ಪೋಸ್ಟ್‌ಗಳು

ಲೇಖನ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

'ವ್ಯಾಲಿ ಆಫ್ ಫ್ಲವರ್ಸ್'

ಇಮೇಜ್
ಅಲ್ಲಿ ನಿಂತು ನೋಡಿದರೆ, ೩೬೦ ಡಿಗ್ರಿ ಸುತ್ತಲೂ ಆವರಿಸಿದ ಮಂಜಿನ ಬೆಟ್ಟಗಳ ಸಾಲು,ಅದರಾಚೆಗೆ ಹಿಮ ಹೊತ್ತ ರುದ್ರ ರಮಣೀಯ ಪರ್ವತ,  ಹಿ ಮ ಕರಗಿ ನೀರಾಗಿ, ಕಾಲ್ಬದಿಗೆ ಹರಿವ ಸಣ್ಣ ತೊರೆ, ಅಲ್ಲೇ ಪಕ್ಕದ ಹಚ್ಚ ಹಸಿರ ಬೆಟ್ಟದಿಂದ ದುಮ್ಮಿಕ್ಕುವ ಬೆಳ್ನೊರೆಯ ಜಲಪಾತ, ನೀಲಾಕಾಶ, ಬಿಳಿ ಮೋಡಗಳ ಚಿತ್ತಾರ.. ಸೂರ್ಯ ನೆತ್ತಿ ಮೇಲಿದ್ದರೂ ಮೈಸೋಕುವ ತಂಗಾಳಿ ,  ಇದೆಲ್ಲದರ ಮಧ್ಯೆ  ಭೂಮಿಯ ಮೇಲೆ ಪುಷ್ಪ ವೃಷ್ಟಿಯಾಗಿದೆಯೇನೋ ಎಂದು ಭಾಸವಾಗುವಂತೆ  ಆ ಹುಲ್ಲುಗಾವಲಿನ ಕಣಿವೆಯ  ತುಂಬಾ ಕಣ್ಣು ಹಾಯಿಸಿದಷ್ಟು ದೂರಕ್ಕೂ  ಬಣ್ಣ ಬಣ್ಣದ ಹೂಗಳ ಹಾಸು..!! ಇಂತದ್ದೊಂದು ಸಮ್ಮೋಹನಗೊಳಿಸುವಂತಹ  ನೈಸರ್ಗಿಕ ಸೌಂದರ್ಯ ಕಾಣಸಿಗುವುದು, ಉತ್ತರಾಂಚಲದ ಪ್ರಸಿದ್ಧ ಚಾರಣ ಸ್ಥಳ 'ವ್ಯಾಲಿ ಆಫ್ ಫ್ಲವರ್ಸ್' ನಲ್ಲಿ.   ವ್ಯಾಲಿ ಆಫ್ ಫ್ಲವರ್ಸ್ ನಲ್ಲೇನಿದೆ ?  ವ್ಯಾಲಿ ಆಫ್ ಫ್ಲವರ್ಸ್  ಪ್ರಾರಂಭಿಕ ಹಂತದ ಪರ್ವತಾರೋಹಣರಿಗೆ ಹೇಳಿ ಮಾಡಿಸಿದಂತಹ ಚಾರಣ.  ಜೂನ್ ತಿಂಗಳಿನಿಂದ ಪ್ರಾರಂಭವಾಗಿ ಅಕ್ಟೊಬರ್ ಕೊನೆಯವರೆಗೂ ಮಾತ್ರ ಟ್ರೆಕಿಂಗ್ ಮಾಡಬಹುದಾದ ಈ ಸ್ಥಳಗಳು, ನಂತರದ ೬ ತಿಂಗಳು ಸಂಪೂರ್ಣ ಹಿಮಾವೃತ್ತವಾಗುತ್ತದೆ.  ಸಮುದ್ರ ಮಟ್ಟಕ್ಕಿಂತ ೧೨೦೦೦ ಅಡಿಗಳಷ್ಟು ಎತ್ತರದಲ್ಲಿರುವ ವ್ಯಾಲಿ ಆಫ್ ಫ್ಲವರ್ ಕಣಿವೆಯು ದಟ್...

