ಪೋಸ್ಟ್‌ಗಳು

ಗೋಡೆ ಬರಹ

"ಅದೇನ್ ಕೆಟ್ಟು ಬುದ್ಧಿ ಬಂದಿದ್ಯೇನೋ ನಮ್ಮನೆ ಪಾಪು ಗೆ, ಎಷ್ಟು ಬೈದ್ರೂ ಕಡೆಗೆ ಕದ್ದು ಮುಚ್ಚಿ ಆದ್ರೂ ಗೋಡೆ ಮೇಲೆಗೀಚಿ ಬರ್ತಾನೆ. ನೋಡಿ, ಗೋಡೆ ತುಂಬಾ ಬಣ್ಣ ಬಣ್ಣದ ಪೆನ್ಸಿಲ್ ತಗೊಂಡು ಎಷ್ಟ್ ಅಸಹ್ಯ ಮಾಡಿದಾನೆ,  ಯಾರಾದ್ರೂ ಬಂದ್ರೆ, ನಮ್ಮನೆ ನೋಡ್ಬಿಟ್ಟು, ಎಷ್ಟು ಗಲೀಜು ಅಂದ್ಕೊಂಡಾರು.." ಎನ್ನುತ್ತಾ ವಿಂಧ್ಯಾ ಮಗುಗೆ ಬೈಕೋತಾ ಇದ್ರೆ, ಮಗು ತಾನು 'ಖುಷಿ' ಪಟ್ಟು ಬರೆದ ಚಿತ್ರದಲ್ಲಿರುವ  ಕಥೆಗೆ ಯಾಕಿವರೆಲ್ಲ 'ಬೈತಾರೆ' ಅಂತ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ತನ್ನ ಕುರಿತಾದ ಬೈಗುಳವನ್ನ ಕೇಳಿ ಏನು ಮಾಡಬೇಕೆಂದು ತಿಳಿಯದೆ ತಲೆ ತಗ್ಗಿಸಿ ನಿಂತಿತ್ತು.  ಮಕ್ಕಳಿರುವ ಮನೆಗಳಲ್ಲಿ ಈ ರೀತಿಯ ಗೋಡೆ ಬರಹ ಸರ್ವೇ ಸಾಮಾನ್ಯ. ಕೆಲವು ಮನೆಯ ಎದುರು ಗೋಡೆಯಲ್ಲೇ ಮಕ್ಕಳು ಗೀಚಿ ಬರೆದ ಬ್ರಹ್ಮಾನ್ಡವಿದ್ದರೆ, ಕೆಲವು ಮನೆಯ ಒಳಕೋಣೆಯ ಮೂಲೆಗೊಡೆ ಇನ್ಯಾವುದೋ ಕಥೆ ಸಾರುತ್ತಿರುತ್ತದೆ. ನಿಮ್ಮ ಮನೆಯಲ್ಲೂ ಈ ರೀತಿ ಗೋಡೆ, ನೆಲದ ಮೇಲೆ ಗೀಚುವ ಅಭ್ಯಾಸದ ಮಕ್ಕಳಿದ್ದರೆ, ಅಥವಾ ನಿಮ್ಮ ಮಕ್ಕಳು ಸುಮ್ಮನೆ ಗೊತ್ತು ಗುರಿ ಇಲ್ಲದೆ ಗೀಚುತ್ತ ಕೂರುತ್ತಾರೆ ಎಂದರೆ ಅವರಿಗದನ್ನು ಕೆಟ್ಟದ್ದೆಂದು ತಡೆಯುವ, ತೆಗಳುವ ಮುನ್ನ ಗೀಚುವಿಕೆಯ ಕುರಿತಾಗಿ ಹೀಗೊಂದಷ್ಟು ವಿಷಯಗಳನ್ನು ತಿಳಿದುಕೊಳ್ಳಿ.  ಗೋಡೆ ಒಂದು ಬಿಳಿ ಹಾಳೆಯಂತೆ.  ಮಕ್ಕಳು ಹುಟ್ಟಿನಿಂದಲೂ ಅನ್ವೇಷಕರು. ಅವರಿಗೆ ಪ್ರತಿ...

