ಪೋಸ್ಟ್‌ಗಳು

ವಿಶ್ವ ಭೂಮಿ ದಿನ

ಇಮೇಜ್
"ಯೇ, ಮಣ್ಣಲ್ಲಿ ಆಡಬೇಡಿ ಛೀ ಕೊಳಕು.." ಅಂತೇನಾದರೂ ನಮ್ಮ ಅಪ್ಪ ಅಮ್ಮ ಅವಾಗ ಹೇಳಿಬಿಟ್ಟಿದ್ದರೆ, ಮಣ್ಣು ಮಳೆಯ ಒಡನಾಟ ಇಲ್ಲದೇ ಜೀವ ಅದೆಷ್ಟು ಚೈತನ್ಯ ಹೀನಾವಾಗುತ್ತಿತ್ತೋ, ಜೀವನದ ಅದೆಷ್ಟು ಸಂತೋಷವನ್ನು ನಾವು ಕಳೆದುಕೊಂಡು ಬಿಡುತ್ತಿದ್ದೆವೋ ಏನೋ..!!  ಮಲೆನಾಡಿನ ಪರಿಸರದಲ್ಲಿ ನಮ್ಮ ಬಾಲ್ಯವಾದ್ದರಿಂದ, ಮಣ್ಣು, ನೀರು, ತೋಟ - ಗದ್ದೆ,  ಮಳೆ ಝರಿ, ಕಾಡು ಮೇಡು, ಹಕ್ಕಿ-ಜೀರುಂಡೆ ಎಲ್ಲವೂ ಉಸಿರಾಡುವ ಗಾಳಿಯಷ್ಟೇ ನಮಗೆ ಸಹಜವಾಗಿ ಹೋಗಿತ್ತು. ಅಂಗಾಲು ಮಣ್ಣಿಗೆ ಆಂಟಿಯೇ ಬೆಳೆದಿದ್ದು ನಾವು ಎಂದರೂ ತಪ್ಪಿಲ್ಲ. ಆಗಿನ ಕಾಲಕ್ಕೆ ಅದೆಷ್ಟು ಮಹಾ ಆಟಿಕೆಗಳಿರುತ್ತಿದ್ದವು ನಮಗೆ? ಎಲ್ಲಿ ನೋಡಿದರಲ್ಲಿ ಮಣ್ಣೇ ಮಣ್ಣು ಕಾಣಿಸುತ್ತಿತ್ತು. ಪುಟ್ಟಮಕ್ಕಳ ವಯಸ್ಸಿನಲ್ಲಿ, ಒಂದಷ್ಟು ಮಣ್ಣು ನೀರು ಇದ್ದ ಜಾಗಕ್ಕೆ ನಾವು ಓಡಿದರೆ, ಎಲ್ಲಾ ಆಟ ಮುಗಿದ ಮೇಲೆ, ಕೆಸರು ಹೊಂಡದಿಂದ ನಮ್ಮನ್ನು ಎತ್ತಿ ತಂದು ಸ್ನಾನ ಹೊಡೆಸುವುದು ದೊಡ್ಡವರಿಗೂ ಅಷ್ಟೇ ಸಹಜವಾದ ಕೆಲಸವಾಗಿತ್ತು. ಮಣ್ಣು ನುಣುಪು-ಒರಟು ಎಂಬಿತ್ಯಾದಿ ಸೂಕ್ಷ್ಮಗಳು ಎಂದೂ ನಮ್ಮನ್ನು ಭಾದಿಸಲಿಲ್ಲ. ಗಂಟೆಗಟ್ಟಲೆ ಮಣ್ಣನ್ನು ಕಲಸಿ, ಕೈಯಿಂದ ಕೈಗೆ ಸುರಿಯುತ್ತ ಆಡುತ್ತಿದ್ದೆವು. ಅಜ್ಜನ ಮನೆಗೆ ಹೋದರೆ, ಸೂರ್ಯ ಹುಟ್ಟುವುದಕ್ಕೂ ಮುಂಚೆ, ಅಂಗಳ ಬಳಿಯಲು ಸಗಣಿ ಮತ್ತು ಕೆಮ್ಮಣ್ಣು ಸೇರಿಸಿ, ನೀರಿನ ಜೊತೆ ಹದವಾಗಿ ಮಿಶ್ರಣ ಮಾಡಿ ಕೈಯಲ್ಲಿ ಹರಡಿಕೊಂಡ...

