ಪೋಸ್ಟ್‌ಗಳು

ಕೊರೋನಾ ಅನುಭವ - ಮಾಹಿತಿ

"ಮಗನಿಗೆ ಕೆಮ್ಮು ಜಾಸ್ತಿ ಆಗುತ್ತಲಿತ್ತು. ಜ್ವರ ಶುರುವಾಗಿತ್ತು. ಆಸ್ಪತ್ರೆಗೆ ಫೋನಾಯಿಸಿ ವಿಚಾರಿಸಿದಾಗ ರೋಗದ ಎಲ್ಲ ಲಕ್ಷಣಗಳನ್ನೂ ವಿಚಾರಿಸಿ, ಕೊರೋನಾ ಸೋಂಕು ರೋಗವೇ ಹೌದೆಂದು ಖಾತ್ರಿ ಮಾಡಿದರು. ಆ ಸಮಯಕ್ಕೆ ಇಂಗ್ಲಾಂಡ್ದಲ್ಲಿ ಅದೆಷ್ಟು ಸೋಂಕಿತರ ಸಂಖ್ಯೆ ಹೆಚ್ಚಿತ್ತೆಂದರೆ, ಎಲ್ಲ ಆಸ್ಪತ್ರೆಗಳಲ್ಲಿಯೂ ಕೊರೋನಾ ರೋಗಿಗಳೇ ತುಂಬಿಕೊಂಡಿರುತ್ತಿದ್ದರು . ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಇನ್ನೂ ಹೆಚ್ಚಿನ ರೋಗಾಣುಗಳಿಗೆ ನಮ್ಮನ್ನು ನಾವೇ ತೆರೆದಿಟ್ಟ ಲೆಕ್ಕ. ತೀರಾ ಉಸಿರಾಟದ ಸಮಸ್ಯೆ ಇಂದ ಒದ್ದಾಡುತ್ತಿರುವವರ ಮಧ್ಯೆ, ಆಗಿನ್ನೂ ಶುರುವಿನ ಹಂತದಲ್ಲಿದ್ದ ನನ್ನ ಮಗುವಿನ ಲಕ್ಷಣವನ್ನು ಗಮನಿಸಿ, ಆಸ್ಪತ್ರೆಯವರು ನಾವು ಮನೆಯಲ್ಲಿಯೇ ಇರಬಹುದಾದ ಆಯ್ಕೆ ನೀಡಿದ್ದರು. ಡಾಕ್ಟರ್ ನೀಡಿದ ಸಲಹೆಯಂತೆ, ಅವರು ಕೊಟ್ಟ ಸೂಚನೆಗಳ ಮೇರೆಗೆ, ನಾವು ಮಗುವನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡು ಚೇತರಿಸ್ಕೊಳ್ಳುವ ತೀರ್ಮಾನಕ್ಕೆ ಬಂದೆವು. ಎರಡು ಮಕ್ಕಳೊಂದಿಗೆ ೧೪ ದಿನಗಳು ನಮ್ಮನ್ನು ನಾವೇ ಮನೆಯಲ್ಲಿ ಸಂಪೂರ್ಣವಾಗಿ ಕೂಡಿಟ್ಟುಕೊಂಡೆವು. ಒಂದು ಕಾಲು ಹೊರಗೆ ಹೋಗಲಿಲ್ಲ, ಒಂದು ಕಾಲು ಒಳಗೆ ಬರಲಿಲ್ಲ. ಮಗ ೪.೫ ವರ್ಷದವ, ಮಗಳು ೨.೫ ವರ್ಷದವಳು..ಮಗನಿಗೆ ಹಬ್ಬಿರುವ ಸೋಂಕು ಮನೆಯಲ್ಲಿ ಸುಲಭವಾಗಿ ಎಲ್ಲರಿಗೂ ಹಬ್ಬುವ ಸಾಧ್ಯತೆ ಇದ್ದಿದ್ದರಿಂದ, ನಾವಿಬ್ಬರು ಯೋಚಿಸಿಕೊಂಡು, ಒಂದೊಂದು ಮಗುವನ್ನು ಒಬ್ಬೊಬ್ಬರು ನೋಡಿಕೊಳ್ಳುವ ಜವಾಬ್ಧಾರಿಯನ್ನು ಹಂ...

