ಪೋಸ್ಟ್‌ಗಳು

ಮಕ್ಕಳ ಬೆರಳು ಚೀಪುವಿಕೆ

ಇಮೇಜ್
ನಾವು ಕಂಡಂತೆ ಸಾಮಾನ್ಯವಾಗಿ ಸಣ್ಣ ಪಾಪುಗಳು ಬಾಯಿಗೆ ಬೆರಳು ಹಾಕುವದನ್ನು ನೀವು ಗಮನಿಸಿರುತ್ತೀರಿ. ಅದರಲ್ಲೂ ಸುಮಾರು ೨೦% ಚಿಕ್ಕ ಮಕ್ಕಳು ಬೆರಳನ್ನು ಚೀಪುವುದನ್ನು ನಂತರದಲ್ಲೂ ಮುಂದುವರೆಸಿರುತ್ತಾರೆ. ಕೆಲವು ಮಕ್ಕಳು ಹೆಬ್ಬೆಟ್ಟನ್ನು ಚೀಪಿದರೆ, ಕೆಲ ಮಕ್ಕಳು ತೋರುಬೆರಳು, ಕಿರಿಬೆರಳುಗಳನ್ನೂ ಚೀಪುವುದು ಮಾಡುತ್ತಾರೆ.  ಹೇಗೆ ಮಗು ಈ ಅಭ್ಯಾಸವನ್ನು ಕಲಿಯುತ್ತದೆ? ಬೆರಳು ಚೀಪುವುದು ಒಳ್ಳೆಯದೇ ಕೆಟ್ಟದ್ದೇ? ನಾವು ಮಾಡಬೇಕಾದ್ದೇನು? ತಪ್ಪಿಸಲು ಮಾಡುವ ಪ್ರಯತ್ನಗಳು ಇತರ ವಿಷಯಗಳ ಬಗ್ಗೆ ಇಲ್ಲಿದೆ ನೋಡಿ ವಿವರಣೆ. ಬೆರಳು ಚೀಪುವ ಕಲಿಕೆ ಹೇಗೆ ಮತ್ತು ಯಾಕೆ? ಮಕ್ಕಳಲ್ಲಿ ಚೀಪುವ ಕ್ರಿಯೆ ಆ ಮಗು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಪ್ರಾರಂಭವಾಗಿರುತ್ತದೆ. ಜನನದ ನಂತರದಲ್ಲಿ ಸ್ತನ್ಯಪಾನ ಮಾಡುವ ಕೌಶಲ್ಯವನ್ನು ಹೊಂದಿರುವ ಮಗು ಅದೇ ಪ್ರಕಾರದಲ್ಲಿ, ತನ್ನ ಬಾಯನ್ನು ಮತ್ತು ನಾಲಿಗೆಯನ್ನು ಬಳಸಿ ಪ್ರತಿಯೊಂದು ವಸ್ತುವನ್ನು ಜೋರಾಗಿ ಜೀಪುವ (urge) ಸತತ ಪ್ರಯತ್ನದಲ್ಲಿರುತ್ತದೆ. ತಮ್ಮ ಕೈ, ಕೈ ಬೆರಳುಗಳು, ಆಡಿಸುತ್ತಾ ಬಾಯಿಯ ಬಳಿ ಸಿಕ್ಕ ಕಾಲು ಎಲ್ಲವನ್ನೂ ಇದೇ  ರೀತಿಯಲ್ಲಿ ಬಾಯಿಗೆ ಹಾಕಲು ಪ್ರಯತ್ನಿಸಿರುತ್ತದೆ. ಒಂದು ಸರಿ ತಮ್ಮ ಕೈಯ ಬೆರಳುಗಳ ಚೀಪುವಿಕೆಯನ್ನು ಕಂಡುಕೊಂಡ ಮೇಲೆ, ಮಗುವು ಅದನ್ನು ತನ್ನ ಆರಾಮಕ್ಕಾಗಿ ಮತ್ತೆ ಮತ್ತೆ ಬಳಸಲು ಪ್ರಯತ್ನಿಸುತ್ತದೆ.  ಒ...

ಇವತ್ ಯಾವ ಹಣ್ಣು ತಿಂದ್ರಿ??

