ಪೋಸ್ಟ್‌ಗಳು

ಮಗಳು ಮೀನು ಹಿಡಿದಳು..

ಇಮೇಜ್
ಮಗಳು ಮೀನು ಹಿಡಿದಳು..  ಸಂಜೆ ಆಫೀಸು ಕೆಲಸ ಮುಗಿದ ಮೇಲೆ ವಾಕಿಂಗ್ ಹೋಗುವ ರೂಡಿ. ಒಮ್ಮೊಮ್ಮೆ ಮಗಳೂ ಜೊತೆಯಾಗುತ್ತಾಳೆ. ಹತ್ತಿರದ ಕೆರೆಪಾರ್ಕಿನಲ್ಲಿ ನಮ್ಮ ವಾಕಿಂಗು. ಅದೊಂದು ದಿನ, ಕೆರೆಪಾರ್ಕಿನ ಹತ್ತಿರದ ಪುಷ್ಕರಣಿಯ ಬಳಿ ಸ್ನೇಹಿತೆಯೊಡನೆ ಮಾತನಾಡುತ್ತ ಕೂತಿದ್ದೆ. ಮಗಳು ಕೊಳದಲ್ಲಿನ ನೀರು, ಮೀನು, ಆಮೆ ಇತ್ಯಾದಿ ನೋಡುತ್ತಾ ಆಡುತ್ತಿದ್ದಳು. ತನಗೆ ಬೇಕಾದ ಕಲ್ಲು, ಕೋಲು, ಎಲೆ-ಬೀಜಗಳನ್ನು ಒಟ್ಟು ಮಾಡಿಕೊಳ್ಳಲು ಅವಳು ಡಬ್ಬಿ, ಚೀಲಗಳನ್ನು ಒಮ್ಮೊಮ್ಮೆ ಹಿಡಿದು ತರುವುದುಂಟು. ನಮ್ಮ ಕಟ್ಟೆ ಹರಟೆ ನಡೆದಿತ್ತು. ಅಲ್ಲೇ ಅಣತಿ ದೂರದಲ್ಲಿ ಎರಡು ಮಕ್ಕಳು, ಪುಷ್ಕರಣಿಯ ಮೆಟ್ಟಿಲುಗಳ ಕೊನೆಯ ಮೆಟ್ಟಿಲಲ್ಲಿ ಕುಳಿತು, ತಮ್ಮ ತಮ್ಮಲ್ಲೇ ಮಾತನಾಡುತ್ತ ಆಗಾಗ ಚಂಗನೆ ಕೆರೆಗೆ ಕೈಹಾಕಿ ನೀರು ಎತ್ತುತ್ತಿದ್ದರು.  "ಎಂತ ಮಾಡ್ತಿದ್ದೀರೋ.." ಕೇಳಿದೆ. "ಆಂಟಿ, ಮೀನಿನ್ ಮರಿ ಹಿಡೀತಿದೀವಿ.." ಅಂತ ಅಂದ ಒಬ್ಬ ಚೋಟು. "ಎಂತ ತಿಂತೀರಾ ಹಿಡ್ಕಂಡು?" ಕೇಳಿದೆ. "ಆಂಟಿ, ಅಲ್ಲಿ ಅಕ್ವೇರಿಯಂ ಅಂಗಡಿ ಇದೆ, ಒಂದು ಮೀನಿಗೆ ಎರಡು ರೂಪಾಯಿ ಕೊಡ್ತಾರೆ ತಗಂಡು ಕೊಟ್ರೆ.." ಎಂದ ಇನ್ನೊಬ್ಬ ಕಣ್ಣರಳಿಸಿಕೊಂಡು. ಇವೆಲ್ಲವನ್ನೂ ಮೆಲ್ಲನೆ ಕಿವಿಗೆ ಹಾಕಿಕೊಂಡ ನಮ್ಮನೆ ಮೇಡಮ್ಮು ನಿಧಾನಕ್ಕೆ ಒಂದೊಂದೇ ಮೆಟ್ಟಿಲು ಕೆಳಗಿಳಿದು ಕೂರತೊಡಗಿದಳು. "ಸಾನ್ವಿ ಎಂತ ಯೋಚ್ನೆ ಮಾಡಿದೆ ನೀನು?" ಎಂದು ಕೇಳಿದೆ. "ನಾನು ನೀ...