ತಾಯಂದಿರ ದಿನವಿದು

ಇಮೇಜ್
ನನ್ನ ಅಮ್ಮುಮ್ಮ ನಿಗೆ ಈಗ ೯೪ ವರ್ಷ. ಬಡತನ ಕಷ್ಟ ಕಾರ್ಪಣ್ಯಗಳನ್ನು ಜೀವನದುದ್ದಕ್ಕೂ ಪಡೆದು, ಸಹಿಸಿಕೊಂಡು ಬಂದವಳು ಅವಳು.. ಮನೆ ತುಂಬಾ ಮಕ್ಕಳು. ದೊಡ್ಡ ಮಗಳ ಬಾಳಂತನ ಮತ್ತು ಅಮ್ಮುಮ್ಮನ ಕಿರಿ ಮಗುವಿನ ಬಾಳಂತನ ಹೆಚ್ಚು ಕಮ್ಮಿ ಒಟ್ಟೊಟ್ಟಿಗೆ ನಡೆಯುವಂತಹ ಕಾಲದಲ್ಲಿ, ಪ್ರತಿಯೊಂದನ್ನೂ ಸಂಭಾಳಿಸಿದವಳು..ಕಷ್ಟಕರ ವ್ಯವಸಾಯ ದುಡಿಮೆ, ಆಸ್ತಿ ವ್ಯಾಜ್ಯ ಜಗಳಗಳ ನಡುವೆ ಗಂಡನೊಂದಿಗೆ ಸೂರಿಂದ ಸೂರಿಗೆ ದಾಟುತ್ತ, ಎರಡೇ ಎರಡು ಸೀರೆಯಲ್ಲಿ ತಾನು ಜೀವನ ಮಾಡಿಕೊಂಡು, ೪ ಅಂಗಿ ಚಡ್ಡಿ, ೨ ಲಂಗ ಗಳಲ್ಲಿ ಆರು ಜನ ಮಕ್ಕಳನ್ನು ಕಷ್ಟಪಟ್ಟು ಬೆಳೆಸಿಕೊಂಡು ಬಂದ ಗಟ್ಟಿಗಿತ್ತಿ ನನ್ನ ಅಮ್ಮುಮ್ಮ.. ಆಗಿನ ಪರಿಸ್ಥಿತಿಯೇ ಹಾಗಿತ್ತು, ಎಲ್ಲರ ಹೊಟ್ಟೆಗೆ ಆಗುವಷ್ಟು ಊಟ ತಿಂಡಿ, ದನಕರಗಳ ಹೊಟ್ಟೆ ಹೊರೆಯುವ ಕೆಲಸ, ಇಷ್ಟರಲ್ಲೇ ದುಡಿಮೆ ಸರಿಯಾಗುತ್ತಿತ್ತು..ಮತ್ತೊಂದಷ್ಟು ಕಷ್ಟಪಟ್ಟು ಉಳಿಸಿಕೊಂಡ ದುಡ್ಡು, ವ್ಯಾಜ್ಯ ಕೋರ್ಟು ಕಚೇರಿ ಎಂದೇ ಕರಗುತ್ತಿತ್ತು..ಒಮ್ಮೆಯಂತೂ ಪೂಜ್ಯ ಶ್ರೀಧರ ಗುರುಗಳು ಮನೆ ಬಾಗಿಲಿಗೆ ಬಂದಾಗ, ಅವರಿಗೆ ದಾನ ನೀಡಲು ಧಾನ್ಯ, ಉತ್ತಮವಾದ ಹಣ್ಣು, ಸಿಹಿ ಅಪ್ಪಚ್ಚಿ  ಏನೂ ಇರದಿದ್ದಾಗ ಕೇವಲ ಬೆಲ್ಲ ಮತ್ತು ಒಂದು ಹಿಡಿ ಅರಳುಕಾಳು ಕೊಟ್ಟು, ಕಾಲಿಗೆ ನಮಸ್ಕರಿಸಿ ಕಳುಹಿಸಿದ ಪ್ರಸಂಗವನ್ನು ಅಮ್ಮುಮ್ಮ ಇವತ್ತಿಗೂ ನೆನಪಿಸಿಕೊಳ್ಳುತ್ತಾಳೆ. ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಲೂ ಆಗದ ಪರಿಸ್ಥಿತಿ ಅವರದ್ದು.. ಮಕ್ಕಳೆಲ್ಲಾ ಎಲ್ಲೆಲ್ಲೋ, ಯಾರ್...