ಇಮೇಜ್
ಹಣ್ಣು ಅಂದ್ರೆ ಯಾರಿಗೆ ಪ್ರಿಯವಲ್ಲ.. ಇಂದು ಈ ವರ್ಷದ ಮೊದಲ ಸ್ಟ್ರಾಬೆರಿ ಹಣ್ಣೊಂದನ್ನು ಬಾಯಿಗೆ ಹಾಕಿಕೊಂಡಾಗ ತಿಂದ ಮೊದಲ ಹಣ್ಣಿನ ಅತ್ಯಂತ ಹುಳಿಯಾದ ರುಚಿಯಿಂದಾಗಿ ಮುಖ ಕಿವುಚಿ ಹೋಯಿತು. 'ಅಬ್ಬಬ್ಬಾ..' ಎಂದು ಅಂತೂ ಸಾವರಿಸಿಕೊಂಡು ತಿನ್ನುವುದನ್ನು ಮುಂದುವರೆಸಿದೆ. ಮತ್ತೆ ೩ ಹಣ್ಣು ಮುಗಿಯುವರ್ಷ್ಟರಲ್ಲಿ, ಈ ಸೂಪರ್ ಸ್ಪೀಡ್ ಬ್ರೈನ್ ಎಷ್ಟೊಂದು ವಿಷಯಗಳನ್ನು ಯೋಚಿಸಿ ಗುಡ್ಡೆ ಹಾಕಿ, ನೆನಪುಗಳನ್ನು ಮೆಲಕು ಹಾಕಿ, ಒಂದಷ್ಟು ಭಾವನೆಗಳನ್ನು ಮಗಚಿ ಎತ್ತಿ ತಂದುಕೊಟ್ಟಿತ್ತು..!! ಹಣ್ಣುಗಳನ್ನು ತಿನ್ನುವುದಕ್ಕೆ ನನಗೇನೂ ಹೆಚ್ಚಿನ ಬೇಸರವಿರಲಿಲ್ಲ..ಹಾಗೆಂದು ಗಾಬರಿಸಿ ಹೋಗಿ ತಿನ್ನುವಷ್ಟು ವ್ಯಾಮೋಹವೂ ಕೂಡ ಕಡಿಮೆ. ಚಿಕ್ಕಂದಿನಿಂದಲೂ ಮಕ್ಕಳು ಹಣ್ಣು ತಿನ್ನಲೆಂದು ಅಪ್ಪಾಜಿ ಪಡುತ್ತಿದ್ದ ಸಾಹಸ ಅಷ್ಟಿಷ್ಟಲ್ಲ. ಹಣ್ಣು ತಿನ್ನೀ ಎಂದು ಕೇಳಬೇಕಿತ್ತು, ಸಿಪ್ಪೆ ಬಿಡಿಸಿ ನಾವಿಬ್ಬರು ಹೆಣ್ಮಕ್ಕಳ ಮುಂದೆ ತರಬೇಕಿತ್ತು..ಅಕ್ಕಂಗೆ ತಿನ್ನಿಸಲೆಂತೂ..ಆಕರ್ಷಕವಾಗಿ ಕತ್ತರಿಸಿ ಬೌಲ್ ಅಲ್ಲಿ ಹಾಕಿ ತಂದು ಕೊಡುವ ಜವಾಬ್ಧಾರಿ !! ನಾವು ತಿನ್ನಲು ಸೋಮಾರಿತನ ತೋರಿಸಿದಾಗ, ಅಪ್ಪಾಜಿ ಚಿಕ್ಕಪ್ಪಂದಿರೆಲ್ಲ ಹೇಗೆ ಊರಲ್ಲಿ ಚಿಕ್ಕಂದಿನಲ್ಲಿ ಯಾವುದೇ ಬಾಳೆಹಣ್ಣಿನ ಚಿಪ್ಪನ್ನು ಒಂದು ಕ್ಷಣದಲ್ಲಿ ಇಲ್ಲವಾಗಿಸುತ್ತಿದ್ದರು, ಕಡೆಗೆ ಅದು ಹುಳಿ ಹುಳಿ ಸೇಲಂ ಜಾತಿಯ ಬಾಳೆಹಣ್ಣಾದರೂ ಸರಿ, ಸಿಪ್ಪೆ ಕೂಡ ಬಿಡಿಸಿ ತಿನ್ನವಷ್ಟು ವ್ಯವಧಾನವಿಲ್ಲದೆ, ಸಿಪ್ಪ...

