ಪೋಸ್ಟ್‌ಗಳು

ಏಪ್ರಿಲ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪ್ಲೇಟು ಲೋಟ ಸುದ್ದಿ!

ಇಮೇಜ್
ಆರ್ಟ್ ವರ್ಕ್ ಕೆಲಸಕ್ಕಾಗಿ ಗೆಳತಿಯ ಮನೆಗೆ ಹೋಗಿದ್ದೆ. ಅವರದ್ದು ಒಂದು ಲೇಔಟಿನಲ್ಲಿ ಸ್ವಂತ ಮನೆ. ಅಲ್ಲಿ ಸುಮಾರು ೧೨೦೦ ಕ್ಕೂ ಹೆಚ್ಚು ಮನೆಗಳಿವೆ. ಅಲ್ಲಿಗೊಂದು ದೇವಸ್ಥಾನ. ಧಾರ್ಮಿಕ ಕಾರ್ಯಕ್ರಮಗಳು ನಡೆಸುವುದರ ಜೊತೆಗೆ ದಾನಿಗಳ ಕೊಡುಗೆಗಳಿಂದ ಪ್ರತೀ ಶನಿವಾರ ಮಧ್ಯಾಹ್ನ ಒಂದು ೨೫೦ ಮಂದಿಗೆ ಊಟಕ್ಕೆ ಅವಕಾಶವಾಗುವಂತೆ ಅನ್ನ ಸಂತರ್ಪಣೆ ಕೂಡ ನಡೆಯುತ್ತದೆ. ಪ್ರತೀ ಶನಿವಾರ! ಯಾರಾದರೂ ಬಂದು ಪ್ರಸಾದ ಸ್ವೀಕರಿಸಬಹುದು. ನಿನ್ನೆ ಹನುಮ ಜಯಂತಿ. ನಮ್ಮದೂ ಕೂಡ ಒಂದು ಭೇಟಿ ನಿಕ್ಕಿಯಾಗಿತ್ತು. ಅಲ್ಲಿಯ ಅನ್ನ ಸಂತರ್ಪಣೆ ವ್ಯವಸ್ಥೆ ನೋಡಿದೆ. ಸ್ಟೀಲ್ ತಟ್ಟೆಗಳಲ್ಲಿ ಊಟ ವಿತರಣೆ. ಮಕ್ಕಳಿಗೆ ತುಸು ಚಿಕ್ಕ ಪ್ಲೇಟ್. ಕೈಯಲ್ಲಿ ಹಿಡಿದರೆ ಭಾರವಾಗದಿರಲೆಂದು. ಉಳಿದದ್ದೆಲ್ಲ ದೊಡ್ಡ ತಟ್ಟೆಗಳು. ದೇವಸ್ಥಾನದ ಪಕ್ಕದಲ್ಲಿಯೇ ತಟ್ಟೆಗಳನ್ನು ತೊಳೆದು ಬುಟ್ಟಿಯೊಂದಕ್ಕೆ ಹಾಕುವ ವ್ಯವಸ್ಥೆ. ತಟ್ಟೆ ತೊಳೆಯುವುದು ನಮ್ಮ ಕರ್ತವ್ಯವಾಗಿರಬೇಕು. ಕೆಲವರು ತಟ್ಟೆಯನ್ನು ಶಿಸ್ತಿನಿಂದ ತೊಳೆಯಬಹುದು. ಕೆಲವರು ಅದರಲ್ಲಿಯೂ ಮಕ್ಕಳಿಗೆ ಸರಿಯಾಗಿ ತೊಳೆಯಲು ಬಾರದೆ ಇರಬಹುದು. ಅದಕ್ಕೂ ವ್ಯವಸ್ಥೆ ಇದೆ. ಮಹಿಳೆಯೊಬ್ಬಳು ಆ ಬುಟ್ಟಿಯಲ್ಲಿರುವ ತಟ್ಟೆಯನ್ನು ಇನ್ನೊಮ್ಮೆ ಚೆನ್ನಾಗಿ ತೊಳೆದು ಕೊಡುತ್ತಾಳೆ. ಪಾತ್ರೆ ತೊಳೆದ ನೀರೆಲ್ಲ ವ್ಯವಸ್ಥಿತವಾಗಿ ಉದ್ಯಾನವನದ ಗಿಡಗಂಟೆಗಳಿಗೆ ಮರುಬಳಕೆಗೆ. ಹೆಚ್ಚು ನಿವಾಸಿಗಳು ಇರುವ ಇಂತಹ ಸ್ಥಳಗಲ್ಲಿ ಹಂಚಿಕೊಂಡಾಗ ಹೆಚ್ಚೇನೂ ಖರ್ಚು ಬರು...