ಜೀವನೋತ್ಸಾಹ

ಇಮೇಜ್
ಒಂದು ದಿನ ಬೆಳಿಗ್ಗೆ ಅಪ್ಪಾಜಿಯಿಂದ ಫೋನ್. "ನಾನು ಶಟ್ಲ್ ಬ್ಯಾಡ್ಮಿಂಟನ್ ಟೂರ್ನಿಮೆಂಟ್ ಗೆ ಬೆಂಗಳೂರಿಗೆ ಬರ್ತಾ ಇದ್ದಿ, ನಂಗ ಇಲ್ಲಿ ಸಾಗರದಲ್ಲೇ ಒಳಾಂಗಣ ಕೋರ್ಟ್ ಗೆ ಹೋಗಿ ಸ್ವಲ್ಪ ರೂಲ್ಸ್ ತಿಳ್ಕನ್ದು, ಪ್ರಾಕ್ಟೀಸ್ ಎಲ್ಲ ಮಾಡಿ ಬಂದ್ಯ ಈಗ. ಬರೋ ಶನಿವಾರನೇ ಟೂರ್ನಿಮೆಂಟ್. ಶುಕ್ರವಾರ ನಿಮ್ಮನೆಗೆ ಬಂದು, ಅಲ್ಲಿಂದ ಹೋಗ್ತಿ, ಊರಿಂದ ಏನಾದ್ರು ತಗಂಬರದಿದ್ರೆ ಹೇಳು....". ಹೀಗೆಲ್ಲಾ ಅಪ್ಪಾಜಿ ಆ ಕಡೆಯಿಂದ ಮಾತಾಡ್ತಾ ಇದ್ರೆ, ನನಗೆ ಈ ಕಡೆ ನನ್ನ ಕಿವಿ ನಾನೇ ನಂಬಲಾಗುತ್ತಿರಲಿಲ್ಲ. ೭೦ ಕ್ಕೆ ಹತ್ತಿರವಿರುವ ೬೯+ ವಯಸ್ಸಿನವ ನನ್ನಪ್ಪಾಜಿ. ಹವ್ಯಾಸಕ್ಕೆಂದು, ತನ್ನ ಮಿತ್ರರೊಡನೆ ಮನೆಯ ಪಕ್ಕದಲ್ಲೇ ಹಸನು ಮಾಡಿಕೊಂಡ ಖಾಲಿ ಸೈಟಿನಲ್ಲಿ ನಿತ್ಯವೂ ಶಟ್ಲ್ಕಾಕ್ ಆಟ ಆಡುತ್ತಾರೆ. ಮಲೆನಾಡಿನ ಮಳೆಗಾಲ.. ಹಾಗಾಗಿ ನಿತ್ಯ ಆಟಕ್ಕೂ ಸಧ್ಯ, ಬಿಡುವು.ಹಿರಿಯ ವಯಸ್ಸಿಗೆ ಸ್ಪರ್ಧೆಗೆಲ್ಲ ಭಾಗವಹಿಸುವ ಪರಿಶ್ರಮ ಬೇಕೇ, ಅದರಲ್ಲೂ ಇಲ್ಲಿ ನಡೆಯುವುದು ನುರಿತ ಆಟಗಾರರ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಮ್ಯಾಚ್ ಎಂಬೆಲ್ಲ ಯೋಚನೆಗಳು ಪುಂಖಾನುಪುಂಖವಾಗಿ ಮನಸ್ಸಿಗೆ ಬರುತ್ತಿದ್ದರೂ, ಆ ಕಡೆಯಿಂದ ಕೇಳುತ್ತಿದ್ದ ಅವನ ಆ ಕಾಂಫಿಡೆಂಟ್ ಧ್ವನಿಗೆ ಏನೂ ಮರು ಮಾತನಾಡಬೇಕೆನಿಸಲಿಲ್ಲ.ಅಪ್ಪಾಜಿಯ ಉತ್ಸಾಹ ನೋಡಿ, "ಅಡ್ಡಿಲ್ಲೆ ಬಾ" ಎಂದು ನಾನು, "ಖಂಡಿತ ಹೋಗ್ಬಾ" ಎಂದು ಅಕ್ಕನೂ ಹೇಳಿದ್...