kodi beach

ಕಡಲ ತೀರದ ಮರಳ ರಾಶಿ, ಹೊಂಬಣ್ಣದ ಸೂರ್ಯಾಸ್ತ ಮತ್ತು ಸಮುದ್ರದ ಅಲೆಗಳ ಬಿಳುಪು ಕುರಿತಾಗಿ ನನಗೆ ಮೊದಲಿನಿಂದಲೂ ತೀರದ ಮೋಹ. ಓಡಾಡಿರುವ ಬೀಚ್ ಗಳ ಪೈಕಿ, ಮನಸ್ಸಿಗೆ ಆಹ್ಲಾದ ನೀಡಿ, ಅತ್ಯಂತ ಆಪ್ತವೆನಿಸಿದ ಸಮುದ್ರತೀರಗಳಲ್ಲಿ, ಕುಂದಾಪುರ ಸಮೀಪದ ಕೋಡಿ ಬೀಚ್ ಕೂಡ ಒಂದು. ಹಾದಿಬದಿಯುದ್ದಕ್ಕೂ ತೆಂಗಿನ ಮರಗಳ ಸಾಲು, ಕಣ್ಣು ಹಾಯಿಸಿದಷ್ಟೂ ಕಡಲ ನೀರು, ಸಮುದ್ರದ ನಿರಂತರ ಅಲೆಗಳ ಶಬ್ಧ, ನಿಯಮಿತವಾಗಿ ಕಾಪಾಡಿರುವ ಕಡಲ ಸ್ವಚ್ಚತೆ, ಎಲ್ಲವೂ ಕಣ್ಮನಗಳನ್ನು ತಣಿಸಿ, ಮನಸ್ಸಿಗೆ ಶಾಂತತೆಯನ್ನುಸಿಗುವುದರಲ್ಲಿ ಎರಡು ಮಾತಿಲ್ಲ. ಪಂಚಗಂಗಾವಳ್ಳಿ ನದಿಯು ಅರೇಬಿಯನ್ ಸಮುದ್ರವನ್ನು ಸೇರುವ ದೃಶ್ಯವನ್ನು ಕಾಣಬಹುದಾದ ಈ ರಮಣೀಯ ಬೀಚ್ ಇರುವುದು ಉಡುಪಿ ಜಿಲ್ಲೆಯ ಕುಂದಾಪುರದಿಂದ ಕೇವಲ ೬ ಕಿಮೀ ದೂರದಲ್ಲಿ(ಉಡುಪಿಯಿಂದ ೩೮ ಕಿಮೀ). ರಂಗಿನೋಕುಳಿ ಹರಡಿ, ಕಡಲ ಮಧ್ಯೆ ಮುಳುಗುವ ಸೂರ್ಯ ನನ್ನು ನೋಡುತ್ತಾ, ತೀರದ ಮರಳ ರಾಶಿಯ ಮೇಲೆ ವಾಕ್ ಮಾಡುವುದೇ ಒಂದು ಅದ್ಭುತ ಅನುಭವ. ಮಕ್ಕಳೊಡನೆ ಸಮುದ್ರದಲೆಗಳಿಗೆ ಬೆನ್ನೊಡ್ಡಿಆಟವಾಡಲು ಹೇಳಿ ಮಾಡಿಸಿದಂತಹ ಜಾಗ. ಬೋಟಿಂಗ್ ವ್ಯವಸ್ಥೆ, ಜೋಕಾಲಿ, ಸರ್ಫಿಂಗ್ ಟ್ರೇನಿಂಗ್ ಗಳೆಲ್ಲವೂ ಪ್ರಾರಂಭವಾಗಿ ಈ ಸ್ಥಳ ಇದೀಗ ಮತ್ತಷ್ಟು ಪ್ರಸಿದ್ಧಿಗೊಂಡಿದೆ. 