ಗೊಂಬೆಯಾಟದ ರಾಮಾಯಣ!

ಇಮೇಜ್
ಎರಡು ತಾಸಿನಲ್ಲಿ ಗೊಂಬೆಯಾಟದ ಮೂಲಕ ರಾಮಾಯಣವನ್ನು ಅತ್ಯದ್ಭುತವಾಗಿ  ತೋರ್ಪಡಿಸಿದ ಖ್ಯಾತಿ ಧಾತು ತಂಡದವರಿಗೆ ಅಭಿನಂದನೆಗಳು. ರಾಮನ ಜನನದಿಂದ ಪ್ರಾರಂಭವಾಗಿ, ರಾವಣನ ವಧಿಸಿ ಸೀತೆಯೊಡನೆ ಪುರಪ್ರವೇಶ ಮಾಡುವಲ್ಲಿಯವರೆಗೆ, ಪ್ರತೀ ಕಥೆ ತೆರೆಗೊಳ್ಳುತ್ತಿದ್ದುದು ಸಭಿಕರ ಹರ್ಷೋದ್ಘಾರ ಮತ್ತು ಚಪ್ಪಾಳೆಯೊಂದಿಗೆ! ಅದೆಷ್ಟು ಸುಂದರವಾದ ಗೊಂಬೆಗಳು! ಸಂಗೀತ ಮಾತುಗಳಿಗೆ ತಕ್ಕಂತೆ ಗೊಂಬೆಗಳನ್ನು ಕುಣಿಸಬೇಕು,  ಸಮಯೋಚಿತವಾಗಿ, ಸನ್ನಿವೇಶಕ್ಕೆ ತಕ್ಕಂತೆ, ಭಾವನೆಗಳಿಗೆ ಒತ್ತು ಕೊಡಲು ಬಣ್ಣ ಬಣ್ಣದ  ಬೆಳಕುಗಳ ವೇದಿಕೆಯಲ್ಲಿ ಗೊಂಬೆಗಳ ಮೇಲೆ ತೋರಬೇಕು. ಎಲ್ಲರ ಕೆಲಸಗಳೂ ಏಕಕಾಲಕ್ಕೆ ನಡೆಯಬೇಕು. ಗೊಬೆಯಾಟದ ಪ್ರದರ್ಶನ ನೋಡುವುದೇ ನಮ್ಮೆಲ್ಲರ ಕಣ್ಣಿಗೆ ಒಂದು ಹಬ್ಬ!  ಅದರಲ್ಲೂ ರಾಮಾಯಣದ  ಕಥೆಯನ್ನು ಹೇಳಲು ಏಳು ಭಾಷೆಗಳ ಸಾಹಿತ್ಯ-ಸಂಗೀತ ಬಳಸಿರುವುದು ಈ ಪ್ರದರ್ಶನದ ವಿಶೇಷ ಭಾಗವಾಗಿತ್ತು. ಎಲ್ಲಾ ಸಂಗೀತಗಳಿಗೆ ಅರಿವಿಲ್ಲದೆ ಒಮ್ಮೆ ಕೈ ತಾಳ ಹಾಕಿದರೆ ಮತ್ತೊಮ್ಮೆ ತಲೆದೂಗಿ ಹೋಗುತ್ತಿತ್ತು. ಕಾರ್ಯಕ್ರಮದಷ್ಟೇ ಚೆನ್ನಾಗಿ ನೀವು ಈ ಕಾರ್ಯಕ್ರಮವನ್ನು ಎಂಜಾಯ್ ಮಾಡಿದ್ದು ನೋಡಿ ನಮಗೆ ಖುಷಿ ಆಯಿತು ಎಂದು ತಂಡದವರೊಬ್ಬರು ಹೇಳಿದಾಗಲೇ ನನ್ನರಿವಿಗೆ ಅದು ಬಂದದ್ದು! ಹಿನ್ನೆಲೆಗೆ ೨೦ಕ್ಕೂ ಹೆಚ್ಚು ಬಗೆಯ ಸಂಗೀತ ವಾದ್ಯಗಳನ್ನು ಬಳಸಿದ್ದು, ಪ್ರತೀ ಸನ್ನಿವೇಶಕ್ಕೆ ತಕ್ಕಂತೆ ಮೂಡುತ್ತಿದ್ದ ವಾದ್ಯ ಸಂಯೋಜನೆ, ತಡರಾತ್ರಿಯಾದರೂ ಮಕ್ಕಳ ಅರೆ...

