ಪೋಸ್ಟ್‌ಗಳು

ಮದರಂಗಿ

ಇಮೇಜ್
ಅದೊಂದು ಹಬ್ಬದ ಮರುದಿನ ಮಾತ್ರ ಸ್ಕೂಲಿಗೆ  ರೆಡಿಯಾಗಿ ಹೋಗಲು ಭಾರೀ ಉತ್ಸಾಹ..ನಾನಂತೂ ಶಾಲೆಗೆ ಹೊರಡುವ ಸಮಯಕ್ಕಿಂತ ಸುಮಾರು ಮುಂಚೆನೇ ಬೆನ್ನಿಗೆ ಚೀಲ ಹೊತ್ತುಓಡಿಯಾಗಿರುತ್ತಿತ್ತು..ಸ್ಕೂಲಿನ ಕಾರಿಡಾರ್ ನಲ್ಲಿ ನಡೆಯುವಾಗಲೂ ಕಣ್ಣು ಆ ಕಡೆ ಈ ಕಡೆ ಏನೋ ಹುಡುಕುತ್ತ ನೋಡುತ್ತಾ ಹೋಗುವುದು..ಯಾವ ಹಬ್ಬವಪ್ಪ ಅದು, ಏನನ್ನು ಹುಡುಕುವುದು ಅಂತ ಕೇಳಿದ್ರ? ನಾಗರಪಂಚಮಿ ಹಬ್ಬದ ಮರುದಿನದ ಮದರಂಗಿ ಕೈಗಳು..! ಪ್ರತಿಸಲವೂ ಸ್ವಲ್ಪ ಮದರಂಗಿ ತಾಕಿದರೂ ಅಚ್ಚ ಕೆಂಪು ಬಣ್ಣದಿಂದ ರಂಗೇರುವ ಕೈಯನ್ನು, ಹತ್ತತ್ತು ಸಲ ನೋಡಿಕೊಳ್ತಾ, ಶಾಲೆಗೆ ಹೋಗುತ್ತಿದ್ದೆ. ಪಾಠಕ್ಕೂ ಮೊದಲು, ಊಟದ ಬ್ರೇಕು, ಕಡೆಗೆ ಸಂಜೆ ಮನೆಗೆ ಹೋಗುವ ಬೆಲ್ ಹೊಡೆದು ವಾಪಸು ಮನೆಗೆ ಹೊರಡುವ ಗಳಿಗೆಗೂ , ಯಾರ್ಯಾರ ಕೈ ಎಷ್ಟು ಕೆಂಪಾಗಿದೆ, ಏನೇನು ಡಿಸೈನ್ ಮಾಡಿಕೊಂಡು ಬಂದಿದ್ದಾರೆ ಅಂತೆಲ್ಲ ಒಬ್ಬರಿಗೊಬ್ಬರು  ತೋರಿಸಿಕೊಂಡು ಸಂಭ್ರಮ ಪಡುತ್ತಿದ್ದೆವು.. ನಾಗರಪಂಚಮಿ ಹಬ್ಬ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಗರ ಪೂಜೆಯಾದರೂ ಮನೆಯಲ್ಲೇ ದೇವರ ಪೂಜೆ ಮಾಡಿ ನೈವೇದ್ಯಕ್ಕಿಡುತ್ತಿದ್ದರೇ ಹೊರತು ನಮ್ಮ ಮನೆಯಲ್ಲಿ ಹಾವಿನ ಹುತ್ತಕ್ಕೆ, ನಾಗರ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವೇನೂ ಇರಲಿಲ್ಲ. .ನಮಗಂತೂ ನಾಗರ ಪೂಜೆ, ಸ್ವೀಟು-ಅಪ್ಪಚ್ಚಿ ಎನ್ನುವುದಕ್ಕಿಂತಲೂ ಇದು ಮದರಂಗಿ ಹಚ್ಚಿ ಕೈ ಕ...

