ಪೋಸ್ಟ್‌ಗಳು

ನೀವು ಪ್ರವಾಸಿಗರೇ?

ಮಕ್ಕಳಿಗೆ, ಕೆಲವು ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಈಗ ಕ್ರಿಸ್ತ್ಮಸ್ ರಜೆಯ ಸುಗ್ಗಿ.. ನೀವೀಗಾಗಲೇ ಯಾವುದಾದರೂ ಸ್ಥಳಕ್ಕೆ ಟ್ರಿಪ್ ಪ್ಲಾನ್ ಮಾಡಿರುತ್ತೀರಿ. ಓಡಾಡುವ  ಸ್ಥಳದ ಕುರಿತಾಗಿ ಒಂದಷ್ಟು ಮಾಹಿತಿ, ಓಡಾಡಲು ವಾಹನದ ವ್ಯವಸ್ಥೆ, ಅಲ್ಲಿ ಉಳಿಯಲು ಬೇಕಾದ ಹೋಟೆಲ್ಲು, ಹೋಂಸ್ಟೇ ಗಳ ವ್ಯವಸ್ಥೆ, ಟ್ರಿಪ್ನ ವೇಳೆ, ಹೊಟ್ಟೆ-ಬಟ್ಟೆಗಾಗಿ ಒಂದಷ್ಟು ಅವಶ್ಯಕತೆಯ ವಸ್ತುಗಳ ಶಾಪಿಂಗ್, ಆಟ-ಮೋಜು-ಮಸ್ತಿಗಾಗಿ ಬೇಕಾಗುವ ವಸ್ತುಗಳು, ಓಡಾಡಿದ ಸ್ಥಳದ ನೆನಪಿಗಾಗಿ ಚಿತ್ರ ಕ್ಲಿಕ್ಕಿಸಿಕೊಳ್ಳಲು ಮೊಬೈಲ್ , ಕ್ಯಾಮೆರಾ ಹೀಗೆ ಪ್ರವಾಸದ ಕುರಿತಾಗಿ ಸಾಕಷ್ಟು ಯೋಜನೆ ಮತ್ತು ತಯಾರಿ ನಡೆಸುತ್ತೀರಿ ಅಲ್ಲವೇ? ಕಡೆಗೂ ಬಯಸಿದ ಸ್ಥಳಕ್ಕೆ ಪ್ರವಾಸ ಕೈಗೊಂಡು ಸಂಚಾರ ಮಾಡಿ, ಆಟವಾಡಿ, ತಿಂದು-ಕುಡಿದು,ಸಂತೋಷ ಪಡುತ್ತೀರಿ. "ಭಾರೀ ಲಾಯ್ಕ್ ಇತ್ತು ನಮ್ಮ ಟ್ರಿಪ್" ಎಂದು ಇತರರೊಡನೆ ಹೇಳಿ, ಫೋಟೋ ತೋರಿಸಿ ಬೀಗುತ್ತೀರಿ..   ಹೀಗೆ ನಮ್ಮ ಲೆಕ್ಕದಲ್ಲಿ, 'ಪ್ರವಾಸವೊಂದು ಯಶಸ್ವಿಯಾಗಿತ್ತು' ಎಂಬುದು ನಾವು ಅರಿತ ಹೊಸ ವಿಷಯಗಳು, ಕಂಡು-ಅನುಭವಿಸಿದ ಸಂತೋಷ ಮತ್ತು ಮೋಜು, ಮತ್ತೊಂದಷ್ಟು ಫೋಟೋಗಳ ಕುರಿತಾಗಿಯಾಗಿರುತ್ತದೆ.  ಆದರೆ ಸ್ನೇಹಿತರೆ, ನಮ್ಮ ಟ್ರಿಪ್ ಯಶಸ್ವಿ ಮತ್ತು ಅರ್ಥಪೂರ್ಣವಾಗಿತ್ತು ಎಂಬುದರ ಮಾನದಂಡ ನಾವು...

