ಪೋಸ್ಟ್‌ಗಳು

#childhood ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮಕ್ಕಳ ಪರೀಕ್ಷಾ ತಯಾರಿ - ವಿರಾಮದ ಆಟಗಳು

ಇಮೇಜ್
 ಮಕ್ಕಳ ಪರೀಕ್ಷಾ ತಯಾರಿ - ವಿರಾಮದ ಆಟಗಳು : ಮಕ್ಕಳಿಗೀಗ ಪರೀಕ್ಷಾಸಮಯ. ತುಸು ಹೆಚ್ಚೇ ಓದುವ ಸಮಯ ಬೇಕು. ಕಲಿಕೆ, ಮನನ, ಪುನರಾವರ್ತನೆ ಎಂದು ಅಧಿಕ ಸಮಯ ಕುಳಿತು ಓದುವ ಅನಿವಾರ್ಯತೆ. ಯುದ್ಧಕಾಲೇ ಶಸ್ತ್ರಾಭ್ಯಾಸ ಮಾಡುವ ಅದೆಷ್ಟೋ ಮಕ್ಕಳಿಗೆ ಈಗ ಒಂದೇ ಸಲಕ್ಕೆ ಓದಿ ಅರಗಿಸಿಕೊಳ್ಳುವ ಸವಾಲು. ಇಂತಹ ಸಮಯದಲ್ಲಿ ನಿರಂತರವಾಗಿ ಓದುವ ಮಕ್ಕಳಿಗೆ ಮಧ್ಯೆ ಮಧ್ಯೆ ವಿರಾಮ ಬೇಕಾಗುತ್ತದೆ. ಸಣ್ಣ ಸಣ್ಣ ವಿರಾಮದ ಸಮಯದಲ್ಲಿ ಮಕ್ಕಳಿಗೆ ಸಂತೋಷವೂ ಆಗಬೇಕು, ಹಾಗೆಯೆ ಅವರ ಬುದ್ಧಿಗೆ ವ್ಯಾಯಾಮವೂ ಆಗುವಂತಹ ಒಂದಷ್ಟು ಮಕ್ಕಳ ಆಟಗಳು, ಮಕ್ಕಳಿಗೂ ಮಕ್ಕಳನ್ನು ಪರೀಕ್ಷೆಗೆ ತಯಾರು ಮಾಡುತ್ತಿರುವ ಪಾಲಕರಿಗೂ.. ರೇನ್ಬೋ ಆಟ : ನೆಲ, ಬೋರ್ಡ್ ಅಥವಾ ಒಂದು ಪೇಪರ್ರಿನ ಮೇಲೆ, ಕೆಳಗೆ ಕಾಣುವಂತೆ ಐದರಿಂದ ಏಳು ಮನೆಗಳ ಚೌಕಟ್ಟನ್ನು ಚಿತ್ರಿಸಿಕೊಳ್ಳಿ. ಈಗ ಮಗುವಿಗೆ ಕಣ್ಣು ಕಟ್ಟಿ. ವಿವಿಧ ಬಣ್ಣಗಳು ಕಾಣುವಂತಹ ಯಾವುದೇ ವಸ್ತು ಉದಾಹರಣೆಗೆ, ಸ್ಕೇಚ್ಪೆನ್ಸ್, ಕ್ರೆಯಾನ್ಸ್, ಲೆಗೋ ಬಿಲ್ಡಿಂಗ್ಆ ಬ್ಲಾಕ್ಸ್ ಇನ್ನಿತರ ಯಾವುದೇ ಬಣ್ಣದ ವಸುಗಳನ್ನು ಚಿತ್ರದಲ್ಲಿ  ತೋರಿಸಿದಂತೆ ಮನೆಗಳಲ್ಲಿ ಜೋಡಿಸಿಡಿ. ಮಗುವಿಗೆ ಕಣ್ಣಿಗೆ ಕಟ್ಟಿದ ಬಟ್ಟೆ ತೆಗೆದು, ೫ - ೮ ಸೆಕೆಂಡುಗಳ ಕಾಲ, ನೋಡಲು ತಿಳಿಸುವುದು. ಆನಂತರ ಮತ್ತೆ ಮಗುವಿಗೆ ಕಣ್ಣು ಮುಚ್ಚಲು ಹೇಳಿ, ಈ ಎಲ್ಲ ಬಣ್ಣದ ವಸ್ತುಗಳನ್ನು ತೆಗೆದು ಬದಿಯಲ್ಲಿ ಇಡುವುದು. ಈಗ ಸವಾಲು ತಯಾರು. ಮುಂಚೆ ನೋಡಿದ ಮಾದರಿಯಲ್ಲಿಯೇ ಮಗು ಬಣ್...

