ಪೋಸ್ಟ್‌ಗಳು

ಮಕ್ಕಳನ್ನು ದಂಡಿಸದಿರಿ

ಸರಿಯಾದ ಕ್ರಮದಲ್ಲಿ ಕುಳಿತು ಅಭ್ಯಾಸ ಮಾಡು' ಎಂದು ತಾಕೀತು ಮಾಡಿ ಶಿಕ್ಷೆ ನೀಡಿದ ತಾಯಿಯ ಮೇಲೆ ಕೋಪಗೊಂಡು ಹದಿನಾರು ವರ್ಷದ ಬಾಲಕನೊಬ್ಬ ಅಮ್ಮ ಕೊಡಿಸಿದ ಬ್ಯಾಟಿನಿಂದಲೇ ತಾಯಿಯನ್ನು ಹೊಡೆದು ಸಾಯಿಸಿದ ದಾರುಣ ಘಟನೆ ಉತ್ತರ ಪ್ರದೇಶದ ನೋಯಿಡಾ ದಿಂದ ವರದಿಯಾಗಿದೆ. ಕೀಳರಿಮೆ ಹಾಗೂ ಮತ್ಸರದಿಂದ ಹನ್ನೆರಡು ವರ್ಷದ ತನ್ನ ತಂಗಿಯನ್ನೂ ಜೊತೆಯಲ್ಲಿಯೇ ಕೊಂದಿದ್ದಾನೆ. ಘಟನೆಯ ವಿವರಣೆಯ ಹೀಗಿದೆ -  ನೋಯಿಡಾದ ಪ್ಲಾಟ್ ಒಂದರಲ್ಲಿ ಮಗ ಹಾಗೂ ಮಗಳಿನೊಂದಿಗೆ ತಂದೆ ತಾಯಿ ವಾಸವಿದ್ದಾರೆ. ಮಗನಿಗೆ ಓದಿನಲ್ಲಿ ಆಸಕ್ತಿ ಇಲ್ಲ. ಪರಿಣಾಮವಾಗಿ ಶೆಕ್ಷಣಿಕ ಪ್ರಗತಿ ಕಡಿಮೆ. ಮಗಳು ಓದಿನಲ್ಲಿ ಜಾಣೆ. ಪರಿಣಾಮ ಮನೆಯಲ್ಲಿ ಮಗಳಿಗೆ ಹೆಚ್ಚು ಪ್ರೀತಿ ಸಿಗುತ್ತಿದೆ. ತಂಗಿಯ ಪ್ರಗತಿಗೆ ಹೋಲಿಕೆ ಮಾಡಿ ಮಗನಿಗೆ ಯಾವಾಗಲೂ ನಿಂದನೆ, ಬೈಗುಳ. ಈ ಘಟನೆ ನಡೆದ ದಿನ ರಾತ್ರಿ ಊಟಕ್ಕೂ ಮೊದಲು ಮಗ ಅನಿಲ್ (ಹೆಸರು ಬದಲಾಯಿಸಲಾಗಿದೆ) ಸೋಫಾದ ಮೇಲೆ ಕುಳಿತು ಟೀವಿ ನೋಡುತ್ತಾ ಅಭ್ಯಾಸ ಮಾಡುತ್ತಿರುತ್ತಾನೆ. ಇದನ್ನು ಗಮನಿಸಿದ ತಾಯಿ ಕೊಠಡಿಗೆ ಹೋಗಿ, ಓದಿಕೊಳ್ಳುವಂತೆ ಮಗನಿಗೆ ತಾಕೀತು ಮಾಡಿದ್ದಾಳೆ. ಆದರೆ ಮಗ ತಾಯಿಯ ಮಾತನ್ನು ಕೇಳದೆ ಸೋಫಾ ಮೇಲೆ ಕುಳಿತು ಟಿವಿ ನೋಡುವುದನ್ನು ಮುಂದುವರೆಸಿಯೇ ಇದ್ದ. ಇದರಿಂದ ಕೋಪಗೊಂಡ ತಾಯಿ ಮಗನಿಗೆ ನಾಲ್ಕು ಏಟು ಕೊಟ್ಟು ಕೊಠಡಿಗೆ ಹೋಗಿ ಓದಿಕೊಳ್ಳುವಂತೆ ಮತ್ತೊಮ್ಮೆ ಎಚ್ಚರಿಸಿದ್ದಾಳೆ. ತಾಯಿಯ ಈ ಕ್ರಮಕ್ಕೂ ಮಗ ಬಗ್ಗದಿದ್ದಾ...