ಶಿಶಿಮಾ

ಟಿಕ್ ಟಾಕ್ ಟೋ  ಯಾರು ಕೇಳಿಲ್ಲ? ಸಾಮಾನ್ಯವಾಗಿ ಎಲ್ಲರಿಗೂ ಈ ಆಟದ ಪರಿಚಯ ಇದ್ದೇ ಇರುತ್ತದೆ. ಎಲ್ಲೋ ಪೇಪರ್ರು ಪೆನ್ನು ಕಂಡರೆ ಸಾಕು, ಅಲ್ಲೇ ಮೂರು ಅಡ್ಡ ಉದ್ದ ಗೆರೆ ಹಾಕಿ ಒಂಭತ್ತು ಮನೆ ಮಾಡಿ, ಬಾ ಆಡು.." ಎಂದು ಪಕ್ಕದವರನ್ನು ಕರೆದು ಆಡಿಬಿಡುವಷ್ಟುಸರ್ವೇ ಸಾಮಾನ್ಯ ಆದರೂ ತಂತ್ರ ಹೂಡಿ ಆಡುವ ಆಟವದು. ಬೋರ್ಡ್ ಗೇಮ್ಸ್ ಗಳ ಹುಚ್ಚಿರುವ ಮಗಳಿಗೆ ಎಲ್ಲೆಲ್ಲಿ ಏನೇನು ಹೊಸ ಆಟಗಳ ಬಗೆ ಸಿಗುತ್ತದೋ ಅವೆಲ್ಲ ತೋರಿಸುವ, ಕಲಿಸುವ ಹುಚ್ಚು ನನಗೂ ಇದೆ. ಹೀಗೆಯೇ ಸಿಕ್ಕ ಮತ್ತೊಂದು ಬೋರ್ಡ್ ಗೇಂ - 'ಶಿಶಿಮಾ' ಕೀನ್ಯಾ ಮೂಲದಿಂದ ಬಂದಿರುವ ಶಿಶಿಮಾ ಆಟ ಹೆಚ್ಚು ಕಮ್ಮಿ ಟಿಕ್ ಟ್ಯಾಕ್ ಟೋ ಆಟವೇ ಆದರೆ ಅಷ್ಟಭುಜಾಕೃತಿಯಲ್ಲಿ ರೂಪಿಸಲಾಗಿದೆ. ಕೀನ್ಯಾದ ಸ್ಥಳೀಯ ಭಾಷೆಯೊಂದರ ಪ್ರಕಾರ ಶಿಶಿಮಾ ಪದದ ಅರ್ಥ ನೀರಿನ ಹಳ್ಳ. ಈ ಆಟವನ್ನು ಆಡಲು ಬಳಸುವ ಕಾಯಿಗಳನ್ನು ಇಂಬಲವಲಿ ಎಂದು ಕರೆಯುತ್ತಾರೆ. ಅದು ನೀರ ಮೇಲೆ ಚುರುಕಾಗಿ ಓಡಾಡುವ ಕೀಟಗಳು ಎಂಬ ಅರ್ಥ.   ಒಂದು ವರ್ತುಲವನ್ನು ನಾಲ್ಕು ರೇಖೆಗಳು ಮಧ್ಯ ಬಿಂದುವಿನಿಂದ ಹಾದು ಹೋಗಿ ಎಂಟು ಸ್ಥಾನಗಳನ್ನು ಹೊಂದಿರುವಂತಹ ಅಷ್ಟಭುಜಾಕೃತಿಯ ಪಟವಿದು. ಎರಡು ಜನರು ಆಡಬಹುದಾದಂತಹ ಈ ಆಟದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೂರು ಕಾಯಿಗಳು ಇರುತ್ತವೆ. ಮೊದಲಿಗೆ ಆಟಗಾರರು ಒಂದು ಸಲಕ್ಕೆ ಒಂದು ಕಾಯಿಯಂತೆ ಮೂರು ಬಿಂದುಗಳ ಮೇಲೆ ಇಡಬೇಕು. ನಂತರಕ್ಕೆ ಎದುರಾಳಿಯ ಆಟದ ...

