ಪೋಸ್ಟ್‌ಗಳು

ಟ್ರೆಕ್ ಟು ಘಾನ್ಗ್ಹರಿಯ

ಟ್ರೆಕಿಂಗ್ ಟೀಮಿನವರನ್ನು ಸೇರಿಕೊಂಡು ಹೃಷಿಕೇಶದಿಂದ ಹೊರಟು, ಜೋಷಿಮಠ ದೇವಪ್ರಾಯಗದ ಮೂಲಕ ಹಾದು, ಸುಧೀರ್ಘ ೧೨.೫ ತಾಸುಗಳ ಘಾಟಿ ರೋಡಿನ ಪ್ರಯಾಣ. ಬೆಂಗಳೂರಿನಿಂದ ಹೊರಡುವಾಗ ನೋಡಿಕೊಂಡ ವೆದರ್ ರಿಪೋರ್ಟ್ ಪ್ರಕಾರ ನಾವು ಟ್ರೆಕ್ ಹೋಗುವ ಸ್ಥಳದಲ್ಲಿ ಎಲ್ಲಾ ದಿನವೂ ಮಳೆ ಎಂದಿತ್ತು. ನಮ್ಮದು ಪೂರಾ ಮಾನ್ಸೂನ್ ಟ್ರೆಕ್ಕೇ ಆಗಲಿಕ್ಕಿದೆ ಎಂದು ಗಟ್ಟಿ ಮನಸ್ಸು ಮಾಡಿಯೇ ಹೊರಟಿದ್ದರಿಂದ, ಆಗಾಗ್ಗೆ ಹನಿಯುತ್ತಿದ್ದ ಜುಮುರು ಮಳೆ, ಒಮ್ಮೊಮ್ಮೆ ಕಗ್ಗತ್ತಲು ಅವರಿಸುವಂತಹ ಮೋಡ ಮತ್ತು ಕೆಲವೊಮ್ಮೆ ಶುಭ್ರ ಬಿಳಿ ಮಂಜಿನ ಮುಸುಕು ಹೀಗೆ ಕ್ಷಣ ಕ್ಷಣಕ್ಕೆ ಬದಲಾಗುತ್ತಿದ್ದ ವಾತಾವರಣ ಕಂಡರೂ ಆತಂಕವೆನಿಸಲಿಲ್ಲ. ಹಿಂದಿ ಸುಲಲಿತವಾದ್ದರಿಂದ ಮಾತುಕತೆಗೆನೂ ತೊಂದರೆಯಾಗಲಿಲ್ಲ. ವಾಹನ ಚಾಲಕ ಶೈಲೇಂದರ್, ಅಲ್ಲಿನ ಭೌಗೋಳಿಕತೆ, ಜನಜೀವನ ಇತ್ಯಾದಿ ಕುರಿತಾಗಿ ಹೊಸ ವಿಷಯಗಳನ್ನು ತಿಳಿಸುತ್ತ, ನಮ್ಮೆಲ್ಲ ಪ್ರಶ್ನೆಗಳಿಗೆ, ಕುತೂಹಲಕ್ಕೆ ಉತ್ಸುಕತೆಯಿಂದಲೇ ಉತ್ತರಿಸುತ್ತ ಹೋಗುತ್ತಿದ್ದರು. ಗಾಡಿಯ ಕಿಟಕಿಯಾಚೆಗಿನ ಪ್ರತಿಯೊಂದು ವಿಹಂಗಮ ನೋಟವೂ ಒಂದೊಂದು ಕಥೆ ಸಾರುವಂತಿತ್ತು. ಮತ್ತವಷ್ಟೂ ಅಗಾಧ ಹಿಮಾಲಯದ ಒಂದು ಸಣ್ಣ ಭಾಗವಷ್ಟೇ ಎಂಬುದು ನಮ್ಮನ್ನು ಮತ್ತಷ್ಟು ಬೆರಗಾಗುವಂತೆ ಮಾಡುತ್ತಿತ್ತು. ದಿನದ ಕೊನೆಯಲ್ಲಿ ತಲುಪಿದ್ದು ಪಾಂಡುಕೇಶ್ವರ ಎಂಬ ಊರಿಗೆ. ಟ್ರೆಕಿಂಗ್ ಗೈಡ್ಗಳು ತಮ್ಮ ಪರಿಚಯ, ಟ್ರೆಕಿಂಗ್ ಸಮಯದ ಅನುಕೂಲ/ಅನಾನುಕೂಲಗಳು, ಸೌಲಭ್ಯಗಳು, ಟ್ರೆಕಿಂಗ್ ನ ನಿಯಮಗ...