ಹೊಸದಾಗಿ ಮನೆ ನಿರ್ಮಿಸುತ್ತಿದ್ದೀರಾ? ನಿಮ್ಮ ಮಕ್ಕಳ ಹಿತವನ್ನೂ ಗಮನದಲ್ಲಿರಿಸಿ - ಬಿ. ಏನ್. ರಾಮಚಂದ್ರ

ನೀವು ಹೊಸದಾಗಿ ಮನೆ ನಿರ್ಮಿಸಲು ತೀರ್ಮಾನಿಸಿದೊಡನೆ ನಿಮ್ಮ ಮನಸ್ಸಿಗೆ ಬರುವುದು ಮನೆ ನೋಡುವುದಕ್ಕೆ ಸುಂದರವಾಗಿರಬೇಕು ಹಾಗೂ ವಿಭಿನ್ನವಾಗಿರಬೇಕು ಎಂದು. ನಿಮ್ಮ ಅಭಿರುಚಿಯನ್ನು ಮನೆ ನಿರ್ಮಾಣ ವಿನ್ಯಾಸಕರಿಗೆ ತಿಳಿಸುತ್ತೀರಿ. ಅವರು ತಮ್ಮ ಅಭಿಪ್ರಾಯಗಳನ್ನು ಸೇರಿಸಿ ನಿಮಗೆ ಮನೆ ವಿನ್ಯಾಸವನ್ನು ಮಾಡಿಕೊಡುತ್ತಾರೆ, ಕೆಲಸ ಮುಂದುವರೆಯುತ್ತದೆ. ಆದರೆ, ಆ ಮನೆಯಲ್ಲಿ ವಾಸ ಮಾಡುವವರು ನೀವು ಅಂದರೆ ದೊಡ್ಡವರಷ್ಟೇ ಅಲ್ಲ, ನಿಮ್ಮ ಮಕ್ಕಳು ಹಾಗೂ ಮುಂದೆ ನಿಮ್ಮ ಮನೆ ಪ್ರವೇಶಿಸುವ ಮೊಮ್ಮಕ್ಕಳೂ ಕೂಡ. ನೀವು ಕಟ್ಟಿದ ಮನೆ ಅವರೆಲ್ಲರಿಗೂ ಅಪ್ಯಾಯಮಾನವಾಗಿರಬೇಕು ಮತ್ತು ಅವರ ಸುರಕ್ಷತೆಗೂ ಪೂರಕವಾಗಿರಬೇಕು. ಮನೆ ಅಷ್ಟೇ ಅಲ್ಲ, ನೀವು ಮನೆಗೆ ಹೊಂದಿಸುವ ಪೀಠೋಪಕರಣ ಹಾಗೂ ಸೌಲಭ್ಯಗಳು ಕೂಡ ಮಕ್ಕಳಿಗೆ ಅನುಕೂಲಕರವಾಗಿರಬೇಕು. ನಿಜ, ಅನೇಕರು ಈ ಕುರಿತು ಯೋಚಿಸುವುದೇ ಇಲ್ಲ. ಮಕ್ಕಳಿಗೆ ಸಹಕಾರಿಯಾಗುವ ಹಾಗೂ ಅವರ ಸುರಕ್ಷತೆ ಸಂಭಂದಿಸಿದಂತೆ ಗಮನಿಸಬೇಕಾದ ಅಂಶಗಳು ಇಲ್ಲಿದೆ ನೋಡಿ. 1. ಮನೆಯ ಬಾಗಿಲುಗಳು ಮೆಟ್ಟಿಲ ಅಂಚು ಚೂಪು ರಹಿತವಾಗಿರಲಿ :              ಮನೆಯ ಒಳಗೆ ವೇಗವಾಗಿ ಓಡಿ ಬರುವುದು, ಸೋಫಾ ಮಂಚದಿಂದ ಕುಪ್ಪಳಿಸುವುದು, ಮನೆಯೊಳಗೆ ಆಟವಾಡುತ್ತ ವೇಗವಾಗಿ ಓಡುವುದು - ಇವೆಲ್ಲಾ ಮಕ್ಕಳ ಸಹಜ ಗುಣ. ಮಕ್ಕಳು ಒಂದು ಕ್ಷಣವೂ ಸುಮ್ಮನಿರುವುದಿಲ್ಲ, ಏನಾದರೊಂದು ಚಟುವಟಿಕೆಯಲ್ಲಿ ಯಾವಾಗಲೂ ತೊಡಗಿರುತ್ತಾರೆ...

