ತಿನ್ನಕ್ಕೇನಿದ್ದು?
ಮಕ್ಕಳ ಪರೀಕ್ಷಾ ಸಮಯ. ಸ್ಕೂಲಿಗೆ ರಜಾ, ಮಕ್ಕಳಿಗೆ ಮಜಾ.. ಓದಲಿಕ್ಕೆ ಕೂರಲು ಅವರಿಂದಾಗದು. ಓದದೇ ಕುಣಿಯಲು ಬಿಡಲು ನಮ್ಮಿಂದಾಗದು. ಈಗೆಂತು ಮಕ್ಕಳಿಗೆ ಪರೀಕ್ಷೆಗೆ ಓದಲು ಕುಳಿತರೆ ಬೋರ್ ಆಗಿಯೇ ಹಸಿವು ಜಾಸ್ತಿ. ಗಂಟೆಗಂಟೆಗೆ ಏನಾದರೂ ತಿನ್ನಲು ಕೊಡಬೇಕು.. ಹೊರಗಡೆಯ ಆಹಾರ ನೀಡಿ, ಪರೀಕ್ಷಾ ಸಮಯದಲ್ಲಿ ತೊಂದರೆ ತೆಗೆದುಕೊಳ್ಳಲು ನಮಗೆ ಇಷ್ಟವಿರುವುದಿಲ್ಲ. ಅದರಲ್ಲೂ ಮುಖ್ಯವಾಗಿ ಮಕ್ಕಳ ಬಾಯಿ ಬಡುಗೆಗೆ ಅಂಗಡಿಯಿಂದ ತಂದ ಪೊಟ್ಟಣ ಆಹಾರವೆಂತೂ ಅವಶ್ಯಕತೆಕಿಂತ ಹೆಚ್ಚಿನ ಸಕ್ಕರೆ ಮತ್ತು ಕೆಟ್ಟ ಜಿಡ್ಡಿನ ಅಂಶದ್ದಾಗಿದ್ದು, ಮಕ್ಕಳಿಗೆ ಓದಲು ಮನಸ್ಸಾಗದಂತೆ ಇನ್ನಷ್ಟು ಆಲಸ್ಯತನವನ್ನು ಒಡ್ಡುತ್ತದೆ. ಹಾಗಾಗಿ ಮನೆಯಲ್ಲಿಯೇ ಅದು ಇದು 'ತಿನ್ನಕ್ಕೇನಿದ್ದು' ಗೆ ಏನಾದ್ರೂ ವ್ಯವಸ್ಥೆ ಮಾಡಬೇಕಲ್ಲ. ಹೀಗೊಂದು ಇವತ್ತಿನ ರೆಸಿಪಿ ಬರೆದಿಟ್ಟು ಹಂಚುವ ಎನಿಸಿತು. ಇದು ಮಕ್ಕಳನ್ನು ಓದಲು ಕೂರಿಸಿಕೊಂಡು ಪ್ರಶ್ನೋತ್ತರ ಕೇಳುವ ಸಮಯದಲ್ಲೇ ಮಾಡಬಹುದಾದ ಒಂದು ಸುಲಭವಾದ ಪೌಷ್ಟಿಕವಾದ ಹಲ್ವಾ. ವಿ.ಸೂ : ಇದು ನನ್ನ ಸಸ್ಯಜನ್ಯ ಆಹಾರದ ರೆಸಿಪಿ ಒಂದು ದೊಡ್ಡ ಕಪ್ ಗೋಡಂಬಿ ಒಂದು ಗಂಟೆಗಳ ಕಾಲ ನೆನೆಸಿಕೊಂಡು, ಕನಿಷ್ಠ ನೀರಿನಲ್ಲಿ ಮಿಕ್ಸರ್ ಗ್ರೇನ್ದರ್ ಗೆ ಹಾಕಿ ಬೀಸಿಟ್ಟುಕೊಳ್ಳಬೇಕು. ಸಣ್ಣಗೆ ತುರಿದ ಕ್ಯಾರೆಟ್ ಅರ್ಧ ಕಪ್ ತುರಿದ ಕಾಯಿ ಕಾಲು ಕಪ್ (ಹಲ್ವಾ ತರಿತರಿಯಾದ ಟೆಕ್ಸ್ಚರ್ಬೇಕಿದ್ದಲ್ಲಿ) ನಾಲ್ಕು ಚಮಚ ಸಕ್ಕರೆ. ಬಿಸಿನ...