some-ಬಂಧಗಳು

ಇಮೇಜ್
 ಉತ್ತರಾಖಂಡದ ಕೆಲವು ಸ್ಥಳಗಳಿಗೆ ಟ್ರೆಕ್ಕಿಂಗ್ ಹೋಗಲು ಏಜೆನ್ಸಿ ಒಂದರಿಂದ ಬುಕ್ ಮಾಡಿಕೊಂಡಿದ್ದೆವು. ಹೃಷಿಕೇಶ್ ಹತ್ತಿರದ ತಪೋವನ್ ಎಂಬ ಸ್ಥಳದಿಂದ ನಮ್ಮ ಪಿಕ್ಅಪ್ ನಿಗದಿಯಾಗಿತ್ತು. ಹರಿದ್ವಾರದಿಂದ ಚಾರಣಿಗರನ್ನೆಲ್ಲ ಕರೆದುಕೊಂಡು ಹೊರ ಟ ಟಿ.ಟಿ ಯಲ್ಲಿ ಸ್ಥಳವಿಲ್ಲದ್ದರಿಂದ, ಅವರದ್ದೇ ಇನ್ನೊಂದು ವಾಹನ, ಹಿಂದಕ್ಕಿದ್ದ ಟಾಟಾ ಸುಮೋದಲ್ಲಿ ನನ್ನನ್ನು ಮತ್ತು (ಲಕ್ಷ್ಮಿ) ಚಿನ್ನಕ್ಕಳನ್ನು ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದರು.ಅನೇಕ ಸ್ಥಳಗಳಿಗೆ ಫ್ಯಾಮಿಲಿ ಟ್ರಿಪ್ಸ್ ಓಡಾಡಿದ್ದೆ ಆದರೆ ಮನೆಯಿಂದ ಈ ರೀತಿಯಾಗಿ ಒಬ್ಬಳೇ ಹೊರಟಿದ್ದು ಇದೇ ಮೊದಲ ಅನುಭವ. ಚಾರಣದ ಸ್ಥಳ, ಚಾರಣಿಗರ ಸಂಗಡ, ಅಲ್ಲಿ ದೊರಕಬಹುದಾದ ಸುರಕ್ಷೆ, ವ್ಯವಸ್ಥೆ ಅವ್ಯವಸ್ಥೆಗಳ ಕುರಿತು ಒಂದು ಚೂರು ಅಳುಕು ಇದ್ದದ್ದೂ ನಿಜ.. ಮಳೆಯ ಪರಿಣಾಮವಾಗಿ (ಮಳೆ ಹೆಚ್ಚಾದಾಗ ಯಾವ ಸಮಯಕ್ಕೆ ಯಾವ ರಸ್ತೆಗೆ ಯಾವ ಗುಡ್ಡಗಳು ಕುಸಿದು ಬೀಳುತ್ತವೆ ಎಂದು ಹೇಳಲಾಗದಂತಹ ಪರಿಸ್ಥಿತಿ) ಸುಧೀರ್ಘ 1.5 ತಾಸಿನ ಕಾಯ್ವಿಕೆಯ ನಂತರ ಬಂದು ತಲುಪಿದ ಗಾಡಿಯನ್ನು ಹತ್ತಿ ಕುಳಿತೆವು. ಪಕ್ಕಕ್ಕೆ ನೋಡಿದರೆ ಇಬ್ಬರು ದೈತ್ಯಾಕಾರದ ವ್ಯಕ್ತಿಗಳು. ಮಳೆಯ ರೈನ್ಕೋಟ್, ಬೆನ್ನಿಗೆ ಹೊತ್ತಿದ್ದ ದೊಡ್ಡ ಬ್ಯಾಗ್, ನಮ್ಮ ನೀರಿನ ಬಾಟಲ್, ಕ್ಯಾಮೆರಾ ಎಲ್ಲವನ್ನೂ ಒಂದು ಹಂತಕ್ಕೆ  ಜೋಡಿಸಿ ಎತ್ತಿಟ್ಟು, ಕುಳಿತುಕೊಳ್ಳಲು ಸ್ಥಳವನ್ನೆಲ್ಲ ಸರಿ ಮಾಡಿಕೊಂಡದ್ದಾಯಿತು. ನಮಗೋ ಆ ಕಡೆ ಈ ಕಡೆ ಪ್ರಕೃತಿಯ...

