ಪೋಸ್ಟ್‌ಗಳು

'ಸಾಗರ' ವೆಂಬ ಮೋಹ

ಇಮೇಜ್
ಎಂದಿನಂತೆ ಇಂದಿನ ದಿನಚರಿ ಪ್ರಾರಂಭವಾಗಿದೆ. ಮುಂಜಾವಿನ 5 ಗಂಟೆಯ ಚುಮು ಚುಮು ಚಳಿ, ಬೆಳಕಾಗುತ್ತಿದ್ದರೂ ಕಾಣದ ಸೂರ್ಯ, ಮಳೆಗಾಲದ ಮೋಡ. ನಮ್ಮ ಊರ ಕಡೆಯಂತಲ್ಲ ಬೆಂಗಳೂರಿನ ಮಳೆ. ಇಲ್ಲಿ ಹೇಗೆಂದರೆ "ದಿಸ್ ಇಸ್ ರೈನಿ ಸೀಸನ್" ಎಂಬ ಹೇಳಿಕೆಗೆ ಆಗೊಮ್ಮೆ ಈಗೊಮ್ಮೆ ಸುರಿವ ಮಳೆ ಮತ್ತದರ ನೆನಪಿಗೆ ಎರಡು ದಿನ ನಿಲ್ಲುವ ನೀರು. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಸಿಗದಿರುವ ವಸ್ತುವಿಲ್ಲ. ಈ ಊರು ಬದುಕನ್ನು ಕಟ್ಟುಕೊಟ್ಟಿದೆ. ಭವಿಷ್ಯ ರೂಪಿಸಿಕೊಡುವ ಕೆಲಸ, ಪುಟ್ಟ ಮನೆ ಮತ್ತು ಸಂಸಾರ, ಮಗಳೆಂಬ ಶಕ್ತಿ, ಓಡಾಡಲು, ತಿನ್ನಲು, ಹಾರಾಡಲು, ವೀಕೆಂಡ್ ಮಸ್ತಿ, ನೆಂಟರಿಷ್ಟರು, ಸ್ನೇಹಿತರು ಎಲ್ಲವೂ, ಎಲ್ಲರೂ ಇದ್ದಾರೆ ನಿಜ. ಇಷ್ಟಾಗ್ಯೂ ಯಾರಾದರೂ ಮಾತಿಗೆ ಸಿಕ್ಕಿ, ಯಾವೂರು ನಿಮ್ಮದು ಎಂದು ಕೇಳಿದಾಗ ಮಾತ್ರ, "ನಮ್ಮೂರು ಸಾಗರ" ಎಂದು ಲೀಲಾಜಾಲವಾಗಿ ಉತ್ತರಿಸಿಯಾಗಿರುತ್ತದೆ ಮನ. ಅಂಥದ್ದೇನಿದೆಯಪ್ಪಾ ಸಾಗರದಲ್ಲಿ ಇಲ್ಲಿ ಬೆಂಗಳೂರಿನಲ್ಲಿಲ್ಲದಿರುವುದು? ಎಂದು ನೀವು ಪ್ರಶ್ನಿಸಬಹುದು. ಖಂಡಿತವಾಗಿಯೂ ಪ್ರತಿಯೊಂದು ಪ್ರದೇಶವೂ ವಿಶಿಷ್ಟ ಮತ್ತು ವಿಭಿನ್ನ. ಆದರೂ ತುಲನೆ ಕೇವಲ ಭೌಗೋಳಿಕವಾಗಿ ಅಥವಾ ಭೌತಿಕವಾಗಿ ಅಲ್ಲ. ಈ ಹುಟ್ಟೂರು ಎನ್ನುವ ಮಾಯೆ ಮಾನಸಿಕವಾಗಿ ಮೂಡಿ ಬರುವಂತದ್ದು. ಮಳೆ ಬರುತ್ತಿಲ್ಲವೇ ಬೆಂಗಳೂರಿನಲ್ಲಿ? ಇದೆ. ಆದರೂ, ಅಪ್ಪಟ ಮಲೆನಾಡಿನ ಹಗಲು-ರಾತ್ರಿ ಧೋ ಎಂದು ಎಡೆಬಿಡದೆ ಸುರಿವ ಮಳೆಯ ಸದ್ದಿಗೆ ಮನ ಮುದಗೊಳ್ಳುವುದು ಸ...