ಮೋಜಿನ ವಿಜ್ಞಾನ - ಬಣ್ಣದ ಹೂವಿನ ಮ್ಯಾಜಿಕ್

 ಮೋಜಿನ ವಿಜ್ಞಾನ - ಬಣ್ಣದ ಹೂವಿನ ಮ್ಯಾಜಿಕ್  ಸಾಮಾಗ್ರಿಗಳು :  ಬಿಳಿ ಬಣ್ಣದ ಗುಲಾಬಿ ಹೂವು. ಅಡುಗೆ ಬಣ್ಣ, ನೀರು ಮತ್ತು ಲೋಟ  ಕ್ರಮ : ಮೊದಲಿಗೆ ಲೋಟದಲ್ಲಿ ನೀರು ಹಾಕಿ, ಅಡುಗೆ ಬಣ್ಣ ಸೇರಿಸಿ, ಬಣ್ಣದ ನೀರು ತಯಾರಿಸಬೇಕು. ಉದ್ದ ತೊಟ್ಟಿರುವ ಬಿಳಿ ಬಣ್ಣದ ಗುಲಾಬಿ ಹೂವನ್ನು, ಬಣ್ಣದ ನೀರಿನಲ್ಲಿ ೨೪ ತಾಸುಗಳ ಕಾಲ ಇಡಬೇಕು. ಹೂವು ಹೆಚ್ಚು ಬಾಡಿದ್ದರೆ, ನೀರಿನ ಬಣ್ಣ ಹೀರಿಕೊಳ್ಳಲು ಸಮಯಹಿಡಿಯುತ್ತದೆ ಹಾಗಾಗಿ ತಾಜಾ ಹೂವಿಟ್ಟರೆ ಉತ್ತಮ. ಮರುದಿನಕ್ಕೆ ಹೂವಿನ ಬಣ್ಣ ಬಿಳಿಯಿಂದ , ನೀರಿಗೆ ಬೆರೆಸಿದ ಬಣ್ಣದ ಹೂವಾಗಿರುತ್ತದೆ.  ಮಗಳ ಪ್ರಯೋಗ :  ಲೋಟವೊಂದರಲ್ಲಿ ನೀರಿನ ಜೊತೆ ಅರಿಶಿಣ ಪುಡಿ ಹಾಕಿದ ಹಳದಿ ಮಿಶ್ರಣದ ನೀರು ತಯಾರು ಮಾಡಿಕೊಂಡಳು. ಸಣ್ಣ ನೀರಿನ ಲೋಟದಲ್ಲಿ ಭಾರವಾದ ತೊಟ್ಟಿರುವ ಗುಲಾಬಿ ಹೂವನ್ನು ಹಾಕಿಟ್ಟಿದ್ದರಿಂದ, ಅದು ಸರಿಯಾಗಿ ಮುಳಗದೇ ಮರುದಿನಕ್ಕೆ ಬಣ್ಣ ಬಾರದ ಬಾಡಿದ ಹೂವಾಗಿತ್ತು. ಮತ್ತೆ ತೊಟ್ಟು ಮುಳುಗುವಂತೆ ಉದ್ದ ಲೋಟದಲ್ಲಿ ಹೂವನ್ನು ಇಟ್ಟಾಗ ಮರುದಿನಕ್ಕೆ ಹಳದಿ ಬಣ್ಣ ಹೂವಿನ ತುಂಬಾ ಆವರಿಸಿತ್ತು :)  ಹಿಂದಿನ ವಿಜ್ಞಾನ : ಹೂವಿನ ಕಾಂಡದಲ್ಲಿನ ಸಣ್ಣ ಗ್ಸಯ್ಲ್ಮ್ ಎಂಬ ಸಣ್ಣ ಕೊಳವೆಗಳ  ಮೂಲಕ ನೀರನ್ನು ಒಳಗೆ ಎಳೆದುಕೊಳ್ಳಲಾಗುತ್ತದೆ. ಎಲೆ ಮತ್ತು ಹೂಗಳ ಮೂಲಕ ನೀರು ಆವಿಯಾಗುತ್ತದೆ. ಇದನ್ನು ಟ್ರಾನ್ಸ್ಪಿರೇಷನ್ ಎಂದುಕರೆಯುತ್ತಾರೆ.  ಹೀಗೆ ನೀರು ಆವಿಯಾಗಿ  ಬಣ್...