ಎಸ್.ಪಿ.ಎಸ್ ಫೋಟೋಗ್ರಫಿ ಕಾರ್ಯಾಗಾರ ೨೦೧೯

ಇಮೇಜ್
ಒಂದು ಸೂರು, ೬೦ ಜನ, ೩ ದಿನ, ಬೆಳಿಗ್ಗೆ ೭ ರಿಂದ ರಾತ್ರೆ ೯.೩೦ ವರೆಗಿನ ೧೪ ತಾಸುಗಳ ಲವಲವಿಕೆಯ ಕಾರ್ಯಕ್ರಮ..ಪಾಠ, ಚರ್ಚೆ, ಮಾತು-ಕಥೆ, ಹರಟೆ, ತಿರುಗಾಟ, ಒಳ್ಳೆ ಊಟ ಎಲ್ಲವೂ ಅಲ್ಲೇ ಅಡಕ.. ಹೈಸ್ಕೂಲಿನಲ್ಲಿ ಓದುತ್ತಿರುವ ಹುಡುಗನಿಂದ ಹಿಡಿದು ನಿವೃತ್ತರವರೆಗೆ ಎಲ್ಲರೂ ಅಲ್ಲಿ ಉತ್ಸಾಹಿಗಳು.ಅಲ್ಲಿದ್ದವರೆಲ್ಲ ಒಂದೇ ಊರಿನವರಲ್ಲ, ಕರ್ನಾಟಕದ ನಾನಾ ಪ್ರದೇಶಗಳಿಂದ ಬಂದವರು. ಹಿನ್ನೆಲೆ ಕೇಳಿದರೆಂತೂ  ಒಬ್ಬೊಬ್ಬರೂ ಒಂದೊಂದು ತರ. ಪಾಠ ಹೇಳುವ ಟೀಚರ್ರುಗಳು, ವಿದ್ಯಾಭ್ಯಾಸ ಮಾಡುತ್ತಿರುವ ಸ್ಟೂಡೆಂಟ್ಸ್, ಎಂಜಿನೀಯರ್ಗಳು, ಬ್ಯಾಂಕ್,  ಅನೇಕ ಖಾಸಗೀಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಸ್ಟುಡಿಯೋ, ಕಲೆ, ಸಾಹಿತ್ಯ, ಕೃಷಿ, ಹೀಗೆ ನಾನಾ ಬಗೆಯ ಕ್ಷೇತ್ರದಿಂದ ಬಂದವರು...ಏಕರೂಪತೆ ಇದ್ದಿದ್ದು ಮಾತ್ರ ಒಂದೇ ವಿಷಯದಲ್ಲಿ.. ಎಲ್ಲರ ಕುತ್ತಿಗೆಗೆ ಇಳಿಬಿಟ್ಟ ಕ್ಯಾಮೆರಾ!!ಕೆಲವರು ವೃತ್ತಿಪರ ಫೋಟೋಗ್ರಾಫರ್ಸುಗಳಾಗಿದ್ದರೆ, ಮತ್ತೆ ಹಲವರು ಹವ್ಯಾಸಿ ಛಾಯಾಗ್ರಾಹಕರು..ಕೆಲವರು ಮೊದಲನೇ ಸಲ ಕ್ಯಾಮೆರಾವನ್ನು ನಡುಗುವ ಕೈಗಳಿಂದ ಹಿಡಿಯುವವರಾಗಿದ್ದರೆ, ಮತ್ತೆ ಕೆಲವರು ಫೋಟೋಗ್ರಫಿಯನ್ನೇ ತಮ್ಮ ಬದುಕನ್ನಾಗಿಸಿಕೊಂಡವರು. ಅಪ್ಪಿ ತಪ್ಪಿ ಹೊರಗಿನವರ್ಯಾರಾದರೂ ಈ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ಹೋಗಿ ನಿಂತರೆ, ಅಲ್ಲಿ ಕಲಿಯಕ್ಕೆ ಬಂದವರ್ಯಾರು? ಕಲಿಸುವವರ್ಯಾರು? ಸಂಘಟಕ...