ಮಲೆಗಳಲ್ಲಿ ಮದುಮಗಳು

ಇಮೇಜ್
ಇಡೀ ರಾತ್ರಿ ನಾಟಕ ನಡೆಯುತ್ತಂತೆ...! ಕೊರೆವ ಚಳಿಯಲ್ಲಿ, ಬಿಂದಿಗೆ ಚಂದಿರನ ಬೆಳಕಿನಲಿ ಕುಳಿತು ಬೆಳಗಾಗುವ ವರೆಗೂ ನಾಟಕದಲ್ಲಿ ತಲ್ಲೀನಗೊಳ್ಳುವ ಅನುಭವವಂತೆ..ಅಮೋಘವಾದ ನಾಟಕ, ಪಾತ್ರಧಾರಿಗಳ ಅದ್ಭುತ ಅಭಿನಯ ೪ ಸ್ಟೇಜ್ ಗಳಲ್ಲಿ ಸಾಗುತ್ತದೆಯಂತೆ..ಎಂಬೆಲ್ಲ ಉತ್ಸಾಹಭರಿತ ವಿಷಯಗಳು ಕಳೆದ ಜನವರಿಯಿಂದಲೂ ಕೇಳುತ್ತಿದ್ದೆನಾದರೂ, ನಾಟಕವನ್ನು ನೋಡುವ ಸಂದರ್ಭ ಈ ಸರ್ತಿ ಸಿಕ್ಕಿಲ್ಲವೆಂದು ಸಣ್ಣ ನಿರಾಸೆ ಪಟ್ಟಿದ್ದು ನಿಜ. .ನಾಟಕ ಪ್ರದರ್ಶನದ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ ಎಂಬ ಸಿಹಿ ಸುದ್ದಿಯೊಂದಿಗೆ ಫೋನಿನಲ್ಲಿ ಮಾತನಾಡಿದ ಗೆಳತಿ ಸ್ವರ್ಣ ಜೊತೆ ಕಡೆಗೂ ಎಂದಾದರೂ ನೋಡಲೇ ಬೇಕು ಎಂದೆನಿಸಿದ್ದ  ನಾಟಕವನ್ನು ನೋಡುವ ಅವಕಾಶ ನಿನ್ನೆಗೆ ನನ್ನದಾಯಿತು. ೧೦ ತಾಸುಗಳ ನಾಟಕ ನೋಡಲು, ಮಗಳನ್ನು ರಾತ್ರಿ ಬಿಟ್ಟು ಹೋಗುವುದು ಹೇಗಪ್ಪಾ ಎಂದು ಯೋಚಿಸುತ್ತಿರುವಾಗ, ನೀನು ಹೋಗಿ ಬಾ ಎಂದು ಮನೆಯವರು ಬೆಂಬಲಿಸಿದಾಗ ಮನಸ್ಸು ಹಿರಿಹಿಗ್ಗಿತ್ತು. ಹಿಂದೆ ಓದಿದ್ದ ರಾಷ್ಟ್ರಕವಿ ಕುವೆಂಪು ರಚನೆಯ 'ಮಲೆಗಳಲ್ಲಿ ಮದುಮಗಳು' ಪುಸ್ತಕವನ್ನು ನಾಟಕದ ರೂಪದಲ್ಲಿ ನೋಡುವ ಅನುಭವವೇ super..!! ರಾತ್ರಿ ಎಲ್ಲ ಎಚ್ಚರವಿದ್ದು ಹೊರಾಂಗಣ ವೇದಿಕೆಯಲ್ಲಿ ಯಕ್ಷಗಾನ, ಬಯಲಾಟ ನೋಡುವ ಕಾಲವೇ ಈಗ ಕಡಿಮೆಯಾಗುತ್ತಿರುವಾಗ, ೮೧ ನೆಯ ಪ್ರದರ್ಶಕ್ಕೇರುತ್ತಿದ್ದ ನಾಟಕವೊಂದನ್ನು ನೋಡಲು ನಿನ್ನೆಗೂ ನೆರೆದ ಜನ ಸುಮಾರು ೬೦೦! ನನಗೋ ಇವೆಲ್ಲ ಮೊದಲ ಸಲದ ಅನುಭವ. ಜಾಕೆಟ್ ಏ...

