ಪೋಸ್ಟ್‌ಗಳು

ಯೋಗ ಯಾತ್ರೆ - ಕನ್ಯಾಕುಮಾರಿ

ಇಮೇಜ್
ಭಾರತದ ದಕ್ಷಿಣದ ತುತ್ತತುದಿಯಲ್ಲಿ, ಹಿಂದೂ ಮಹಾ ಸಾಗರ, ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರ ಎಂಬ ಮೂರು ಮಹಾಸಾಗರಗಳು ಸಂಗಮವಾಗುವ ಸ್ಥಳದ ತಟದಲ್ಲಿದೆ ಕನ್ಯಾಕುಮಾರಿ. ಐತಿಹಾಸಿಕ ಪ್ರಸಿದ್ಧತೆ ಪಡೆದಿರುವ ಈ ಒಂದು ಪುಣ್ಯಕ್ಷೇತ್ರವನ್ನು ನೋಡುವ ಆಸೆ ಮೊದಲಿನಿಂದಲೂ ಇದ್ದರೂ, ಅದು ಹೇಗೋ ನನಗೆ  ಕನ್ಯಾಕುಮಾರಿ ನೋಡುವ ಕಾಲ ಕೂಡಿ ಬಂದಿರಲಿಲ್ಲ. ಯೋಗ ಟ್ರೈನರ್ ಕೋರ್ಸನ್ನು ಪಡೆಯುತ್ತಿರುವ ನನಗೆ, ನನ್ನ ಗುರುಗಳಾದ ಅಶೋಕ್ ಸರ್ ಇಂತಹದ್ದೊಂದು ಯೋಗ ಕಾನ್ಫರೆನ್ಸ್ ಬಗ್ಗೆತಿಳಿಸಿರದಿದ್ದರೆ, ಅದೆಂತಹ ಅದ್ಭುತ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿದ್ದೆ ಎಂಬುದು ಈ ಪ್ರವಾಸ ಮುಗಿಸಿ ಬಂದವಳಿಗೆ ಅರಿವಾಗುತ್ತಿದೆ.  'ಯೋಗ ಶಾಸ್ತ್ರ ಸಂಗಮ' ಎಂಬ ರಾಷ್ಟ್ರೀಯ ಯೋಗ ಸಮ್ಮೇಳನಕ್ಕೆ ಭಾಗವಹಿಸುವ ಉದ್ದೇಶದ ಮೂಲಕ, ಕಲಿಯುತ್ತಿರುವ ಯೋಗ ವಿಚಾರವಾಗಿ ಅದೆಷ್ಟೋ ಗೊತ್ತಿರದ ಮಾಹಿತಿಗಳನ್ನು ತಿಳಿಯಲು, ಈ ಪುಣ್ಯಕ್ಷೇತ್ರದ ಪ್ರಸಿದ್ಧ ಸ್ಥಳಗಳನ್ನು ನೋಡಲು, ಇಷ್ಟದ ಟ್ರೆಕಿಂಗ್ ಮಾಡಲು, ಸತ್ಸಂಗದ ಮೂಲಕ ಮೂರು ದಿನಗಳಲ್ಲಿ ನಲವತ್ತಕ್ಕೂ ಹೆಚ್ಚು ಸ್ನೇಹಿತ ಸ್ನೇಹಿತೆಯರನ್ನು ಪಡೆಯುವ ಅವಕಾಶವಾದ್ದು ನನ್ನ ಪಾಲಿನ ಅದೃಷ್ಟವೇ ಸರಿ! ವಿವೇಕಾನಂದ ಕೇಂದ್ರ, ಕನ್ಯಾಕುಮಾರಿ ಇವರು ಪ್ರತಿವರ್ಷದಂತೆ, ವಿಶಿಷ್ಟವಾಗಿ ರಾಷ್ಟ್ರೀಯ ಯೋಗ ಸಮ್ಮೇಳನವನ್ನು ನಡೆಸುತ್ತಾರೆ. ಈ ಮೂರು ದಿನಗಳಲ್ಲಿ ಯೋಗ ಶಾಸ್ತ್ರದ ಕುರಿತಾದ ಅ...