ರಜೆ ಎಂದರೆ ಸಮಯದ ಸದುಪಯೋಗ

ಇಮೇಜ್
ಮಕ್ಕಳಿಗೆ ಪರೀಕ್ಷೆಗಳು ಮುಗಿದವು, ಇನ್ನು ಸಾಕಷ್ಟು ದಿನ ಬೇಸಿಗೆ ರಜೆ, ಮಕ್ಕಳು ಸ್ವಲ್ಪ ರೆಸ್ಟ್ ಮಾಡ್ಲಿ, ಅವರಿಗೆ ಬೇಕಾದ್ದನ್ನು ಮಾಡಿಕೊಳ್ಳಲಿ, ಊಟ ತಿಂಡಿಗೊಂದು ಬಂದರೆ ಸಾಕು ಎಂಬುದು ಸಾಮಾನ್ಯವಾಗಿ ನಾವು ಪೋಷಕರ ಮನಸ್ಸಿನಲ್ಲಿ ಬರುವ ವಿಚಾರ.  ಆದರೆ ಈ ಬೇಸಿಗೆ ರಜೆ ಯ ನಿಜವಾದ ಅರ್ಥವೇನು? ಮಕ್ಕಳು ಇದರ ಸದುಪಯೋಗ ಮಾಡಿಕೊಳ್ಳುವ ವಿಧಾನಗಳೇನು? ನಾವು ಹೇಗೆ ನಮ್ಮ ಮಕ್ಕಳಿಗೆ ರಜೆಯ ಸದುಪಯೋಗದ ಬಗ್ಗೆ ಮಾಹಿತಿ, ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡಬಹುದು ಎಂದುದರ ಕುರಿತು ಇಲ್ಲಿದೆ ಒಂದು ಸಮಗ್ರವಾದ ಟಿಪ್ಪಣಿ. ರಜೆ ಎಂದರೆ ವಿಶ್ರಾಂತಿ ಎಂದರ್ಥವಲ್ಲ. ರಜೆ ಎಂದರೆ ನಮ್ಮ ನಿತ್ಯ ಚಟುವಟಿಕೆಗಳಿಗಿಂತ, ಸ್ಥಿತ ಜೀವನ ಶೈಲಿಗಳಿಂದ ಸ್ವಲ್ಪ ಭಿನ್ನವಾಗಿ, ಮನಸ್ಸಿಗೆ ಖುಷಿಯೆನಿಸಿದ್ದನ್ನು,  ಉಪಯುಕ್ತವಾದ್ದನ್ನು, ಅಪೂರ್ಣವಾಗಿಟ್ಟುಕೊಂಡ ಕಾರ್ಯಗಳನ್ನು ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳುವುದು ಎಂದೂ ಅರ್ಥೈಸಬಹುದು. ಒಂದೇ ಮಾತಿನಲ್ಲೇ ಹೇಳುವುದಾದರೆ ರಜೆ ಎಂದರೆ, ಸಿಕ್ಕಿರುವ ಬಿಡುವಿನ ಸಮಯದ ಸದುಪಯೋಗ. ವಾಸ್ತವವಾಗಿ, ರಜೆ ಬಂದರೆ, ಮಕ್ಕಳು ಆ  ವರೆಗೆ ಒಗ್ಗಿಕೊಂಡ ಶಾಲೆ, ಶಿಕ್ಷಣ, ಹೊಂವರ್ಕ್, ಪರೀಕ್ಷಾ ಸಮಯದಲ್ಲಿ ಮಾಡಬೇಕಾಗುವ ಹೆಚ್ಚಿನ ತಯಾರಿ ಇತ್ಯಾದಿ ಶೈಕ್ಷಣಿಕ ಚಟುವಟಿಕೆಗಳಿಂದ ಹೊರಬಂದು, ತಮಗಿಷ್ಟವಾದ್ದನ್ನು ಮಾಡಿಕೊಂಡು, ಸ್ನೇಹಿತರೊಡನೆ ಹೆಚ್ಚಿನ ...