ಒಂದು ಚಪ್ಪಾಳೆ 'ನಮ್ಮ ಮೆಟ್ರೋ' ಗೆ

ಇಮೇಜ್
ಒಂದು ಕಾಲವಿತ್ತು. ಬೆಂಗಳೂರಿನಿಂದ ನಾವು ಊರಿಗೆ ಹೋಗಬೇಕೆಂದರೆ, ನಮ್ಮ ಮನೆಯಿಂದ ಸಾಕಷ್ಟು ದೂರದಲ್ಲಿರುವ ಮೆಜೆಸ್ಟಿಕ್ ಗೆ ಸಿಟಿ ಬಸ್ ಹತ್ತಿ ಕುಳಿತು, ಹೊಂಡ ಗುಂಡಿ ರಸ್ತೆಗಳನ್ನು ದಾಟುತ್ತ(ಹಾರುತ್ತ), ಒಂದೆರಡು ಗಂಟೆ ಬೆಂಗಳೂರು ದರ್ಶನ ಫ್ರೀಯಾಗಿ ಪಡೆದು,  ಕಡೆಗೂ ತಲುಪಿದ ಸಮಯಕ್ಕೆ ಯಾವ ಬಸ್ ಸಿಕ್ಕರೂ ಅದೇ ನಮ್ಮ ಪುಣ್ಯ ಎಂದು ಭಾವಿಸಿ,  ಊರಿಗೆ ಪ್ರಯಾಣಿಸುತ್ತಿದ್ದೆವು. ಅದರಲ್ಲೂ ಹಬ್ಬಕ್ಕೆಲ್ಲ ಊರಿಗೆ ಹೋಗುವಾಗಲೆಂತೂ ಟ್ರಾಫಿಕ್ ಜಾಮನ್ನು ನೋಡಿಬಿಟ್ಟರೆ ತಲೆತಿರುಗುತ್ತಿತ್ತು. ಬಸ್ಸು ರಾತ್ರೆ ೧೦ ಗಂಟೆಗಿದ್ದರೂ, ೬.೪೫ ಗೆ ಆಫೀಸಿನಿಂದ ಬಂದಿದ್ದೆ ಮತ್ತೆ ಬ್ಯಾಗು ಹಿಡಿದು ಓಡುವುದೇ ನಮ್ಮ ಕೆಲಸ..ಇನ್ನು, ಮೆಜೆಸ್ಟಿಕ್ಗೆ  ಹೋಗುವ ಸಿಟಿ ಬಸ್ನ ಪ್ರಯಾಣದ ಸುಖ ಏನ್ ಕೇಳ್ತೀರಿ..!! ೫ ನಿಮಿಷಕ್ಕೆ ಒಂದಿಂಚು ಹಾದಿ ಸಾಗುತ್ತಿರುವ ಬಸ್ಸಿನಿಂದ ಮಧ್ಯದಲ್ಲೇ ಇಳಿದು, ಎದುರಿನ ದರ್ಶಿನಿಯಲ್ಲಿ ಸಿಂಗಲ್ ಇಡ್ಲಿ ತಿಂದು, ಒಂದು ಕಾಪಿ ಕುಡಿದು, ತೊಳೆದ ಕೈ ಒರೆಸಿಕೊಂಡು ಮತ್ತೆ ಅದೇ ಬಸ್ಸನ್ನು ನಾಲ್ಕೇ ಹೆಜ್ಜೆ ಮುಂದಕ್ಕಿಟ್ಟು ಹತ್ತಬಹುದಾದಂತಹ ಸೌಭಾಗ್ಯ.. ಆ ರೇಂಜಿಗೆ ಬಸ್ಸಿನ ವೇಗದ ಮಿತಿ. ಇದರ ಜೊತೆ, ಸರಿಯಾದ ಸಮಯಕ್ಕೆ ಬಸ್ ಸ್ಟಾಂಡ್ ತಲುಪುತ್ತೇವೋ ಇಲ್ಲವೋ  ಅನ್ನೋ ಟೆನ್ಶನ್. ಕೂತ ಬಸ್ಸಲ್ಲೇ ಸರ್ಕಾರದ ವ್ಯವಸ್ಥೆಯನ್ನು ಬೈಯುತ್ತಾ, ನಮ್ಮ ನಸೀಬನ್ನು ಹಳಹಳಿಸುತ್ತ ಇರುತ್ತಿದ್ದೆವು. ಈ ಹೈರಾಣ ಸಿಟಿ ಬಸ್ಸಿನ ಪ್ರಯಾಣಕ್ಕೊಂದೇ...