ಮದರಂಗಿ

ಇಮೇಜ್
ಅದೊಂದು ಹಬ್ಬದ ಮರುದಿನ ಮಾತ್ರ ಸ್ಕೂಲಿಗೆ  ರೆಡಿಯಾಗಿ ಹೋಗಲು ಭಾರೀ ಉತ್ಸಾಹ..ನಾನಂತೂ ಶಾಲೆಗೆ ಹೊರಡುವ ಸಮಯಕ್ಕಿಂತ ಸುಮಾರು ಮುಂಚೆನೇ ಬೆನ್ನಿಗೆ ಚೀಲ ಹೊತ್ತುಓಡಿಯಾಗಿರುತ್ತಿತ್ತು..ಸ್ಕೂಲಿನ ಕಾರಿಡಾರ್ ನಲ್ಲಿ ನಡೆಯುವಾಗಲೂ ಕಣ್ಣು ಆ ಕಡೆ ಈ ಕಡೆ ಏನೋ ಹುಡುಕುತ್ತ ನೋಡುತ್ತಾ ಹೋಗುವುದು..ಯಾವ ಹಬ್ಬವಪ್ಪ ಅದು, ಏನನ್ನು ಹುಡುಕುವುದು ಅಂತ ಕೇಳಿದ್ರ? ನಾಗರಪಂಚಮಿ ಹಬ್ಬದ ಮರುದಿನದ ಮದರಂಗಿ ಕೈಗಳು..! ಪ್ರತಿಸಲವೂ ಸ್ವಲ್ಪ ಮದರಂಗಿ ತಾಕಿದರೂ ಅಚ್ಚ ಕೆಂಪು ಬಣ್ಣದಿಂದ ರಂಗೇರುವ ಕೈಯನ್ನು, ಹತ್ತತ್ತು ಸಲ ನೋಡಿಕೊಳ್ತಾ, ಶಾಲೆಗೆ ಹೋಗುತ್ತಿದ್ದೆ. ಪಾಠಕ್ಕೂ ಮೊದಲು, ಊಟದ ಬ್ರೇಕು, ಕಡೆಗೆ ಸಂಜೆ ಮನೆಗೆ ಹೋಗುವ ಬೆಲ್ ಹೊಡೆದು ವಾಪಸು ಮನೆಗೆ ಹೊರಡುವ ಗಳಿಗೆಗೂ , ಯಾರ್ಯಾರ ಕೈ ಎಷ್ಟು ಕೆಂಪಾಗಿದೆ, ಏನೇನು ಡಿಸೈನ್ ಮಾಡಿಕೊಂಡು ಬಂದಿದ್ದಾರೆ ಅಂತೆಲ್ಲ ಒಬ್ಬರಿಗೊಬ್ಬರು  ತೋರಿಸಿಕೊಂಡು ಸಂಭ್ರಮ ಪಡುತ್ತಿದ್ದೆವು.. ನಾಗರಪಂಚಮಿ ಹಬ್ಬ ಶ್ರಾವಣ ಮಾಸದಲ್ಲಿ ಬರುವ ಮೊದಲ ಹಬ್ಬ. ನಾಗರ ಪೂಜೆಯಾದರೂ ಮನೆಯಲ್ಲೇ ದೇವರ ಪೂಜೆ ಮಾಡಿ ನೈವೇದ್ಯಕ್ಕಿಡುತ್ತಿದ್ದರೇ ಹೊರತು ನಮ್ಮ ಮನೆಯಲ್ಲಿ ಹಾವಿನ ಹುತ್ತಕ್ಕೆ, ನಾಗರ ಕಲ್ಲಿಗೆ ಹಾಲೆರೆಯುವ ಸಂಪ್ರದಾಯವೇನೂ ಇರಲಿಲ್ಲ. .ನಮಗಂತೂ ನಾಗರ ಪೂಜೆ, ಸ್ವೀಟು-ಅಪ್ಪಚ್ಚಿ ಎನ್ನುವುದಕ್ಕಿಂತಲೂ ಇದು ಮದರಂಗಿ ಹಚ್ಚಿ ಕೈ ಕ...

