ಪರಂಪರೆಯ ಪೊರೆವುದು ಹ್ಯಾಂಗ?
ಏಪ್ರಿಲ್ ೧೮, 'ವಿಶ್ವ ಪಾರಂಪರಿಕ ದಿನಾಚರಣೆ' ಅಂತಾರಪ. ವರ್ಷಪೂರ್ತಿ ಏನೇನೋ ದಿನಾಚರಣೆ ಅದ್ರಲ್ಲಿ ಇದೂ ಒಂದು. ಆದ್ರೆ ಏನು ದಿನಾಚರಣೆ ಇದು? ಯಾವುದೋ ಇಲಾಖೆಗೆ ಸಂಬಂಧ ಪಟ್ಟಿದ್ದಿರಬೇಕು.. ಏನಂದ್ರಿ..? ನಾವೆಲ್ಲಾ ಆಚರಿಸೋ ಹಬ್ಬನಾ? ಯಾವ್ ಧರ್ಮದ ಹಬ್ಬರೀ ಇದು? ನೋಡ್ರಿ, ನಾವು ಸಾಮಾನ್ಯ ಮನುಷ್ಯರು, ಮನೇಲಿ ಕೂತೋರು, ಆಫೀಸ್ ಹೋಗೋರು, ಮಕ್ಕಳು ದೊಡ್ಡೋರು ಎಲ್ಲ ಇದೀವಿ, 'ಪಾರಂಪರಿಕ ದಿನ' ನ ಹೆಂಗೆ 'ಆಚರಣೆ' ಮಾಡ್ಬೇಕು ಅಂತೆಲ್ಲ ನಮಗೆ ಗೊತ್ತೇ ಇಲ್ಲಪಾ.. ಅಷ್ಟಕ್ಕೂ ಯಾಕೆ ಬೇಕಿದು? ಯಾಕೆ ಬೇಕಿದು? ನಮ್ಮ ಜೀವನದಲ್ಲಿ ನಮ್ಮ ಇರುವಿಕೆ, ನಮ್ಮ ವ್ಯಕ್ತಿತ್ವದ ಗುರುತು ಮತ್ತು ಮುಂದುವರೆಸುವ ಜೀವನ ಶೈಲಿಗೆ, ಸಂಸ್ಕೃತಿ ಮತ್ತು ಪರಂಪರೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಮ್ಮವರು ಹಿಂದಿನಿಂದಲೂ ಪರಂಪರೆಯನ್ನು, ಅದಕ್ಕೆ ಸಂಬಂಧ ಪಟ್ಟ ಸ್ಥಳ, ವಾಸ್ತು ಶಿಲ್ಪ, ಭೌಗೋಳಿಕ ಪುರಾವೆ, ಆಚಾರ ವಿಚಾರ, ಆಚರಣೆಗಳ ಮೂಲಕ ದಾಖಲಿಸುತ್ತಾ ಬಂದಿದ್ದಾರೆ ಮತ್ತು ಅವರ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯವರು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಅದನ್ನು ಸಂರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪಾರಂಪರಿಕ ವಿಷಯಗಳ ಕುರಿತಾಗಿ ಮಾಹಿತಿ ಕೊರತೆ, ಅದರ ಬಗ್ಗೆ ತಿಳಿದುಕೊಳ್ಳುವ ಮತ್ತು ಆಚರಣೆ ಮಾಡುವ ನಿರಾಸಕ್ತಿಯಿಂದಾಗಿ, ನಾವು ನಮ್ಮ ಅದೆಷ್ಟೋ ಅತ್ಯಮೂಲ್ಯ ಸಂಪತ್ತನ್ನು ಕಳೆದುಕೊಳ್ಳುತ್ತಿ...