ಶೈಕ್ಷಣಿಕ ಪ್ರವಾಸಗಳ ಮಹತ್ವ

ಇಮೇಜ್
ಡಿಸೆಂಬರ್ ತಿಂಗಳೆಂದರೆ ಸಾಮಾನ್ಯವಾಗಿ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚಿನ ಪಾಠದ ಒತ್ತಡವಿಲ್ಲದೇ, ಆಟೋಟ ಸಮಾರಂಭಗಳು, ಶಾಲಾ ವಾರ್ಷಿಕೋತ್ಸವ ಇನ್ನಿತರ ಚಟುವಟಿಕೆಗಳು ನಡೆಯುವ ಕಾಲ. ಇದಕ್ಕೆ ಜೊತೆಯೆಂಬಂತೆ ಮಕ್ಕಳಿಗೆ ಇನ್ನೂ ಹುರುಪಿನ ವಿಚಾರವೆಂದರೆ ಸ್ಕೂಲ್ ಟ್ರಿಪ್, ಶೈಕ್ಷಣಿಕ ಪ್ರವಾಸ..!! ವಾರಕ್ಕೂ ಮುಂಚಿನಿಂದಲೇ ಮಕ್ಕಳಲ್ಲಿ ಸಡಗರ,  ಉತ್ಸಾಹ, ತಯಾರಿ ಎಲ್ಲಾ ಪ್ರಾರಂಭ! ಶೈಕ್ಷಣಿಕ ಪ್ರವಾಸದ ಮಹತ್ವ :                   ಶೈಕ್ಷಣಿಕ ಪ್ರವಾಸ ಎಂಬುದು ಶಾಲಾ ಮಕ್ಕಳ ಅಥವಾ ಕಾಲೇಜು ವಿದ್ಯಾರ್ಥಿಗಳ ಕಲಿಕೆಯ ಒಂದು ಪ್ರಮುಖವಾದ ಭಾಗವೆಂದೇ ಹೇಳಬಹುದು. ತಮ್ಮ ಸ್ವಂತ ಅನುಭವದ ಮೇಲೆ, ವೀಕ್ಷಣೆಯ ಮೇರೆಗೆ ಮಕ್ಕಳಿಗೆ ಕಲಿಯುವ ಒಂದು ಅವಕಾಶ. ಕೇವಲ ಪುಸ್ತಕದ ಬದನೇಕಾಯಿ ಆಗದೆ, ಜ್ಞಾನವನ್ನು ಪ್ರಾಯೋಗಿಕವಾಗಿ ಪಡೆಯಲು ಮಾಡಬಹುದಾದಂತಹ ಒಂದು ಉತ್ತಮ ಪ್ರಯತ್ನವೇ ಶೈಕ್ಷಣಿಕ ಪ್ರವಾಸಗಳ ಕೈಗೊಳ್ಳುವಿಕೆ. ಶೈಕ್ಷಣಿಕ ಪ್ರವಾಸದ ಯೋಜನೆಯಿಂದ ಮಕ್ಕಳಲ್ಲಿ ಇತಿಹಾಸ, ವಾಸ್ತುಶಿಲ್ಪ, ಅಭಿವೃದ್ಧಿ, ಉದ್ಯಮ, ಜನ, ಧರ್ಮ, ಸಂಸ್ಕೃತಿ, ಹಾಡು, ನೃತ್ಯ ಹವಾಮಾನ, ನಿಸರ್ಗ, ಪ್ರಾಣಿ ಪಕ್ಷಿ ಸಂಕುಲ ಮತ್ತು ಪರಿಸರದ ಕುರಿತಾಗಿ ಸಾಕಷ್ಟು ವಿಷಯಗಳು ಅರಿವಿಗೆ ಬರುವುದಲ್ಲದೇ, ಕಲ್ಪನೆಗೂ ಮೀರಿ ಅವರ ಜ್ಞಾನಶಕ್ತಿ ವಿಸ್ತಾರಗೊಳ್ಳುತ್ತದೆ. ಮಕ್ಕಳಲ್ಲಿ ಒಳ್ಳೆಯ ವ್ಯಕ...