ಪದಗಳ ಆಟ

ಇಮೇಜ್
1 . ಮೂರು ಪದ ಒಂದು ಕಥೆ - ಮಕ್ಕಳಿಗೆ ಅವರ ವಯಸ್ಸಿನ ಮಿತಿಗೆ ಅನುಗುಣವಾಗಿ, ಸುಲಭವಾಗಿ ಮಕ್ಕಳು ಗುರುತಿಸಲ್ಪಡುವ ಯಾವುದಾದರೂ ಮೂರು ಪದಗಳನ್ನು ಕೊಟ್ಟು, ಅವುಗಳನ್ನು ಬಳಸಿ ಕಥೆಯೊಂದನ್ನು ಹೆಣೆಯಲು ತಿಳಿಸಬೇಕು. ೫-೬ ವರ್ಷದ ಮಕ್ಕಳ ಕಥೆ ಅರ್ಥಪೂರ್ಣವಾಗಿಯೇ ಇರಬೇಕೆಂಬ ಅಪೇಕ್ಷೆಯಿಲ್ಲ. ಮಕ್ಕಳಿಗೆ ಆ ಪದಗಳನ್ನು ಬಳಸಿ ವಾಕ್ಯ ರಚನೆ ಮಾಡುವುದು ಮತ್ತು ಒಂದಕ್ಕೊಂದು ಸಂಬಂಧ ಹೆಣೆಯುವ ಚಾಕ್ಷತೆ ಸಿಕ್ಕರೆ ಸಾಕು. ಮಕ್ಕಳು ಹಿಂದೆ ಕೇಳಿದ ಕಥೆಗಳಿಂದ ಪದಗಳನ್ನು ಹೆಕ್ಕಿ ಹೇಳಿದರೆ, ಕಥೆಯನ್ನು ನೆನಪಿಸಿಕೊಂಡು ತಮ್ಮದೇ ಧಾಟಿಯಲ್ಲಿ ಮಕ್ಕಳು ಕಥೆ ಹೇಳಿವಷ್ಟಾದರೂ ಸಾಕು ಸಂತೋಷ.. ನಮ್ಮ ಕೆಲಸಗಳನ್ನು ಮಾಡುತ್ತಲೇ ಮಕ್ಕಳನ್ನು ಆಡಿಸಬಹುದಾದ ತಮಾಷೆಯ ಆಟವಿದು. ಉದಾ : ಮೋಡ, ನೀರು, ಛತ್ರಿ               ಕಾಗೆ, ನರಿ, ರೊಟ್ಟಿ 2. ಒಂದು ಹುಂಡಿ ಅಕ್ಷರ - ಈ ಆಟವನ್ನು ಬಾಯ್ದೆರೆಯಾಗಿಯೂ ಆಡಬಹುದು, ಕನ್ನಡ ಕಾಗುಣಿತ ಕಲಿತ ಮಕ್ಕಳಾದರೆ, ಇದೊಂದು ಉತ್ತಮ ಬರವಣಿಗೆಯ ಆಟ. ಯಾವುದಾದರೊಂದು ಕನ್ನಡ ಅಕ್ಷರವನ್ನು ಒಬ್ಬರು ತಿಳಿಸುವುದು. ಮಕ್ಕಳು ಚಿಕ್ಕವರಾಗಿದ್ದರೆ, ಆಟವನ್ನು ಸ್ವಲ್ಪ ಸುಲಭವಾಗಿಸಲು, ಆ ಅಕ್ಷರ ಅಥವಾ ಅದರ ಕಾಗುಣಿತಾಕ್ಷರಗಳಿಂದ ಪ್ರಾರಂಭವಾಗುವ ಎಲ್ಲಾ ಪದಗಳನ್ನು ಹುಡುಕಿ ಹುಂಡಿಗೆ ಹಾಕುವುದು, ಎಂಬ ಅರ್ಥ ಬರುವಂತೆ ಪದಗಳನ್ನು ಯೋಚಿಸಿ ಹೇಳಲು ಅಥವಾ ಬರೆಯಲು ತಿಳಿಸಬಹುದು. ನಾವು ಮ...