ಶ್ರೀಕಾಳಹಸ್ತಿ ಮತ್ತು ಕಲಂಕಾರಿ

ಇಮೇಜ್
ಆಂಧ್ರಪ್ರದೇಶದ ಶ್ರೀಕಾಳಹಸ್ತಿಗೆ ಭೇಟಿ ನೀಡಿದ ಸಂದರ್ಭ. ಕಲಂಕಾರಿ ಎಂಬ ಟ್ರೆಂಡಿ ಫ್ಯಾಬ್ರಿಕ್ ಡಿಸೈನ್ಗಳ ಪೈಕಿ ಒಂದು ಶೈಲಿ ಶ್ರೀಕಾಳಹಸ್ತಿಯಲ್ಲಿಯೇ (ಶ್ರೀಕಾಳಹಸ್ತಿ ಮತ್ತು ಮಚಲೀಪಟ್ನಮ್  ನ ಎರಡು ಕಲಾ ಪ್ರಕಾರಗಳು ಕಲಂಕಾರಿ ವರ್ಣಚಿತ್ರಗಳಲ್ಲಿ ಕಾಣಸಿಗುತ್ತದೆ)  ಹುಟ್ಟಿರುವುದು ಎಂಬ ಕುತೂಹಲಕಾರಿ ಮಾಹಿತಿ ಅಕ್ಕನಿಂದ ದೊರೆಯಿತು. ಇತ್ತೀಚಿಗೆಂತೂ ಎಲ್ಲಿ-ಯಾವ ಕಾರ್ಯಕ್ರಮಗಳಲ್ಲಿ ನೋಡಿದರೂ ಕಣ್ತುಂಬ ತುಂಬಿಕೊಳ್ಳುವ ಕಲಂಕಾರಿ ಡಿಸೈನ್ ನ ಸೀರೆ, ಬ್ಲೌಸ್ಗಳು, ಕುರ್ತಾಗಳದ್ದೇ ಹಾವಳಿ. ಆ ರಂಗು, ಆ ಚಿತ್ತಾರಗಳು ಅಬ್ಬಬ್ಬಾ ಕಲೆಯಲ್ಲೇ ಅನೇಕ ಕಥೆಗಳನ್ನು ಹೇಳುವಂತಿರುತ್ತದೆ! ಕಲೆಯೊಂದು ಹುಟ್ಟಿದ ಊರಿನಲ್ಲಿದ್ದು ಅದರ ಅನುಭವ ಪಡೆಯದಿದ್ದರೆ ಹೇಗೆಂದು ಗೂಗಲ್ ಮಹಾಗುರುಗಳ ಮೊರೆ ಹೋದೆ. ಹತ್ತಿರದ ಕಲಂಕಾರಿ ಬಟ್ಟೆ ಅಂಗಡಿಗಳ ಮಾಹಿತಿ ಕಲೆ ಹಾಕಿದೆ. ಯಾಕೋ ಮಾರುಕಟ್ಟೆಯ ದೊಡ್ಡ ದೊಡ್ಡ ವಾಣಿಜ್ಯ ಅಂಗಡಿಗಳ ಭೇಟಿಗಿಂತಲೂ ಕಲಂಕಾರಿ ಸಣ್ಣ ಕೈಗಾರಿಕಾ ಗೃಹ ಉತ್ಪನ್ನ ಕೇಂದ್ರದ ವಿಳಾಸದ ಕಡೆಗೆ ಗಮನ ಸರಿಯಿತು. ವಾಪಸು ಬೆಂಗಳೂರಿಗೆ ಹೊರಡುವಷ್ಟರಲ್ಲಿ ಮಿಕ್ಕಿರುವ ಸಮಯವನ್ನು ಪ್ರಯೋಗಿಸಿಯೇ ಬಿಡೋಣ ಎಂದು ತೀರ್ಮಾನಿಸಿ, ಸಿಕ್ಕ ಶೇರ್ಡ್ ಆಟೋ ಹಿಡಿದು ಹೊರಟೆ. ಕಲಂಕಾರಿ ಆಂಧ್ರಪ್ರದೇಶದ ಹಳ್ಳಿ ಜನರಿಂದ ಹುಟ್ಟಿಕೊಂಡ ಒಂದು ಪ್ರಾಚೀನ ಜನಪದ ಕಲೆ. ಹಿಂದೆ ರಾಜರ ಕಾಲದಲ್ಲಿ ಮನರಂಜ...