ಪದಗಳ ಆಟ

ಇಮೇಜ್
1 . ಮೂರು ಪದ ಒಂದು ಕಥೆ - ಮಕ್ಕಳಿಗೆ ಅವರ ವಯಸ್ಸಿನ ಮಿತಿಗೆ ಅನುಗುಣವಾಗಿ, ಸುಲಭವಾಗಿ ಮಕ್ಕಳು ಗುರುತಿಸಲ್ಪಡುವ ಯಾವುದಾದರೂ ಮೂರು ಪದಗಳನ್ನು ಕೊಟ್ಟು, ಅವುಗಳನ್ನು ಬಳಸಿ ಕಥೆಯೊಂದನ್ನು ಹೆಣೆಯಲು ತಿಳಿಸಬೇಕು. ೫-೬ ವರ್ಷದ ಮಕ್ಕಳ ಕಥೆ ಅರ್ಥಪೂರ್ಣವಾಗಿಯೇ ಇರಬೇಕೆಂಬ ಅಪೇಕ್ಷೆಯಿಲ್ಲ. ಮಕ್ಕಳಿಗೆ ಆ ಪದಗಳನ್ನು ಬಳಸಿ ವಾಕ್ಯ ರಚನೆ ಮಾಡುವುದು ಮತ್ತು ಒಂದಕ್ಕೊಂದು ಸಂಬಂಧ ಹೆಣೆಯುವ ಚಾಕ್ಷತೆ ಸಿಕ್ಕರೆ ಸಾಕು. ಮಕ್ಕಳು ಹಿಂದೆ ಕೇಳಿದ ಕಥೆಗಳಿಂದ ಪದಗಳನ್ನು ಹೆಕ್ಕಿ ಹೇಳಿದರೆ, ಕಥೆಯನ್ನು ನೆನಪಿಸಿಕೊಂಡು ತಮ್ಮದೇ ಧಾಟಿಯಲ್ಲಿ ಮಕ್ಕಳು ಕಥೆ ಹೇಳಿವಷ್ಟಾದರೂ ಸಾಕು ಸಂತೋಷ.. ನಮ್ಮ ಕೆಲಸಗಳನ್ನು ಮಾಡುತ್ತಲೇ ಮಕ್ಕಳನ್ನು ಆಡಿಸಬಹುದಾದ ತಮಾಷೆಯ ಆಟವಿದು. ಉದಾ : ಮೋಡ, ನೀರು, ಛತ್ರಿ               ಕಾಗೆ, ನರಿ, ರೊಟ್ಟಿ 2. ಒಂದು ಹುಂಡಿ ಅಕ್ಷರ - ಈ ಆಟವನ್ನು ಬಾಯ್ದೆರೆಯಾಗಿಯೂ ಆಡಬಹುದು, ಕನ್ನಡ ಕಾಗುಣಿತ ಕಲಿತ ಮಕ್ಕಳಾದರೆ, ಇದೊಂದು ಉತ್ತಮ ಬರವಣಿಗೆಯ ಆಟ. ಯಾವುದಾದರೊಂದು ಕನ್ನಡ ಅಕ್ಷರವನ್ನು ಒಬ್ಬರು ತಿಳಿಸುವುದು. ಮಕ್ಕಳು ಚಿಕ್ಕವರಾಗಿದ್ದರೆ, ಆಟವನ್ನು ಸ್ವಲ್ಪ ಸುಲಭವಾಗಿಸಲು, ಆ ಅಕ್ಷರ ಅಥವಾ ಅದರ ಕಾಗುಣಿತಾಕ್ಷರಗಳಿಂದ ಪ್ರಾರಂಭವಾಗುವ ಎಲ್ಲಾ ಪದಗಳನ್ನು ಹುಡುಕಿ ಹುಂಡಿಗೆ ಹಾಕುವುದು, ಎಂಬ ಅರ್ಥ ಬರುವಂತೆ ಪದಗಳನ್ನು ಯೋಚಿಸಿ ಹೇಳಲು ಅಥವಾ ಬರೆಯಲು ತಿಳಿಸಬಹುದು. ನಾವು ಮ...