ನಮ್ಮ ಭಾಷೆ ಕನ್ನಡ - ಅಕ್ಷರಕ್ಕೊಂದು ಗಾದೆ ಮಾತು

ಇಮೇಜ್
ನಮ್ಮ ಭಾಷೆ ನಮ್ಮ ಹೆಮ್ಮೆ.. ಈ ಕನ್ನಡ ರಾಜ್ಯೋತ್ಸವದ ವಿಶೇಷ ದಿನವನ್ನು ನನ್ನಿಷ್ಟದ ಕಲೆಯ ಮೂಲಕ ಸಂಭ್ರಮಿಸೋಣ ಎಂಬ ಇಚ್ಛೆಯಿಂದ ಕಳೆದ ೫೯ ದಿನಗಳಿಂದ ದಿನಕ್ಕೊಂದರಂತೆ ಕನ್ನಡದ ಅಕ್ಷರಗಳನ್ನು ಚಿತ್ರಿಸಿ ಹಂಚಿಕೊಳ್ಳುತ್ತಿದ್ದಲಿದ್ದೆ.ಕನ್ನಡ ಮಾತನಾಡುವ ಜೊತೆಜೊತೆಯಲ್ಲೇ, ಗಾದೆಮಾತುಗಳ ಬಳಕೆ ನಮ್ಮ ನುಡಿಯನ್ನು ಪುಷ್ಟಿಗೊಳಿಸುತ್ತದೆ. ಹಾಗಾಗಿ ನಾನು ಬರೆಯುವ ಅಕ್ಷರಕ್ಕೆ ನಿಮಗೆ ತಿಳಿದ ಗಾದೆಮಾತುಗಳನ್ನು ಹಂಚಿಕೊಳ್ಳಿ ಎಂದು ಸ್ನೇಹಿತರಲ್ಲಿಯೂ ವಿನಂತಿಸಿದ್ದೆ. ಕಲ್ಪನೆಗೂ ಮೀರಿ ಬಂದ ಪ್ರತಿಕ್ರಿಯೆ ನನ್ನನ್ನು ಇನ್ನಷ್ಟು ಮತ್ತಷ್ಟು ಚಿತ್ರಗಳನ್ನು ರಚಿಸಲು ಹುರುಪು ನೀಡಿತ್ತು. ನಾನು ರಚಿಸಿದ ಕನ್ನಡ ಅಂಕಾಕ್ಷರಗಳು ಮತ್ತು ಅವುಗಳಿಗೆ ಪೂರಕವಾದ ಗಾದೆಮಾತುಗಳು ನಿಮ್ಮ ಮುಂದಿಡುತ್ತಿದ್ದೇನೆ. ಎಲ್ಲರ ಬೆಂಬಲ ಮತ್ತು ಭಾಗವಹಿಸುವಿಕೆಗೆ ನಾನು ಕೃತಜ್ಞಳು. ಮತ್ತೊಮ್ಮೆ ಎಲ್ಲರಿಗೂ ಕನ್ನಡ ರಾಜ್ಯೋತ್ಸವದ, ಶುಭಾಶಯಗಳು  #ಸಿರಿಗನ್ನಡಂಗೆಲ್ಗೆ #ಕರ್ನಾಟಕರಾಜ್ಯೋತ್ಸವ  ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ ಅತ್ತೆಗೊಂದು ಕಾಲ ಸೊಸೆಗೊಂದು ಕಾಲ. ಅಲ್ಪನ್ಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರಿಲಿ ಕೊಡೆ ಹಿಡಿದನಂತೆ ಅತಿಯಾಸೆ ಗತಿಗೇಡು ಅತಿಯಾದರೆ ಅಮೃತವೂ ವಿಷ. ಅಡ್ಡ ಗೋಡೆ ಮೇಲೆ ದೀಪ ಇತ್ತಂತೆ ಅಂಚು ಮೆಟ್ಟಿ ಅಡಿ ಮೆಟ್ಟಿ ನಡುಮನೆಗೆ ಕಾಲಿಟ್ಟ ಹಾಗೆ ಅಜ್ಜಿಗೆ ಅರಿವೆ ಚಿಂತೆ. ಮೊಮ್ಮಗಳಿಗೆ ಮಿಠಾಯಿ ಚಿಂತೆ. ಅಲ್ಪರ ಸಂ...

ಕಂಡೆ ನಾ ಬದರಿಯ..

