ಪೋಸ್ಟ್‌ಗಳು

#kannadaarticle ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಹೊಗಳಿಕೆ - ತಾಕಿಸು ನಿಜದ ಸೂಜಿಮೊನೆ

"ನೋಡು ನೀನೀಗ ಊಟ ಮಾಡ್ಲಿಲ್ಲ ಅಂದ್ರೆ ಯಾರೂ ನಿಂಗೆ ಗುಡ್ಗರ್ಲ್ ಹೇಳಲ್ಲ, ಬ್ಯಾಡ್ಗರ್ಲ್ ಅಂತಾರೆ, ಬೇಕಾ ನಿಂಗೆ ಬ್ಯಾಡ್ಗರ್ಲ್ ಅಂತ ಹೇಳಿಸ್ಕೊಳೋದು?" "ನಮ್ಮ ಹುಡ್ಗನಿಗೆ ಸ್ವಲ್ಪ ಪಾಲಿಶ್ ಹೊಡೆದು ಗುಡ್ ಬಾಯ್ ಅಂದ್ರೆ ಸಾಕು, ಹೇಳಿದ್ದೆಲ್ಲ ಕೆಲಸ ಮಾಡತ್ತೆ ಪಾಪ" "ಅವಳಿಗೆ ಸುಮ್ಸುಮ್ನೆ ಗುಡ್ ಗರ್ಲ್ ಅಂತ ಹೊಗಳಿ ಅಟ್ಟಕ್ಕೇರಿಸಿ ಇಟ್ಟಿದ್ದೀಯ ನೀನು, ತಾನು ಮಾಡಿದ್ದೆಲ್ಲ ಸರಿ ಅಂತ ವಾದ ಮಾಡ್ತಾಳೆ ನೋಡು ಈಗ.. " "ಅಮ್ಮ ಆದ್ರೆ ಗುಡ್ ಅಂತಾಳೆ, ನೀನು ನೋಡಿದ್ರೆ ಯಾವಾಗ್ಲೂ ಸಿಡುಕ್ತಾನೆ ಇರ್ತೀಯಲ ಅಪ್ಪ.. "  "ಅವನು ಮಾಡಿರೋ ಡ್ರಾಯಿಂಗ್ ನೋಡಿ ಅಜ್ಜಿ ಚೆನ್ನಾಗಿದೆ ಅಂತ ಅಷ್ಟೇ ಹೇಳಿದ್ರಂತೆ, ವಾವ್ ಸೂಪ್ಪರ್ , ಗುಡ್ ಅಂತ ಏನೂ ಹೇಳಲೇ ಇಲ್ಲ ಅಂತ ಮುನಿಸ್ಕೊಂಡಿದಾನೆ ಮಗ"  "ಗುಡ್ ಗರ್ಲ್ ಅಲ್ವ ನೀನು? ಬಾ ಚಾಕೊಲೇಟ್ ಕೊಡ್ತೀನಿ ತೊಡೆ ಮೇಲೆ ಕೂತ್ಗ್ಗೋ ಬಾ.. "  ಈ ರೀತಿಯ ಸಂಭಾಷಣೆ ನಮ್ಮ ನಿಮ್ಮ ಮನೆಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಆಗುತ್ತಲೇ ಇರುತ್ತವೆ ಅಲ್ವ?  ಮಕ್ಕಳಿಗೆ ಹೊಗಳಿಕೆ ನೀಡುವುದು ಸರಿಯೇ ತಪ್ಪೇ ಎಂಬ ಜಿಜ್ಞಾಸೆ ನಮಗೆ ಕಾಡುವುದು ಸಹಜ. ಮಕ್ಕಳಿಗೆ ಪ್ರೋತ್ಸಾಹ ಅತ್ಯಗತ್ಯ. ಪ್ರೋತ್ಸಾಹವಿಲ್ಲದೆ  ಮಕ್ಕಳು ಸಾಯುವುದಿಲ್ಲ ಆದರೆ ಒಣಗುತ್ತಾರೆ. ಪ್ರಶಂಸೆ ಎಂದರೆ ಇನ್ನೊಬ್ಬರು ಮಾಡಿದ ಕಾರ್ಯಕ್ಕೆ ಅಂಗೀಕಾರ ಅಥವಾ ಅನುಮೋದನೆ. ಏನನ್ನಾದರೂ ಕಲಿಸುವಾಗ, ಮಕ್ಕಳು ...

