ಪೋಸ್ಟ್‌ಗಳು

#recipe ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ತುಪ್ಪರಹಿತ ಡ್ರೈಫ್ರೂಟ್ ಲಡ್ಡು!

ಇಮೇಜ್
 ಸಸ್ಯಜನ್ಯ ಡ್ರೈಫ್ರೂಟ್ಸ್ ಲಡ್ಡು! ತುಪ್ಪ-ಒಪ್ಪು-ತಪ್ಪುಗಳ ಸಮಯಕ್ಕೇನೇ ಈ ಪೋಸ್ಟಾ ಅಂತ ಕೇಳಬೇಡಿ. ನಾನು ಮನೇಲಿ ಮಾಡಿಕೊಂಡೆ. ಪರಿಚಯದವರು ರೆಸಿಪಿ ಕೇಳಿ ಸಾಕಷ್ಟು ದಿನ ಆಗಿತ್ತು. ಮಾಡಿದ ಮೇಲೆ ತಕ್ಷಣ ನೆನಪಾಗಿ ಬರೆಯುತ್ತಿದ್ದೇನೆ. ಅವರ ಜೊತೆ ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ.  ರುಚಿಕರ, ಆರೋಗ್ಯಕರ, ಸಕ್ಕರೆ ಇಲ್ಲದ ಡ್ರೈ ಫ್ರೂಟ್ಸ್ಉಂಡೆ ಇದು. ನನ್ನ ಟ್ರೆಕಿಂಗ್ಗಳಿಗೆ ಇದೇ ನನ್ನ ಎನರ್ಜಿ ಬಾರ್. ಪ್ರವಾಸ ಹೋದಾಗ, ಹೋದಲ್ಲೆಲ್ಲ ಸಸ್ಯಜನ್ಯ ಆಹಾರ ಹುಡುಕುತ್ತ ಹೋಗುವ ಜಾಯಮಾನವಿಲ್ಲ. ಈ ಉಂಡೆ ನನ್ನ ಬ್ಯಾಗಿನಲ್ಲಿರುತ್ತದೆ. ಕಷ್ಟಕಾಲಕ್ಕೆ ನನ್ನ ಕೈ ಹಿಡಿಯುವ ಅಲ್ಲಲ್ಲ ಬಾಯಿಗೆ ಹಿಡಿಯುವ ಉಂಡೆ :)  ಬೇಕಾಗುವ ಸಾಮಗ್ರಿಗಳ ಪೈಕಿ ನಿಮಗೆ ಒಪ್ಪುವ ಇನ್ನಿತರ ಡ್ರೈ ಫ್ರೂಟ್ಸ್ ಗಳನ್ನೂ ಹಾಕಬಹುದು. ನಾನು ಬಳಸುವ ಒಣಹಣ್ಣುಗಳ ಇಲ್ಲಿ ತಿಳಿಸಿದ್ದೇನೆ ಒಂದು ಅಂದಾಜಿನ ಪ್ರಮಾಣದೊಂದಿಗೆ. ಪ್ರಯೋಗ ಮಾಡುತ್ತಾ ಮಾಡುತ್ತಾ ನಿಮಗೇ ಬೇಕಾದ ರುಚಿ ಮತ್ತು ಹದ ತಿಳಿಯುತ್ತಾ ಹೋಗುತ್ತದೆ. ತುಪ್ಪ, ಹಾಲು ಇಲ್ಲದ, ಒಣ ಹಣ್ಣುಗಳು, ಒಣದ್ರಾಕ್ಷಿ, ಬೀಜಗಳು ಮತ್ತು ಒಣ ತೆಂಗಿನಕಾಯಿ ತುರಿಯ ಸುಲಭ ಸಂಯೋಜನೆಯು ರೆಸಿಪಿಯಿದು. ಮಾಡಲು ಬೇಕಾಗುವ ಸಮಯ :  ೩೦ ರಿಂದ ೪೦ ನಿಮಿಷಗಳು  ಬೇಕಾಗುವ ಸಾಮಗ್ರಿಗಳು :  ೧ ಕಪ್ ಬಾದಾಮಿ ೧/೨ ಕಪ್ ಶೇಂಗಾಬೀಜ ೧/೨ ಕಪ್ ಗೋಡಂಬಿ (ನಾನು ನನ್ನ ಕಫ ಪ್ರಕೃತಿಗೆ ಅರ್ಧಕ್ಕಿಂತಲೂ ತುಸು...