'ಮಾಸ್ಟರ್ ಮೈಂಡ್'!!

ಇಮೇಜ್
ಮಗಳು ಹುಟ್ಟಿದ ಮೇಲೆ ಮತ್ತೊಮ್ಮೆ ಬಾಲ್ಯವನ್ನು ಅನುಭವಿಸುತ್ತಿರುವ  ನನಗೆ ಮತ್ತು ನನ್ನ ಮನೆಯವರಿಗೆ, ಈಗಿನ ಕಾಲಕ್ಕೆ ಸಿಗುತ್ತಿರುವ ಮಕ್ಕಳ ಬಗೆ ಬಗೆಯ ಬೋರ್ಡ್ ಗೇಮ್ ಗಳು ಒಂದು ಸೋಜಿಗ. ಮಗಳಿಗೆ ಚಿಕ್ಕಂದಿನಿಂದ್ಲೂ ಜೋಡಣೆಯ ಮಾದರಿಯ ಆಟಗಳು ಹೆಚ್ಚಾಗಿ ಆಸಕ್ತಿಯಿರುವುದರಿಂದ, ಅವಳ ಕಪಾಟಿನ ತುಂಬಾ ಬೋರ್ಡ್ ಗೇಮ್ ಗಳ ಬಾಕ್ಸ್ ಗಳೇ ತುಂಬಿಕೊಂಡಿವೆ. ನಾವು (ವಯಸ್ಸಿನಲ್ಲಿ) ಮಕ್ಕಳಾಗಿದ್ದ ಕಾಲಕ್ಕೆ ಜೂಟಾಟ, ಕಣ್ಣಾಮುಚ್ಚಾಲೆ, ಮರಕೋತಿ ಆಟ, ಕುಂಟಾಬಿಲ್ಲೆ, ಅಡುಗೆ ಆಟ, ಮಣ್ಣಿನಲ್ಲಿ ದೇವಸ್ಥಾನ ಕಟ್ಟುವುದು, ಶಟಲ್ ಬ್ಯಾಡ್ಮಿಂಟನ್, ಸೈಕಲ್ಲು, ಖೋ ಖೋ, ಬಾಲು-ಬ್ಯಾಟು, ಕ್ರಿಕೆಟ್ ಹೀಗೆ ಎಲ್ಲ ಓಡಾಡಿ ಆಡುವ ಹೊರಾಂಗಣ ಆಟಗಳೇ ಹೆಚ್ಚಾಗಿ ರೂಡಿಯಲ್ಲಿದ್ದವು. ಆಟಿಕೆಗಳ ಕೊರತೆಯಿಲ್ಲದಿದ್ದರೂ ಸಾಗರದಂತ ಊರಲ್ಲಿ ವಿಶೇಷ ಆಟಿಕೆಗಳೇನೂ ಸಿಗ್ತಿರ್ಲಿಲ್ಲ. ಸಾಮಾನ್ಯವಾಗಿ ಸಿಗುತ್ತಿದ್ದ ಒಂದಷ್ಟು ಗೊಂಬೆಗಳು, ಕವಡೆ, ಚನ್ನೆಮಣೆ, ಹಾವು-ಏಣಿ, ಚದುರಂಗ, ಕೇರಂ ಬೋರ್ಡ್ ಇವೇ ಎಲ್ಲಾ ಎಲ್ಲರ ಮನೆಯಲ್ಲೂ ಲಭ್ಯವಿರುತ್ತಿದ್ದಆಟದ ಸಾಮಾನುಗಳು.  ಬೆಂಗಳೂರಿನಿಂದ ಸೋದರಮಾವ ರಜೆಯಲ್ಲಿ ಮಕ್ಕಳು ಆಡ್ಕೊಳ್ಳಿ ಎಂದು 'ಬಿಸಿನೆಸ್ ಬೋರ್ಡ್' ಆಟದ ಬಾಕ್ಸ್ ಅನ್ನು ಅಜ್ಜನ ಮನೆಗೆ ತಂದಾಗ, ಅದೇ ಒಂದು ದೊಡ್ಡ ವಿಶೇಷವಾದ ಆಟ ನಮಗಾಗ.. ಈಗೆಂತು ಬಿಡಿ, ಮಾರುಕಟ್ಟೆಯಲ್ಲಿ ನೂರಾರು ...