ನನ್ನ ಬಂಗಾರಿ...

ಒಂದು ದಿನ ಚೀನಿಕಾಯಿ ಪದಾರ್ಥ ಮಾಡಿದ ನಂತರ, ಅದರ ಅಳಿದುಳಿದ ಬೀಜಗಳು ನನ್ನ ಕ್ರಾಫ್ಟ್ ಕೆಲಸಗಳಿಗೆ ಬರುತ್ವೇ ಎಂದು ತೊಳೆದು ಬಾಲ್ಕನಿಯಲ್ಲಿ ಬಿಸಲಿಗೆ ಒಣಗಿಸಿಟ್ಟಿದ್ದೆ. ಸಂಜೆಯ ವೇಳೆಗೆ ವಾಪಸು ತೆಗೆಯಬೇಕೆಂದು ನೋಡಿದರೆ ನನಗೆ ಆಶ್ಚರ್ಯವೊಂದು ಕಾದಿತ್ತು. ಚೀನೀ ಬೀಜದ ಕೇವಲ ಹೊರಗಿನ ಸಿಪ್ಪೆಗಳು ಅಲ್ಲಲ್ಲಿ ಹರಡಿ ಬಿದ್ದಿದ್ದವು. ಅದರೊಳಗಿನ ಮೃದು ಭಾಗವು ಲವಲೇಶವಿಲ್ಲದಂತೆ ಖಾಲಿಯಾಗಿತ್ತು. ಇದು ಮತ್ತೆ ಹೋದ ವಾರವಷ್ಟೇ ಕಷ್ಟ ಪಟ್ಟು ಹೋಗಲಾಡಿಸಿದ ಇರುವೆಯ ಕಾಟವೇ ಹೌದು ಎಂದು ಮನಸಾರೆ ಬೈದುಕೊಳ್ಳುತ್ತಾ ಕುರುಹು ಸಿಗಬಹುದೇ ಎಂದು ಬಗ್ಗಿ ನೋಡಿದೆ, ಏನೂ ಗೋಚರಿಸಲಿಲ್ಲ. ಎಲ್ಲಾ ಇರುವೆಗಳೂ ಚೆನ್ನಾಗಿ ತಿಂದು ಹೋಗಿವೆ ಎಂದುಕೊಳ್ಳುತ್ತಾ ಒಳನೆಡೆದೆ. ಮತ್ತೆ ಮರುದಿವಸ ಇನ್ನರ್ಧ ಚೀನೀಕಾಯಿಯ ಬೀಜಗಳನ್ನು ಒಣಗಿಸಿಟ್ಟೆ. ಈ ಸರ್ತಿ ಒಂದು ಕರ್ಪೂರವನ್ನು ಬೀಜಗಳ ಜೊತೆಗಿಟ್ಟು. ಇರುವೆಯಿಂದ ಕಾಪಾಡಿಕೊಳ್ಳುವ ಮಾಸ್ಟರ್ ಪ್ಲಾನ್  ಹಾಕಿದೆ. ಆದರೆ ಮಧ್ಯಾಹ್ನದ ವೇಳೆಗೆ, ಬೀಜ ಒಣಗಿಸಿಟ್ಟ ತಟ್ಟೆಯ ಬಳಿ ಸಣ-ಮಣ ಶಬ್ಧ ಕೇಳಿ ಬರುತ್ತಿತ್ತು. ನಿಧಾನವಾಗಿ ಬಾಲ್ಕನಿಯ ಕರ್ಟೈನ್ ಸರಿಸಿ ಗಮನಿಸಿದೆ. ಮತ್ತೆ ಅಲ್ಲಲ್ಲಿ ಹರಡಿದ ಸಿಪ್ಪೆಗಳು.. ಈ ಸರ್ತಿ ಸಾಕ್ಷಿ ಸಮೇತವಾಗಿ ದೊರಕಿತು,ಇದು ಯಾರ ಹರ್ಕತ್ ಎಂದು..ಪುಟ್ಟದೊಂದು ಮುದ್ದಾದ ಅಳಿಲು ಕುಳಿತ ಭಂಗಿಯಲ್ಲಿ, ತನ್ನೆರಡು ಮುಂಗಾಲು (ಕೈ) ಬಳಸಿ ಚೀನೀ ಬೀಜವನ್ನು ಕಡಿದು ಸಿಪ್ಪೆ ತೆಗೆದು ಒ...

