ಮಲೆಗಳಲ್ಲಿ ಮದುಮಗಳು
ಇಡೀ ರಾತ್ರಿ ನಾಟಕ ನಡೆಯುತ್ತಂತೆ...! ಕೊರೆವ ಚಳಿಯಲ್ಲಿ, ಬಿಂದಿಗೆ ಚಂದಿರನ ಬೆಳಕಿನಲಿ ಕುಳಿತು ಬೆಳಗಾಗುವ ವರೆಗೂ ನಾಟಕದಲ್ಲಿ ತಲ್ಲೀನಗೊಳ್ಳುವ ಅನುಭವವಂತೆ..ಅಮೋಘವಾದ ನಾಟಕ, ಪಾತ್ರಧಾರಿಗಳ ಅದ್ಭುತ ಅಭಿನಯ ೪ ಸ್ಟೇಜ್ ಗಳಲ್ಲಿ ಸಾಗುತ್ತದೆಯಂತೆ..ಎಂಬೆಲ್ಲ ಉತ್ಸಾಹಭರಿತ ವಿಷಯಗಳು ಕಳೆದ ಜನವರಿಯಿಂದಲೂ ಕೇಳುತ್ತಿದ್ದೆನಾದರೂ, ನಾಟಕವನ್ನು ನೋಡುವ ಸಂದರ್ಭ ಈ ಸರ್ತಿ ಸಿಕ್ಕಿಲ್ಲವೆಂದು ಸಣ್ಣ ನಿರಾಸೆ ಪಟ್ಟಿದ್ದು ನಿಜ. .ನಾಟಕ ಪ್ರದರ್ಶನದ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂಬ ಸಿಹಿ ಸುದ್ದಿಯೊಂದಿಗೆ ಫೋನಿನಲ್ಲಿ ಮಾತನಾಡಿದ ಗೆಳತಿ ಸ್ವರ್ಣ ಜೊತೆ ಕಡೆಗೂ ಎಂದಾದರೂ ನೋಡಲೇ ಬೇಕು ಎಂದೆನಿಸಿದ್ದ ನಾಟಕವನ್ನು ನೋಡುವ ಅವಕಾಶ ನಿನ್ನೆಗೆ ನನ್ನದಾಯಿತು. ೧೦ ತಾಸುಗಳ ನಾಟಕ ನೋಡಲು, ಮಗಳನ್ನು ರಾತ್ರಿ ಬಿಟ್ಟು ಹೋಗುವುದು ಹೇಗಪ್ಪಾ ಎಂದು ಯೋಚಿಸುತ್ತಿರುವಾಗ, ನೀನು ಹೋಗಿ ಬಾ ಎಂದು ಮನೆಯವರು ಬೆಂಬಲಿಸಿದಾಗ ಮನಸ್ಸು ಹಿರಿಹಿಗ್ಗಿತ್ತು. ಹಿಂದೆ ಓದಿದ್ದ ರಾಷ್ಟ್ರಕವಿ ಕುವೆಂಪು ರಚನೆಯ 'ಮಲೆಗಳಲ್ಲಿ ಮದುಮಗಳು' ಪುಸ್ತಕವನ್ನು ನಾಟಕದ ರೂಪದಲ್ಲಿ ನೋಡುವ ಅನುಭವವೇ super..!! ರಾತ್ರಿ ಎಲ್ಲ ಎಚ್ಚರವಿದ್ದು ಹೊರಾಂಗಣ ವೇದಿಕೆಯಲ್ಲಿ ಯಕ್ಷಗಾನ, ಬಯಲಾಟ ನೋಡುವ ಕಾಲವೇ ಈಗ ಕಡಿಮೆಯಾಗುತ್ತಿರುವಾಗ, ೮೧ ನೆಯ ಪ್ರದರ್ಶಕ್ಕೇರುತ್ತಿದ್ದ ನಾಟಕವೊಂದನ್ನು ನೋಡಲು ನಿನ್ನೆಗೂ ನೆರೆದ ಜನ ಸುಮಾರು ೬೦೦! ನನಗೋ ಇವೆಲ್ಲ ಮೊದಲ ಸಲದ ಅನುಭವ. ಜಾಕೆಟ್ ಏ...