ತಿನ್ನಕ್ಕೇನಿದ್ದು?

ಇಮೇಜ್
ಮಕ್ಕಳ ಪರೀಕ್ಷಾ ಸಮಯ. ಸ್ಕೂಲಿಗೆ ರಜಾ, ಮಕ್ಕಳಿಗೆ ಮಜಾ.. ಓದಲಿಕ್ಕೆ ಕೂರಲು ಅವರಿಂದಾಗದು. ಓದದೇ ಕುಣಿಯಲು ಬಿಡಲು ನಮ್ಮಿಂದಾಗದು. ಈಗೆಂತು ಮಕ್ಕಳಿಗೆ ಪರೀಕ್ಷೆಗೆ ಓದಲು ಕುಳಿತರೆ ಬೋರ್ ಆಗಿಯೇ ಹಸಿವು ಜಾಸ್ತಿ. ಗಂಟೆಗಂಟೆಗೆ ಏನಾದರೂ ತಿನ್ನಲು ಕೊಡಬೇಕು.. ಹೊರಗಡೆಯ ಆಹಾರ ನೀಡಿ, ಪರೀಕ್ಷಾ ಸಮಯದಲ್ಲಿ ತೊಂದರೆ ತೆಗೆದುಕೊಳ್ಳಲು ನಮಗೆ ಇಷ್ಟವಿರುವುದಿಲ್ಲ. ಅದರಲ್ಲೂ ಮುಖ್ಯವಾಗಿ ಮಕ್ಕಳ ಬಾಯಿ ಬಡುಗೆಗೆ ಅಂಗಡಿಯಿಂದ ತಂದ ಪೊಟ್ಟಣ ಆಹಾರವೆಂತೂ ಅವಶ್ಯಕತೆಕಿಂತ ಹೆಚ್ಚಿನ ಸಕ್ಕರೆ ಮತ್ತು ಕೆಟ್ಟ ಜಿಡ್ಡಿನ ಅಂಶದ್ದಾಗಿದ್ದು, ಮಕ್ಕಳಿಗೆ ಓದಲು ಮನಸ್ಸಾಗದಂತೆ ಇನ್ನಷ್ಟು ಆಲಸ್ಯತನವನ್ನು ಒಡ್ಡುತ್ತದೆ. ಹಾಗಾಗಿ ಮನೆಯಲ್ಲಿಯೇ ಅದು ಇದು 'ತಿನ್ನಕ್ಕೇನಿದ್ದು' ಗೆ ಏನಾದ್ರೂ ವ್ಯವಸ್ಥೆ ಮಾಡಬೇಕಲ್ಲ. ಹೀಗೊಂದು ಇವತ್ತಿನ ರೆಸಿಪಿ ಬರೆದಿಟ್ಟು ಹಂಚುವ ಎನಿಸಿತು. ಇದು ಮಕ್ಕಳನ್ನು ಓದಲು ಕೂರಿಸಿಕೊಂಡು ಪ್ರಶ್ನೋತ್ತರ ಕೇಳುವ ಸಮಯದಲ್ಲೇ ಮಾಡಬಹುದಾದ ಒಂದು ಸುಲಭವಾದ ಪೌಷ್ಟಿಕವಾದ ಹಲ್ವಾ.  ವಿ.ಸೂ : ಇದು ನನ್ನ ಸಸ್ಯಜನ್ಯ ಆಹಾರದ ರೆಸಿಪಿ ಒಂದು ದೊಡ್ಡ ಕಪ್ ಗೋಡಂಬಿ ಒಂದು ಗಂಟೆಗಳ ಕಾಲ ನೆನೆಸಿಕೊಂಡು, ಕನಿಷ್ಠ ನೀರಿನಲ್ಲಿ ಮಿಕ್ಸರ್ ಗ್ರೇನ್ದರ್ ಗೆ ಹಾಕಿ ಬೀಸಿಟ್ಟುಕೊಳ್ಳಬೇಕು.  ಸಣ್ಣಗೆ ತುರಿದ ಕ್ಯಾರೆಟ್  ಅರ್ಧ ಕಪ್  ತುರಿದ ಕಾಯಿ ಕಾಲು ಕಪ್ (ಹಲ್ವಾ ತರಿತರಿಯಾದ  ಟೆಕ್ಸ್ಚರ್ಬೇಕಿದ್ದಲ್ಲಿ) ನಾಲ್ಕು ಚಮಚ ಸಕ್ಕರೆ.  ಬಿಸಿನ...