ಭಾರತೀಯ ನೃತ್ಯಕಲೆ

ಭಾರತವು ತನ್ನ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಭಾರತೀಯ ನೃತ್ಯವು ಅಂತಹ ಗೌರವಾನ್ವಿತ ಗುರುತುಗಳಲ್ಲಿ ಒಂದು.  ಭಾರತದಲ್ಲಿ, ಆಯಾಯ ಭೌಗೋಳಿಕ  ಪ್ರದೇಶಗಳಿಗೆ, ಅಲ್ಲಿನ ಸ್ಥಳೀಯ ಸಂಪ್ರದಾಯಗಳಿಗೆ, ರೀತಿನೀತಿಗಳಿಗೆ ತಕ್ಕಂತೆ ಅನೇಕ ಮಾದರಿಯ ನೃತ್ಯಗಳು, ರೂಪ ತಾಳಿ, ಅಭಿವೃದ್ಧಿ ಹೊಂದಿವೆ. ಮುಖ್ಯವಾಗಿ, ಭರತನಾಟ್ಯ, ಕುಚಿಪುಡಿ, ಕಥಕ್, ಒಡಿಸ್ಸಿ, ಕಥಕಳಿ ಇತ್ಯಾದಿ  ಶಾಸ್ತ್ರೀಯ ನೃತ್ಯಮಾದರಿಗಳು ಜಗತ್ಪ್ರಸಿದ್ಧ ಕಲೆಗಳೆನಿಸಿವೆ.  ಇದರ ಜೊತೆಗೆ, ಯಕ್ಷಗಾನ, ಡೊಳ್ಳು, ಕರಗ, ಝೂಮರ್, ಲಾವಣಿ, ಭಾಂಗ್ರಾ, ಗಿಡ್ಡ, ರಾಸಲೀಲಾ, ಗರ್ಬಾ, ಧಾಂಡೀಯ, ಲಂಬಾಡಿ ನೃತ್ಯ, ಬಿಹು ಇತ್ಯಾದಿ ಮೂವತ್ತಕ್ಕೂ ಹೆಚ್ಚು ಬಗೆಯ ಜಾನಪದ ನೃತ್ಯ ಕಲೆಗಳು  ನಮ್ಮ ಭಾರತೀಯ ಸಂಸ್ಕೃತಿಗೆ  ಅನನ್ಯತೆ ಮತ್ತು ನವೀನತೆಯನ್ನು ತಂದಿದೆ.  ಪ್ರತೀ ೧೦೦ ಕಿ.ಮೀ ಗೆ ಉಪಭಾಷೆಗಳು ಬದಲಾಗುವಂತಹ ವೈವಿಧ್ಯಮಯ ದೇಶ ನಮ್ಮದು. ನೃತ್ಯ ಶೈಲಿ, ಉಡುಗೆ, ಕಲಾವಿದರು ಬದಲಾಗುತ್ತಾರೆ. ಆದರೆ ಎಲ್ಲದರ ಮೂಲ ಉದ್ದೇಶವೊಂದೇ. ಮನುಷ್ಯನ ಹುಟ್ಟಿನಿಂದ ಸಾವಿನವರೆಗೆ ಉಂಟಾಗುವ ನಾನಾ ಬಗೆಯ ಅನುಭವಗಳಿಗೆ ಒಂದು ಜನಾಂಗ ಚಲನೆಯ  ವ್ಯಕ್ತಪಡಿಸುವ ಪ್ರತಿಕ್ರಿಯೆಯಾಗಿ ಜಾನಪದ ನೃತ್ಯಗಳು ಹುಟ್ಟಿಕೊಂಡದ್ದು. ದೇವರಿಗೆ ಕೃತಜ್ಞತೆ ಸಲ್ಲಿಸಲು, ಬದುಕಿನ  ಬೇರೆ ಬೇರೆ ವೃತ್ತಿ ಜವಾಬ್ಧಾರಿಗಳ ನೆನಪಿಸಿಕೊಳ್ಳಲು , ಸಂತೋಷ ಸಂಭ್ರಮಿಸಲು, ಕೆಡು...