ಪುರ ಲುಹುರ್ ಉಲುವಾಟು, ಬಾಲಿ

ಇಮೇಜ್
ಅದೊಂದು ದ್ವೀಪದ ತುತ್ತತುದಿ. ಅಲ್ಲಿದೆ ಒಂದು ಸಮುದ್ರ ಮಟ್ಟಕ್ಕಿಂತ ಸಾಕಷ್ಟು ಎತ್ತರದಲ್ಲಿರುವ  ಬ್ರಹತ್ ಕಡಿಬಂಡೆ. ಅದರ ಮೇಲೆ, ಮನಸ್ಸು ಪ್ರಫುಲ್ಲಗೊಳ್ಳುವಂತಹದೊಂದು ದೇವಾಲಯ. ದೇವಾಲಯದಾಚೆಗೆ ಕಣ್ಣು ಹಾಯಿಸಿದಷ್ಟು ದೂರವೂ, ಮುಗಿಯದ ಸಾಗರದ ತುಂಬು ನೋಟ. ಕೆಳಗಡೆ ನಿರಂತರವಾಗಿ ಬಂಡೆಗೆ ಬಂದಪ್ಪಳಿಸುವ ಶುಭ್ರ ಅಲೆಗಳ ಮೋಹಕ ಆಟ. ಕಿವಿಗೊಟ್ಟು ಆಲೈಸಲು, ತನ್ನತಾನದಲಿ ಶಬ್ದ ಮಾಡುವ ನೀಲ ಶಾಂತ ಅಲೆಗಳ ಹೊಯ್ದಾಟ.. ಅಲ್ಲೆಲ್ಲೋ ಆಗಾಧ ಸಾಗರದ ಮಧ್ಯದಲ್ಲಿ ಸಣ್ಣ ಬಿಳಿ ಹರಳಿನಂತೆ ಕಂಡು, ಕ್ರಮೇಣ ಪುಟ್ಟ ಚುಕ್ಕೆಯಂತೆ ಮಾಯವಾಗುವ ಹಡಗು. ಸೂರ್ಯ ತಂಪಾಗುವ ಸಮಯಕ್ಕೆ, ಆಕಾಶದ ತುಂಬೆಲ್ಲ ರಂಗಿನ ಕೆಂಬಣ್ಣ; ಅದನ್ನು ಪ್ರತಿಫಲಿಸುವ ಸಮುದ್ರವೋ ಬಂಗಾರದ ಬಣ್ಣ.. ಸಂಜೆಯ ತಣ್ಣನೆ ಬೀಸುವ ಗಾಳಿಗೆ ಮೈ ಒಡ್ಡಿ ನಿಂತರೆ ಸಾಕು, ನಮ್ಮ ಸುತ್ತಮುತ್ತಲು ನಮ್ಮಂತೆಯೇ ಸಾವಿರಾರು ವೀಕ್ಷಕರಿದ್ದರೂ, ಆ ಸ್ಥಳದ ಸೌಂದರ್ಯಕ್ಕೆ ಮನಸೋತು ನಮ್ಮ ಉಪಸ್ಥಿತಿಯೇ ಮರೆಯುವಂತಹ ಅನುಭಾವ.. ದಿಗಂತದಂಚಿನಲ್ಲಿ ಅಸ್ತಮಿಸುವ ದಿನಕರನನ್ನು ಮನದಣಿಯೆ ನೋಡುವಾಗ, ಮಹಾಸಾಗರದ ಅಲೆಗಳ ನಿನಾದವನ್ನು ಆಲೈಸುವಾಗ, ಪ್ರಕೃತಿಯೇ ದೈವವೆಂದು ಆರಾಧಿಸುವ ದೇಗುಲದ ಶಕ್ತಿ ತರಂಗಗಳನ್ನು ಅನುಭವಿಸುವಾಗ ಉಂಟಾಗುವ ವಿಸ್ಮಿತ ಮೌನ ಮತ್ತು ಈ ಎಲ್ಲ ಚೆಲುವನ್ನು ಹೀರಿಕೊಂಡು ಮನಸ್ಸಿಗೆ ಸಿಗುವ...