ಚಿತ್ರಸಂತೆಯ ಅನುಭವ

ಚಿತ್ರಸಂತೆ - ಕಲಾಸಕ್ತರಿಗೆ ಒಂದೇ ಸೂರಿನಡಿ ಅನೇಕ ಪ್ರಕಾರದ ಕಲಾಕೃತಿಗಳನ್ನು ನೋಡಿ ಕಣ್ತುಂಬಿಕೊಂಡು, ಆಸಕ್ತ ಚಿತ್ರಗಳನ್ನು ಕೊಂಡುಕೊಳ್ಳಲು ಅವಕಾಶ ಸಿಗಬಹುದಾದ ಒಂದು ದಿನದ ಹಬ್ಬ! ಕಲೆಯ ಹೊಸ ಹೊಸ ಸ್ವರೂಪಗಳನ್ನು ತಿಳಿದುಕೊಳ್ಳಲು, ನನಗೆ ಸಾಧ್ಯವಾದಾಗಲೆಲ್ಲ ಪ್ರತಿವರ್ಷದ ಚಿತ್ರಸಂತೆಯನ್ನು ಬಿಟ್ಟೂ ಬಿಡದೆ ಓಡಾಡಿಕೊಂಡು ಬರುವವಳು ನಾನು. ಈ ಸರ್ತಿಯೂ ಹೋಗಿದ್ದೆ ಆದರೆ ಚಿತ್ರಸಂತೆಯ ರಸ್ತೆಯ ಇಕ್ಕೆಲಗಳ ನೋಟಕ್ಕಾಗಿ ಅಲ್ಲ; ಚಿತ್ರಸಂತೆಯಲ್ಲಿ ನನ್ನ ಮಂಡಲ ಆರ್ಟ್ ಅನ್ನು ಪ್ರದರ್ಶಿಸುವ ಒಬ್ಬ ಕಿರಿಯ ಕಲಾವಿದೆಯಾಗಿ.. :) ಚಿತ್ರಸಂತೆಯನ್ನು ನೋಡುಗರಾಗಿ ಹೋಗುವುದಕ್ಕೂ, ಅಲ್ಲಿನ ಒಂದು ಭಾಗವಾಗಿ ಇರುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇದು ನನ್ನ 'ರಸ್ತೆಯ ಆ ಕಡೆ ನಿಂತವರ ಅನುಭವದ ಕಥೆಗಳು'! ಅಲ್ಲಿ, ೮ ಗಂಟೆಯ ನಂತರ ಯಾವುದೇ ವಾಹನಗಳ ಓಡಾಟವನ್ನು ನಿಷಿದ್ಧಗೊಳಿಸುವುದರಿಂದ ನಾವು ನಮ್ಮ ನಮ್ಮ ಕಲಾಕೃತಿಗಳನ್ನು ಗಾಡಿಯಲ್ಲಿ ತರುವುದಾದರೆ, ಆದಷ್ಟು ಬೇಗ ಕೊಂಡೊಯ್ದಿಡಬೇಕಾಗುತ್ತದೆ. ಬೆಳಿಗ್ಗೆ ೭.೧೫ ಗೆ ಚಿತ್ರಸಂತೆಯ ರಸ್ತೆಯಲ್ಲಿ ನನ್ನ ಕಲಾಕೃತಿಗಳ ಸೂಟ್ಕೇಸ್ ಹಿಡಿದು ಇಳಿದು ನಿಂತಿದ್ದೆ. ಮೊದಲ ಅನುಭವವಾದ್ದರಿಂದ ಮನಸ್ಸಿನೊಳಗೆ ಪುಕುಪುಕು. ಆದರೂ ಗಣಪತಿ ಅಣ್ಣಯ್ಯ, ವಿಜಯಶ್ರೀ ಅಕ್ಕ, ಪ್ರಹ್ಲಾದಣ್ಣ ಎಲ್ಲರೂ ತಮ್ಮ ಪ್ರತಿಸಲದ ಅನುಭವಗಳನ್ನು ಈ ಮುಂಚೆ ನನ್ನೊಡನೆ ಹಂಚಿಕೊಂಡಿದ್ದರಿಂದ, ನಾನು ಮಾನಸಿಕವಾಗಿ ಪ್ರತಿಯೊಂದಕ್ಕೂ ಸಿದ್ಧವ...