ಚಿತ್ರಸಂತೆಯ ಅನುಭವ

ಚಿತ್ರಸಂತೆ - ಕಲಾಸಕ್ತರಿಗೆ ಒಂದೇ ಸೂರಿನಡಿ ಅನೇಕ ಪ್ರಕಾರದ ಕಲಾಕೃತಿಗಳನ್ನು ನೋಡಿ ಕಣ್ತುಂಬಿಕೊಂಡು, ಆಸಕ್ತ ಚಿತ್ರಗಳನ್ನು ಕೊಂಡುಕೊಳ್ಳಲು ಅವಕಾಶ ಸಿಗಬಹುದಾದ ಒಂದು ದಿನದ ಹಬ್ಬ! ಕಲೆಯ ಹೊಸ ಹೊಸ ಸ್ವರೂಪಗಳನ್ನು ತಿಳಿದುಕೊಳ್ಳಲು, ನನಗೆ ಸಾಧ್ಯವಾದಾಗಲೆಲ್ಲ ಪ್ರತಿವರ್ಷದ ಚಿತ್ರಸಂತೆಯನ್ನು ಬಿಟ್ಟೂ ಬಿಡದೆ ಓಡಾಡಿಕೊಂಡು ಬರುವವಳು ನಾನು. ಈ ಸರ್ತಿಯೂ ಹೋಗಿದ್ದೆ ಆದರೆ ಚಿತ್ರಸಂತೆಯ ರಸ್ತೆಯ ಇಕ್ಕೆಲಗಳ ನೋಟಕ್ಕಾಗಿ ಅಲ್ಲ; ಚಿತ್ರಸಂತೆಯಲ್ಲಿ ನನ್ನ ಮಂಡಲ ಆರ್ಟ್ ಅನ್ನು ಪ್ರದರ್ಶಿಸುವ ಒಬ್ಬ ಕಿರಿಯ ಕಲಾವಿದೆಯಾಗಿ.. :) ಚಿತ್ರಸಂತೆಯನ್ನು ನೋಡುಗರಾಗಿ ಹೋಗುವುದಕ್ಕೂ, ಅಲ್ಲಿನ ಒಂದು ಭಾಗವಾಗಿ ಇರುವುದಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಇದು ನನ್ನ 'ರಸ್ತೆಯ ಆ ಕಡೆ ನಿಂತವರ ಅನುಭವದ ಕಥೆಗಳು'! ಅಲ್ಲಿ, ೮ ಗಂಟೆಯ ನಂತರ ಯಾವುದೇ ವಾಹನಗಳ ಓಡಾಟವನ್ನು ನಿಷಿದ್ಧಗೊಳಿಸುವುದರಿಂದ ನಾವು ನಮ್ಮ ನಮ್ಮ ಕಲಾಕೃತಿಗಳನ್ನು ಗಾಡಿಯಲ್ಲಿ ತರುವುದಾದರೆ, ಆದಷ್ಟು ಬೇಗ ಕೊಂಡೊಯ್ದಿಡಬೇಕಾಗುತ್ತದೆ. ಬೆಳಿಗ್ಗೆ ೭.೧೫ ಗೆ ಚಿತ್ರಸಂತೆಯ ರಸ್ತೆಯಲ್ಲಿ ನನ್ನ ಕಲಾಕೃತಿಗಳ ಸೂಟ್ಕೇಸ್ ಹಿಡಿದು ಇಳಿದು ನಿಂತಿದ್ದೆ. ಮೊದಲ ಅನುಭವವಾದ್ದರಿಂದ ಮನಸ್ಸಿನೊಳಗೆ ಪುಕುಪುಕು. ಆದರೂ ಗಣಪತಿ ಅಣ್ಣಯ್ಯ, ವಿಜಯಶ್ರೀ ಅಕ್ಕ, ಪ್ರಹ್ಲಾದಣ್ಣ ಎಲ್ಲರೂ ತಮ್ಮ ಪ್ರತಿಸಲದ ಅನುಭವಗಳನ್ನು ಈ ಮುಂಚೆ ನನ್ನೊಡನೆ ಹಂಚಿಕೊಂಡಿದ್ದರಿಂದ, ನಾನು ಮಾನಸಿಕವಾಗಿ ಪ್ರತಿಯೊಂದಕ್ಕೂ ಸಿದ್ಧವ...

