ಪೋಸ್ಟ್‌ಗಳು

ವಿಶ್ವ ಪರಿಸರ ದಿನ

ಪ್ರತಿವರ್ಷ ಜೂನ್ ೫ ರಂದು 'ವಿಶ್ವ ಪರಿಸರ ದಿನ' ವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಪರಿಸರದ ಮಹತ್ವ, ಮತ್ತದರ ರಕ್ಷಣೆಯ ಕುರಿತಾಗಿ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸಲು ಆಚರಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಸೋಶಿಯಲ್ ಸೈಟ್ ಅಂದು ಹಸಿರು ಮಯವಾಗಿತ್ತು!! ಹಲವರು ಹಸಿರು ಗಿಡ, ಮರ, ಪ್ರಾಣಿ, ಪಕ್ಷಿ, ನದಿ, ನೀರು, ಬೆಟ್ಟಗಳ ಫೋಟೋಸ್ ಹಾಕಿದ್ದರೆ, ಮತ್ತು ಕೆಲವರು ಶುಭಾಶಯಗಳೊಂದಿಗೆ ಮೆಸ್ಸೇಜಸ್ಗಳನ್ನು ತಿಳಿಸಿದ್ದರು. ಇನ್ನು ಕೆಲವರು ಪರಿಸರ ದಿನಾಚರಣೆಯ ಸಲುವಾಗಿ ತಾವು ತೆಗೆದುಕೊಂಡ ಕ್ರಮ, ಸ್ವಚ್ಛತಾ ಅಭಿಯಾನ, ಗಿಡ ನೆಡುವ ಕಾರ್ಯಕ್ರಮದ ಕುರಿತಾಗಿ ವರದಿ ನೀಡಿದ್ದು ಸಾಕಷ್ಟು ಸಂತಸ ತಂದಿತು. ಆದರೆ ನಾವು ಮಾತಲ್ಲಿ ಹೇಳುವಷ್ಟು, 'ಪ್ರಾಯೋಗಿಕವಾಗಿ' 'ನಮ್ಮ ಪರಿಸರ' ದ ಕುರಿತು ನಮ್ಮ ಆರೈಕೆ ಇದೆಯೇ? ಈಗ ನನ್ನದೇ ಒಂದು ಉದಾಹರಣೆ; ಮನೆ ಮಾಡುವಾಗ ಇಂಗು ಗುಂಡಿ, ಸೋಲಾರ್ ಬಳಕೆ ಇತ್ಯಾದಿ ನಮ್ಮ ಮನೆಯಲ್ಲಿ ಅಳವಡಿಕೆಯಾಯಿತಾದರೂ, ಬಹುಶ ಸರ್ಕಾರ ಕಡ್ಡಾಯಗೊಳಿಸುತ್ತಿದೆ ಎಂಬ ಉದ್ದೇಶದಿಂದ ಅಷ್ಟು ತಕ್ಷಣಕ್ಕೆ ಸಾಧ್ಯವಾಯಿತೇನೋ..ತಕ್ಕ ಮಟ್ಟಿಗೆ ಸುತ್ತ ಮುತ್ತಲಿನ ಪ್ರದೇಶ ಸ್ವಚ್ಛತೆ ಎಲ್ಲದರ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಬಾಲ್ಕನಿಯಲ್ಲಿ ಇರುವಷ್ಟು ಜಾಗದಲ್ಲಿ ಪುಟ್ಟ ಪುಟ್ಟ ಹಸಿರು ಗಿಡಗಳಿವೆ. ನೀರು, ಬೆಳಕು ಇತ್ಯಾದಿ ಸಂಪನ್ಮೂಲಗಳ ದುಂದು ಬಳಕೆಯಿಲ್ಲ. ಸಾಧ್ಯವಾದಷ್ಟರ ಮಟ್ಟಿಗೆ ಪ್ಲಾಸ್...

