದು ದಿನದಲ್ಲಿ ನಾವು ಅದೆಷ್ಟು ಪ್ಲಾಸ್ಟಿಕ್ ವಸ್ತುಗಳ ಜೊತೆ ನಾವು ವ್ಯವಹರಿಸುತ್ತೇವೆ ಒಂದು ತಿಂಗಳು ಪ್ಲಾಸ್ಟಿಕ್ ಕಡಿತಗೊಳಿಸಿ ಬದುಕಲು ಪ್ರಯತ್ನಿಸುವ ಚಾಲೆಂಜ್ ಇದು. ಬದುಕು ಸುಲಭವಿರುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ. ಬೆಳಿಗ್ಗೆ ಎದ್ದು ಹಲ್ಲುಜ್ಜಲು ಬಳಸುವ ಬ್ರಷ್ ನಿಂದ ಹಿಡಿದು, ರಾತ್ರೆ ಸೊಳ್ಳೆ ಕಾಯಿಲ್ ಹಾಕಿ ಮಲಗುವವರೆಗೆ ಅದೆಷ್ಟೋ ವಸ್ತುಗಳು ನಮಗೆ ನಮ್ಮ ಶ್ರಮವನ್ನು ಕಡಿತಗೊಳಿಸಿದೆ. ಪ್ಲಾಸ್ಟಿಕ್ ನಮಗೆ ಇಷ್ಟು ಮೂಲಭೂತವಾಗಲು ಮುಖ್ಯ ಕಾರಣ ಅದರ ಬಹುಮುಖತೆ ಮತ್ತು ಅನುಕೂಲತೆ. ಉಪಯೋಗಗಳ ನೋಡಹೋದರೆ ಹೌದು, ಪ್ಲಾಸ್ಟಿಕ್ ವಸ್ತುಗಳ ಬಳಕೆಯಿಂದ ನಮ್ಮ ಆಹಾರ ಕೆಡದಂತೆ ಇಡಬಹುದಾಗಿದೆ. ಹಣದ ಮಿತವ್ಯಯ ಸಾಧ್ಯವಾಗಿದೆ, ಸ್ಪಾಂಡೆಕ್ಸ್, ನೈಲಾನು, ಅಕ್ರಿಲಿಕ್ ರೂಪದ ವಸ್ತ್ರಗಳು, ಶೂ ಜಾಕೇಟುಗಳು ನಮಗೆ ಹೆಚ್ಚಿನ ವೈವಿದ್ಯತೆ ನೀಡಿದೆ. ಪ್ಲಾಸ್ಟಿಕ್ ಪಾತ್ರೆಗಳು ಬಕೇಟುಗಳು, ಕವರು ಕೊಟ್ಟೆಗಳು ನೀರಿನಿಂದ ಸಂರಕ್ಷಿಸಿ ನಮ್ಮ ಬದುಕನ್ನು ಸಲೀಸಾಗಿಸಿದೆ. ಬಣ್ಣ ಬಣ್ಣದ ಪ್ಲಾಸ್ಟಿಕ್ ವಸ್ತುಗಳ ನಮ್ಮ ಬದುಕನ್ನು ಸುಂದರವಾಗಿ ಕಾಣಲು ಸಹಾಯ ಮಾಡಿದೆ. ಆದರೆ ಸ್ನೇಹಿತರೆ, ನಮಗೆ ಈ ಪ್ರಪಂಚದಲ್ಲಿ ದೊರಕುತ್ತಿರುವ ಅನೇಕ ಪ್ಲಾಸ್ಟಿಕ್ ವಸ್ತುಗಳಲ್ಲಿ ೬೦% ಕೇವಲ ನಮ್ಮ ಬಯಕೆಗಾಗಿ, ಆಕರ್ಷಣೆಯ ಮೂಲಕ ವ್ಯಾವಹಾರಿಕ ಲಾಭಕ್ಕಾಗಿಯೇ ತಯಾರುಗೊಂಡಿದೆಯೇ ಹೊ...