ಸೋಲಲಿ ಮಕ್ಕಳ ಸೋಲಿನ ಭಯ

ಇಮೇಜ್
ಮಗು ಬಿಸಿನೀರ ಕಾಯಿಸಿ, ಇಕ್ಕಳದಿಂದ ಲೋಟಕ್ಕೆ ನೀರನ್ನು ಎರಸುವಾಗ, ನೀರು ಕೆಳಗೆ ಚೆಲ್ಲಿತೋ.. "ನೀರು ಚೆಲ್ಲಿದ್ಯಾ? ಎದ್ದೇಳು ಮಾರಾಯ್ತಿ, ನಾನು ಮಾಡಿ ಕೊಡ್ತೀನಿ, ನಿಂಗೆ ಒಂದು ಕೆಲಸವೂ ನೆಟ್ಟಗೆ ಮಾಡಲು ಬರುವುದಿಲ್ಲ. ಸುಮ್ನೆ ನನಗಿಲ್ಲಿ ಒಂದಷ್ಟು ತೊಂದರೆ ಕೊಡಕ್ಕೆ.. " ಆಟದಲ್ಲಿ ನಾಲ್ಕು ರೌಂಡ್ ಭಾಗವಹಿಸಿ, ಐದನೇ ರೌಂಡ್ ಗೆ ಸೋಲಾಗಿ ಬಂದ ಮಗುವಿಗೆ, "ಇನ್ನೊಂಚೂರು ಗಮನ ಇಟ್ಟು  ಆಡಿದ್ರೆ ಏನಾಗ್ತಿತ್ತು ನಿಂಗೆ? ಅಲ್ಲಿ ಇಲ್ಲಿ ನೋಡ್ತಾ ಕೂರ್ತೀಯ ಲೇಜಿ ತರ, ಏನ್ ಪ್ರಯೋಜನ ಈಗ ಅತ್ರೆ, ಸೀರಿಯಸ್ ಇಲ್ಲ ನೀನು ಸ್ಪೋರ್ಟ್ಸ್ ಕಡೆ, ಈ ಚಂದಕ್ಕೆ ಕೋಚಿಂಗ್ ಯಾಕೆ ನಿಂಗೆ? ಎಲ್ಲ ದುಡ್ಡು ವೇಸ್ಟ್" "ಅಯ್ಯೋ ಅಲ್ಲಿ ಹತ್ತಬೇಡ, ಬಿದ್ದೋಗ್ತೀಯ, ಬಿದ್ದರೆ ನಾನು ಬರಲ್ಲ ಆಮೇಲೆ ಎತ್ತಕ್ಕೆ" "ಚೆನ್ನಾಗಿ ಓದಿದ್ದೆಅಂತೀಯಾ,  ಎಕ್ಷಾಮ್ ಟೆನ್ಶನ್ ಮಾಡ್ಕೊಂಡ್ರೆ ಇನ್ನೇನಾಗತ್ತೆ, ಈಗ ಇಲ್ಲಿ ಆನ್ಸರ್ ಬರ್ತ್ತಿತ್ತು ಅಂದ್ರೆ ಏನು ಪ್ರಯೋಜನ, ಯು ಜಸ್ಟ್ ಲಾಸ್ಟ್ ಯುವರ್ ಗೋಲ್ಡನ್ಚಾನ್ಸ್"  "ಅಯ್ಯೋ ಏನು ಕೆಟ್ಟವರು ಆ ಕೋಚ್, ಕೈ ಕಾಲಿಗೆ ನೋವಾಗಿದೆ ಅಂತಿದಾಳೆ ಮಗಳು, ಆದ್ರೂನೂ ಆಡು ಅಂತಾರಲ್ಲ, ಸ್ವಲ್ಪನೂ ಕರುಣೇನೇ ಇಲ್ಲ. ಇದೇ ತರ ನೋವಾಗಿ ನೋವಾಗಿ ಕೈ ಕಾಲು ಮುರ್ಕೊಂಡ್ರೆ?"  "ಲಕ್ಷಗಟ್ಟಲೆ ದುಡ್ಡು ಕೊಟ್ಟು ಇಷ್ಟು ಫೇಮಸ್ಸ್ಕೂಲ್ ಗೆ ಹಾಕಿದೀವಿ,  ಗೇರ್ ಸೈಕಲ್, VR ಗೇಮ್ಸು, ಎಲ್ಲಾ ಕೊಟ್ಟಾ...