ನಾವು ಮತ್ತು ಮಕ್ಕಳ 'ಫೆವಿಕಾಲ್ ಬಾಂಡಿಂಗ್'

ಇಮೇಜ್
ಇದೊಂದು ಘಟನೆ ನೆನಪಿದೆ ನನಗೆ. ಆ ದಿನ ಸಂಜೆ, ಎಡಬಿಡದೆ ತೊಂದರೆ ಕೊಡುತ್ತಿದ್ದ ಶೀತಕ್ಕೆ ಸುಸ್ತಾಗಿ ಮಲಗಿದ್ದೆ. ಒಬ್ಬಳೇ ಆಟವಾಡಿಕೋ ಎಂಬ ಉತ್ತರ ಪದೇ ಪದೇ ಸಿಗುತ್ತ್ತಿದ್ದ ಕಾರಣಕ್ಕೋ ಅಥವಾ ಅಮ್ಮನ ಅವಸ್ಥೆ ನೋಡಿ ಕರುಣೆ ಬಂದೋ, "ಅಮ್ಮ ನಾನು ನಿಂಗೆ ಥಂಡಿ ಹೋಗಕ್ಕೆ ಹೆಲ್ಪ್ ಮಾಡ್ತಿ" ಎಂದಳು ಮಗಳು. "ಸರಿ, ಏನು ಮಾಡ್ತ್ಯಪ..?" ಎಂಬ ಪ್ರಶ್ನೆಗೆ "ನಾನು ಬಿಶಿನೀರ್ ಮಾಡ್ಕೊಡ್ತಿ.." ಎಂದು ಧೈರ್ಯವಾಗಿ ಉತ್ತರಿಸಿದಳು. ಮೂರಡಿಯೂ ಇಲ್ಲದ ಕೂಸಿಗೆ ಅಡುಗೆ ಮನೆಯ ಕಟ್ಟೆ ಕೂಡ ಎಟುಕದ ಸತ್ಯ ನನಗೆ ತಿಳಿದಿದ್ದರಿಂದ ಏನು ಮಾಡುತ್ತಾಳೆ ಎಂಬ ಸಹಜ ಕುತೂಹಲ ನನ್ನಲ್ಲೂ ಇತ್ತು. ಮಗಳು ಅಡುಗೆ ಮನೆಗೆ ಹೋಗಿ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ, "ಅಮ್ಮ, ಓವನ್ ಲೈಟ್ ಹಚ್ಕೊಡು ಬಾ.." ಎಂದು ಕೂಗಿ ಕರೆದಳು. ತಲೆನೋವಿನಿಂದ ತಲೆ ಒಂದೇ ಸಮನೆ ಸಿಡಿಯುತ್ತಿತ್ತು. ಶಬ್ದ, ಪ್ರಖರ ಬೆಳಕು, ದೈಹಿಕ ಶ್ರಮ ಯಾವುದೂ ಸಹ್ಯವಿರಲಿಲ್ಲ..ಅನಿವಾರ್ಯ, ಎದ್ದು ಹೋಗಿ ಮೈಕ್ರೋ ಓವನ್ ಆನ್ ಮಾಡಿಕೊಟ್ಟೆ. ನನ್ನ ಪಿಂಗಾಣಿಯ ಟೀ ಕಪ್ಪನ್ನು ಹುಡುಕಿ ಕೈಯಲ್ಲಿ ಹಿಡಿದುಕೊಂಡು ರೆಡಿ ನಿಂತಿದ್ದಳು ಮಗಳು. "ಅಮ್ಮ, ನೀರು ಹಿಡ್ಕೋಡ್ತ್ಯ ಪ್ಲೀಸ್..' ಎಂಬ ಮತ್ತೊಂದು ಕೋರಿಕೆ. ನೀರಿನ ಜಗ್ಗಿನಲ್ಲಿ ನೀರು ಖಾಲಿಯಾದ್ದಕ್ಕಾಗಿ, ಅವಳಿಗೆ ಕೈಗೆಟುಕದ ಎತ್ತರದ ಫಿಲ್ಟರ್ ನಿಂದ ನೀರು ತೆಗೆಯಲು ನನ್ನ ಸಹಾಯ ಬೇಕಿತ್ತು. ಮಗ್ ಗೆ ನೀರು ತ...