ಲಿವಿಂಗ್ ರೂಟ್ ಬ್ರಿಡ್ಜ್

ಪ್ರಪಂಚದಾದ್ಯಂತ ಅದೆಷ್ಟೋ ಸೇತುವೆಗಳು, ತಮ್ಮ ನಿರ್ಮಾಣದ  ಐತಿಹಾಸಿಕತೆಗೆ, ವಿಜ್ಞಾನ ಮತ್ತು ತಂತ್ರವಿದ್ಯೆಗೆ ಪ್ರಸಿದ್ಧಿಯನ್ನು ಪಡೆದಿದೆ. ಮಾನವನ ಆವಿಷ್ಕಾರಗಳ ಚಾಣಾಕ್ಷ್ಯತೆಯ ಇಂತಹ ಕೊಡುಗೆಗಳ ಪೈಕಿ, ಕಲ್ಲು, ಇಟ್ಟಿಗೆ, ಕಬ್ಬಿಣ, ಉಕ್ಕು, ಕಾಂಕ್ರೀಟ್ ಇತ್ಯಾದಿ ಯಾವುದೇ ವಸ್ತುಗಳನ್ನು ಬಳಸದೇ,  ಪ್ರಕೃತಿಯನ್ನೇ ಸಂಪರ್ಕ ಕೊಂಡಿಯಾಗಿ ಬಳಸಿಕೊಂಡು ನಿರ್ಮಿಸಿರುವ, ನೂರಾರು ವರ್ಷಗಳಷ್ಟು ಹಳೆಯ ಆದರೂ ಸುಧೃಡವಾಗಿ ಚಾಲ್ತಿಯಲ್ಲಿರುವ, ಸೇತುವೆಗಳ ದಾಖಲೆಯೊಂದು ನಮ್ಮ ಭಾರತದಲ್ಲಿದೆ. ಅದುವೇ ಪ್ರಪಂಚದ ಅದ್ಭುತ ಅಚ್ಚರಿಗಳಲ್ಲಿ ಒಂದಾದ ಮೇಘಾಲಯದ ನಿಸರ್ಗವುದು ಕೇವಲ ಮರಗಳ ಬೇರುಗಳಿಂದ! ಭಾರತದ ಆರ್ದ್ರ ಸ್ಥಳ ಎಂಬ ಮನ್ನಣೆಗೆ ಪಾತ್ರಗೊಂಡಿರುವ ಮೇಘಾಲಯದ ಚಿರಾಪುಂಜಿಯಲ್ಲಿ ವರ್ಷವಿಡೀ ಮಳೆ. ಸರ್ವ ನಿರ್ಮಿತ ಸೇತುವೆ - ಲಿವಿಂಗ್ ರೂಟ್ ಬ್ರಿಡ್ಜ್. 'ಲಿವಿಂಗ್ ರೂಟ್ ಬ್ರಿಡ್ಜ್' ಹೆಸರೇ ಸೂಚಿಸುವಂತೆ, ಈ ಸೇತುವೆಗಳು ನಿರ್ಮಾಣಗೊಂಡಿರುವುದು ಜೀವಂತ ಮರದ ಬೇರುಗಳಿಂದ! ಸಂಪನ್ನ ಅರಣ್ಯ ರಾಶಿ ಇಲ್ಲಿನ ವರವೇನೋ ಹೌದು. ಆದರೆ ಈ ಮಳೆ ನಾಡಿನಲ್ಲಿ ಮೂಲನಿವಾಸಿಗಳ ಕಾಲದಿಂದಲೂ ನದಿ ಮತ್ತು ಹೊಳೆಗಳನ್ನು ದಾಟಲು ಸಂಪರ್ಕ ಕೊಂಡಿಯ ವ್ಯವಸ್ಥೆ ಅತ್ಯಂತ ದೊಡ್ಡ ಸವಾಲು. ಹಿಂದೆ, ಬಿದಿರು ಮತ್ತು ಇತರ ಮರಮುಟ್ಟುಗಳನ್ನು ನೀರಿಗ...