ಮಕ್ಕಳ ಕಾರ್ಯಕ್ರಮ

ಇಮೇಜ್
ಮಗಳ ಶಾಲೆಯಲ್ಲಿ ಇವತ್ತು 'ಸ್ಪೋರ್ಟ್ಸ್ ಡೇ'. ಹೆಚ್ಚಿನ ಮಕ್ಕಳಿರುವ ಶಾಲೆಯಾದ್ದರಿಂದ ಇಂದು ಕೇವಲ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಕ್ಕಳಿಗೋಸ್ಕರ ಮಾತ್ರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಒಂದೇ ಮಾದರಿಯ ಯುನಿಫಾರ್ಮ್ಪು ಧರಿಸಿ ಕಂಗೊಳಿಸುತ್ತಿದ್ದ ಪುಟ್ಟ ಪುಟ್ಟ ಮುದ್ದು ಮುದ್ದು ಮಕ್ಕಳು, ಅವರುಗಳನ್ನೆಲ್ಲ ಶಿಸ್ತಿನಲ್ಲಿ ನಿಲ್ಲಿಸಲು ಶ್ರಮಿಸಿ ಕಡೆಗೂ ಯಶಸ್ವಿಗೊಂಡಿದ್ದ ಟೀಚೆರ್ರುಗಳು, ತಮ್ಮ ತಮ್ಮ ಮಕ್ಕಳ ಕವಾಯಿತು-ಆಟ-ಸ್ಪರ್ಧೆ ಎಲ್ಲವನ್ನೂ ನೋಡಿ ಸಂಭ್ರಮಿಸಲು ಕಣ್ಣು, ಕಣ್ಣಿಗಿಂತ ಹೆಚ್ಚಾಗಿ ಫೋಟೋಗೋಸ್ಕರ ಮೊಬೈಲ್ ಮತ್ತು ಕ್ಯಾಮೆರಾ ಎಲ್ಲವನ್ನೂ ರೆಡೀ ಹಿಡಿದು ನಿಂತ ನಮ್ಮಂತಹ ಪಾಲಕರು, ಮುಖ್ಯ ಅತಿಥಿಗಳಿಗೋಸ್ಕರ ಸಿಂಗಾರಗೊಂಡಿದ್ದ ವೇದಿಕೆ ಎಂಬಲ್ಲಿಗೆ ಸಕಲ ಸಿದ್ಧತೆಗಳೂ ಆಗಿದ್ದವು. ಸ್ಪೋರ್ಟ್ಸ್ ಡೇ ಕಾರ್ಯಕ್ರಮದ ಪ್ರಾರಂಭವಾಯಿತು. ಬಣ್ಣ ಬಣ್ಣದ ಟೇಪನ್ನು ಹಿಡಿದುಕೊಂಡ ನಮ್ಮ ನಮ್ಮ ಮಕ್ಕಳು ನೀಡಿದ ವಿನೋದಾವಳಿ ನಾವು ಪಾಲಕರೆಲ್ಲ ಬೀಗುವಂತೆ ಮಾಡಿತು. ಅಷ್ಟು ಚಿಕ್ಕ ಚಿಕ್ಕ ಮಕ್ಕಳ ಹಿಡಿದು, ಅವರಿಗೆ ಬಗೆ ಬಗೆಯ ತರಬೇತಿ ನೀಡಿ, ಕವಾಯಿತು ಮಾಡಿಸುವಲ್ಲಿನ ಶಿಕ್ಷಕರ ಪ್ರಯತ್ನ ಖಂಡಿತವಾಗಿಯೂ ಮೆಚ್ಚುವಂತದ್ದೇ. ನಂತರದಲ್ಲಿ ಮಕ್ಕಳ ವಯಸ್ಸಿಗನುಗುಣವಾಗಿ ಏರ್ಪಡಿಸಿದ್ದ ಒಂದಷ್ಟು ಆಟೋಟ ಸ್ಪರ್ಧೆಗಳು ನೆರೆದಿದ್ದ ಸಭಿಕರನ್ನೆಲ್ಲ ಅತೀವವಾಗಿ ರಂಜಿಸಿತು. ಖುಷಿ, ಉತ್ಸಾಹ, ಮಕ್ಕಳನ್ನು ಪ್ರೋತ್ಸಾಹ...