ಇಮೇಜ್
ಸತತವಾದ ೪ ದಿನಗಳ ವ್ಯಾಲಿ ಆಫ್ ಪ್ಲಾವರ್ಸ್ ಮತ್ತು ಹೇಮಕುಂಡದ ನಮ್ಮ ಚಾರಣ, ಅಂದಿಗೆ ಮುಗಿದಿತ್ತು. ಪಾಂಡುಕೇಶ್ವರದ ಹೋಟೆಲ್ಲಿಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುವುದಷ್ಟೇ ಆ ದಿನಕ್ಕೆ ನಮಗುಳಿದ ಕೆಲಸ. ನಾವು ಬುಕ್ ಮಾಡಿದ್ದ ಟ್ರೆಕ್ಕಿಂಗ್ ಪ್ಯಾಕೇಜ್ ಏಜೆನ್ಸಿಯವರು, 'ಟೀಮ್ ನ ಇಚ್ಛೆಯಿದ್ದಲ್ಲಿ ಆ ದಿನ ಬದರಿನಾಥ್ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಬಹುದು. ವಾಹನದ ವ್ಯವಸ್ಥೆ ನೀಡಲಾಗುತ್ತದೆ. ಆದರೆ ಪ್ರಯಾಣ ಮಾತ್ರ ಸಂಪೂರ್ಣವಾಗಿ ಹವಾಮಾನದ ಮೇಲೆ ಅವಲಂಭಿತ..'  ಎಂಬ ನಿಯಮಿತ ಒಕ್ಕಣೆಯನ್ನು ಮುಂಚಿತವಾಗಿಯೇ ನೀಡಿದ್ದರು. ಬದರಿನಾಥ್ಗೆ ಹೋಗುವ ಆಶಾಭಾವನೆಯಿಂದ ನಾವೆಲ್ಲರೂ ಘಾನ್ಗ್ರಿಯದಿಂದ ಪುಲ್ನವರೆಗಿನ ನಮ್ಮ ಅವರೋಹಣವನ್ನು ಸಾಧ್ಯವಾದಷ್ಟು ಚುರುಕಾಗಿ ಮುಗಿಸಿ ಬಂದಿದ್ದೆವು. ಬದರಿನಾಥ್ ಗೆ ಹೋಗುವ ಉತ್ಸಾಹ ಯಾರ ಮುಖದಲ್ಲೂ ಚಾರಣದ ಸುಸ್ತನ್ನು ಮೂಡಿಸಿರಲಿಲ್ಲ.. ಆದರೆ,  'ಹಿಂದಿನ ದಿನ ಸುರಿದ ಸತತ ಮಳೆಯ ಕಾರಣದಿಂದಾಗಿ, ಬದರಿನಾಥ್ ಗೆ ಹೋಗುವ ರಸ್ತೆಗಳು ಮುಚ್ಚಿದ್ದು, ೫೦೦ ಕ್ಕೂ ಹೆಚ್ಚು ವಾಹನಗಳು ನಿಲುಗಡೆಯಲ್ಲಿವೆ, ಸಾವಿರಾರು ಭಕ್ತರು ಕಾಯ್ವಿಕೆಯಲ್ಲಿದ್ದಾರೆ, ಯಾವಾಗ ರಸ್ತೆ ತೆರೆಯುವುದೋ ತಿಳಿಯದು, ಹೋಗಿ ನೋಡಬೇಕೀಗ, ' ಎಂದು ನಮ್ಮ ಡ್ರೈವರ್ ಕೊಟ್ಟ ಮಾಹಿತಿಗೆ ಒಮ್ಮೆ ನಿರಾಸೆಯೆನಿಸಿದರೂ, ಭರವಸೆಯನ್ನು ಕಳೆದುಕೊಳ್ಳದೆ ಎಲ್ಲರೂ ಚುರುಕಾಗಿ ಪಾಂಡುಕೇಶ್ವರ್ ಗೆ ಹೊರಟು ಬಂದೆವು. ಪಾಂಡುಕೇಶ್ವರ್ ಸಮೀಪಿಸುತ್ತಿದ್ದಂತೆಯೂ, ...