ವಿಶ್ವ ಪರಿಸರ ದಿನ

ಪ್ರತಿವರ್ಷ ಜೂನ್ ೫ ರಂದು 'ವಿಶ್ವ ಪರಿಸರ ದಿನ' ವಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಪರಿಸರದ ಮಹತ್ವ, ಮತ್ತದರ ರಕ್ಷಣೆಯ ಕುರಿತಾಗಿ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅರಿವು ಮೂಡಿಸಲು ಆಚರಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಸೋಶಿಯಲ್ ಸೈಟ್ ಅಂದು ಹಸಿರು ಮಯವಾಗಿತ್ತು!! ಹಲವರು ಹಸಿರು ಗಿಡ, ಮರ, ಪ್ರಾಣಿ, ಪಕ್ಷಿ, ನದಿ, ನೀರು, ಬೆಟ್ಟಗಳ ಫೋಟೋಸ್ ಹಾಕಿದ್ದರೆ, ಮತ್ತು ಕೆಲವರು ಶುಭಾಶಯಗಳೊಂದಿಗೆ ಮೆಸ್ಸೇಜಸ್ಗಳನ್ನು ತಿಳಿಸಿದ್ದರು. ಇನ್ನು ಕೆಲವರು ಪರಿಸರ ದಿನಾಚರಣೆಯ ಸಲುವಾಗಿ ತಾವು ತೆಗೆದುಕೊಂಡ ಕ್ರಮ, ಸ್ವಚ್ಛತಾ ಅಭಿಯಾನ, ಗಿಡ ನೆಡುವ ಕಾರ್ಯಕ್ರಮದ ಕುರಿತಾಗಿ ವರದಿ ನೀಡಿದ್ದು ಸಾಕಷ್ಟು ಸಂತಸ ತಂದಿತು. ಆದರೆ ನಾವು ಮಾತಲ್ಲಿ ಹೇಳುವಷ್ಟು, 'ಪ್ರಾಯೋಗಿಕವಾಗಿ' 'ನಮ್ಮ ಪರಿಸರ' ದ ಕುರಿತು ನಮ್ಮ ಆರೈಕೆ ಇದೆಯೇ? ಈಗ ನನ್ನದೇ ಒಂದು ಉದಾಹರಣೆ; ಮನೆ ಮಾಡುವಾಗ ಇಂಗು ಗುಂಡಿ, ಸೋಲಾರ್ ಬಳಕೆ ಇತ್ಯಾದಿ ನಮ್ಮ ಮನೆಯಲ್ಲಿ ಅಳವಡಿಕೆಯಾಯಿತಾದರೂ, ಬಹುಶ ಸರ್ಕಾರ ಕಡ್ಡಾಯಗೊಳಿಸುತ್ತಿದೆ ಎಂಬ ಉದ್ದೇಶದಿಂದ ಅಷ್ಟು ತಕ್ಷಣಕ್ಕೆ ಸಾಧ್ಯವಾಯಿತೇನೋ..ತಕ್ಕ ಮಟ್ಟಿಗೆ ಸುತ್ತ ಮುತ್ತಲಿನ ಪ್ರದೇಶ ಸ್ವಚ್ಛತೆ ಎಲ್ಲದರ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಬಾಲ್ಕನಿಯಲ್ಲಿ ಇರುವಷ್ಟು ಜಾಗದಲ್ಲಿ ಪುಟ್ಟ ಪುಟ್ಟ ಹಸಿರು ಗಿಡಗಳಿವೆ. ನೀರು, ಬೆಳಕು ಇತ್ಯಾದಿ ಸಂಪನ್ಮೂಲಗಳ ದುಂದು ಬಳಕೆಯಿಲ್ಲ. ಸಾಧ್ಯವಾದಷ್ಟರ ಮಟ್ಟಿಗೆ ಪ್ಲಾಸ್...

ನಾವು ಮತ್ತು ಮಕ್ಕಳ 'ಫೆವಿಕಾಲ್ ಬಾಂಡಿಂಗ್'