ಕುಂದಾದ್ರಿ ಬೆಟ್ಟ ಹತ್ತಿದ್ರೇನ್ರೀ??

ಇಮೇಜ್
ಸಮುದ್ರ ಮಟ್ಟಕ್ಕಿಂತ ೨೭೧೦ ಫೀಟ್ ಎತ್ತರದ ಬೆಟ್ಟವೊಂದರ ತುದಿಯಲ್ಲಿ ನೀವು ನಿಂತಿದ್ದೀರಿ. ನಿಮ್ಮೆದುರು 270 ಡಿಗ್ರಿ ಕೋನದಷ್ಟು ವಿಸ್ತಾರವಾಗಿ ಕಾಣಸಿಗುತ್ತಿರುವ ಪ್ರಕೃತಿಯ ವಿಹಂಗಮ ನೋಟ. ಕಣ್ಣು ಹಾಯಿಸಿದಷ್ಟೂ ಕಾಣುತ್ತಿರುವುದು ಹಾಸು ಹೊಕ್ಕಾಗಿರುವ ಹಸಿರು. ಕೆಳಗೆ ನೋಡಿದರೆ ಈ ಭುವಿಯೇ ಸ್ವರ್ಗ  ಎಂದೆನಿಸುವಂತೆ ಅಲ್ಲಲ್ಲಿ ಮಳೆ ಬಿದ್ದು ತುಂಬಿಕೊಂಡ ಕಂದು-ಕೇಸರಿ ಬಣ್ಣದ ನೀರಿನ ಕೋಡಿಗಳು, ಹರಿಯುತ್ತಿರುವ ನೀಲ ನದಿ, ತನ್ನದೇ ಆದ ರೀತಿಯಲ್ಲಿ ರಂಗವಲ್ಲಿ ಹಾಕಿಕೊಂಡ ಗಿಳಿಹಸಿರು ಗದ್ದೆಗಳ ಸಾಲು, ವರ್ಣಮಯ ಊರು-ಕೇರಿ ಹೀಗೆ ಮುಗಿಯದ ನೋಟ...ಹಾಂ! ಈ ನೋಟ ಅರೆಗಳಿಗೆ ಮಾತ್ರ; ಮತ್ತೊಂದು ಕ್ಷಣಕ್ಕೆ, ಬೆಳ್ಳನೆಯ ಹತ್ತಿಯಂತಹ ಮೇಘಗಳ ಹಿಂಡಿಂಡು ಸಾಲುಗಳು ನಮ್ಮನ್ನೂ ಕೂಡ ಆವರಿಸಿ, ಮುಸುಕು ಮುಚ್ಚಿಬಿಡುವ ಇಬ್ಬನಿಯ ಸುಂದರ ದೃಶ್ಯದ ಅನಾವರಣ. ಮಂಜಿನ ತಂಪಿನಿಂದುಂಟಾದ ಚಳಿಯ ಜೊತೆಗೆ, ಆ ಕ್ಷಣಕ್ಕೆ ಅಲ್ಲಿ ನಿಂತು ಕಾಣುತ್ತಿರುವ ಸಹ್ಯಾದ್ರಿಯ ಮಡಿಲ ನೋಡಿ ನವಿರೇಳುತ್ತಾ ಹೋಗುತ್ತದೆ ನಮ್ಮ ಮೈ ಮನ. ಇನ್ನು ಅಲ್ಲಿಂದ ನಿಂತು ನೋಡಲು ಕಾಣಸಿಗುವ ಸೂರ್ಯೋದಯ ಮತ್ತು ಸೂರ್ಯಾಸ್ತದ ಸೌಂದರ್ಯದ ವರ್ಣನೆಗೆ ಶಬ್ಧಗಳು ಸಿಗುವುದೇ ಕಷ್ಟ - ನಮ್ಮನ್ನು ಮೂಕವಿಸ್ಮಿತರನ್ನಾಗಿ ಮಾಡುವ ಆ ಚೆಲುವನ್ನು 'ಬಂಗಾರವೇ' ಸರಿ, ಎಂದು ಸುಮ್ಮನೆ ಕಣ್ತುಂಬ ಹೀರಿಕೊಂಡು ಮೌನಕ್ಕೆ ಶರಣಾಗುವುದ...