ಅಡುಗೆ ಆಟ ಮತ್ತು ಸ್ಲಾಯ್ಮ್

ಇಮೇಜ್
"ಹೇ ಇಲ್ನೋಡಿ ಹುಡ್ರಾ..ಈ ಎಲೆ ಇಂದ ಜೆಲ್ಲಿ ಮಾಡಕ್ ಬತ್ತು..ನಾವೆಲ್ಲಾ ಶಣ್ಣುಕಿದ್ದಾಗ  ಅಡುಗೆ ಆಟ ಆಡಕ್ಕಿದ್ದಲ್ಲಿ ಇದನ್ನೇ ಜೆಲ್ಲಿ ಇಡ್ಲಿ/ಕೇಕ್ ಅಂತೆಲ್ಲ ಮಾಡ್ತಿದ್ಯ.." ಎಂದು ತೋಟದ ಸಂಕದ (ದಾಟು) ಪಕ್ಕದಲ್ಲಿ ಕಂಡ ತೆಳ್ಳನೆಯ ಬಳ್ಳಿಯ  ತುಂಬಾ ಹರಡಿದ್ದ ಅಗಲ ಹಾರ್ಟ್ ಆಕೃತಿಯ ಎಲೆಗಳನ್ನು ನೋಡಿ, ನಾನು ಎಲ್ಲಿಲ್ಲದ ಹುಮ್ಮಸ್ಸಿನಿಂದ ಕೂಗಿಕೊಂಡೆ.. ಜೆಲ್ಲಿ ಎಂಬ ಪದ ಕಿವಿಗೆ ಬಿದ್ದ ತಕ್ಷಣಕ್ಕೆ ನನ್ನ ಮಗಳ ಜೊತೆಗೂಡಿ ಅಕ್ಕನ ಮಕ್ಕಳಿಬ್ಬರೂ ದಾಟುತ್ತಿದ್ದ ಸಂಕವನ್ನು ತೆರಗಾಲಿನಲ್ಲಿ ನಡೆದು ವಾಪಸು ನಾನಿದ್ದಲ್ಲಿಗೆ ಓಡಿ ಬಂದರು..'ಏನದು, ಹೇಗದು, ನೀವೆಲ್ಲ ಹೆಂಗೆ ಆಟಾಡ್ತಿದ್ದಿ.. ' ಎಂಬಿತ್ಯಾದಿ ಒಬ್ಬರಾದ ಮೇಲೆ ಒಬ್ಬರು ಪ್ರಶ್ನೆ ಕೇಳುತ್ತ ಆಶ್ಚರ್ಯದಿಂದ ಪಕ್ಕದಲ್ಲಿ ಕುಳಿತರು. ಅಡುಗೆ ಆಟ ಆಡದೆ ಯಾವ ಮಕ್ಕಳು ತಾನೇ ದೊಡ್ಡವರಾಗಿದ್ದಾರೆ ಹೇಳಿ..? ಆದರೂ, ನಮ್ಮ ಕಾಲದ ಅಡುಗೆ ಆಟ ಹೇಗಿತ್ತು, ಎಂದು ಒಂದಷ್ಟು ನನ್ನ ಬಾಲ್ಯದ ನೆನಪುಗಳನ್ನು ಮೆಲಕು ಹಾಕಿಕೊಂಡೆ. ಆಗೆಲ್ಲ ಭಾವಯ್ಯಂದಿರ ಜೊತೆಗೂಡಿ, ಈ ಜೆಲ್ಲಿಯನ್ನು ಕೇಕ್ ನಂತೆ ರೂಪಿಸಿ, ಭರ್ಜರಿ ಅಲಂಕಾರ ಮಾಡಿ, ನಮ್ಮ ಮನೆಯಲ್ಲಿ ಆಚರಣೆಯಲ್ಲಿರದ ಹ್ಯಾಪಿ ಬರ್ತಡೇ ಪಾರ್ಟಿಯನ್ನು ಕೂಡ ನಾವು ನಮ್ಮ ಆಟಗಳಲ್ಲಿ ಎಷ್ಟು ಗ್ರಾಂಡ್ ಆಗಿ ಮಾಡುತ್ತಿದ್ದೆವು ಎಂಬಿತ್ಯಾದಿ ಕಥೆಗಳನ್ನು ರಸವತ್ತ...