ಅಡುಗೆ ಸಂಭ್ರಮ

ಇಮೇಜ್
ನಾನು ನಮ್ಮ ಮನೆಯಲ್ಲಿನ ಮುದ್ದಿನ ತನುಜೆ, ಅಕ್ಕನ ಅನುಜೆ. ಚಿಕ್ಕಂದಿನಲ್ಲಿ ಅಮ್ಮ ಎಲ್ಲಾದರೂ ಹೊರಗಡೆ ಹೋದರೆ ಅಪ್ಪಾಜಿಯ ನಳಪಾಕ, ಅಪ್ಪಾಜಿಯೂ ಇಲ್ಲದಿದ್ದ ಪಕ್ಷದಲ್ಲಿ ಅಕ್ಕನ ಅಡುಗೆ ಪ್ರಯೋಗಗಳಿಂದ ನನ್ನ ಹೊಟ್ಟೆ ತುಂಬಿಸಿಕೊಳ್ಳಲು ಯಾವ ಕೊರತೆಯೂ ಆಗುತ್ತಿರಲಿಲ್ಲ. ಇದೆ ಕಾರಣಕ್ಕೋ ಏನೋ ಸುಮಾರು ೭-೮ ನೇ ತರಗತಿಗೆ ಬರುವ ವರೆಗೂ ಅಡುಗೆ ತಯಾರಿಸಲು ಸಹಾಯ ಮಾಡುವ ಕೆಲಸ ಮಾಡಿದ್ದಿದ್ದರೂ, ನಾನಾಗಿಯೇ ಯಾವುದೇ ಮುಖ್ಯ ಅಡುಗೆ ತಯಾರಿಸುವ ಗೋಜಿಗೆ ಹೋಗಿಯೇ ಇರಲಿಲ್ಲ. ಹಾಗೊಂದು ದಿನ ಅಪ್ಪಾಜಿ ಅಮ್ಮ ಕಡೆಗೆ ಅಕ್ಕನೂ ಮನೆಯಲ್ಲಿರದ ದಿನ. ಅಂದು ಗೆಳತಿಯೊಬ್ಬಳನ್ನು ಮನೆಗೆ ಕರೆತಂದಿದ್ದೆ. ಮನೆಯಲ್ಲಿ ಅಮ್ಮ ಅಡುಗೆ ತಯಾರಿಸಿಟ್ಟಿದ್ದರೆಂಬ ನೆನಪು. ಯಾವುದೋ ಮಾತಿನ ಮಧ್ಯೆ ಗೆಳತಿಯು ತನಗೆ ಅಲ್ಪಸ್ವಲ್ಪ ಪದಾರ್ಥಗಳನ್ನು ಮಾಡಲು ಬರುತ್ತದೆ ಎಂದು ತನ್ನ ಬಗ್ಗೆ ಹೇಳಿಕೊಂಡಾಗ, ನನ್ನ ಬಗ್ಗೆ ನನಗೆ ಸಂಕೋಚವೆನಿಸಿತು. ನಂತರಕ್ಕೆ, ಅದೆಲ್ಲಿಂದ ಬಂದ ಶೂರತನವೋ ತಿಳಿಯದು, "ನೀನು ನನಗೆ ಗೈಡ್ ಮಾಡು , ನಾನು ಪದಾರ್ಥ ತಯಾರು ಮಾಡುತ್ತೇನೆ" ಎಂದು ಅವಳಲ್ಲಿ ಕೇಳಿಕೊಂಡು, ಬದನೆ ಮತ್ತು ಬೆಳ್ಳುಳ್ಳಿ ಹಾಕಿ ಕಾಯಿ ಗೊಜ್ಜು ಮಾಡುವ ಪ್ಲಾನ್ ಮಾಡಿದೆವು. ತೆಂಗಿನ ತುರಿ ಸಿದ್ಧವಾಯಿತು. ಬದನೇಕಾಯಿ ಪಾತ್ರೆಯಲ್ಲಿಟ್ಟು ಬೇಯಿಸಿಕೊಂಡಿದ್ದಾಯಿತು. ಬೆಳ್ಳುಳ್ಳಿ ತಂದು ಬಿಡಿಸಿಕೊಂಡಿದ್ದಾಯಿತು. ಏನೂ ಅಡುಗೆ ಬಾರದ ನಾನು, ಚಿಟಿಕೆ ಉಪ್ಪಿಗೂ  ಗೆಳತಿಯ ಸೂಚನೆಗಳನ್ನು ತೆಗೆದ...