ಬತುಕಮ್ಮ ಹಬ್ಬ

ಇಮೇಜ್
ಬಿರು ಬಿಸಿಲಿನ ಊರು ಹೈದರಾಬಾದ್ ನ ನಂಟು ನನಗೆ ಪ್ರಾರಂಭವಾದ್ದು ೫ ವರ್ಷಗಳ ಹಿಂದೆ. ಅಕ್ಕ ನ ಕುಟುಂಬ ಹೈದರಾಬಾದಿನಲ್ಲಿ ವಾಸಿಸಲಾರಂಭಿಸಿದಾಗಿನಿಂದ, ವರ್ಷಕ್ಕೊಂದು ಸರ್ತಿಯಾದರೂ ರಜೆಗೆಂದು ಅಲ್ಲಿಗೆ ತೆರಳುವುದು ಸಾಮಾನ್ಯವಾಗಿದೆ ನನಗೆ. ಪ್ರತಿ ಸಲವೂ ಮಕ್ಕಳನ್ನು ಕಟ್ಟಿಕೊಂಡು ಸಿಕ್ಕ ಸಿಕ್ಕ ಸಂದರ್ಭ, ಸಿಕ್ಕ ಸಿಕ್ಕ ಸಮಯವನ್ನು ಹೈದರಾಬಾದ್ ಓಡಾಡಲು ಬಳಸಿಕೊಳ್ಳುತ್ತಿದ್ದೆವು. ಅಂತೆಯೇ ಈ ಸರ್ತಿ ಸೆಪ್ಟೆಂಬರ್ ತಿಂಗಳಿನಲ್ಲಿ ಅಲ್ಲಿಗೆ ಪ್ರಯಾಣ ಬಳಸಿದೆನಾದ್ದರಿಂದ, ಅಲ್ಲಿನ ಅತ್ಯಂತ ಸಡಗರದ ಮತ್ತು ಸ್ಥಳೀಯ ಹಬ್ಬವೊಂದರ ಪರಿಚಯ ನನಗಾಯಿತು. ಅದುವೇ, ಬತುಕಮ್ಮ ಹಬ್ಬ. ಬತುಕಮ್ಮ ಹಬ್ಬ ತೆಲಂಗಣಿಗರ ಒಂದು ವಿಶಿಷ್ಟವಾದ ಮತ್ತು ಅನನ್ಯವಾದ ನವರಾತ್ರಿ ಹಬ್ಬ. ಹಬ್ಬ ಎನ್ನುವುದಕ್ಕಿಂತಲೂ ಇದೊಂದು ಅಲ್ಲಿನ ಸಂಸ್ಕೃತಿಯ ಸ್ವರೂಪವಾಗಿದೆ. ತೆಲುಗು ಭಾಷೆಯ ಪ್ರಕಾರ, ಬತುಕು ಎಂದರೆ ಜೀವ ಮತ್ತು ಅಮ್ಮ ಎಂದರೆ ತಾಯಿ. ಜನನಿ ಎಂದು ಕರೆಯಲ್ಪಡುವ ಶಕ್ತಿ ದೇವತೆ ಮಹಾ ಗೌರಿಯನ್ನು ನಿಸರ್ಗ ದೇವತೆಯ ರೂಪದಲ್ಲಿ ಪೂಜಿಸಲ್ಪಡುವ ಆಚರಣೆ. ಮಹಾಲಯ ಅಮಾವಾಸ್ಯೆ ದಿನದಿಂದ ಪ್ರಾರಂಭವಾಗುವ ಈ ಹಬ್ಬಕ್ಕೆ, ಗೋಪುರದ ಮಾದರಿಯಲ್ಲಿ, ಬಿದಿರಿನ ಕಟ್ಟನ್ನು ನಿರ್ಮಿಸಿಕೊಂಡು ಅದರ ಸುತ್ತಲೂ ಏಳು ಹಂತಗಳಲ್ಲಿ, ಋತುಮಾನಕ್ಕೆ ತಕ್ಕಂತೆ ದೊರೆಯುವ, ಚೆಂಡು ಹೂವು, ಕನ್ನೇ  ಹೂವು, ಆವರಿಕೆ ಗಿಡದ ಹೂಗಳು ಮತ್ತಿತರ ವಿಶ...