ನುಗ್ಗೆ ಸೊಪ್ಪಿನ ಚಟ್ನಿ ಪುಡಿ

ಇಮೇಜ್
ನನಗೆ ಸಿಕ್ಕಾಪಟ್ಟೆ ಅಡುಗೆಯ ಕ್ರೇಜ್ ಇಲ್ಲದಿದ್ದರೂ, ಆದಷ್ಟು ಮನೆಯಲ್ಲಿಯೇ ಹೊಸ ಬಗೆಯ ಅಡುಗೆ ಪದಾರ್ಥಗಳನ್ನು, ಬಾಯ್ಬಡುಗೆಗೆ ಕುರುಕಲು ಮಾಡುತ್ತಿರುತ್ತೇನೆ. ಮಗಳು ಚಟ್ನಿಪುಡಿಯ ಗೊಣಮಿ. ಹಾಗಾಗಿ ಒಂದಾದ ಮೇಲೊಂದು ಬಗೆಯ ಚಟ್ನಿಪುಡಿ ಮನೆಯಲ್ಲಿ ಮಾಡುತ್ತಿರುತ್ತೇನೆ.  ಚಳಿಗಾಲ ಈಗ ನುಗ್ಗೆ ಸೊಪ್ಪಿನ ಸೀಸನ್. ಆಯಾಯ ಸೀಸನ್ನಿನ ಸೊಪ್ಪು ತರಕಾರಿ  ಹಣ್ಣುಗಳ ಬಳಕೆ ಆರೋಗ್ಯಕರ. ನುಗ್ಗೆ ಸೊಪ್ಪು ಮನುಷ್ಯನ ಹೃದಯವನ್ನು ಮತ್ತು ಲಿವರ್ ಅನ್ನು ಹಾನಿಮಾಡುವ ವಿಷಕಾರಿ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳಿಂದ ರಕ್ಷಣೆ ಮಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾಗಿ ಆಂಟಿ - ಆಕ್ಸಿಡೆಂಟ್ ಗಳು, ವಿಟಮಿನ್ ' ಸಿ ', ಜಿಂಕ್ ಇತ್ಯಾದಿ ಅವಶ್ಯಕ ಪೋಷಕಾಂಶ ದೊರೆಯುತ್ತದೆ. ಮಕ್ಕಳಿಗೆ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆ ಪರಿಹಾರಕ್ಕೆ ಸಹಕಾರಿ. ಚಳಿಗಾಲದಲ್ಲಿ ಎಲ್ಲ ತಿಂಡಿ ಬಿಸಿ ಬಿಸಿ ಬೇಕೆನಿಸುತ್ತದೆ. ಅದರ ಜೊತೆಗೆ ಈ ನುಗ್ಗೆ ಸೊಪ್ಪಿನ ಚಟ್ನಿಪುಡಿ ಮತ್ತು ಕೊಬ್ಬರಿ ಎಣ್ಣೆಯ ಕಾಂಬಿನೇಷನ್ ಅಂತೂ ವರ್ಣಿಸಲಸದಳ!! ಯಾಕೋ ಇವತ್ತು ಹಂಚಿಕೊಳ್ಳೋಣ ಯಾರಿಗಾದರೂ ಉಪಯೋಗವಾದಿತು ಎನಿಸಿ ಈ ಪೋಸ್ಟ್. ಸಾಮಾಗ್ರಿಗಳನ್ನು ಚೆನ್ನಾಗಿ ಜೋಡಿಸಿಕೊಂಡು ಫೋಟೋ ತೆಗೆದು, ಮಾಡುವ ವಿಧಾನದ ವಿಡಿಯೋ ಮಾಡಿ ಎಡಿಟಿಂಗ್ ಮಾಡುವಷ್ಟು ತಾಳ್ಮೆಕಿಂತಲೂ ಹೆಚ್ಚಾಗಿ ಆಸಕ್ತಿ ಇಲ್ಲ. ಹಾಗಾಗಿ ಮಾಡುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ  ನುಗ್ಗೆಸೊಪ್ಪು ಬಾಣಲ...