ಇಮೇಜ್
ಇದೊಂದು ಘಟನೆ ನೆನಪಿದೆ ನನಗೆ. ಆ ದಿನ ಸಂಜೆ, ಎಡಬಿಡದೆ ತೊಂದರೆ ಕೊಡುತ್ತಿದ್ದ ಶೀತಕ್ಕೆ ಸುಸ್ತಾಗಿ ಮಲಗಿದ್ದೆ. ಒಬ್ಬಳೇ ಆಟವಾಡಿಕೋ ಎಂಬ ಉತ್ತರ ಪದೇ ಪದೇ ಸಿಗುತ್ತ್ತಿದ್ದ ಕಾರಣಕ್ಕೋ ಅಥವಾ ಅಮ್ಮನ ಅವಸ್ಥೆ ನೋಡಿ ಕರುಣೆ ಬಂದೋ, "ಅಮ್ಮ ನಾನು ನಿಂಗೆ ಥಂಡಿ ಹೋಗಕ್ಕೆ ಹೆಲ್ಪ್ ಮಾಡ್ತಿ" ಎಂದಳು ಮಗಳು. "ಸರಿ, ಏನು ಮಾಡ್ತ್ಯಪ..?" ಎಂಬ ಪ್ರಶ್ನೆಗೆ "ನಾನು ಬಿಶಿನೀರ್ ಮಾಡ್ಕೊಡ್ತಿ.." ಎಂದು ಧೈರ್ಯವಾಗಿ ಉತ್ತರಿಸಿದಳು. ಮೂರಡಿಯೂ ಇಲ್ಲದ ಕೂಸಿಗೆ ಅಡುಗೆ ಮನೆಯ ಕಟ್ಟೆ ಕೂಡ ಎಟುಕದ ಸತ್ಯ ನನಗೆ ತಿಳಿದಿದ್ದರಿಂದ ಏನು ಮಾಡುತ್ತಾಳೆ ಎಂಬ ಸಹಜ ಕುತೂಹಲ ನನ್ನಲ್ಲೂ ಇತ್ತು. ಮಗಳು ಅಡುಗೆ ಮನೆಗೆ ಹೋಗಿ ಎಲ್ಲವನ್ನು ಕೂಲಂಕುಷವಾಗಿ ಪರಿಶೀಲಿಸಿ, "ಅಮ್ಮ, ಓವನ್ ಲೈಟ್ ಹಚ್ಕೊಡು ಬಾ.." ಎಂದು ಕೂಗಿ ಕರೆದಳು. ತಲೆನೋವಿನಿಂದ ತಲೆ ಒಂದೇ ಸಮನೆ ಸಿಡಿಯುತ್ತಿತ್ತು. ಶಬ್ದ, ಪ್ರಖರ ಬೆಳಕು, ದೈಹಿಕ ಶ್ರಮ ಯಾವುದೂ ಸಹ್ಯವಿರಲಿಲ್ಲ..ಅನಿವಾರ್ಯ, ಎದ್ದು ಹೋಗಿ ಮೈಕ್ರೋ ಓವನ್ ಆನ್ ಮಾಡಿಕೊಟ್ಟೆ. ನನ್ನ ಪಿಂಗಾಣಿಯ ಟೀ ಕಪ್ಪನ್ನು ಹುಡುಕಿ ಕೈಯಲ್ಲಿ ಹಿಡಿದುಕೊಂಡು ರೆಡಿ ನಿಂತಿದ್ದಳು ಮಗಳು. "ಅಮ್ಮ, ನೀರು ಹಿಡ್ಕೋಡ್ತ್ಯ ಪ್ಲೀಸ್..' ಎಂಬ ಮತ್ತೊಂದು ಕೋರಿಕೆ. ನೀರಿನ ಜಗ್ಗಿನಲ್ಲಿ ನೀರು ಖಾಲಿಯಾದ್ದಕ್ಕಾಗಿ, ಅವಳಿಗೆ ಕೈಗೆಟುಕದ ಎತ್ತರದ ಫಿಲ್ಟರ್ ನಿಂದ ನೀರು ತೆಗೆಯಲು ನನ್ನ ಸಹಾಯ ಬೇಕಿತ್ತು. ಮಗ್ ಗೆ ನೀರು ತ...