ಮಾತಾಡ್ ಮಾತಾಡ್ ಮಲ್ಲಿಗೆ..

ಇಮೇಜ್
ಇವತ್ತಿಗೆ ನನ್ನ ಪಾಪು ನನ್ನನ್ನು 'ಅಮ್ಮಾ' ಎಂದು ಪೂರ್ತಿಯಾಗಿ ಕರೆದು ೩ ವರ್ಷಗಳಾದವು. ಎಷ್ಟೊಂದು ಸಂತೋಷದ ಕ್ಷಣ! ನಿಜ ಹೇಳಬೇಕೆಂದರೆ ಅಂದು ನನ್ನಲ್ಲಿ ಸಂತೋಷ, ಆಶ್ಚರ್ಯದ ಜೊತೆಗೆ ಪ್ರಶ್ನೆಯೊಂದು ಉದ್ಭವವಾಗಿತ್ತು. ಈ ಪಾಪುಗೆ ಹೇಗೆ ತಿಳಿಯಿತು ನನ್ನನ್ನು 'ಅಮ್ಮಾ' ಎಂದೇ ಸಂಭೋದಿಸಬೇಕೆಂದು. ಈ ಪ್ರಶ್ನೆ ಅಸಮಂಜಸ ಎನಿಸಬಹುದು ಆದರೂ ನನಗೆ ಸಂಶಯ ಕಾಡಿದ್ದೆಂತೂ ನಿಜ.. ಇನ್ನೊಂದು ಬಗೆಯಲ್ಲಿ ಹೇಳುತ್ತೇನೆ. ಇಂಗ್ಲೀಷ್ ಮಾತೃಭಾಷೆಯಾಗಿರುವಂತಹ ಮನೆಗಳಲ್ಲಿ,ಮಗುವು ತಾಯಿಗೆ 'Mommy', 'Mamma' ಎಂದೇ ಕರೆಯಲು ಪ್ರಾರಂಭಿಸುತ್ತದೆ.. ಮಗುವಿಗೆ ಹೇಗೆ ತಿಳಿಯಿತು ತಾನು English  ಭಾಷೆಯಲ್ಲಿ ಮಾತನಾಡಬೇಕೆಂದು? ವಿಷಯವಿಷ್ಟೇ, ಮಗುವು ಕಲಿಯುವುದು ಕೇವಲ ಅನುಕರಣೆಯಿಂದ, ಸಹಜವಾಗಿ ಮತ್ತು ತಮಗರಿವಿಲ್ಲದೆ... ಯಾವುದೇ ಹುಟ್ಟಿದ ಶಿಶು, ಈ ಜಗತ್ತಿನಲ್ಲಿ ಇರುವ ಎಲ್ಲ ಭಾಷೆಗಳಿಗೆ (ಸುಮಾರು ೬೫೦೦ ಭಾಷೆಗಳಿವೆ ಎಂದು ಅಂದಾಜಿಸಲಾಗಿದೆ) ಅವಶ್ಯಕತೆ ಇರುವ ೧೫೦ ಕ್ಕೂ  ಹೆಚ್ಚಿನ ಧ್ವನಿಗಳನ್ನು ಗ್ರಹಿಸುವ ಮತ್ತು ತಮ್ಮ ಬಾಯಿಯಿಂದ ಹೊರಡಿಸುವ ಸಾಮರ್ಥ್ಯ ಪಡೆದಿರುತ್ತದೆ ಎಂಬ ವಿಷಯವನ್ನು ನಾನು ಓದಿದಾಗ ಇದು ನಮ್ಮ ಕಲ್ಪನೆಗೂ ಮೀರಿದ್ದು ಎಂದೆನಿಸಿತು. ಈಗ ಭಾಷೆ, ಶಬ್ದ, ವಾಕ್ಯ, ವ್ಯಾಕರಣ ಎಲ್ಲವನ್ನೂ ಕಲಿತಿರುವ ನಮ್ಮಿಂದ ಅಷ್ಟೊಂದು ಧ್ವನಿಗಳನ್ನು ಹೊರಡಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ನಾವು ಈಗಾಗಲೇ ಪಳಗಿ ಹ...