ಕಂಚೀಕಾಯಿ ಚಟ್ನೆ

ಕಂಚೀಕಾಯಿ, ದಕ್ಷಿಣ ಕನ್ನಡ ಮತ್ತು ಮಲೆನಾಡಿನ ಕಡೆ ಸಿಗುವ ನಿಂಬೆ ಪಂಗಡಕ್ಕೆ ಸೇರಿದ ಒಂದು ಹಣ್ಣು. ನಾರಿಂಗ ಏಳಚೀಕಾಯಿ, citron, kaffir lime ಇತ್ಯಾದಿ ಹೆಸರುಗಳಿಂದ ಇದು ಜನಕ್ಕೆ ಪರಿಚಿತ. ಸಣ್ಣದಾಗಿ ಕಿತ್ತಳೆ ಹಣ್ಣಿನಂತಿರುವ ಇದು ನೋಡಲು ನಿಂಬೆಕಾಯಿಗಿಂತ ದೊಡ್ಡದು ಮತ್ತು ದೊಡ್ಳೀಕಾಯಿಕ್ಕಿಂತ ಸಣ್ಣದು. ಕಂಚಿಕಾಯಿ ಖಾರ ಮತ್ತು ಸಿಹಿ ಉಪ್ಪಿನಕಾಯಿ, ಸಿಪ್ಪೆ ಗೊಜ್ಜು, ನೀರ್ಗೊಜ್ಜು, ಕಂಚಿಹುಳಿ ಬೆಳ್ಳುಳ್ಳಿ ಹಾಕಿದ ಬಿಸಿ ಬಿಸಿ ಸಾರು, ಇತ್ಯಾದಿ ಅಡುಗೆಗೆ ಕಂಚೀಕಾಯಿ ಬಲು ಪ್ರಸಿದ್ಧ... ಕಂಚಿಕಾಯಿ ಯ ಹುಳಿ ಹಿಂಡಿ ಮಾಡಿದ ಚಿತ್ರಾನ್ನವೆಂತೂ ತಿನ್ನಲು ಬಲು ರುಚಿ..  ಈ ಹಣ್ಣಿನ ಸಿಪ್ಪೆಯಲ್ಲಿರುವ ಎಣ್ಣೆಯ ಅಂಶ (essential oil ) ಕಹಿ ರುಚಿಯನ್ನು ನೀಡುವುದಲ್ಲದೆ. ರೋಗ ನಿರೋಧಕ ಶಕ್ತಿ ಈ ಹಣ್ಣಿನಲ್ಲಿ ಹೇರಳವಾಗಿದೆ. ಮುಖ್ಯವಾಗಿ ಜೀರ್ಣ ಶಕ್ತಿಯನ್ನು ವೃದ್ಧಿಸಲು, ದೇಹ ನಂಜಾದಾಗ, ಜ್ವರ ಬಂದು ಬಾಯಿ ರುಚಿ ಇಲ್ಲದಾದಾಗ, ಇದನ್ನು ತಿಂದರೆ ಒಳ್ಳೆಯದು. ಹೃದಯದ ಆರೋಗ್ಯಕ್ಕೂ ಸಹಾಯಕ.  ಇಡೀ ಕಂಚೀಕಾಯಿ ಸಿಪ್ಪೆ ಸಹಿತವಾಗಿ ಕಾಯಿಯ ಜೊತೆ ಹಾಕಿ ತಿರುವಿ ಮಾಡುವ ಹಸಿ ಚಟ್ನೆ, ಉಣ್ಣಲು ತುಂಬಾ ರುಚಿ ಮತ್ತು ಆರೋಗ್ಯಕ್ಕೆ ತುಂಬಾ ಒಳ್ಳೆಯದು.. ಕಹಿ ಇದರ ಮೂಲ ರುಚಿ. ಆದರೆ ಅದರ ಜೊತೆಗೆ ಉಪ್ಪು ಹುಳಿ ಖಾರ ಸಿಹಿ ಎಲ್ಲವೂ ಹದವಾಗಿ ಹಾಕಿ ಮಾಡುವ ಈ ಚಟ್ನೆಯನ್ನು, ಬಿಸಿ ಬಿಸಿ ...