ನಮ್ಮ ಆಹಾರವೇ ನಮಗೆ ಔಷಧಿ

ಇಮೇಜ್
ಮೇಲಿಂದ ಮೇಲೆ ಬರುವ ಸಾಂಕ್ರಾಮಿಕ ರೋಗಗಳು , ಹೃದಯ ಸಂಬಂಧೀ ಕಾಯಿಲೆಗಳ ಅನುಭವ ಪಡೆದ ಮೇಲೆ, ಸಾವು ನೋವುಗಳ ಸುದ್ದಿಗಳ ಕೇಳಿದ ಮೇಲೆ, "ಆರೋಗ್ಯವೇ ಭಾಗ್ಯ" ಎಂಬ ಮಾತು ಸತ್ಯ ಎಂಬುದು ಅರಿವಾಗಿದೆ. ಆದರೇನು ಮಾಡುವುದು? ಇಂದಿನ ಯಾಂತ್ರಿಕ ಯುಗದಲ್ಲಿ ಕೈಯಳತೆಯಲ್ಲಿ ಬೇಕಾಗಿದ್ದೆಲ್ಲ ಸಿಗುವ ಮಾರಾಟ ಸೌಲಭ್ಯ, ಹೆಚ್ಚಾದ ಮನುಷ್ಯನ ಆಸೆಗಳು, ಮೆಚ್ಚುಗೆಯಾದ ಕಷ್ಟಪಡದ ಬದುಕು ಇತ್ಯಾದಿ ಅಂಶಗಳಿಂದ, ಆಹಾರ ಸಾಮಗ್ರಿಗಳು ಸ್ಥಳೀಯತೆ ಕಳೆದುಕೊಂಡು, ಹೆಚ್ಚೆಚ್ಚು ರೆಡಿ ಟು ಈಟ್, ಪ್ಯಾಕಡ್ ಫುಡ್ಸುಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಿ ಹೋಗಿವೆ. ಮನೆಯ ಮೆಟ್ಟಿಲಿಳಿ್ದರೆ ಹೊರಗಿನ ತಿಂಡಿ ಕಣ್ಣು ಕುಕ್ಕುತ್ತದೆ.  ಆ ಮೋಹದಿಂದ ಹೊರಬರುವುದು ಹೇಗೆ? ಅದಕ್ಕೆ ಒಂದೇ ಪರಿಹಾರ. ನಾವು ಮನೆಯಲ್ಲಿ ತಿನ್ನುವ ಆಹಾರವನ್ನು ಅರಿತುಕೊಳ್ಳುವುದು. ಜಗತ್ತಿನಲ್ಲಿ ಒಬ್ಬರಂತೆ ಇನ್ನೊಬ್ಬರಿರುವುದಿಲ್ಲ. ಪ್ರತಿಯೊಬ್ಬರ ದೇಹ ಪ್ರಕೃತಿಯೂ ವಿಭಿನ್ನ. ನಮ್ಮ ದೇಹಕ್ಕೆ ಯಾವುದು ಹಿತ ಅಹಿತ ಎಂಬುದು ನಾವೇ ಅಧ್ಯಯನ ಮಾಡಿಕೊಳ್ಳಬೇಕು. ಆಹಾರ ಎಂದರೆ ಕೇವಲ ಹೊಟ್ಟೆ ತುಂಬಿಸುವುದು ಎಂದರ್ಥವಲ್ಲ. ದೇಹವನ್ನು ರೋಗಮುಕ್ತವನ್ನಾಗಿಸಿ, ಸ್ವಾಸ್ಥತೆಯಿಂದ ಇಡಲು ಬೇಕಾದ ಪೋಷಕಾಂಶಗಳನ್ನು ನೀಡುವುದೇ ಆಹಾರ. ಹಾಗಾಗಿ ಎಷ್ಟು ಪ್ರಮಾಣದ ಆಹಾರ, ಯಾವ ಬಗೆಯ ಆಹಾರ, ಯಾವ ಕ್ರಮದಲ್ಲಿ, ಯಾವಾಗ ತೆಗೆದುಕೊಳ್ಳಬೇಕು ಎಂಬ ವಿಷಯಗಳೂ ಇಲ್ಲಿ ಮುಖ್ಯ.  ಆಹಾರವನ್ನು ಔಷಧಿಯೇ ಎಂದುಕೊಂಡು ಬಳಸಿದರೆ, ಮುಂದೆ...