ಲೇಡೀಸ್ ಟ್ರಿಪ್ - ಅನುಭವ

ಇಮೇಜ್
ಅದೊಂದು ದಿನ ಫೋನಿನಲ್ಲಿ ಮಾತನಾಡುತ್ತ, "ಸುಮಾ ಇನ್ನೊಂದೆರಡು ದಿನಕ್ಕೆ ಸಾಗರಕ್ಕೆ ಬತ್ತ ಅಲ್ದಾ..ರಾಣಿ ಮತ್ತೆ ಹುಡ್ರು ಹೆಂಗಂದ್ರೂ ಇದ್ದ.. ನನ್ನ ಕಸಿನ್ ಪಲ್ಲವಿ ಕೂಡ ಇದ್ದ, ಎಲ್ಲಾ ಸೇರಿ ಹುಡ್ರು ಕಟ್ಕ್ಯಂಡು ನಾವ್ ನಾವೇ ಒಂದು ಲೇಡೀಸ್ ಟ್ರಿಪ್ ಹೋಗಿ ಬರನ.." ಎಂದು  ಕೇಳಿದಳು ಚಿನ್ನಕ್ಕ. "ಖಂಡಿತ ಹೋಪನ, ಅಡ್ಡಿಲ್ಲೆ.." ಎಂದೆಲ್ಲ ಖುಷಿಯಿಂದ ಹೂಂಗುಟ್ಟಿದೆ  ನಾನು. ಆದ್ರೆ ಮನಸ್ಸಿನಲ್ಲಿ ಅನುಮಾನವಿದ್ದೇ ಇತ್ತು. ಸುಮಾರಾಗಿ ಎಲ್ಲಾ ಲೇಡೀಸು ಗೂ ಆಗುವಂತೆ - ಇನ್ನೇನು ಹೋಗೆ ಬಿಟ್ಟೆವು ಅನ್ನೋ ಲೆವೆಲ್ ವರೆಗೆ ಆಸೆಯಿಂದ ಎಲ್ರೂ ಟ್ರಿಪ್ ಪ್ಲಾನ್ ಡಿಸ್ಕಷನ್  ಮಾಡೋದು, ಆಮೇಲೆ ಯಾವ್ಡ್ಯಾವ್ದೋ ಕಾರಣಕ್ಕೆ ಒಬ್ಬೊಬ್ಬರೇ ಕಳಚಿಕೊಂಡು ಟ್ರಿಪ್ ಕ್ಯಾನ್ಸಲ್ ಆಗುವುದು, ಪುಂಡತನದಲ್ಲಿ ಪ್ರಚಂಡತೆ ಪಡೆದುಕೊಂಡಿರುವ ನಮ್ಮ ಮಕ್ಕಳ ಸೈನ್ಯ ಕಟ್ಟಿಕೊಂಡು ನೀರಿಗೆ ಹೋಗುವ ಸಾಹಸ ಬೇಡ ಎಂದು ಮನೇಲಿ ಖಡಾಖಂಡಿತವಾಗಿ ನಿರಾಕರಿಸುವುದು, ನಾವೇ ಕಾರು ಲಾಂಗ್ ಡ್ರೈವ್ ಮಾಡಿಕೊಂಡು ಹೋಗುವುದು ಕಷ್ಟ ಸಾಧ್ಯ ಎಂಬಿತ್ಯಾದಿ ನಕಾರದ ಸಾಧ್ಯತೆಗಳನ್ನು ಆಲೋಚಿಸಿ ಏನೇನೂ ತಯಾರಿ ಮಾಡಿಕೊಳ್ಳದೇ ಕುಳಿತಿದ್ದು ಮೊದಲ ಸತ್ಯವಾಗಿತ್ತು. ಆಶ್ಚರ್ಯವೆಂಬಂತೆ ಎಲ್ಲರ ಮನೆಯವರಿಂದ ಗ್ರೀನ್ ಸಿಗ್ನಲ್ ಸಿಕ್ಕಿತು. ಆದರೆ ದುರದೃಷ್ಟವಶಾತ್ ಭಾಗ್ಯಕ್...