ಅಡುಗೆ ಸಂಭ್ರಮ

ಇಮೇಜ್
ನಾನು ನಮ್ಮ ಮನೆಯಲ್ಲಿನ ಮುದ್ದಿನ ತನುಜೆ, ಅಕ್ಕನ ಅನುಜೆ. ಚಿಕ್ಕಂದಿನಲ್ಲಿ ಅಮ್ಮ ಎಲ್ಲಾದರೂ ಹೊರಗಡೆ ಹೋದರೆ ಅಪ್ಪಾಜಿಯ ನಳಪಾಕ, ಅಪ್ಪಾಜಿಯೂ ಇಲ್ಲದಿದ್ದ ಪಕ್ಷದಲ್ಲಿ ಅಕ್ಕನ ಅಡುಗೆ ಪ್ರಯೋಗಗಳಿಂದ ನನ್ನ ಹೊಟ್ಟೆ ತುಂಬಿಸಿಕೊಳ್ಳಲು ಯಾವ ಕೊರತೆಯೂ ಆಗುತ್ತಿರಲಿಲ್ಲ. ಇದೆ ಕಾರಣಕ್ಕೋ ಏನೋ ಸುಮಾರು ೭-೮ ನೇ ತರಗತಿಗೆ ಬರುವ ವರೆಗೂ ಅಡುಗೆ ತಯಾರಿಸಲು ಸಹಾಯ ಮಾಡುವ ಕೆಲಸ ಮಾಡಿದ್ದಿದ್ದರೂ, ನಾನಾಗಿಯೇ ಯಾವುದೇ ಮುಖ್ಯ ಅಡುಗೆ ತಯಾರಿಸುವ ಗೋಜಿಗೆ ಹೋಗಿಯೇ ಇರಲಿಲ್ಲ. ಹಾಗೊಂದು ದಿನ ಅಪ್ಪಾಜಿ ಅಮ್ಮ ಕಡೆಗೆ ಅಕ್ಕನೂ ಮನೆಯಲ್ಲಿರದ ದಿನ. ಅಂದು ಗೆಳತಿಯೊಬ್ಬಳನ್ನು ಮನೆಗೆ ಕರೆತಂದಿದ್ದೆ. ಮನೆಯಲ್ಲಿ ಅಮ್ಮ ಅಡುಗೆ ತಯಾರಿಸಿಟ್ಟಿದ್ದರೆಂಬ ನೆನಪು. ಯಾವುದೋ ಮಾತಿನ ಮಧ್ಯೆ ಗೆಳತಿಯು ತನಗೆ ಅಲ್ಪಸ್ವಲ್ಪ ಪದಾರ್ಥಗಳನ್ನು ಮಾಡಲು ಬರುತ್ತದೆ ಎಂದು ತನ್ನ ಬಗ್ಗೆ ಹೇಳಿಕೊಂಡಾಗ, ನನ್ನ ಬಗ್ಗೆ ನನಗೆ ಸಂಕೋಚವೆನಿಸಿತು. ನಂತರಕ್ಕೆ, ಅದೆಲ್ಲಿಂದ ಬಂದ ಶೂರತನವೋ ತಿಳಿಯದು, "ನೀನು ನನಗೆ ಗೈಡ್ ಮಾಡು , ನಾನು ಪದಾರ್ಥ ತಯಾರು ಮಾಡುತ್ತೇನೆ" ಎಂದು ಅವಳಲ್ಲಿ ಕೇಳಿಕೊಂಡು, ಬದನೆ ಮತ್ತು ಬೆಳ್ಳುಳ್ಳಿ ಹಾಕಿ ಕಾಯಿ ಗೊಜ್ಜು ಮಾಡುವ ಪ್ಲಾನ್ ಮಾಡಿದೆವು. ತೆಂಗಿನ ತುರಿ ಸಿದ್ಧವಾಯಿತು. ಬದನೇಕಾಯಿ ಪಾತ್ರೆಯಲ್ಲಿಟ್ಟು ಬೇಯಿಸಿಕೊಂಡಿದ್ದಾಯಿತು. ಬೆಳ್ಳುಳ್ಳಿ ತಂದು ಬಿಡಿಸಿಕೊಂಡಿದ್ದಾಯಿತು. ಏನೂ ಅಡುಗೆ ಬಾರದ ನಾನು, ಚಿಟಿಕೆ ಉಪ್ಪಿಗೂ  ಗೆಳತಿಯ ಸೂಚನೆಗಳನ್ನು ತೆಗೆದ...