ಒಂದು ದ್ವೀಪದ ಕಥೆ!!

ಇಮೇಜ್
ಮಕ್ಕಳ ಪಾರ್ಕಿನಲ್ಲಿ ಮಗಳ ಆಟದ ದಿನಚರಿ. ಅಲ್ಲೊಂದು ಪುಟ್ಟ ಮಗು ಕಲ್ಲು ಮಣ್ಣುಗಳನ್ನು ಹೆಕ್ಕಿ ತಂದು ಜೋಡಿಸಿ ತನ್ನದೇ ಆದ ಆಟವನ್ನು ಆಡುತ್ತಿತ್ತು. ಅಣತಿ ದೂರದಲ್ಲಿ ಅವರಪ್ಪ ಫೋನಿನಲ್ಲಿ ಮಾತನಾಡುತ್ತಾ ಓಡಾಡುತ್ತಿದ್ದರು. ಮಗುವಿನ ಜೋಡಣಾ ಶೈಲಿ ನನಗಿಷ್ಟವಾಗಿ ಹೋಗಿ ಮಾತನಾಡಿಸಿ ಗೆಳೆತನ ಮಾಡಿಕೊಂಡೆ. ನಾಲ್ಕು ವರ್ಷದ ಹುಡುಗ ಅವನು. ಮಾಶಾ ಅಂಡ್ ದಿ ಬೇರ್ ಕಾರ್ಟೂನ್ ನಲ್ಲಿ ಬರುವ ಸಂದರ್ಭವನ್ನು ತನ್ನ ಮನಸ್ಸಿನಲ್ಲಿಟ್ಟುಕೊಂಡು, ಕ್ಯಾಂಪ್ಫೈರ್ ಗೆ ತಯಾರಿ ನಡೆಸುತ್ತಿದ್ದ. ಸರಿ, ಅವನ ಕಲ್ಪನೆಯ ಕಥೆಗೆ ತಕ್ಕಂತೆ , ಇಬ್ಬರು ಸೇರಿ ವಸ್ತುಗಳ  ಒಟ್ಟು ಮಾಡುವುದು ಇನ್ನಿತರ ಚಟುವಟಿಕೆ ನಡೆಸುತ್ತಾ ಹೋದೆವು. ನನ್ನ ಮಗಳಿಗೋ ವ್ಯಾಯಮದ ಪಾರ್ಕಿನಲ್ಲಿ ಕಸರತ್ತು ಮಾಡುವ ಹುಚ್ಚು. ಆದರೆ ಈ ಕಡೆಗೂ ಒಲವು. ಆಗಾಗ ಬಂದು ನಮ್ಮನ್ನು ಮಾತನಾಡಿಸುತ್ತಾ, ಕಥೆಯನ್ನು ಕೇಳುತ್ತಾ, ಮಧ್ಯೆಮಧ್ಯೆ ಸಹಾಯ ಮಾಡಿ ಹೋಗುತ್ತಿದ್ದಳು. ಇದ್ದಕ್ಕಿದ್ದಂತೆ, ಯಾವುದೋ ಒಂದು ದ್ವೀಪದಲ್ಲಿದ್ದ ನಾವು ಕ್ಯಾಂಪ್ ಫೈರ್ ತಯಾರಿ ನಡೆಸುತ್ತಿದ್ದವರು, ಹಾಸ್ಪಿಟಲ್ ಗೆ ಹೋಗುವ ಕಥೆಯ ಮೂಲಕ, ನಮ್ಮೆಲ್ಲ ಜೋಡಣೆಯನ್ನು ಆ ಹುಡುಗ ಬದಲಾಯಿಸುತ್ತಾ ಬಂದ. ಯಾವುದಕ್ಕೂ ಒಪ್ಪದಾದ. ನನಗೋ ಆ ಕಾರ್ಟೂನ್ ನ ಹಿಂದೆ ಮುಂದೆ ತಿಳಿಯದು. ನಾನು ಜೋಡಿಸಿಟ್ಟಿದ್ದನ್ನೆಲ್ಲ ಆತ ಮುರಿಯುತ್ತಿದ್ದ. ನಾನು ಕಷ್ಟಪಡುತ್ತಿದ್ದುದ್ದನ್ನು ಕಂಡು ಮಗಳು ಓಡಿಬಂದಳು. ಆಸ್ಪತ್ರೆಯ ಕಥೆ ಮಾಷಾ ಅಂಡ್ ದ ಬೇರ...