ಪುರ ಲುಹುರ್ ಉಲುವಾಟು, ಬಾಲಿ

ಇಮೇಜ್
ಅದೊಂದು ದ್ವೀಪದ ತುತ್ತತುದಿ. ಅಲ್ಲಿದೆ ಒಂದು ಸಮುದ್ರ ಮಟ್ಟಕ್ಕಿಂತ ಸಾಕಷ್ಟು ಎತ್ತರದಲ್ಲಿರುವ  ಬ್ರಹತ್ ಕಡಿಬಂಡೆ. ಅದರ ಮೇಲೆ, ಮನಸ್ಸು ಪ್ರಫುಲ್ಲಗೊಳ್ಳುವಂತಹದೊಂದು ದೇವಾಲಯ. ದೇವಾಲಯದಾಚೆಗೆ ಕಣ್ಣು ಹಾಯಿಸಿದಷ್ಟು ದೂರವೂ, ಮುಗಿಯದ ಸಾಗರದ ತುಂಬು ನೋಟ. ಕೆಳಗಡೆ ನಿರಂತರವಾಗಿ ಬಂಡೆಗೆ ಬಂದಪ್ಪಳಿಸುವ ಶುಭ್ರ ಅಲೆಗಳ ಮೋಹಕ ಆಟ. ಕಿವಿಗೊಟ್ಟು ಆಲೈಸಲು, ತನ್ನತಾನದಲಿ ಶಬ್ದ ಮಾಡುವ ನೀಲ ಶಾಂತ ಅಲೆಗಳ ಹೊಯ್ದಾಟ.. ಅಲ್ಲೆಲ್ಲೋ ಆಗಾಧ ಸಾಗರದ ಮಧ್ಯದಲ್ಲಿ ಸಣ್ಣ ಬಿಳಿ ಹರಳಿನಂತೆ ಕಂಡು, ಕ್ರಮೇಣ ಪುಟ್ಟ ಚುಕ್ಕೆಯಂತೆ ಮಾಯವಾಗುವ ಹಡಗು. ಸೂರ್ಯ ತಂಪಾಗುವ ಸಮಯಕ್ಕೆ, ಆಕಾಶದ ತುಂಬೆಲ್ಲ ರಂಗಿನ ಕೆಂಬಣ್ಣ; ಅದನ್ನು ಪ್ರತಿಫಲಿಸುವ ಸಮುದ್ರವೋ ಬಂಗಾರದ ಬಣ್ಣ.. ಸಂಜೆಯ ತಣ್ಣನೆ ಬೀಸುವ ಗಾಳಿಗೆ ಮೈ ಒಡ್ಡಿ ನಿಂತರೆ ಸಾಕು, ನಮ್ಮ ಸುತ್ತಮುತ್ತಲು ನಮ್ಮಂತೆಯೇ ಸಾವಿರಾರು ವೀಕ್ಷಕರಿದ್ದರೂ, ಆ ಸ್ಥಳದ ಸೌಂದರ್ಯಕ್ಕೆ ಮನಸೋತು ನಮ್ಮ ಉಪಸ್ಥಿತಿಯೇ ಮರೆಯುವಂತಹ ಅನುಭಾವ.. ದಿಗಂತದಂಚಿನಲ್ಲಿ ಅಸ್ತಮಿಸುವ ದಿನಕರನನ್ನು ಮನದಣಿಯೆ ನೋಡುವಾಗ, ಮಹಾಸಾಗರದ ಅಲೆಗಳ ನಿನಾದವನ್ನು ಆಲೈಸುವಾಗ, ಪ್ರಕೃತಿಯೇ ದೈವವೆಂದು ಆರಾಧಿಸುವ ದೇಗುಲದ ಶಕ್ತಿ ತರಂಗಗಳನ್ನು ಅನುಭವಿಸುವಾಗ ಉಂಟಾಗುವ ವಿಸ್ಮಿತ ಮೌನ ಮತ್ತು ಈ ಎಲ್ಲ ಚೆಲುವನ್ನು ಹೀರಿಕೊಂಡು ಮನಸ್ಸಿಗೆ ಸಿಗುವ...