ಕೃಷ್ಣನ ಅವಲಕ್ಕಿ

ಇಮೇಜ್
ಆಗ ನಂಗೆ ಎಷ್ಟು ವರ್ಷ ಎಂದು ಸರಿ ನೆನಪಿಲ್ಲ. ಒಟ್ನಲ್ಲಿ ಸಣ್ಣಕ್ಕಿದ್ದೆ. ನಾವು ಮೊಮ್ಮಕ್ಕಳೆಲ್ಲ ಅಜ್ಜನ ಕೋಣೆಯಲ್ಲಿ ಸರಿದುಕೊಂಡು ಅಜ್ಜನ ಬಳಿ ಕೇಳಿ, ಪೌರಾಣಿಕ ಕಥೆ ಹೇಳಿಸಿಕೊಳ್ಳುವುದು ರೂಢಿಯಿತ್ತು. ಹಾಗೊಂದು ಸಾರಿ ಅಜ್ಜ ಕೃಷ್ಣ-ಸುಧಾಮರ ಗಾಢವಾದ ಗೆಳೆತನ, ಪ್ರೀತಿ, ಕೃಷ್ಣನ ಅವಲಕ್ಕಿಯ ಆಸೆ ಎಲ್ಲದರ ಕುರಿತು ಕಥೆಯನ್ನು ಹೇಳಿದ್ದ. ಕಥೆ ಕೇಳಿ ಸಾಕಷ್ಟು ದಿನಗಳು ಕಳೆದಿದ್ದರೂ, ಕೃಷ್ಣ ಹೇಗೆ ಸಣ್ಣ ಮಕ್ಕಳಂತೆ ಸುಧಾಮನ ಹೆಗಲಿನಿಂದ ಅವಲಕ್ಕಿ ಗಂಟನ್ನು ಅತ್ಯಂತ ಸಲಿಗೆಯಿಂದ ಕಸಿದುಕೊಂಡು ತೆಗೆದು ತಿಂದು ಖುಷಿ ಪಟ್ಟಿದ್ದ ಎಂಬ ಕಥೆಯ ಕಲ್ಪನಾ ಚಿತ್ರಣ ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡುತ್ತಿತ್ತು. ಒಂದು ದಿನ ಅದೇನು ಭಯಂಕರ ಆಲೋಚನೆ ಬಂದಿತೋ ಏನೋ, ಮಧ್ಯಾಹ್ನ ಅಮ್ಮುಮ್ಮ ಎಲ್ಲರೂ ಮಲಗಿದ್ದ ಸಮಯಕ್ಕೆ, ಎದ್ದು ಹೋಗಿ ಕಪಾಟಿನಲ್ಲಿ ಅವಲಕ್ಕಿಗಾಗಿ ಹುಡುಕಾಟ ನಡೆಸಿದೆ. ಕಡೆಗೆ ಮೇಲ್ಮೆತ್ತಿನ 'ಹೊಗೆ ಅಟ್ಟ' ದಲ್ಲಿ ಹುಡುಕಾಟದ ಅವಿರತ ಪ್ರಯತ್ನಕ್ಕೆ 'ಅರಳುಕಾಳು ಡಬ್ಬ' ಕೈಗೆ ಸಿಕ್ಕಿತ್ತು. ಚೂರು ಶಬ್ದ ಮಾಡದೆ, ಅಷ್ಟೊತ್ತು ಹುಡುಕಿದ್ದ ಶ್ರಮಕ್ಕೆ "ಕೃಷ್ಣ ನಿಗೆ ಅರಳಕಾಳು ಕೂಡ ಇಷ್ಟವಾಗುತ್ತದೆ' ಎಂಬ ನಿರ್ಧಾರವನ್ನು ನಾನೇ ತೆಗೆದುಕೊಂಡು, ಒಂದು ಲೋಟಕ್ಕೆ ಸ್ವಲ್ಪ ಅರಳಕಾಳು ಹಾಕಿಕೊಂಡು ಜಗಲಿಗೆ ಹೋದೆ. ಹಿಂದೆಲ್ಲ ಮನೆಯ ಜಗಲಿಯ ಗೋಡೆಗೆ ಸಾಲಾಗಿ ದೇವರ ಫೋಟೋಗಳನ್ನು ನೇತು ಹಾಕಿರುತ್ತಿದ್ದರು. ಕೃಷ್ಣನ ದೇವರ ಪಟದ ಕೆಳಗೋ ...