ಹೇಮಕುಂಡ್ ಸಾಹಿಬ್ - ಹಿಮಾಲಯ ಟ್ರೆಕ್

ಇಮೇಜ್
ಜಿಟಿ ಜಿಟಿ ಮಳೆ, ಹಿಮಾಲಯದ ಶೃಂಗಗಳಿಂದ ಬೀಸುವ ಶೀತಗಾಳಿ, ಹಾದಿಯ ಅಕ್ಕಪಕ್ಕದಲ್ಲೆಲ್ಲ ಮಳೆಯಲ್ಲಿ ತೋಯ್ದು ತೆಪ್ಪೆಯಾದ ಹಸಿರು ಗಿಡ ಮರಗಳು, ಸೂರ್ಯನ ಪ್ರಕಾಶಕ್ಕೆ, ಹವಳಗಳಂತೆ ಹೊಳೆವ ಹೂವಿನ ಮೇಲಿನ ಮಳೆ ಹನಿಗಳು, ಕಣ್ಣೆತ್ತಿ ನೋಡಿದಷ್ಟೂ ಪರ್ವತಾವಳಿ,  ಕ್ಪಣ ಕ್ಷಣಕ್ಕೂ ಸುತ್ತಲಿನ ನಿಸರ್ಗವನ್ನು ಮಾಂತ್ರಿಕವಾಗಿ ಬದಲಾಯಿಸುವ  ಇಬ್ಬನಿ, ಮಂಜು ಮತ್ತು ಮೋಡಗಳ ಆಟ, ದೊಡ್ಡ ದೊಡ್ಡ ಪರ್ವತಗಳನ್ನು ಹಾದು,ಬೆಳ್ಳಗೆ ಹಾಸಿ ಬಂದು ನಿಂತಿರುವ ಹಿಮನದಿ, ಆ ಬ್ರಹತ್ ಹಿಮನದಿಗಳ ಪಕ್ಕದಲ್ಲೇ, ಮೈಯ ಕೊರೆಯುವ ಚಳಿಯಲ್ಲಿ ನಮ್ಮ ನೆಡಿಗೆ.. ಅಬ್ಬಾಬ್ಬಾ..ಅನುಭವಿಸಿಯೇ ತೀರಬೇಕು ಆ ರಮ್ಯತೆಯನ್ನು! ಹೀಗೊಂದು ರೋಚಕ ಚಾರಣದ ಅನುಭವವನ್ನು ಕಳೆದ ಅಗಸ್ಟ್ ತಿಂಗಳಿನಲ್ಲಿ ಉತ್ತರಾಂಚಲದ 'ಹೇಮಕುಂಡ್ ಸಾಹಿಬ್' ಗೆ ಭೇಟಿ ನೀಡುವ ಸಂದರ್ಭದಲ್ಲಿ ನಾವು ಪಡೆದೆವು.  'ಹೇಮಕುಂಡ್ ಸಾಹಿಬ್' -ಸ್ಥಳ ಇತಿಹಾಸ : ಸಂಸ್ಕೃತದಲ್ಲಿ 'ಹೇಮ್' ಎಂದರೆ ಹಿಮ ಮತ್ತು 'ಕುಂಡ್' ಎಂದರೆ ಬಟ್ಟಲು. ಹೌದು, ಹೇಮಕುಂಡ್ ಸಾಹಿಬ್ ಒಂದು ಹಿಮದ ಬೋಗುಣಿಯಲ್ಲಿರುವ ಗುರುದ್ವಾರ.  ಈಗಿನ ಹೇಮಕುಂಡ್ ಸಾಹಿಬ್ ಗುರುದ್ವಾರವಿರುವ ಸ್ಥಳದಲ್ಲಿ, ಹಿಂದಿನಿಂದಲೂ ರಾಮನ ತಮ್ಮ ಲಕ್ಷ್ಮಣ ತನ್ನ ಹಿಂದಿನ ಜನ್ಮದವತಾರದಲ್ಲಿ ದೈವಕೃಪೆಗಾಗಿ ಕುಳಿತು ತಪಸ್ಸು ಮಾಡಿದ್ದನು ಎಂಬ ಪ್ರತೀತಿಯಿಂದ ಜೋಷಿಮಠದ ...