ಅಡುಗೆ ಸಂಭ್ರಮ

ಇಮೇಜ್
ನಾನು ನಮ್ಮ ಮನೆಯಲ್ಲಿನ ಮುದ್ದಿನ ತನುಜೆ, ಅಕ್ಕನ ಅನುಜೆ. ಚಿಕ್ಕಂದಿನಲ್ಲಿ ಅಮ್ಮ ಎಲ್ಲಾದರೂ ಹೊರಗಡೆ ಹೋದರೆ ಅಪ್ಪಾಜಿಯ ನಳಪಾಕ, ಅಪ್ಪಾಜಿಯೂ ಇಲ್ಲದಿದ್ದ ಪಕ್ಷದಲ್ಲಿ ಅಕ್ಕನ ಅಡುಗೆ ಪ್ರಯೋಗಗಳಿಂದ ನನ್ನ ಹೊಟ್ಟೆ ತುಂಬಿಸಿಕೊಳ್ಳಲು ಯಾವ ಕೊರತೆಯೂ ಆಗುತ್ತಿರಲಿಲ್ಲ. ಇದೆ ಕಾರಣಕ್ಕೋ ಏನೋ ಸುಮಾರು ೭-೮ ನೇ ತರಗತಿಗೆ ಬರುವ ವರೆಗೂ ಅಡುಗೆ ತಯಾರಿಸಲು ಸಹಾಯ ಮಾಡುವ ಕೆಲಸ ಮಾಡಿದ್ದಿದ್ದರೂ, ನಾನಾಗಿಯೇ ಯಾವುದೇ ಮುಖ್ಯ ಅಡುಗೆ ತಯಾರಿಸುವ ಗೋಜಿಗೆ ಹೋಗಿಯೇ ಇರಲಿಲ್ಲ. ಹಾಗೊಂದು ದಿನ ಅಪ್ಪಾಜಿ ಅಮ್ಮ ಕಡೆಗೆ ಅಕ್ಕನೂ ಮನೆಯಲ್ಲಿರದ ದಿನ. ಅಂದು ಗೆಳತಿಯೊಬ್ಬಳನ್ನು ಮನೆಗೆ ಕರೆತಂದಿದ್ದೆ. ಮನೆಯಲ್ಲಿ ಅಮ್ಮ ಅಡುಗೆ ತಯಾರಿಸಿಟ್ಟಿದ್ದರೆಂಬ ನೆನಪು. ಯಾವುದೋ ಮಾತಿನ ಮಧ್ಯೆ ಗೆಳತಿಯು ತನಗೆ ಅಲ್ಪಸ್ವಲ್ಪ ಪದಾರ್ಥಗಳನ್ನು ಮಾಡಲು ಬರುತ್ತದೆ ಎಂದು ತನ್ನ ಬಗ್ಗೆ ಹೇಳಿಕೊಂಡಾಗ, ನನ್ನ ಬಗ್ಗೆ ನನಗೆ ಸಂಕೋಚವೆನಿಸಿತು. ನಂತರಕ್ಕೆ, ಅದೆಲ್ಲಿಂದ ಬಂದ ಶೂರತನವೋ ತಿಳಿಯದು, "ನೀನು ನನಗೆ ಗೈಡ್ ಮಾಡು , ನಾನು ಪದಾರ್ಥ ತಯಾರು ಮಾಡುತ್ತೇನೆ" ಎಂದು ಅವಳಲ್ಲಿ ಕೇಳಿಕೊಂಡು, ಬದನೆ ಮತ್ತು ಬೆಳ್ಳುಳ್ಳಿ ಹಾಕಿ ಕಾಯಿ ಗೊಜ್ಜು ಮಾಡುವ ಪ್ಲಾನ್ ಮಾಡಿದೆವು. ತೆಂಗಿನ ತುರಿ ಸಿದ್ಧವಾಯಿತು. ಬದನೇಕಾಯಿ ಪಾತ್ರೆಯಲ್ಲಿಟ್ಟು ಬೇಯಿಸಿಕೊಂಡಿದ್ದಾಯಿತು. ಬೆಳ್ಳುಳ್ಳಿ ತಂದು ಬಿಡಿಸಿಕೊಂಡಿದ್ದಾಯಿತು. ಏನೂ ಅಡುಗೆ ಬಾರದ ನಾನು, ಚಿಟಿಕೆ ಉಪ್ಪಿಗೂ  ಗೆಳತಿಯ ಸೂಚನೆಗಳನ್ನು ತೆಗೆದ...