ಉಡುಗೊರೆ ನೀಡುವ ಮುನ್ನ

"ವಸಂತ ಮಾಸ ಬಂದಾಗ ಮಾವು ಚಿಗರಲೇ ಬೇಕು, ಕೋಗಿಲೆ ಹಾಡಲೇ ಬೇಕು, ಕಂಕಣ ಕೂಡಿ ಬಂದಾಗ ಮದುವೆಯಾಗಲೇ ಬೇಕು.... " ಎಂದು ನನಗರಿವಿಲ್ಲದಂತೆಯೇ ಹಾಡು ಗುನುಗುತ್ತಲಿತ್ತು ಕೈಯಲ್ಲಿದ್ಯಾವುದೋ ಮದುವೆ ಆಮಂತ್ರಣ ಪತ್ರಿಕೆಯನ್ನು ನೋಡಿ.. ಹೌದು! ಈಗೆಲ್ಲ ಮಂಗಳ ಕಾರ್ಯಗಳು ನಡೆಯುವ ಸಕಾಲ... ಆಮಂತ್ರಣ ಪಡೆದ ನಮಗೂ ಅತಿಥಿಗಳಾಗಿ ಇಂತಹ ಕಾರ್ಯಕ್ರಮಗಳಿಗೆ ಭಾಗವಹಿಸುವುದು, ತುಂಬಾ ಹತ್ತಿರದ ಕೌಟುಂಬಿಕ ಕಾರ್ಯಕ್ರಮಗಳಾಗಿದ್ದರೆ ಮನೆಯವರಾಗಿ ಅವುಗಳ ಸಡಗರ - ಸಂಭ್ರಮಗಳಲ್ಲಿ ಪಾಲ್ಗೊಳ್ಳುವುದು ಎಲ್ಲವೂ ನಡೆದೇ ಇರುತ್ತದೆ. ಇವೆಲ್ಲದರ ಜೊತೆಗೆ, ಕಾರ್ಯಕ್ರಮಗಳಲ್ಲಿ, ಉಡುಗೊರೆ ನೀಡುವುದು ಕೂಡ ನಮ್ಮಲ್ಲಿ ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಆದರೆ ಯಾರ್ಯಾರಿಗೆ, ಯಾವ ಯಾವ ಕಾರ್ಯಕ್ರಮಗಳಿಗೆ, ಎಷ್ಟೆಷ್ಟು ಮೌಲ್ಯದ ಉಡುಗೊರೆ ನೀಡುವುದು,  ಒಟ್ಟಾರೆ  ಏನು ಉಡುಗೊರೆ ಕೊಡುವುದು ಎಂಬುದು ಸಾಮಾನ್ಯವಾಗಿ ನಮಲ್ಲಿ ಉಧ್ಭವವಾಗುವ, ಅನೇಕ ಸಲ ಗೊಂದಲ ಉಂಟುಮಾಡುವ ಪ್ರಶ್ನೆ. ಹೀಗೊಂದು ಚಿಕ್ಕ ಟಿಪ್ಪಣಿ, ಉಪಯುಕ್ತ ಉಡುಗೊರೆಗಳ ಕುರಿತು. ಸಂದರ್ಭ ೧ :  ಲತಾ ಒಂದು ಟೆಲಿಫೋನ್ ಆಫೀಸ್ ನಲ್ಲಿ ಕೆಲಸ ಮಾಡುವ ಮಧ್ಯಮ ವರ್ಗದ ಮಹಿಳೆ. ಉನ್ನತ ಹುದ್ದೆಯಲ್ಲಿರುವ ಸಹೋದ್ಯೋಗಿಯ ಮಗನ ಮದುವೆಗೆ ಕರೆಯೋಲೆ ಸಿಕ್ಕಿದೆ. ಧಾಮ್ ಧೂಮ್ ಮದುವೆಯಂತೆ ಎಂಬ ಸುದ್ದಿ ಗಾಳಿಯಲ್ಲಿದೆ. ಚೆನ್ನಾಗಿ ಸಿಂಗಾರಗೊಂಡು ಹೋಗಬೇಕು, ಮದುವೆಗೆ ಉ...