ಗೋಡೆ ಬರಹ

"ಅದೇನ್ ಕೆಟ್ಟು ಬುದ್ಧಿ ಬಂದಿದ್ಯೇನೋ ನಮ್ಮನೆ ಪಾಪು ಗೆ, ಎಷ್ಟು ಬೈದ್ರೂ ಕಡೆಗೆ ಕದ್ದು ಮುಚ್ಚಿ ಆದ್ರೂ ಗೋಡೆ ಮೇಲೆಗೀಚಿ ಬರ್ತಾನೆ. ನೋಡಿ, ಗೋಡೆ ತುಂಬಾ ಬಣ್ಣ ಬಣ್ಣದ ಪೆನ್ಸಿಲ್ ತಗೊಂಡು ಎಷ್ಟ್ ಅಸಹ್ಯ ಮಾಡಿದಾನೆ,  ಯಾರಾದ್ರೂ ಬಂದ್ರೆ, ನಮ್ಮನೆ ನೋಡ್ಬಿಟ್ಟು, ಎಷ್ಟು ಗಲೀಜು ಅಂದ್ಕೊಂಡಾರು.." ಎನ್ನುತ್ತಾ ವಿಂಧ್ಯಾ ಮಗುಗೆ ಬೈಕೋತಾ ಇದ್ರೆ, ಮಗು ತಾನು 'ಖುಷಿ' ಪಟ್ಟು ಬರೆದ ಚಿತ್ರದಲ್ಲಿರುವ  ಕಥೆಗೆ ಯಾಕಿವರೆಲ್ಲ 'ಬೈತಾರೆ' ಅಂತ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ತನ್ನ ಕುರಿತಾದ ಬೈಗುಳವನ್ನ ಕೇಳಿ ಏನು ಮಾಡಬೇಕೆಂದು ತಿಳಿಯದೆ ತಲೆ ತಗ್ಗಿಸಿ ನಿಂತಿತ್ತು.  ಮಕ್ಕಳಿರುವ ಮನೆಗಳಲ್ಲಿ ಈ ರೀತಿಯ ಗೋಡೆ ಬರಹ ಸರ್ವೇ ಸಾಮಾನ್ಯ. ಕೆಲವು ಮನೆಯ ಎದುರು ಗೋಡೆಯಲ್ಲೇ ಮಕ್ಕಳು ಗೀಚಿ ಬರೆದ ಬ್ರಹ್ಮಾನ್ಡವಿದ್ದರೆ, ಕೆಲವು ಮನೆಯ ಒಳಕೋಣೆಯ ಮೂಲೆಗೊಡೆ ಇನ್ಯಾವುದೋ ಕಥೆ ಸಾರುತ್ತಿರುತ್ತದೆ. ನಿಮ್ಮ ಮನೆಯಲ್ಲೂ ಈ ರೀತಿ ಗೋಡೆ, ನೆಲದ ಮೇಲೆ ಗೀಚುವ ಅಭ್ಯಾಸದ ಮಕ್ಕಳಿದ್ದರೆ, ಅಥವಾ ನಿಮ್ಮ ಮಕ್ಕಳು ಸುಮ್ಮನೆ ಗೊತ್ತು ಗುರಿ ಇಲ್ಲದೆ ಗೀಚುತ್ತ ಕೂರುತ್ತಾರೆ ಎಂದರೆ ಅವರಿಗದನ್ನು ಕೆಟ್ಟದ್ದೆಂದು ತಡೆಯುವ, ತೆಗಳುವ ಮುನ್ನ ಗೀಚುವಿಕೆಯ ಕುರಿತಾಗಿ ಹೀಗೊಂದಷ್ಟು ವಿಷಯಗಳನ್ನು ತಿಳಿದುಕೊಳ್ಳಿ.  ಗೋಡೆ ಒಂದು ಬಿಳಿ ಹಾಳೆಯಂತೆ.  ಮಕ್ಕಳು ಹುಟ್ಟಿನಿಂದಲೂ ಅನ್ವೇಷಕರು. ಅವರಿಗೆ ಪ್ರತಿ...