ಕೊರೋನಾ ಅನುಭವ - ಮಾಹಿತಿ

"ಮಗನಿಗೆ ಕೆಮ್ಮು ಜಾಸ್ತಿ ಆಗುತ್ತಲಿತ್ತು. ಜ್ವರ ಶುರುವಾಗಿತ್ತು. ಆಸ್ಪತ್ರೆಗೆ ಫೋನಾಯಿಸಿ ವಿಚಾರಿಸಿದಾಗ ರೋಗದ ಎಲ್ಲ ಲಕ್ಷಣಗಳನ್ನೂ ವಿಚಾರಿಸಿ, ಕೊರೋನಾ ಸೋಂಕು ರೋಗವೇ ಹೌದೆಂದು ಖಾತ್ರಿ ಮಾಡಿದರು. ಆ ಸಮಯಕ್ಕೆ ಇಂಗ್ಲಾಂಡ್ದಲ್ಲಿ ಅದೆಷ್ಟು ಸೋಂಕಿತರ ಸಂಖ್ಯೆ ಹೆಚ್ಚಿತ್ತೆಂದರೆ, ಎಲ್ಲ ಆಸ್ಪತ್ರೆಗಳಲ್ಲಿಯೂ ಕೊರೋನಾ ರೋಗಿಗಳೇ ತುಂಬಿಕೊಂಡಿರುತ್ತಿದ್ದರು . ಆಸ್ಪತ್ರೆಗೆ ಮಕ್ಕಳನ್ನು ಕರೆದುಕೊಂಡು ಹೋದರೆ ಇನ್ನೂ ಹೆಚ್ಚಿನ ರೋಗಾಣುಗಳಿಗೆ ನಮ್ಮನ್ನು ನಾವೇ ತೆರೆದಿಟ್ಟ ಲೆಕ್ಕ. ತೀರಾ ಉಸಿರಾಟದ ಸಮಸ್ಯೆ ಇಂದ ಒದ್ದಾಡುತ್ತಿರುವವರ ಮಧ್ಯೆ, ಆಗಿನ್ನೂ ಶುರುವಿನ ಹಂತದಲ್ಲಿದ್ದ ನನ್ನ ಮಗುವಿನ ಲಕ್ಷಣವನ್ನು ಗಮನಿಸಿ, ಆಸ್ಪತ್ರೆಯವರು ನಾವು ಮನೆಯಲ್ಲಿಯೇ ಇರಬಹುದಾದ ಆಯ್ಕೆ ನೀಡಿದ್ದರು. ಡಾಕ್ಟರ್ ನೀಡಿದ ಸಲಹೆಯಂತೆ, ಅವರು ಕೊಟ್ಟ ಸೂಚನೆಗಳ ಮೇರೆಗೆ, ನಾವು ಮಗುವನ್ನು ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡು ಚೇತರಿಸ್ಕೊಳ್ಳುವ ತೀರ್ಮಾನಕ್ಕೆ ಬಂದೆವು. ಎರಡು ಮಕ್ಕಳೊಂದಿಗೆ ೧೪ ದಿನಗಳು ನಮ್ಮನ್ನು ನಾವೇ ಮನೆಯಲ್ಲಿ ಸಂಪೂರ್ಣವಾಗಿ ಕೂಡಿಟ್ಟುಕೊಂಡೆವು. ಒಂದು ಕಾಲು ಹೊರಗೆ ಹೋಗಲಿಲ್ಲ, ಒಂದು ಕಾಲು ಒಳಗೆ ಬರಲಿಲ್ಲ. ಮಗ ೪.೫ ವರ್ಷದವ, ಮಗಳು ೨.೫ ವರ್ಷದವಳು..ಮಗನಿಗೆ ಹಬ್ಬಿರುವ ಸೋಂಕು ಮನೆಯಲ್ಲಿ ಸುಲಭವಾಗಿ ಎಲ್ಲರಿಗೂ ಹಬ್ಬುವ ಸಾಧ್ಯತೆ ಇದ್ದಿದ್ದರಿಂದ, ನಾವಿಬ್ಬರು ಯೋಚಿಸಿಕೊಂಡು, ಒಂದೊಂದು ಮಗುವನ್ನು ಒಬ್ಬೊಬ್ಬರು ನೋಡಿಕೊಳ್ಳುವ ಜವಾಬ್ಧಾರಿಯನ್ನು ಹಂ...