ಸಿರಿಕಲ್ಚರ್ - ರೇಷ್ಮೆ ಸಾಕಾಣಿಕೆ

ಇಮೇಜ್
ಬೇಸಿಗೆ ರಜೆಗೆ ಸಾಮಾನ್ಯವಾಗಿ ಅಕ್ಕ ಮತ್ತು ನಾನು ಊರ ಕಡೆ ಸಿಕ್ಕೇ ಸಿಗುತ್ತೇವೆ.  ನಮ್ಮ ನಮ್ಮ ಮಕ್ಕಳು ಕೂಡ ಒಬ್ಬರಿಗೊಬ್ಬರು ಹೊಂದಿಕೊಂಡು ಪ್ರೀತಿಯಿಂದ ರಜೆಯನ್ನು ಕಳೆಯುತ್ತಾರೆ. ಪ್ರತಿ ಸಲವೂ, ಹೊಸತನ್ನು ಹುಡುಕುತ್ತೇವೆ ಸಂಭ್ರಮಿಸಲು, ಕಲಿಯಲು. ಈ ಸರ್ತಿಯ ರಜೆಯಲ್ಲಿ, ಸಂಬಂಧಿಕರೊಬ್ಬರು ಮಾಡಿಕೊಂಡಿರುವ ರೇಷ್ಮೆ ಸಾಕಾಣಿಕೆ ಕೃಷಿಯನ್ನು ನೋಡಲು ಹೋಗಿದ್ದೆವು. ಇದರ ಬಗ್ಗೆ ಕಂಡು, ಕೇಳಿ, ತಿಳಿದುಕೊಂಡ ವಿಷಯಗಳ ಪುಟ್ಟ ಸಾರಾಂಶ. ನಾಗೇಶ ಭಟ್ಟರು, ಹೊಡಬಟ್ಟೆ ಇವರು ಮೂಲತಃ ಕೃಷಿಕರು, ಅಡಿಕೆ, ಬಾಳೆ, ತೆಂಗು, ರಬ್ಬರ್, ಫೈನ್ಯಾಪಲ್ ಹೀಗೆ ವಿವಿಧ ಬಗೆಯ ಬೆಳೆಯನ್ನು ಬೆಳೆಯುತ್ತಿರುವ ಇವರು ಹೊಸತಾಗಿ ರೇಷ್ಮೆ ಹುಳುಗಳ ಸಾಕಾಣಿಕೆಯನ್ನು ಪ್ರಾರಂಭಿಸಿದ್ದಾರೆ ಎಂದು ಕೇಳಿಬಂದಾಗ, ಸಹಜವಾಗಿಯೇ ಕಿವಿ ನೆಟ್ಟಗಾಯಿತು. ಮಕ್ಕಳೆಂತೂ ಪಿಕ್ನಿಕ್ ಗೆ ಯಾವಾಗಲೂ ತಯಾರು. ಸರಿ, ಒಂದು ಹೊತ್ತಿನ ಭೇಟಿ ನಿರ್ಧರಿಸಿ ಹೊರೆಟೆವು. ಸಿರಿಕಲ್ಚರ್ (ರೇಷ್ಮೆ ಸಾಕಾಣಿಕೆ) ಜಾಗದ ಮುಂಭಾಗಕ್ಕೆಯೇ ನಮ್ಮನ್ನು ಹಚ್ಚಹಸಿರಿನಿಂದ ಸ್ವಾಗತಿಸಿದ್ದು, ಸಾಲಾಗಿ ತಲೆ ಎತ್ತಿ ನಿಂತ ಹಿಪ್ಪು ನೇರಳೆ ಗಿಡಗಳು (Mulberry plants). ಒಳ್ಳೆಯ ಜಾಗ ಮತ್ತು ನೀರಿನ ವ್ಯವಸ್ಥೆಯಿದ್ದರೆ, ರೇಷ್ಮೆ ಸಾಕಾಣಿಕೆ ಸುಲಭ ಸಾಧ್ಯ ಎಂದೇ ಮಾತು ಶುರುಮಾಡಿದ, ನಾಗೇಶಣ್ಣ, ನಮ್ಮನೆಲ್ಲಾ, ರೇಷ್ಮೆ ಸಾಕಾಣಿಕಾ ಮನೆಗೆ ಕರೆದೊಯ್ದರು. ಹೆಚ್ಚು ಬಿಸಿಲಿನ ಝಳ ತಾಗದ...