ಲಿವಿಂಗ್ ರೂಟ್ ಬ್ರಿಡ್ಜ್

ಪ್ರಪಂಚದಾದ್ಯಂತ ಅದೆಷ್ಟೋ ಸೇತುವೆಗಳು, ತಮ್ಮ ನಿರ್ಮಾಣದ  ಐತಿಹಾಸಿಕತೆಗೆ, ವಿಜ್ಞಾನ ಮತ್ತು ತಂತ್ರವಿದ್ಯೆಗೆ ಪ್ರಸಿದ್ಧಿಯನ್ನು ಪಡೆದಿದೆ. ಮಾನವನ ಆವಿಷ್ಕಾರಗಳ ಚಾಣಾಕ್ಷ್ಯತೆಯ ಇಂತಹ ಕೊಡುಗೆಗಳ ಪೈಕಿ, ಕಲ್ಲು, ಇಟ್ಟಿಗೆ, ಕಬ್ಬಿಣ, ಉಕ್ಕು, ಕಾಂಕ್ರೀಟ್ ಇತ್ಯಾದಿ ಯಾವುದೇ ವಸ್ತುಗಳನ್ನು ಬಳಸದೇ,  ಪ್ರಕೃತಿಯನ್ನೇ ಸಂಪರ್ಕ ಕೊಂಡಿಯಾಗಿ ಬಳಸಿಕೊಂಡು ನಿರ್ಮಿಸಿರುವ, ನೂರಾರು ವರ್ಷಗಳಷ್ಟು ಹಳೆಯ ಆದರೂ ಸುಧೃಡವಾಗಿ ಚಾಲ್ತಿಯಲ್ಲಿರುವ, ಸೇತುವೆಗಳ ದಾಖಲೆಯೊಂದು ನಮ್ಮ ಭಾರತದಲ್ಲಿದೆ. ಅದುವೇ ಪ್ರಪಂಚದ ಅದ್ಭುತ ಅಚ್ಚರಿಗಳಲ್ಲಿ ಒಂದಾದ ಮೇಘಾಲಯದ ನಿಸರ್ಗವುದು ಕೇವಲ ಮರಗಳ ಬೇರುಗಳಿಂದ! ಭಾರತದ ಆರ್ದ್ರ ಸ್ಥಳ ಎಂಬ ಮನ್ನಣೆಗೆ ಪಾತ್ರಗೊಂಡಿರುವ ಮೇಘಾಲಯದ ಚಿರಾಪುಂಜಿಯಲ್ಲಿ ವರ್ಷವಿಡೀ ಮಳೆ. ಸರ್ವ ನಿರ್ಮಿತ ಸೇತುವೆ - ಲಿವಿಂಗ್ ರೂಟ್ ಬ್ರಿಡ್ಜ್. 'ಲಿವಿಂಗ್ ರೂಟ್ ಬ್ರಿಡ್ಜ್' ಹೆಸರೇ ಸೂಚಿಸುವಂತೆ, ಈ ಸೇತುವೆಗಳು ನಿರ್ಮಾಣಗೊಂಡಿರುವುದು ಜೀವಂತ ಮರದ ಬೇರುಗಳಿಂದ! ಸಂಪನ್ನ ಅರಣ್ಯ ರಾಶಿ ಇಲ್ಲಿನ ವರವೇನೋ ಹೌದು. ಆದರೆ ಈ ಮಳೆ ನಾಡಿನಲ್ಲಿ ಮೂಲನಿವಾಸಿಗಳ ಕಾಲದಿಂದಲೂ ನದಿ ಮತ್ತು ಹೊಳೆಗಳನ್ನು ದಾಟಲು ಸಂಪರ್ಕ ಕೊಂಡಿಯ ವ್ಯವಸ್ಥೆ ಅತ್ಯಂತ ದೊಡ್ಡ ಸವಾಲು. ಹಿಂದೆ, ಬಿದಿರು ಮತ್ತು ಇತರ ಮರಮುಟ್ಟುಗಳನ್ನು ನೀರಿಗ...