ಕೃಷ್ಣನ ಅವಲಕ್ಕಿ

ಇಮೇಜ್
ಆಗ ನಂಗೆ ಎಷ್ಟು ವರ್ಷ ಎಂದು ಸರಿ ನೆನಪಿಲ್ಲ. ಒಟ್ನಲ್ಲಿ ಸಣ್ಣಕ್ಕಿದ್ದೆ. ನಾವು ಮೊಮ್ಮಕ್ಕಳೆಲ್ಲ ಅಜ್ಜನ ಕೋಣೆಯಲ್ಲಿ ಸರಿದುಕೊಂಡು ಅಜ್ಜನ ಬಳಿ ಕೇಳಿ, ಪೌರಾಣಿಕ ಕಥೆ ಹೇಳಿಸಿಕೊಳ್ಳುವುದು ರೂಢಿಯಿತ್ತು. ಹಾಗೊಂದು ಸಾರಿ ಅಜ್ಜ ಕೃಷ್ಣ-ಸುಧಾಮರ ಗಾಢವಾದ ಗೆಳೆತನ, ಪ್ರೀತಿ, ಕೃಷ್ಣನ ಅವಲಕ್ಕಿಯ ಆಸೆ ಎಲ್ಲದರ ಕುರಿತು ಕಥೆಯನ್ನು ಹೇಳಿದ್ದ. ಕಥೆ ಕೇಳಿ ಸಾಕಷ್ಟು ದಿನಗಳು ಕಳೆದಿದ್ದರೂ, ಕೃಷ್ಣ ಹೇಗೆ ಸಣ್ಣ ಮಕ್ಕಳಂತೆ ಸುಧಾಮನ ಹೆಗಲಿನಿಂದ ಅವಲಕ್ಕಿ ಗಂಟನ್ನು ಅತ್ಯಂತ ಸಲಿಗೆಯಿಂದ ಕಸಿದುಕೊಂಡು ತೆಗೆದು ತಿಂದು ಖುಷಿ ಪಟ್ಟಿದ್ದ ಎಂಬ ಕಥೆಯ ಕಲ್ಪನಾ ಚಿತ್ರಣ ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡುತ್ತಿತ್ತು. ಒಂದು ದಿನ ಅದೇನು ಭಯಂಕರ ಆಲೋಚನೆ ಬಂದಿತೋ ಏನೋ, ಮಧ್ಯಾಹ್ನ ಅಮ್ಮುಮ್ಮ ಎಲ್ಲರೂ ಮಲಗಿದ್ದ ಸಮಯಕ್ಕೆ, ಎದ್ದು ಹೋಗಿ ಕಪಾಟಿನಲ್ಲಿ ಅವಲಕ್ಕಿಗಾಗಿ ಹುಡುಕಾಟ ನಡೆಸಿದೆ. ಕಡೆಗೆ ಮೇಲ್ಮೆತ್ತಿನ 'ಹೊಗೆ ಅಟ್ಟ' ದಲ್ಲಿ ಹುಡುಕಾಟದ ಅವಿರತ ಪ್ರಯತ್ನಕ್ಕೆ 'ಅರಳುಕಾಳು ಡಬ್ಬ' ಕೈಗೆ ಸಿಕ್ಕಿತ್ತು. ಚೂರು ಶಬ್ದ ಮಾಡದೆ, ಅಷ್ಟೊತ್ತು ಹುಡುಕಿದ್ದ ಶ್ರಮಕ್ಕೆ "ಕೃಷ್ಣ ನಿಗೆ ಅರಳಕಾಳು ಕೂಡ ಇಷ್ಟವಾಗುತ್ತದೆ' ಎಂಬ ನಿರ್ಧಾರವನ್ನು ನಾನೇ ತೆಗೆದುಕೊಂಡು, ಒಂದು ಲೋಟಕ್ಕೆ ಸ್ವಲ್ಪ ಅರಳಕಾಳು ಹಾಕಿಕೊಂಡು ಜಗಲಿಗೆ ಹೋದೆ. ಹಿಂದೆಲ್ಲ ಮನೆಯ ಜಗಲಿಯ ಗೋಡೆಗೆ ಸಾಲಾಗಿ ದೇವರ ಫೋಟೋಗಳನ್ನು ನೇತು ಹಾಕಿರುತ್ತಿದ್ದರು. ಕೃಷ್ಣನ ದೇವರ ಪಟದ ಕೆಳಗೋ ...