ಹಿರಿಯ ಜೀವದ ಶ್ರೀಮಂತಿಕೆ

ಪೂರಾ ಎಲುಬಿನ ಹಂದರ, ಸುಕ್ಕುಗಟ್ಟಿ ಹೋದ ಮುಖ, ಸುಮಾರಾಗಿ ಬಾಗಿ ಹೋದ ಬೆನ್ನು ಆದರೂ ಛಲವಿಟ್ಟು ಇಟ್ಟಿಗೆಯನ್ನೆಲ್ಲ ಹೊರುವ ಜವಾಬ್ದಾರಿ, ವಯಸ್ಸು ಸುಮಾರು ೬೫-೭೦ ಆಸುಪಾಸಿನಲ್ಲಿದ್ದಿರಬಹುದು. ಆ ಹಿರಿಯ ದೇಹಕ್ಕೆ ಜೀವನಾಂಶವೇ ಗಾರೆ ಕೆಲಸ. ಪ್ರತಿದಿನವೂ ನಾನು ನನ್ನ ಕೆಲಸಕ್ಕೆ ಹೋಗುವಾಗ ನಮ್ಮ ಮನೆಯ ಹತ್ತಿರದಲ್ಲಿ ಈ ವ್ಯಕ್ತಿಯನ್ನು ಗಮನಿಸುತ್ತಿದ್ದೆ. ಇತರರೆಲ್ಲ ತಮ್ಮ ಕೆಲಸಗಳನ್ನು ಮುಗಿಸಿ ತಮ್ಮ ತಮ್ಮ ಗೂಡಿಗೆ ಮರಳುತ್ತಿದ್ದರೆ, ಈತನದು ಮಾತ್ರ ಅಲ್ಲಿ ಮನೆ ಕಟ್ಟುವ ಸ್ಥಳದಲ್ಲೇ ಆಶ್ರಯ. ಒಬ್ಬನೇ ಒಂದು ತಾತ್ಕಾಲಿಕ ಶೆಡ್ ಮಾಡಿಕೊಂಡು, ಅವನ ಮಲಗುವ ಜಾಗ ಅಲ್ಲೇ ಮೂರು ದೊಡ್ಡ ಕಲ್ಲುಗಳನ್ನಿಟ್ಟುಕೊಂಡು, ೨-೩ ಪಾತ್ರೆಗಳನ್ನಿಟ್ಟುಕೊಂಡು ಗಂಜಿಯೇನೋ ಕಾಯಿಸಿ ಕುಡಿಯುತ್ತಿದ್ದ. ತಾನು ತಯಾರು ಮಾಡುವ ಅಡುಗೆಯಲ್ಲೇ ಒಂದಷ್ಟು ನಾಯಿಗೆ, ಹತ್ತಿರಕ್ಕೆ ಬರುವ ಬಿಡಾಡಿ ದನಕ್ಕೆ ಕೊಡುತ್ತಿದ್ದ. ನೋಡಿದಾಗ ಮರುಕವುಂಟಾಗುತ್ತಿತ್ತು. ದಿನನಿತ್ಯದ ನೋಟ, ಗಮನ - ಮುಗುಳ್ನಗೆವರೆಗೆ ತಲುಪಿ, ಮಗಳನ್ನು ಬೆಳಿಗ್ಗೆ ಬಿಸಲಿಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಅಲ್ಲೇ ನಿಂತು ಮಾತನಾಡಿಸುತ್ತಿದ್ದೆ. ಆತ ನನ್ನ ಮಗಳನ್ನು ಮಾತನಾಡಿಸಿ ಆಡಿಸಲು ಪ್ರಯತ್ನಿಸುತ್ತಿದ್ದ. ನನ್ನದು ಕನ್ನಡ ಭಾಷೆ. ಆತನದು ತಮಿಳು. ಹಾಗಾಗಿ ಇಬ್ಬರಿಗೂ ಪರಸ್ಪರರ ಭಾಷೆ ಹೆಚ್ಚು ತಿಳಿಯದಿದ್ದರೂ,  ಹೇಗೋ ಹರುಕು ಸಂಭಾಷಣೆ ನಡೆಯುತ್ತಿತ್ತು. ಇದ್ದೊಬ್ಬ ಗಂಡು ಮಗನನ್ನೂ ಅನಾರ...

ಮಕ್ಕಳ ಪರೀಕ್ಷೆ - ಪಾಲಕರ ತಯಾರಿ ಹೇಗೆ?