ಜೀವನೋತ್ಸಾಹ

ಇಮೇಜ್
ಒಂದು ದಿನ ಬೆಳಿಗ್ಗೆ ಅಪ್ಪಾಜಿಯಿಂದ ಫೋನ್. "ನಾನು ಶಟ್ಲ್ ಬ್ಯಾಡ್ಮಿಂಟನ್ ಟೂರ್ನಿಮೆಂಟ್ ಗೆ ಬೆಂಗಳೂರಿಗೆ ಬರ್ತಾ ಇದ್ದಿ, ನಂಗ ಇಲ್ಲಿ ಸಾಗರದಲ್ಲೇ ಒಳಾಂಗಣ ಕೋರ್ಟ್ ಗೆ ಹೋಗಿ ಸ್ವಲ್ಪ ರೂಲ್ಸ್ ತಿಳ್ಕನ್ದು, ಪ್ರಾಕ್ಟೀಸ್ ಎಲ್ಲ ಮಾಡಿ ಬಂದ್ಯ ಈಗ. ಬರೋ ಶನಿವಾರನೇ ಟೂರ್ನಿಮೆಂಟ್. ಶುಕ್ರವಾರ ನಿಮ್ಮನೆಗೆ ಬಂದು, ಅಲ್ಲಿಂದ ಹೋಗ್ತಿ, ಊರಿಂದ ಏನಾದ್ರು ತಗಂಬರದಿದ್ರೆ ಹೇಳು....". ಹೀಗೆಲ್ಲಾ ಅಪ್ಪಾಜಿ ಆ ಕಡೆಯಿಂದ ಮಾತಾಡ್ತಾ ಇದ್ರೆ, ನನಗೆ ಈ ಕಡೆ ನನ್ನ ಕಿವಿ ನಾನೇ ನಂಬಲಾಗುತ್ತಿರಲಿಲ್ಲ. ೭೦ ಕ್ಕೆ ಹತ್ತಿರವಿರುವ ೬೯+ ವಯಸ್ಸಿನವ ನನ್ನಪ್ಪಾಜಿ. ಹವ್ಯಾಸಕ್ಕೆಂದು, ತನ್ನ ಮಿತ್ರರೊಡನೆ ಮನೆಯ ಪಕ್ಕದಲ್ಲೇ ಹಸನು ಮಾಡಿಕೊಂಡ ಖಾಲಿ ಸೈಟಿನಲ್ಲಿ ನಿತ್ಯವೂ ಶಟ್ಲ್ಕಾಕ್ ಆಟ ಆಡುತ್ತಾರೆ. ಮಲೆನಾಡಿನ ಮಳೆಗಾಲ.. ಹಾಗಾಗಿ ನಿತ್ಯ ಆಟಕ್ಕೂ ಸಧ್ಯ, ಬಿಡುವು.ಹಿರಿಯ ವಯಸ್ಸಿಗೆ ಸ್ಪರ್ಧೆಗೆಲ್ಲ ಭಾಗವಹಿಸುವ ಪರಿಶ್ರಮ ಬೇಕೇ, ಅದರಲ್ಲೂ ಇಲ್ಲಿ ನಡೆಯುವುದು ನುರಿತ ಆಟಗಾರರ ಒಳಾಂಗಣ ಶಟಲ್ ಬ್ಯಾಡ್ಮಿಂಟನ್ ಮ್ಯಾಚ್ ಎಂಬೆಲ್ಲ ಯೋಚನೆಗಳು ಪುಂಖಾನುಪುಂಖವಾಗಿ ಮನಸ್ಸಿಗೆ ಬರುತ್ತಿದ್ದರೂ, ಆ ಕಡೆಯಿಂದ ಕೇಳುತ್ತಿದ್ದ ಅವನ ಆ ಕಾಂಫಿಡೆಂಟ್ ಧ್ವನಿಗೆ ಏನೂ ಮರು ಮಾತನಾಡಬೇಕೆನಿಸಲಿಲ್ಲ.ಅಪ್ಪಾಜಿಯ ಉತ್ಸಾಹ ನೋಡಿ, "ಅಡ್ಡಿಲ್ಲೆ ಬಾ" ಎಂದು ನಾನು, "ಖಂಡಿತ ಹೋಗ್ಬಾ" ಎಂದು ಅಕ್ಕನೂ ಹೇಳಿದ್...