ನಿಜಗಲ್ ಬೆಟ್ಟ

ಇಮೇಜ್
 ಇಂದು World Tourism Day/ವಿಶ್ವ ಪ್ರಾವಾಸೋದ್ಯಮ ದಿನ. ಪ್ರವಾಸ ಎನ್ನುವುದು ಕೆಲವರಿಗೆ ವ್ಯಾಪಾರದಂತಹ ಸ್ವಕಾರ್ಯದ ಉದ್ದೇಶಕ್ಕಾಗಿಇದ್ದರೆ , ಕೆಲವರಿಗೆ ಮನರಂಜನೆ, ವಿರಾಮ, ಸತ್ಕಾರ್ಯಕ್ಕಾಗಿ ಮಾಡುವ ಪ್ರಯಾಣವಾಗಿರಬಹುದು. ದಿನನಿತ್ಯದ ಜಂಜಾಟ ಏಕತಾನತೆಯಿಂದ ಹೊಸ ಹುರುಪು ಪಡೆಯಲು ಪ್ರವಾಸಗಳು ಅತ್ಯಾವಶ್ಯಕ. ಮಕ್ಕಳಿಗೆ ಪ್ರತಿ ಹೊಸತುಗಳು ಕೂಡ ಕಲಿಕೆ. ಗೆಳೆಯರೊಂದಿಗೆ ಮಕ್ಕಳೊಂದಿಗೆ ನಿನ್ನೆ ಟ್ರೆಕಿಂಗ್ ಹೋದ 'ನಿಜಗಲ್ ಬೆಟ್ಟ' ದ ಕುರಿತಾಗಿ ಒಂದು ಝಲಕ್.  ನಿಜಗಲ್ ಬೆಟ್ಟ ಬೆಂಗಳೂರಿನಿಂದ ೬೦ ಕಿಮೀ ದೂರದಲ್ಲಿ, ತುಮಕೂರಿಗೆ ಹೋಗುವ ಮಾರ್ಗದಲ್ಲಿ ದೊಬ್ಬಸ್ಪೇಟ್ ಎಂಬ ಊರಿನ ತಪ್ಪಲಿನಲ್ಲಿದೆ. ಅರ್ಧ ದಿನದ ಚಾರಣಕ್ಕೆ ಹೋಗಬಹುದಾದ ಸ್ಥಳಗಳಲ್ಲಿ ಇದೂ ಒಂದು. ೧೭ನೇ ಶತಮಾನದಲ್ಲಿ, ಚಿಕ್ಕದೇವರಾಯ ಒಡೆಯರ್ ಅವರ ಆಳ್ವಿಕೆಯ ಕಾಲದ ಈ ಬೆಟ್ಟದಲ್ಲಿ ಪಾಳುಬಿದ್ದ ದೇವರ ಮಂಟಪಗಳು, ಗುಹೆಗಳು ಮತ್ತು ಕೋಟೆಕಲ್ಲುಗಳನ್ನು ನೋಡಬಹುದಾಗಿದೆ. ದೇವಾಲಯಗಳ ಕಲ್ಲಿನ ಗೋಡೆ ಮತ್ತು ಕಂಬಗಳ ಮೇಲೆ ಸುಂದರವಾದ ಕೆತ್ತನೆಗಳಿವೆ. ಹೈದರಾಲಿ ಮತ್ತು ನಡುವೆ ಕಾದಾಟವೂ ಇಲ್ಲಿ ನಡೆದಿತ್ತು ಎಂಬ ಐತಿಹಾಸಿಕ ಕಥೆಯಿದೆ. ನಾವು ಸ್ನೇಹಿತರಬಳಗದವರು ನಮ್ಮ ೬-೮ ವರ್ಷದ ಮಕ್ಕಳನ್ನು ಕರೆದುಕೊಂಡು, ಮಾತುಕಥೆಯಾಡುತ್ತ ನಡೆದದ್ದರಿಂದ, ಉತ್ಸಾಹದಲ್ಲಿ ೭-೮ ಕಿ.ಮೀ ನಷ್ಟು ಟ್ರೆಕಿಂಗ್ ಮಾಡಿದ್ದೇ ತಿಳಿಯಲಿಲ್ಲ. ಮಕ್ಕಳಿಗೆ ನೈಸರ್ಗಿಕ ಕಲ್ಲು ...