ಮಕ್ಕಳ ಶಿಕ್ಷಣದ ವಾರ್ಷಿಕ ಅವಧಿಯ ಕೊನೆಯ ಹಂತ, ಪರೀಕ್ಷಾ ಸಮಯ.. ಅತ್ಯಂತ ಮುಖ್ಯವಾದ ಘಟ್ಟ. ಈಗಿನ ಶಿಕ್ಷಣ ವಿಧಾನದ ಪರಿಸ್ಥಿತಿ ನೋಡಿದರೆ, ಮಕ್ಕಳಿಗೆ ಎಷ್ಟರ ಮಟ್ಟಿಗೆ ಪರೀಕ್ಷಾ ಆತಂಕವಿರುತ್ತದೋ ಅದಕ್ಕಿಂತ ದುಪ್ಪಟ್ಟು ಆತಂಕ ಪೋಷಕರಲ್ಲಿ ಇರುತ್ತದೆ. ತಮ್ಮ ಮಗು ಓದಿನಲ್ಲಿ ಮುಂಚೂಣಿಯಲ್ಲಿರಬೇಕೆಂಬ ಅಭಿಲಾಷೆ ಪ್ರತಿಯೊಬ್ಬ ಪಾಲಕನ ಒತ್ತಾಸೆಯಾಗಿರುತ್ತದೆ. ಎಲ್ಲಾ ಮಕ್ಕಳ ಬುದ್ಧಿ ಮಟ್ಟವು ಒಂದೇ ರೀತಿಯಲ್ಲಿ ಇರುವುದಿಲ್ಲವಾದ್ದರಿಂದ, ಹೆಚ್ಚಿನ ಸಿದ್ಧತೆ ಖಂಡಿತ ಅವಶ್ಯಕ. ಯುದ್ಧಕಾಲೇ ಶಸ್ತ್ರಾಭ್ಯಾಸ ಎಂಬಂತೆ ಪರೀಕ್ಷೆಯ ಕೊನೆಯ ವಾರದಲ್ಲಿ ಪುಸ್ತಕ ಹಿಡಿಯುವ ಮಕ್ಕಳಿಗೂ, ಗಾಬರಿಸಿ ಗದರಿಸಿ ಇನ್ನಷ್ಟು ಆತಂಕ ಪಟ್ಟು ಒತ್ತಡ ಹಾಕುವ ಪೋಷಕರಿಗೂ, ಇದೋ ಒಂದು ಚಿಕ್ಕ ಟಿಪ್ಪಣಿ, ಪರೀಕ್ಷೆ ಎಂಬುದಕ್ಕೆ ಮಕ್ಕಳ ಜೊತೆ ನಮ್ಮ ತಯಾರಿ, ಜವಾಬ್ದಾರಿಗಳೇನು ಎಂಬುದರ ಬಗ್ಗೆ. ೧. ಮಗುವಿನ ಶೈಕ್ಷಣಿಕ ಪ್ರಗತಿ ಬಗ್ಗೆ ಶಾಲೆಯಲ್ಲಿ ವಿಚಾರಣೆ.  ನಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣ ಕೊಡುವ ಭರವಸೆಯನ್ನೀಡುವ ಶಾಲೆಗೆ ಸೇರಿಸಿದರೆ ನಮ್ಮ ಜವಾಬ್ಧಾರಿ ಮುಗಿದೀತೇ? ಖಂಡಿತವಾಗಿಯೂ ಅಷ್ಟೇ ಸಾಲದು. ಮಕ್ಕಳ ಕಲಿಕೆಯ ಹಂತದಲ್ಲಿ ಅವರಷ್ಟೇ ನಾವು ಕೂಡ ಭಾಗಿಯಾಗಬೇಕು. ಪರೀಕ್ಷೆಗೆ ಇನ್ನೂ ಎರಡು ತಿಂಗಳಿರುವಂತೆಯೇ ಒಮ್ಮೆ ಶಾಲೆಯಲ್ಲಿ ಮಗುವಿನ ಪ್ರಗತಿಯ ಬಗ್ಗೆ ವಿಚಾರಿಸಿ, ನಮ್ಮ ಮಗುವಿಗೆ ಯಾವ ವಿಷಯ ಕಷ್ಟವಾಗುತ್ತಿದೆ, ಶಾಲೆಯಲ್ಲಿ ಕಲಿಕಾ ಸಾಮರ್ಥ್ಯ,...