ಕ್ವಿಲ್ಲಿಂಗ್ ಎಂಬ ಕೌಶಲ್ಯದ ಗರಿ

ಇಮೇಜ್
ಒಂದಷ್ಟು ವರ್ತುಲ, ಒಂದಷ್ಟು ತ್ರಿಭುಜ, ಮತ್ತೊಂದಷ್ಟು ಚೌಕ, ಆಯತ..ಒಮ್ಮೆ ಒತ್ತೊತ್ತಾಗಿ ಸುತ್ತಿಕೊಳ್ಳುವ ಬಿಗುಮಾನ, ಮತ್ತೊಮ್ಮೆ ಉದುರುದುರಾಗಿ ಅರಳಿಕೊಳ್ಳುವ ಸೌಂದರ್ಯ..ಒಮ್ಮೆ ಒಪ್ಪ ನೇರದ ದಿಟ್ಟೆ, ಮತ್ತೊಮ್ಮೆ ನಸು ನಾಚುವ ಓರೇ..ಬಳುಕಿನ ಬಳ್ಳಿಯಾಗಿ, ಮಿನುಗುವ ನಕ್ಷತ್ರವಾಗಿ, ಪ್ರೀತಿ ಹುಟ್ಟಿಸುವಂತಹ ಹೃದಯವಾಗಿ..ಹೀಗೆ ಸಾಗುತ್ತದೆ, ಕಾಗದವರಳಿ ಹೂವಾಗುವ ಕಥೆ.. ಬಣ್ಣ ಬಣ್ಣದ ತೆಳ್ಳನೆಯ ಪೇಪರ್ರಿನ ಪಟ್ಟಿಗಳು, ಸರ ಸರನೆ ಆಡಿಕೊಂಡು ಸುರುಳಿಯಾಗಿ ಸುತ್ತಿಕೊಂಡು, ನಮ್ಮ ಕೈಬೆರಳುಗಳ ಹಿತಸ್ಪರ್ಶಕ್ಕೊಳಗಾಗಿ ಮೆದುವಾಗಿ ಒತ್ತಿಸಿಕೊಂಡು, ವೈಯಾರದ ಆಕೃತಿಯನ್ನು ತಾಳಿ, ಅಂತಿಮವಾಗಿ ಅಂಟಿನೊಡನೆ ತನ್ನನ್ನು ತಾನೇ ಹೊಂದಿಸಿಕೊಂಡು ಕ್ಷಣಮಾತ್ರದಲ್ಲಿ ಸುಂದರ ಕಲಾಕೃತಿಯಾಗಿ ಅರಳಿಕೊಳ್ಳುವ ಒಂದು ಸುಂದರ ಮಾಯೆಯೇ ಕ್ವಿಲ್ಲಿಂಗ್ ಎಂಬ ಚಿತ್ತಾರ. ಈ ಕಲೆಯ ಸೃಷ್ಟಿಯ ಹಿಂದೆಯೂ ಒಂದು ರೋಚಕ ಕಥೆಯಿದೆ.ಇದೊಂದು ಒಟ್ಟಾರೆಯಾಗಿ ಹುಟ್ಟಿದ ಕುಶಲ ಕಲೆ. ಫ್ರಾನ್ಸ್ ಮತ್ತು ಇಟಲಿಯಲ್ಲಿ ಮೊಟ್ಟ ಮೊದಲು ಪ್ರಾರಂಭವಾದ ಕ್ವಿಲ್ಲಿಂಗ್ ಅಲ್ಲಿನ ಸನ್ಯಾಸಿನಿಯರು ತಾವು ಪುಸ್ತಕದ ಮೇಲ್ಪದರವನ್ನು ಮಡಚಿ ಹಾಕುವಾಗ, ಹೆಚ್ಚಾಗಿ ಉಳಿದು ಹರಿದ ನಿರುಪಯುಕ್ತ ಉದ್ದದ ಕಾಗದಗಳನ್ನು ಸುಮ್ಮನೆ ಸುರುಳಿಯಾಗಿಸಿ ಮಡಚಲಾರಂಭಿಸದರಂತೆ. ಅದರಿಂದ ದೊರೆತ ವಿನೂತನ ಸ್ವರೂಪದಿಂದ ಆಕರ್ಷಿತರಾಗಿ, ತಮ್ಮ ಗ್ರಂಥ ಪುಸ್ತಕಗಳ ಮೇಲಪುಟಗಳಿಗೆ ಅಲಂಕರಿಸಿ ಸಂಭ್ರಮಿಸಿದರಂತೆ. ಜೊತೆಗೆ ಇನ್ನಷ್ಟ...