ಹೇಮಕುಂಡ್ ಸಾಹಿಬ್ - ಹಿಮಾಲಯ ಟ್ರೆಕ್

ಇಮೇಜ್
ಜಿಟಿ ಜಿಟಿ ಮಳೆ, ಹಿಮಾಲಯದ ಶೃಂಗಗಳಿಂದ ಬೀಸುವ ಶೀತಗಾಳಿ, ಹಾದಿಯ ಅಕ್ಕಪಕ್ಕದಲ್ಲೆಲ್ಲ ಮಳೆಯಲ್ಲಿ ತೋಯ್ದು ತೆಪ್ಪೆಯಾದ ಹಸಿರು ಗಿಡ ಮರಗಳು, ಸೂರ್ಯನ ಪ್ರಕಾಶಕ್ಕೆ, ಹವಳಗಳಂತೆ ಹೊಳೆವ ಹೂವಿನ ಮೇಲಿನ ಮಳೆ ಹನಿಗಳು, ಕಣ್ಣೆತ್ತಿ ನೋಡಿದಷ್ಟೂ ಪರ್ವತಾವಳಿ,  ಕ್ಪಣ ಕ್ಷಣಕ್ಕೂ ಸುತ್ತಲಿನ ನಿಸರ್ಗವನ್ನು ಮಾಂತ್ರಿಕವಾಗಿ ಬದಲಾಯಿಸುವ  ಇಬ್ಬನಿ, ಮಂಜು ಮತ್ತು ಮೋಡಗಳ ಆಟ, ದೊಡ್ಡ ದೊಡ್ಡ ಪರ್ವತಗಳನ್ನು ಹಾದು,ಬೆಳ್ಳಗೆ ಹಾಸಿ ಬಂದು ನಿಂತಿರುವ ಹಿಮನದಿ, ಆ ಬ್ರಹತ್ ಹಿಮನದಿಗಳ ಪಕ್ಕದಲ್ಲೇ, ಮೈಯ ಕೊರೆಯುವ ಚಳಿಯಲ್ಲಿ ನಮ್ಮ ನೆಡಿಗೆ.. ಅಬ್ಬಾಬ್ಬಾ..ಅನುಭವಿಸಿಯೇ ತೀರಬೇಕು ಆ ರಮ್ಯತೆಯನ್ನು! ಹೀಗೊಂದು ರೋಚಕ ಚಾರಣದ ಅನುಭವವನ್ನು ಕಳೆದ ಅಗಸ್ಟ್ ತಿಂಗಳಿನಲ್ಲಿ ಉತ್ತರಾಂಚಲದ 'ಹೇಮಕುಂಡ್ ಸಾಹಿಬ್' ಗೆ ಭೇಟಿ ನೀಡುವ ಸಂದರ್ಭದಲ್ಲಿ ನಾವು ಪಡೆದೆವು.  'ಹೇಮಕುಂಡ್ ಸಾಹಿಬ್' -ಸ್ಥಳ ಇತಿಹಾಸ : ಸಂಸ್ಕೃತದಲ್ಲಿ 'ಹೇಮ್' ಎಂದರೆ ಹಿಮ ಮತ್ತು 'ಕುಂಡ್' ಎಂದರೆ ಬಟ್ಟಲು. ಹೌದು, ಹೇಮಕುಂಡ್ ಸಾಹಿಬ್ ಒಂದು ಹಿಮದ ಬೋಗುಣಿಯಲ್ಲಿರುವ ಗುರುದ್ವಾರ.  ಈಗಿನ ಹೇಮಕುಂಡ್ ಸಾಹಿಬ್ ಗುರುದ್ವಾರವಿರುವ ಸ್ಥಳದಲ್ಲಿ, ಹಿಂದಿನಿಂದಲೂ ರಾಮನ ತಮ್ಮ ಲಕ್ಷ್ಮಣ ತನ್ನ ಹಿಂದಿನ ಜನ್ಮದವತಾರದಲ್ಲಿ ದೈವಕೃಪೆಗಾಗಿ ಕುಳಿತು ತಪಸ್ಸು ಮಾಡಿದ್ದನು ಎಂಬ ಪ್ರತೀತಿಯಿಂದ ಜೋಷಿಮಠದ ...

ಈ ಸರ್ತಿಯ ರಜೆ ಹೀಗಿದ್ದರೆ ಹೇಗೆ ಮುದ್ದು ಮಕ್ಕಳೇ..?