ಮಂಡಲದ ಸುತ್ತ..

ಇಮೇಜ್
ಇದೇನ್ರೀ ಮಂಡಲ ಎಂದರೆ? ಅಲ್ಲಿ ಇಲ್ಲಿ ಸುಮ್ಮನೆ ಏನೋ ಒಂದಷ್ಟು ಡಿಸೈನ್ ಮಾಡಿಕೊಂಡು, ರಂಗೋಲಿ ತರ ಚಿತ್ರ ಬಿಡಿಸಿ ಅದಕ್ಕೊಂದಷ್ಟು ಬಣ್ಣ ತುಂಬೋದ್ರಲ್ಲೇನಿದೇರೀ ದೊಡ್ಡ ವಿಶೇಷ ಎಂದಿರಾ?? ಕೇವಲ ಚಿತ್ರಗಳ ರೂಪದಲ್ಲಿಯೇ ಅದಮ್ಯವಾದ ಶಕ್ತಿಯನ್ನು ತುಂಬುವ, ನವ ಚೈತನ್ಯದ ರೂಪವಾದ ಮಂಡಲಗಳ ಬಗ್ಗೆ ಸ್ವಲ್ಪ ತಿಳಿಯೋಣ ಬನ್ನಿ..  ಮಂಡಲಗಳೆಂದರೆ ಅದೊಂದು ಕೇವಲ ಕೈಬರಹವಲ್ಲ ಅಥವಾ ಪೈಂಟ್ ಬ್ರಶ್ ನಿಂದ ಒಟ್ಟಾರೆಯಾಗಿ ಗೀಚಿ ರಚಿಸಿದ ಚಿತ್ರಪಟವಲ್ಲ. ಅದೊಂದು ಧ್ಯಾನ. ಹಾಂ! ಹೌದಾ..! ಧ್ಯಾನ ಎಂದರೆ ನಿಶ್ಯಬ್ಧವಾಗಿ ಕುಳಿತು ಏನೂ ಮಾಡದೆ ಅಥವಾ ಒಂದಷ್ಟು ಮಂತ್ರಗಳನ್ನುಚ್ಛರಿಸುತ್ತಾ ದೇವರ ಸ್ತುತಿಸುವ ಬಗೆ ಗೊತ್ತು.. ಚಿತ್ರ ಬರ್ಕೊಂಡು ಧ್ಯಾನ ಮಾಡೋದು..ಇದ್ಯಾವ ಬಗೆಯ ಹೊಸ ಅವತಾರ ಎಂದು ಕೇಳಿದೀರಾ? ನಮ್ಮದೇ ಚಿತ್ರಕಲೆಯಿಂದ ಮನಸ್ಸನ್ನು ಒಂದೆಡೆ ಕೇಂದ್ರೀಕೃತಗೊಳಿಸುವಲ್ಲಿ ಅಥವಾ ಒಂದು ಚಿತ್ರಪಟವನ್ನು ಕಂಡು ದೇಹ ಮತ್ತು ಮನಸ್ಸಿನಲ್ಲಿ ಚೈತನ್ಯ ಮೂಡುವಂತಾದರೆ, ಋಣಾತ್ಮಕ ಆಲೋಚನೆಗಳು ದೂರವಾಗಿ, ನಮ್ಮೊಳಗೇ ಇರುವ ಧಾರಣಶಕ್ತಿಯ ಅರಿವು ನಮಗೆ ಸಿಗುವಂತಾದರೆ, ಅದೇ ಧ್ಯಾನವೆನಿಸಿಕೊಳ್ಳುವುದಿಲ್ಲವೇ? ಸಂಸ್ಕೃತದಲ್ಲಿ ''ಮಂಡ' ಎಂದರೆ ಅಲಂಕರಿಸುವುದು ಅಥವಾ ಸಿದ್ಧಗೊಳಿಸುವುದು ಎಂದರ್ಥ. ಲ ಎಂಬ ಅಂತ್ಯಪ್ರತ್ಯಯ ದೊಂದಿಗೆ, ಮಂಡಲ ವೆಂದರೆ ಒಂದು ಪವಿತ್ರವಾದ ವರ್ತುಲ ...