ಒಂದು ಚಪ್ಪಾಳೆ 'ನಮ್ಮ ಮೆಟ್ರೋ' ಗೆ

ಇಮೇಜ್
ಒಂದು ಕಾಲವಿತ್ತು. ಬೆಂಗಳೂರಿನಿಂದ ನಾವು ಊರಿಗೆ ಹೋಗಬೇಕೆಂದರೆ, ನಮ್ಮ ಮನೆಯಿಂದ ಸಾಕಷ್ಟು ದೂರದಲ್ಲಿರುವ ಮೆಜೆಸ್ಟಿಕ್ ಗೆ ಸಿಟಿ ಬಸ್ ಹತ್ತಿ ಕುಳಿತು, ಹೊಂಡ ಗುಂಡಿ ರಸ್ತೆಗಳನ್ನು ದಾಟುತ್ತ(ಹಾರುತ್ತ), ಒಂದೆರಡು ಗಂಟೆ ಬೆಂಗಳೂರು ದರ್ಶನ ಫ್ರೀಯಾಗಿ ಪಡೆದು,  ಕಡೆಗೂ ತಲುಪಿದ ಸಮಯಕ್ಕೆ ಯಾವ ಬಸ್ ಸಿಕ್ಕರೂ ಅದೇ ನಮ್ಮ ಪುಣ್ಯ ಎಂದು ಭಾವಿಸಿ,  ಊರಿಗೆ ಪ್ರಯಾಣಿಸುತ್ತಿದ್ದೆವು. ಅದರಲ್ಲೂ ಹಬ್ಬಕ್ಕೆಲ್ಲ ಊರಿಗೆ ಹೋಗುವಾಗಲೆಂತೂ ಟ್ರಾಫಿಕ್ ಜಾಮನ್ನು ನೋಡಿಬಿಟ್ಟರೆ ತಲೆತಿರುಗುತ್ತಿತ್ತು. ಬಸ್ಸು ರಾತ್ರೆ ೧೦ ಗಂಟೆಗಿದ್ದರೂ, ೬.೪೫ ಗೆ ಆಫೀಸಿನಿಂದ ಬಂದಿದ್ದೆ ಮತ್ತೆ ಬ್ಯಾಗು ಹಿಡಿದು ಓಡುವುದೇ ನಮ್ಮ ಕೆಲಸ..ಇನ್ನು, ಮೆಜೆಸ್ಟಿಕ್ಗೆ  ಹೋಗುವ ಸಿಟಿ ಬಸ್ನ ಪ್ರಯಾಣದ ಸುಖ ಏನ್ ಕೇಳ್ತೀರಿ..!! ೫ ನಿಮಿಷಕ್ಕೆ ಒಂದಿಂಚು ಹಾದಿ ಸಾಗುತ್ತಿರುವ ಬಸ್ಸಿನಿಂದ ಮಧ್ಯದಲ್ಲೇ ಇಳಿದು, ಎದುರಿನ ದರ್ಶಿನಿಯಲ್ಲಿ ಸಿಂಗಲ್ ಇಡ್ಲಿ ತಿಂದು, ಒಂದು ಕಾಪಿ ಕುಡಿದು, ತೊಳೆದ ಕೈ ಒರೆಸಿಕೊಂಡು ಮತ್ತೆ ಅದೇ ಬಸ್ಸನ್ನು ನಾಲ್ಕೇ ಹೆಜ್ಜೆ ಮುಂದಕ್ಕಿಟ್ಟು ಹತ್ತಬಹುದಾದಂತಹ ಸೌಭಾಗ್ಯ.. ಆ ರೇಂಜಿಗೆ ಬಸ್ಸಿನ ವೇಗದ ಮಿತಿ. ಇದರ ಜೊತೆ, ಸರಿಯಾದ ಸಮಯಕ್ಕೆ ಬಸ್ ಸ್ಟಾಂಡ್ ತಲುಪುತ್ತೇವೋ ಇಲ್ಲವೋ  ಅನ್ನೋ ಟೆನ್ಶನ್. ಕೂತ ಬಸ್ಸಲ್ಲೇ ಸರ್ಕಾರದ ವ್ಯವಸ್ಥೆಯನ್ನು ಬೈಯುತ್ತಾ, ನಮ್ಮ ನಸೀಬನ್ನು ಹಳಹಳಿಸುತ್ತ ಇರುತ್ತಿದ್ದೆವು. ಈ ಹೈರಾಣ ಸಿಟಿ ಬಸ್ಸಿನ ಪ್ರಯಾಣಕ್ಕೊಂದೇ...