ನಿಮ್ಮ ಮಗು ಸರಿಯಾಗಿ ಊಟ-ತಿಂಡಿ ಮಾಡುತ್ತಿಲ್ಲವೇ?

ಇಮೇಜ್
"ನಮ್ ಹುಡ್ಗ ಏನೂ ಸರಿ ಊಟನೇ ಮಾಡಲ್ಲ ಕಣ್ರೀ", "ತುಂಬಾ ಹಠ ನಂ ಮಗಳದ್ದು ಊಟ ತಿಂಡಿಗೆ,  ಅರ್ಧಕ್ಕರ್ಧ ಚೆಲ್ಲಿ ರಂಪಾಟ ಮಾಡ್ತಾಳೆ", "ಕಾರ್ಟೂನ್ ಇಲ್ಲ ಅಂದ್ರೆ ಊಟ ತಿಂಡೀನೇ ಮಾಡಲ್ಲ, ಮಗು ತಿಂದ್ರೆ ಸಾಕು ಅಂತ ಟಿ.ವಿ ಹಾಕ್ಕೊಂಡು, ಹೇಗೋ ಹೊಟ್ಟೆ ತುಂಬಿಸೋದು", "ಮನೆ ಊಟ ಸೇರಲ್ಲ, ಹೊರಗಡೆ ತಿಂಡಿ, ಕ್ಯಾನ್ಡಿ, ಚೊಕೊಲೇಟ್ಸ್ ಎಲ್ಲ, ಎಷ್ಟು ಚೆನ್ನಾಗಿ ತಿನ್ತಾಳೆ"."ಸ್ಕೂಲ್ ಇಂದ ಡಬ್ಬಿ ಹೇಗೆ ಕಳ್ಸಿದೀನೋ ಹಾಗೇ ವಾಪಸ್ ಬರತ್ತೆ", "ನಮ್ಮ ಮಗುವಿನದು, ಶಾಲೆಯಲ್ಲಿ ಡಬ್ಬಿ ಖಾಲಿಯಾಗತ್ತೆ, ಮನೇಲಿ ಊಟ ತಿಂಡಿಗೆ ರಗಳೆ", "ಊಟದ ಜೊತೆ ಚಿಪ್ಸ್ ಏನಾದ್ರು ಕುರುಕಲು ಬೇಕೇ ಬೇಕು ಇವನಿಗೆ, ಇಲ್ಲಾಂದ್ರೆ ಊಟನೇ ಆಗಲ್ಲ", "ಮಗು ಚೆನ್ನಾಗಿ ತಿಂತಾನೇ ಇಲ್ಲ,  ಡಾಕ್ಟರ್  ಕೇಳ್ಬೇಕ್ರಿ  ನಾನು, ತಿನ್ನಕ್ಕೆ ಏನಾದ್ರು ಟಾನಿಕ್ ಕೊಡ್ಸಬೇಕು", "ಹಾಲು ಕಂಡ್ರೆ ಮಾರು ದೂರ ಓಡ್ತಾಳೆ, ಬೈದು ಹೊಡೆದು ಎಲ್ಲಾ ಮುಗೀತು, ಪ್ರಯೋಜನವೇ ಇಲ್ಲ", "ಇತರರ ಮನೆಗಳಿಗೆ ಹೋದ್ರೆ ಮಾತ್ರ ಸ್ವಲ್ಪವೂ ತಕರಾರಿಲ್ಲದೆ ಚೆನ್ನಾಗಿ ತಿಂದು ಬರುತ್ತಾನೇರೀ ನಮ್ಮ ಮಗ, ಮನೇಲಿ ಮಾತ್ರ ಗಲಾಟೆ ಎಲ್ಲಾ ತಿಂಡಿಗಳಿಗೂ", "ಮನೇಲಿ ಯಾವ ತಿಂಡಿ ನೋಡಿದರೂ ಬೋರ್ ಅಂತಾಳೆ ಮಗಳು" ... ಅಬ್ಬಾ! ಇವೆಲ್ಲಾ ಮಕ್ಕಳ ಪೋಷಕರಾಗಿ ನಾವು ನಡೆಸುವ ಅತ್ಯಂತ ಸರ್ವೇ ಸಾಮ...