ಲೇಡೀಸ್ ಟ್ರಿಪ್ - ಅನುಭವ

ಇಮೇಜ್
ಅದೊಂದು ದಿನ ಫೋನಿನಲ್ಲಿ ಮಾತನಾಡುತ್ತ, "ಸುಮಾ ಇನ್ನೊಂದೆರಡು ದಿನಕ್ಕೆ ಸಾಗರಕ್ಕೆ ಬತ್ತ ಅಲ್ದಾ..ರಾಣಿ ಮತ್ತೆ ಹುಡ್ರು ಹೆಂಗಂದ್ರೂ ಇದ್ದ.. ನನ್ನ ಕಸಿನ್ ಪಲ್ಲವಿ ಕೂಡ ಇದ್ದ, ಎಲ್ಲಾ ಸೇರಿ ಹುಡ್ರು ಕಟ್ಕ್ಯಂಡು ನಾವ್ ನಾವೇ ಒಂದು ಲೇಡೀಸ್ ಟ್ರಿಪ್ ಹೋಗಿ ಬರನ.." ಎಂದು  ಕೇಳಿದಳು ಚಿನ್ನಕ್ಕ. "ಖಂಡಿತ ಹೋಪನ, ಅಡ್ಡಿಲ್ಲೆ.." ಎಂದೆಲ್ಲ ಖುಷಿಯಿಂದ ಹೂಂಗುಟ್ಟಿದೆ  ನಾನು. ಆದ್ರೆ ಮನಸ್ಸಿನಲ್ಲಿ ಅನುಮಾನವಿದ್ದೇ ಇತ್ತು. ಸುಮಾರಾಗಿ ಎಲ್ಲಾ ಲೇಡೀಸು ಗೂ ಆಗುವಂತೆ - ಇನ್ನೇನು ಹೋಗೆ ಬಿಟ್ಟೆವು ಅನ್ನೋ ಲೆವೆಲ್ ವರೆಗೆ ಆಸೆಯಿಂದ ಎಲ್ರೂ ಟ್ರಿಪ್ ಪ್ಲಾನ್ ಡಿಸ್ಕಷನ್  ಮಾಡೋದು, ಆಮೇಲೆ ಯಾವ್ಡ್ಯಾವ್ದೋ ಕಾರಣಕ್ಕೆ ಒಬ್ಬೊಬ್ಬರೇ ಕಳಚಿಕೊಂಡು ಟ್ರಿಪ್ ಕ್ಯಾನ್ಸಲ್ ಆಗುವುದು, ಪುಂಡತನದಲ್ಲಿ ಪ್ರಚಂಡತೆ ಪಡೆದುಕೊಂಡಿರುವ ನಮ್ಮ ಮಕ್ಕಳ ಸೈನ್ಯ ಕಟ್ಟಿಕೊಂಡು ನೀರಿಗೆ ಹೋಗುವ ಸಾಹಸ ಬೇಡ ಎಂದು ಮನೇಲಿ ಖಡಾಖಂಡಿತವಾಗಿ ನಿರಾಕರಿಸುವುದು, ನಾವೇ ಕಾರು ಲಾಂಗ್ ಡ್ರೈವ್ ಮಾಡಿಕೊಂಡು ಹೋಗುವುದು ಕಷ್ಟ ಸಾಧ್ಯ ಎಂಬಿತ್ಯಾದಿ ನಕಾರದ ಸಾಧ್ಯತೆಗಳನ್ನು ಆಲೋಚಿಸಿ ಏನೇನೂ ತಯಾರಿ ಮಾಡಿಕೊಳ್ಳದೇ ಕುಳಿತಿದ್ದು ಮೊದಲ ಸತ್ಯವಾಗಿತ್ತು. ಆಶ್ಚರ್ಯವೆಂಬಂತೆ ಎಲ್ಲರ ಮನೆಯವರಿಂದ ಗ್ರೀನ್ ಸಿಗ್ನಲ್ ಸಿಕ್ಕಿತು. ಆದರೆ ದುರದೃಷ್ಟವಶಾತ್ ಭಾಗ್ಯಕ್...