ಬಾಲ್ಯದ ಯುಗಾದಿ

ಇಮೇಜ್
ನನ್ನ ವಯಸ್ಸಿನ ಆಸುಪಾಸಿನವರೇ ಮಾವನ ಮಕ್ಕಳು ಇರ್ತಿದ್ರಿಂದ  ನನ್ನ ಬಾಲ್ಯದ  ದಿನಗಳೆಲ್ಲ ಹೆಚ್ಚು ಕಳೆದದ್ದು ಅಜ್ಜನ ಮನೆಯಲ್ಲೇ. ಬೆಳಕು ಹರಿಯುವುದಕ್ಕೂ ಮುಂಚೆ ಪ್ರಾರಂಭವಾಗುತ್ತಿದ್ದ ಹಕ್ಕಿಪಿಕ್ಕಿಗಳ ಚಿಲಿಪಿಲಿ, 'ನಂಗಳನ್ನ ಮಾತಾಡ್ಸೋ' ಎಂದು ಮಾವನನ್ನು ಕೂಗಿ ಕರೆಯುತ್ತಿದ್ದ ದನಕರ್ಗಗಳ ಏರು ಧ್ವನಿಗೆ ನಾವು ಮಕ್ಕಳಿಗೂ ಕೂಡ ಎಚ್ಚರವಾಗಿ ಹೋಗುತ್ತಿತ್ತು. ೪. ೩೦ - ೫ ಗಂಟೆಗೆ ಎದ್ದುಕೊಂಡು, ಕತ್ತಲಲ್ಲಿ ಅಜ್ಜ ಅಮ್ಮುಮ್ಮ ಚುಂನೆಣ್ಣೆ ದೀಪ ಹಿಡ್ಕೊಂಡು ಅವ್ರವ್ರ ಕೆಲ್ಸ ಮಾಡ್ಕೋತ ಇದ್ರೆ, ಅರೆಗಣ್ಣು ಮಾಡಿಕೊಂಡು ಅವರ ಹಿಂಬಾಲಕರಾಗಿ ನಾವೆಲ್ಲಾ ಓಡಾಡ್ಕೊಂಡು ಇರುತ್ತಿದ್ದೆವು. ಹಿತ್ಲಕಡೆ ಒಲೆ ಉರಿಯ ಚಿಟಿ ಚಿಟಿ ಶಬ್ದ, ಅಡ್ಗೆ ಮನೆಲಿ ಅಮ್ಮುಮ್ಮ ಮಜ್ಜಿಗೆ ಕಡೆಯುವ ಶಬ್ದ, ಅತ್ತೆ ಹೆಬ್ಬಾಗಿಲ ಅಂಗಳವನ್ನು ಚರ್ ಚರ್ ಎಂದು ಕಡ್ಡಿಹಿಡಿಲಿ ಗುಡಿಸಿ ಸಗಣಿ ಹಾಕಿ ಹಾಳೆಕುಂಟಿನಿಂದ ಸಾರಿಸುವ ಶಬ್ದ, ದೇವ್ರ ಕೋಣೇಲಿ ಅಜ್ಜನ ಪೂಜೆಯ ಮಂತ್ರ,  ದನಕರುಗಳ ಕತ್ತಿನ ಗಂಟೆಗಳ ನಾದ ಇವೆಲ್ಲಾ ನನ್ನಲ್ಲಿ ಅಂತರ್ಗತವಾಗಿರುತ್ತಿದ್ದ ಅಜ್ಜನಮನೆಯ ನಿತ್ಯದ ದಿನಚರಿಯ ಶಬ್ದಗಳು. ಇವೆಲ್ಲದರ ಮಧ್ಯೆ,  "ಇವತ್ತು ತೋಲಾಗಿ ಹೂವು ಕೊಯ್ಕ್ಯ ಬನ್ನಿ ಹುಡ್ರಾ, ಹಬ್ಬ ಇವತ್ತು.. " ಎಂದೆನ್ನುವ ಅಮ್ಮಮ್ಮನ ಧ್ವನಿಗೆ ಥಟ್ ಎಂದು ಎಚ್ಚರಗೊಳ್ಳುತಿತ್ತು ಮನಸ್ಸು.   ಸಣ್ಣಾಕಿದ್ದ...