ಮಂಡಲದ ಸುತ್ತ..

ಇಮೇಜ್
ಇದೇನ್ರೀ ಮಂಡಲ ಎಂದರೆ? ಅಲ್ಲಿ ಇಲ್ಲಿ ಸುಮ್ಮನೆ ಏನೋ ಒಂದಷ್ಟು ಡಿಸೈನ್ ಮಾಡಿಕೊಂಡು, ರಂಗೋಲಿ ತರ ಚಿತ್ರ ಬಿಡಿಸಿ ಅದಕ್ಕೊಂದಷ್ಟು ಬಣ್ಣ ತುಂಬೋದ್ರಲ್ಲೇನಿದೇರೀ ದೊಡ್ಡ ವಿಶೇಷ ಎಂದಿರಾ?? ಕೇವಲ ಚಿತ್ರಗಳ ರೂಪದಲ್ಲಿಯೇ ಅದಮ್ಯವಾದ ಶಕ್ತಿಯನ್ನು ತುಂಬುವ, ನವ ಚೈತನ್ಯದ ರೂಪವಾದ ಮಂಡಲಗಳ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ..  ಮಂಡಲಗಳೆಂದರೆ ಅದೊಂದು ಕೇವಲ ಕೈಬರಹವಲ್ಲ ಅಥವಾ ಪೈಂಟ್ ಬ್ರಶ್ ನಿಂದ ಒಟ್ಟಾರೆಯಾಗಿ ಗೀಚಿ ರಚಿಸಿದ ಚಿತ್ರಪಟವಲ್ಲ. ಅದೊಂದು ಧ್ಯಾನ. ಹಾಂ! ಹೌದಾ..! ಧ್ಯಾನ ಎಂದರೆ ನಿಶ್ಯಬ್ಧವಾಗಿ ಕುಳಿತು ಏನೂ ಮಾಡದೆ ಅಥವಾ ಒಂದಷ್ಟು ಮಂತ್ರಗಳನ್ನುಚ್ಛರಿಸುತ್ತಾ ದೇವರ ಸ್ತುತಿಸುವ ಬಗೆ ಗೊತ್ತು.. ಚಿತ್ರ ಬರ್ಕೊಂಡು ಧ್ಯಾನ ಮಾಡೋದು..ಇದ್ಯಾವ ಬಗೆಯ ಹೊಸ ಅವತಾರ ಎಂದು ಕೇಳಿದೀರಾ? ನಮ್ಮದೇ ಚಿತ್ರಕಲೆಯಿಂದ ಮನಸ್ಸನ್ನು ಒಂದೆಡೆ ಕೇಂದ್ರೀಕೃತಗೊಳಿಸುವಲ್ಲಿ ಅಥವಾ ಒಂದು ಚಿತ್ರಪಟವನ್ನು ಕಂಡು ದೇಹ ಮತ್ತು ಮನಸ್ಸಿನಲ್ಲಿ ಚೈತನ್ಯ ಮೂಡುವಂತಾದರೆ, ಋಣಾತ್ಮಕ ಆಲೋಚನೆಗಳು ದೂರವಾಗಿ, ನಮ್ಮೊಳಗೇ ಇರುವ ಧಾರಣಶಕ್ತಿಯ ಅರಿವು ನಮಗೆ ಸಿಗುವಂತಾದರೆ, ಅದೇ ಧ್ಯಾನವೆನಿಸಿಕೊಳ್ಳುವುದಿಲ್ಲವೇ? ಸಂಸ್ಕೃತದಲ್ಲಿ ''ಮಂಡ' ಎಂದರೆ ಅಲಂಕರಿಸುವುದು ಅಥವಾ ಸಿದ್ಧಗೊಳಿಸುವುದು ಎಂದರ್ಥ. ಲ ಎಂಬ ಅಂತ್ಯಪ್ರತ್ಯಯ ದೊಂದಿಗೆ, ಮಂಡಲ ವೆಂದರೆ ಒಂದು ಪವಿತ್ರವಾದ ವರ್ತುಲ ...