ಮಕ್ಕಳ ಬೆರಳು ಚೀಪುವಿಕೆ

ಇಮೇಜ್
ನಾವು ಕಂಡಂತೆ ಸಾಮಾನ್ಯವಾಗಿ ಸಣ್ಣ ಪಾಪುಗಳು ಬಾಯಿಗೆ ಬೆರಳು ಹಾಕುವದನ್ನು ನೀವು ಗಮನಿಸಿರುತ್ತೀರಿ. ಅದರಲ್ಲೂ ಸುಮಾರು ೨೦% ಚಿಕ್ಕ ಮಕ್ಕಳು ಬೆರಳನ್ನು ಚೀಪುವುದನ್ನು ನಂತರದಲ್ಲೂ ಮುಂದುವರೆಸಿರುತ್ತಾರೆ. ಕೆಲವು ಮಕ್ಕಳು ಹೆಬ್ಬೆಟ್ಟನ್ನು ಚೀಪಿದರೆ, ಕೆಲ ಮಕ್ಕಳು ತೋರುಬೆರಳು, ಕಿರಿಬೆರಳುಗಳನ್ನೂ ಚೀಪುವುದು ಮಾಡುತ್ತಾರೆ.  ಹೇಗೆ ಮಗು ಈ ಅಭ್ಯಾಸವನ್ನು ಕಲಿಯುತ್ತದೆ? ಬೆರಳು ಚೀಪುವುದು ಒಳ್ಳೆಯದೇ ಕೆಟ್ಟದ್ದೇ? ನಾವು ಮಾಡಬೇಕಾದ್ದೇನು? ತಪ್ಪಿಸಲು ಮಾಡುವ ಪ್ರಯತ್ನಗಳು ಇತರ ವಿಷಯಗಳ ಬಗ್ಗೆ ಇಲ್ಲಿದೆ ನೋಡಿ ವಿವರಣೆ. ಬೆರಳು ಚೀಪುವ ಕಲಿಕೆ ಹೇಗೆ ಮತ್ತು ಯಾಕೆ? ಮಕ್ಕಳಲ್ಲಿ ಚೀಪುವ ಕ್ರಿಯೆ ಆ ಮಗು ತಾಯಿಯ ಹೊಟ್ಟೆಯಲ್ಲಿದ್ದಾಗಲೇ ಪ್ರಾರಂಭವಾಗಿರುತ್ತದೆ. ಜನನದ ನಂತರದಲ್ಲಿ ಸ್ತನ್ಯಪಾನ ಮಾಡುವ ಕೌಶಲ್ಯವನ್ನು ಹೊಂದಿರುವ ಮಗು ಅದೇ ಪ್ರಕಾರದಲ್ಲಿ, ತನ್ನ ಬಾಯನ್ನು ಮತ್ತು ನಾಲಿಗೆಯನ್ನು ಬಳಸಿ ಪ್ರತಿಯೊಂದು ವಸ್ತುವನ್ನು ಜೋರಾಗಿ ಜೀಪುವ (urge) ಸತತ ಪ್ರಯತ್ನದಲ್ಲಿರುತ್ತದೆ. ತಮ್ಮ ಕೈ, ಕೈ ಬೆರಳುಗಳು, ಆಡಿಸುತ್ತಾ ಬಾಯಿಯ ಬಳಿ ಸಿಕ್ಕ ಕಾಲು ಎಲ್ಲವನ್ನೂ ಇದೇ  ರೀತಿಯಲ್ಲಿ ಬಾಯಿಗೆ ಹಾಕಲು ಪ್ರಯತ್ನಿಸಿರುತ್ತದೆ. ಒಂದು ಸರಿ ತಮ್ಮ ಕೈಯ ಬೆರಳುಗಳ ಚೀಪುವಿಕೆಯನ್ನು ಕಂಡುಕೊಂಡ ಮೇಲೆ, ಮಗುವು ಅದನ್ನು ತನ್ನ ಆರಾಮಕ್ಕಾಗಿ ಮತ್ತೆ ಮತ್ತೆ ಬಳಸಲು ಪ್ರಯತ್ನಿಸುತ್ತದೆ.  ಒ...