ಭೂಮಿ ಹುಣ್ಣಿಮೆ

ಇಮೇಜ್
ಭೂಮಿ ಹುಣ್ಣಿಮೆ ಒಂದು ಅಪರೂಪದಲ್ಲಿ ಅಪರೂಪದ ಹಬ್ಬ. ಅದರಲ್ಲೂ ಮಲೆನಾಡಿನ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವಂತಹ ಭೂಮಿ ತಾಯಿಗೆ ಸಲ್ಲಿಸುವ ಪೂಜಾ ಕ್ರಮ. 'ಸೀಗೆ ಹುಣ್ಣಿಮೆ' ಎಂತಲೂ ಕರೆಯಲ್ಪಡುವ ಈ ಹಬ್ಬದಲ್ಲಿ, ಭೂಮಿಯನ್ನು ದೇವತೆ ಎಂದೇ ಭಾವಿಸಿ ಕೃಷಿಕರೆಲ್ಲ ವರ್ಷಪೂರ್ತಿ ತಮಗೆ ಬೆಳೆ ಬೆಳೆಯಲು ಅನುಕೂಲ ಮಾಡಿಕೊಡುವ ತಮ್ಮ ನೆಲಕ್ಕೆ ವರ್ಷಕ್ಕೂಮ್ಮೆ ಪೂಜೆ ಮಾಡಿ ಕೃತಜ್ಞತೆ ಸಲ್ಲಿಸುವ ಸಂಪ್ರದಾಯವಾಗಿದೆ. ಇನ್ನೂ ಕೆಲವರ ಪ್ರಕಾರ ಈ ಹಬ್ಬವು, ಭತ್ತ ಮೊಳಕೆಯೊಡೆದು ಪೈರು ಹಿಡಿಯುವ ಈ ಸಂದರ್ಭದಲ್ಲಿ ಭೂಮಿ ತಾಯಿಗೆ ಸೀಮಂತ ಮಾಡುವುದು ಎಂಬ ಪ್ರತೀತಿಯೂ ಇದೆ. ಭೂಮಿ ಹುಣ್ಣಿಮೆ ಹಬ್ಬದಂದು, ತೋಟ ಗದ್ದೆಗಳಲ್ಲಿ ಪೂಜೆಗೆ ಸೂಕ್ತವಾದ ಜಾಗವೊಂದನ್ನು  ಆಯ್ಕೆ ಮಾಡಿಕೊಂಡು ಹಿಂದಿನ ದಿನವೇ ಆ ಜಾಗವನ್ನು ಸ್ವಚ್ಛಗೊಳಿಸಿ, ಪೂಜಾ ಕಲ್ಲನ್ನು ಪ್ರತಿಷ್ಠಾಪಿಸಿ ಹಸನು ಮಾಡಿಕೊಳ್ಳುತ್ತಾರೆ. ಮರುದಿನ ಮುಂಜಾವಿನಲ್ಲೇ ಮಾವಿನ ತೋರಣ, ಬಾಳೆ ದಿಂಡು, ಕಬ್ಬು, ಹೂವು, ತೆಂಗಿನ ಸಿಂಗಾರ, ಹೂವುಗಳಿಂದ ಸಿಂಗರಿಸುತ್ತಾರೆ. ಮನೆಯ ಮಂದಿಯೆಲ್ಲ ಸೇರಿ ಪೂಜೆಗೆ ಪಾಲ್ಗೊಳ್ಳಲು ಅನುವಾಗುವಂತೆ ಬಾಳೆ ಎಲೆಗಳನ್ನು ತೋಟದಲ್ಲಿ ಹಾಸಿ ಕುಳಿತುಕೊಳ್ಳಲು ಅಣಿಮಾಡಲಾಗುತ್ತದೆ. ಪೂಜೆ, ಮಂಗಳಾರತಿ, ಬಾಗಿನ ಸಮರ್ಪಣೆ ಮತ್ತು ಹಬ್ಬದಡುಗೆಯ ನೈವೇದ್ಯ ಮಾಡಲಾಗುತ್ತದೆ. ಅದರಲ್ಲೂ ಚೀನಿಕಾಯಿ 'ಕಡುಬು', ಸಾಂಬಾರ ...