ಇಮೇಜ್
ಮುದ್ದು ಮಕ್ಕಳೇ ಪರೀಕ್ಷೆಗಳು ಮುಗಿದು ರಜೆ ಪ್ರಾರಂಭವಾಗಿದೆ. ರಜೆ ಎಂದರೆ ಪಠ್ಯಪುಸ್ತಕ ಹೊಂವರ್ಕ್ ಗಳಿಂದ ಬಿಡುಗಡೆ, ಟಿ.ವಿ, ಮೊಬೈಲು, ಕೈಯಲ್ಲಿ ಕುರುಕಲು ತಿಂಡಿ ಮಾತ್ರ ಅಲ್ಲ ಪುಟಾಣಿಗಳೇ.. ಅದಕ್ಕಿಂತ ಮಿಗಿಲಾಗಿ ನಿಮ್ಮನ್ನು ರಂಜಿಸುವ ಅನೇಕ ವಿಷಯಗಳು ಹೊರಗಿನ ಪ್ರಪಂಚದಲ್ಲಿವೆ. ಈ ಸರ್ತಿ ಅವೆಲ್ಲವನ್ನು ಹುಡುಕಿ ಇಂಟರೆಸ್ಟಿಂಗ್ ಹಾಲಿಡೆ ಮಾಡಿಕೊಳ್ಳೋಣವೆ? ಈ ರಜೆಯನ್ನು ಉತ್ತಮವಾಗಿ ಸದುಪಯೋಗಪಡಿಸಿಕೊಳ್ಳಲು, ಮತ್ತಷ್ಟು ರಂಗು ರಂಗಾಗಿಸಲು ನಿಮಗೆ ಇಲ್ಲಿವೆ ಕೆಲವು ಹಾಲಿಡೇ ಟಿಪ್ಸ್ ನಿಮಗೆ ದೊರಕಿರುವ ಈ ದಸರಾ ರಜೆಯ ಉದ್ದೇಶ, ಹಬ್ಬ ಹರಿದಿನಗಳ ಆಚರಣೆ, ಹಿನ್ನಲೆಗಳ ಬಗ್ಗೆ ಹಿರಿಯರಿಂದ ಕೇಳಿ ತಿಳಿದುಕೊಳ್ಳಿ. 'ನಿಮ್ಮದೇ ಹಾಬಿ ಪುಸ್ತಕವಿದ್ದರೆ ಅದರಲ್ಲಿ ತಿಳಿದುಕೊಂಡಿದ್ದನ್ನು ಬರೆದಿಟ್ಟುಕೊಂಡು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.  ದೊಡ್ಡವರ ಜೊತೆ ಚರ್ಚಿಸಿ, ಆಟದ ಮೂಲಕ ಒಂದು ದಿನ ನಿಮ್ಮ 'ಅಮ್ಮ' ನ ರೋಲ್ ನೀವು ತೆಗೆದುಕೊಳ್ಳಿ. ಅಮ್ಮ ತರಹ ಆಕ್ಟ್ ಮಾಡುವುದು, ಅಮ್ಮನ ತರಹ ಮನೆಯಲ್ಲಿನ  ಎಲ್ಲ ಕೆಲಸ ಮಾಡುವುದು, ಎಲ್ಲವೂ ಅಮ್ಮನಂತೆ.. ! ಬೇಕಾಗುವ ಕೆಲವು ಜವಾಬ್ಧಾರಿಯುತ ಕೆಲಸಕ್ಕೆ ಕೇಳಿ ಸಹಾಯ ಪಡೆದುಕೊಳ್ಳಿ ಆದರೆ ನಿಮ್ಮ ಪ್ರಯತ್ನ ಮೊದಲು ಇರಲಿ.  ಪ್ರತಿದಿನ ನಿಮ್ಮಿಂದ ಸಾಧ್ಯವಾಗುವ ಯಾವುದಾದರೂ ಒಂದು ಮನೆಗೆಲಸವನ್ನು ಮುಂಚಿತವಾಗಿಯೇ ದೊಡ್ಡವರಿಗೆ ತಿಳಿಸಿ ಮಾಡಿ ಕೊಡಿ ಮತ್ತು ಮಾಡಿಯಾದ ನಂತರಆ ಕೆಲಸ...