ಗೋಡೆ ಬರಹ

"ಅದೇನ್ ಕೆಟ್ಟು ಬುದ್ಧಿ ಬಂದಿದ್ಯೇನೋ ನಮ್ಮನೆ ಪಾಪು ಗೆ, ಎಷ್ಟು ಬೈದ್ರೂ ಕಡೆಗೆ ಕದ್ದು ಮುಚ್ಚಿ ಆದ್ರೂ ಗೋಡೆ ಮೇಲೆಗೀಚಿ ಬರ್ತಾನೆ. ನೋಡಿ, ಗೋಡೆ ತುಂಬಾ ಬಣ್ಣ ಬಣ್ಣದ ಪೆನ್ಸಿಲ್ ತಗೊಂಡು ಎಷ್ಟ್ ಅಸಹ್ಯ ಮಾಡಿದಾನೆ,  ಯಾರಾದ್ರೂ ಬಂದ್ರೆ, ನಮ್ಮನೆ ನೋಡ್ಬಿಟ್ಟು, ಎಷ್ಟು ಗಲೀಜು ಅಂದ್ಕೊಂಡಾರು.." ಎನ್ನುತ್ತಾ ವಿಂಧ್ಯಾ ಮಗುಗೆ ಬೈಕೋತಾ ಇದ್ರೆ, ಮಗು ತಾನು 'ಖುಷಿ' ಪಟ್ಟು ಬರೆದ ಚಿತ್ರದಲ್ಲಿರುವ  ಕಥೆಗೆ ಯಾಕಿವರೆಲ್ಲ 'ಬೈತಾರೆ' ಅಂತ ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ತನ್ನ ಕುರಿತಾದ ಬೈಗುಳವನ್ನ ಕೇಳಿ ಏನು ಮಾಡಬೇಕೆಂದು ತಿಳಿಯದೆ ತಲೆ ತಗ್ಗಿಸಿ ನಿಂತಿತ್ತು.  ಮಕ್ಕಳಿರುವ ಮನೆಗಳಲ್ಲಿ ಈ ರೀತಿಯ ಗೋಡೆ ಬರಹ ಸರ್ವೇ ಸಾಮಾನ್ಯ. ಕೆಲವು ಮನೆಯ ಎದುರು ಗೋಡೆಯಲ್ಲೇ ಮಕ್ಕಳು ಗೀಚಿ ಬರೆದ ಬ್ರಹ್ಮಾನ್ಡವಿದ್ದರೆ, ಕೆಲವು ಮನೆಯ ಒಳಕೋಣೆಯ ಮೂಲೆಗೊಡೆ ಇನ್ಯಾವುದೋ ಕಥೆ ಸಾರುತ್ತಿರುತ್ತದೆ. ನಿಮ್ಮ ಮನೆಯಲ್ಲೂ ಈ ರೀತಿ ಗೋಡೆ, ನೆಲದ ಮೇಲೆ ಗೀಚುವ ಅಭ್ಯಾಸದ ಮಕ್ಕಳಿದ್ದರೆ, ಅಥವಾ ನಿಮ್ಮ ಮಕ್ಕಳು ಸುಮ್ಮನೆ ಗೊತ್ತು ಗುರಿ ಇಲ್ಲದೆ ಗೀಚುತ್ತ ಕೂರುತ್ತಾರೆ ಎಂದರೆ ಅವರಿಗದನ್ನು ಕೆಟ್ಟದ್ದೆಂದು ತಡೆಯುವ, ತೆಗಳುವ ಮುನ್ನ ಗೀಚುವಿಕೆಯ ಕುರಿತಾಗಿ ಹೀಗೊಂದಷ್ಟು ವಿಷಯಗಳನ್ನು ತಿಳಿದುಕೊಳ್ಳಿ.  ಗೋಡೆ ಒಂದು ಬಿಳಿ ಹಾಳೆಯಂತೆ.  ಮಕ್ಕಳು ಹುಟ್ಟಿನಿಂದಲೂ ಅನ್ವೇಷಕರು. ಅವರಿಗೆ ಪ್ರತಿ...