ಮಕ್ಕಳನ್ನು ದಂಡಿಸದಿರಿ

ಸರಿಯಾದ ಕ್ರಮದಲ್ಲಿ ಕುಳಿತು ಅಭ್ಯಾಸ ಮಾಡು' ಎಂದು ತಾಕೀತು ಮಾಡಿ ಶಿಕ್ಷೆ ನೀಡಿದ ತಾಯಿಯ ಮೇಲೆ ಕೋಪಗೊಂಡು ಹದಿನಾರು ವರ್ಷದ ಬಾಲಕನೊಬ್ಬ ಅಮ್ಮ ಕೊಡಿಸಿದ ಬ್ಯಾಟಿನಿಂದಲೇ ತಾಯಿಯನ್ನು ಹೊಡೆದು ಸಾಯಿಸಿದ ದಾರುಣ ಘಟನೆ ಉತ್ತರ ಪ್ರದೇಶದ ನೋಯಿಡಾ ದಿಂದ ವರದಿಯಾಗಿದೆ. ಕೀಳರಿಮೆ ಹಾಗೂ ಮತ್ಸರದಿಂದ ಹನ್ನೆರಡು ವರ್ಷದ ತನ್ನ ತಂಗಿಯನ್ನೂ ಜೊತೆಯಲ್ಲಿಯೇ ಕೊಂದಿದ್ದಾನೆ. ಘಟನೆಯ ವಿವರಣೆಯ ಹೀಗಿದೆ -  ನೋಯಿಡಾದ ಪ್ಲಾಟ್ ಒಂದರಲ್ಲಿ ಮಗ ಹಾಗೂ ಮಗಳಿನೊಂದಿಗೆ ತಂದೆ ತಾಯಿ ವಾಸವಿದ್ದಾರೆ. ಮಗನಿಗೆ ಓದಿನಲ್ಲಿ ಆಸಕ್ತಿ ಇಲ್ಲ. ಪರಿಣಾಮವಾಗಿ ಶೆಕ್ಷಣಿಕ ಪ್ರಗತಿ ಕಡಿಮೆ. ಮಗಳು ಓದಿನಲ್ಲಿ ಜಾಣೆ. ಪರಿಣಾಮ ಮನೆಯಲ್ಲಿ ಮಗಳಿಗೆ ಹೆಚ್ಚು ಪ್ರೀತಿ ಸಿಗುತ್ತಿದೆ. ತಂಗಿಯ ಪ್ರಗತಿಗೆ ಹೋಲಿಕೆ ಮಾಡಿ ಮಗನಿಗೆ ಯಾವಾಗಲೂ ನಿಂದನೆ, ಬೈಗುಳ. ಈ ಘಟನೆ ನಡೆದ ದಿನ ರಾತ್ರಿ ಊಟಕ್ಕೂ ಮೊದಲು ಮಗ ಅನಿಲ್ (ಹೆಸರು ಬದಲಾಯಿಸಲಾಗಿದೆ) ಸೋಫಾದ ಮೇಲೆ ಕುಳಿತು ಟೀವಿ ನೋಡುತ್ತಾ ಅಭ್ಯಾಸ ಮಾಡುತ್ತಿರುತ್ತಾನೆ. ಇದನ್ನು ಗಮನಿಸಿದ ತಾಯಿ ಕೊಠಡಿಗೆ ಹೋಗಿ, ಓದಿಕೊಳ್ಳುವಂತೆ ಮಗನಿಗೆ ತಾಕೀತು ಮಾಡಿದ್ದಾಳೆ. ಆದರೆ ಮಗ ತಾಯಿಯ ಮಾತನ್ನು ಕೇಳದೆ ಸೋಫಾ ಮೇಲೆ ಕುಳಿತು ಟಿವಿ ನೋಡುವುದನ್ನು ಮುಂದುವರೆಸಿಯೇ ಇದ್ದ. ಇದರಿಂದ ಕೋಪಗೊಂಡ ತಾಯಿ ಮಗನಿಗೆ ನಾಲ್ಕು ಏಟು ಕೊಟ್ಟು ಕೊಠಡಿಗೆ ಹೋಗಿ ಓದಿಕೊಳ್ಳುವಂತೆ ಮತ್ತೊಮ್ಮೆ ಎಚ್ಚರಿಸಿದ್ದಾಳೆ. ತಾಯಿಯ ಈ ಕ್ರಮಕ್ಕೂ ಮಗ ಬಗ್ಗದಿದ್ದಾ...