ನವರಾತ್ರಿ ಎಟ್ ಗುವಾಹಟಿ

ಇಮೇಜ್
ನವರಾತ್ರಿ ಸಮಯದಲ್ಲೇ ಈ ಸರ್ತಿ ಅಸ್ಸಾಂ ಗೆ ಪ್ರವಾಸ ಹೋಗಿದ್ದರಿಂದ, ಅಲ್ಲಿ ವಿಜೃಂಭಣೆಯಿಂದ ಆಚರಿಸಲಾಗುವ 'ದುರ್ಗಾ ಪೂಜಾ' ಹಬ್ಬವನ್ನು ಕಣ್ಣಾರೆ ಕಾಣುವ ಅದೃಷ್ಟ ನಮಗೆ ಸಿಕ್ಕಿತು. ನಮ್ಮಲ್ಲಿ ಗಣಪತಿ ಹಬ್ಬದ ಸಮಯದಲ್ಲಿ, ಸ್ಪರ್ಧಾತ್ಮಕ ಅಲಂಕಾರ, ವಿವಿಧ ಥೀಮ್ ಗಳೊಂದಿಗೆ ಸ್ಥಾಪಿತವಾಗುವ ಗಣಪನಂತೆ, ಅಲ್ಲಿ ದುರ್ಗೆ ರಾರಾಜಿಸುತ್ತಾಳೆ.. ಈ ಸಮಯದಲ್ಲಿ ಊರಿಗೆ ಊರೇ, ಸಣ್ಣ ದೊಡ್ಡ ದುರ್ಗಾ ಪೂಜಾ ಪೆಂಡಾಲ್ಗಳು, ಲೈಟಿನ ಸರಗಳಿಂದ ಕೋರೈಸುತ್ತದೆ..ನಾವು ಉಳಿದುಕೊಂಡಿದ್ದ ಹೋಟೆಲ್ ನಿಂದ, ಹತ್ತಿರದಲ್ಲಿದ್ದ ಒಂದು ದುರ್ಗಾ ಪೂಜಾ ಸ್ಥಳಕ್ಕೆ ಭೇಟಿ ನೀಡಿದ್ದೆವು. ಒಂದು ಅದ್ಭುತವಾದ ಮತ್ತು ವಿಶೇಷತೆಯನ್ನು ಹೊಂದಿದ್ದ ಉತ್ಸವ ಕಾರ್ಯಕ್ರಮವದು..ಮುಖ್ಯ ರಸ್ತೆಯಿಂದ ಹಿಡಿದು, ಒಳಗಿನ ಮಾರ್ಗ, ಪೆಂಡಾಲ್, ಸುತ್ತಮುತ್ತಲಿನ ಅಲಂಕಾರ, ಸರ್ವಂ 'ಸೆಣಬು' ಮಯಂ!! ಈ ಸರ್ತಿಯ ಅಸ್ಸಾಂ ಪೂಜಾ ಕಮಿಟಿ ಯವರಿಂದ, ಸಾಧ್ಯವಾದಷ್ಟು ಪ್ಲಾಸ್ಟಿಕ್ ಮತ್ತಿತರ ಮಾಲಿನ್ಯ ವಸ್ತುಗಳ ಬಳಸದೇ ದುರ್ಗಾ ಪೂಜಾ ಅರೇಂಜ್ಮೆಂಟ್ ಕಾಂಪಿಟಿಷನ್ ಗೆ ಕರೆ ಕೊಟ್ಟಿದ್ದರಿಂದ, ಈ ಸಂಸ್ಥೆಯವರು ಕೊಲ್ಕತ್ತಾ ಕಲಾವಿದರನ್ನು ಕರೆಸಿ ಕೇವಲ ಮರದ ಚೂರು, ಸೆಣಬು, ಭತ್ತದ ನಾರು, ಹಣ್ಣುಗಳ ಬೀಜ, ಮಣ್ಣು ಇತ್ಯಾದಿ ವಸ್ತುಗಳನ್ನು ಬಳಸಿ ಈ ಮಂಟಪವನ್ನು ತಯಾರು ಮಾಡಿದ್ದರಂತೆ.. ಪ್ರಸಾದ ವಿತರಣೆಗೆ ಕೇವಲ ನೈಸರ್ಗಿಕ ಎಲೆ ಮತ್ತು ಬಾಳೆಎಲೆಗಳ ಬಳಕೆ ಮಾಡಿದ್ದರು. ಇದು ಅಸ್ಸಾಂ ದುರ್ಗಾ ಪೂಜಾ ಅರ...