ಸಿಕ್ಕಿಂ - ಟಿಬೆಟಿಯನ್ ಧ್ವಜಗಳು

ಇಮೇಜ್
ಹಿಮಾಲಯದ ಕಾಂತೀಯ ನೋಟಗಳೊಂದಿಗೆ, ಗಮನಾರ್ಹವಾದ ಗಮ್ಯಸ್ಥಾನಗಳ ಹೇರಳತೆಯೊಂದಿಗೆ ಸರ್ವ ಕಾಲಕ್ಕೂ, ಭೇಟಿ ನೀಡಬಹುದಾದ ಪ್ರವಾಸ ಸ್ಥಳಗಳಲ್ಲಿ, ಭಾರತದ ಈಶಾನ್ಯ ಭಾಗದಲ್ಲಿರುವ ಸಿಕ್ಕಿಂ ಕೂಡ ಒಂದು. ಸೆವೆನ್ ಸಿಸ್ಟರ್ಸ್ ರಾಜ್ಯಗಳ ಪೈಕಿ ಕಿರಿದು. ದಾರ್ಜೀಲಿಂಗ್ ನಲ್ಲಿರುವಂತೆಯೇ, ಸಿಕ್ಕಿಂನಲ್ಲೂ ಕೂಡ ಟಿಬೆಟಿಯನ್ ಮೊನಸ್ಟರಿಗಳು, ಬೌದ್ಧ ಧರ್ಮದ ಅನುಯಾಯಿಗಳು ಸಾಕಷ್ಟು ಜನರಿದ್ದಾರೆ.  ಹಿಮಾಲಯದ ಪರ್ವತಗಳು, ಬೆಳ್ಳನೆಯ ಮೋಡಗಳು, ಇಬ್ಬನಿ ಹರಡಿ ಕ್ಷಣಕ್ಷಣಕ್ಕೆ ಮಬ್ಬಾಗುವ ಹಾದಿಗಳು, ಹಚ್ಚಹಸಿರು ಮತ್ತವುಗಳ ಮಧ್ಯೆ ಅಲ್ಲಲ್ಲಿ ಕಾಣಿಸುವ ಬೌದ್ಧ ಧರ್ಮದ ಬಣ್ಣ ಬಣ್ಣದ ಧ್ವಜಗಳು!ಈ ವಿವಿಧ ಬಗೆಯ ಧ್ವಜಗಳು ನೋಡುಗರಿಗೆ ಅವರವರ ಭಾವಕ್ಕೆ ತಕ್ಕಂತೆ ಸಾಂತ್ವನ, ಸಂತಸದ ಅನುಭವವನ್ನು ನೀಡುತ್ತದೆ. ನಮ್ಮ ಪ್ರವಾಸದ ಹಾದಿಯುದ್ದಕ್ಕೂ ಕಾಣಸಿಗುತ್ತಿದ್ದ ಈ ಬಣ್ಣಬಣ್ಣದ ಧ್ವಜಗಳ ಕುರಿತಾಗಿ ಸಂಗ್ರಹಿಸಿದ ಒಂದಷ್ಟು ವಿಷಯಗಳು..  ಚಿತ್ರಗಳೊಂದಿಗೆ..  ಟಿಬೆಟಿಯನ್ ಜನರು ಪ್ರಕೃತಿಯನ್ನು ಗೌರವಿಸಲು ಈ ಪ್ರಾರ್ಥನಾ ಧ್ವಜಗಳನ್ನು ನೆಡುತ್ತಾರೆ. ಧ್ವಜದಲ್ಲಿನ ಐದು ಬಣ್ಣಗಳಲ್ಲಿ ಬಿಳಿ ಬಣ್ಣ ಗಾಳಿಯನ್ನೂ, ಕೆಂಪು ಬಣ್ಣ ಬೆಂಕಿಯನ್ನೂ, ಹಸಿರು ಬಣ್ಣ ನೀರನ್ನೂ, ಹಳದಿ ಭೂಮಿಯನ್ನೂ ಮತ್ತು ನೀಲಿ ಆಕಾಶವನ್ನು ಸಂಕೇತಿಸುತ್ತದೆ. ಈ ಧ್ವಜಗಳಲ್ಲಿ ಬೌದ್ಧರ ಮೂಲ ಪ್ರಾರ್ಥನಾ ಮಂತ್ರವಾದ ' ಓಂ ಮಣಿ ಪದ್ಮೇಹಂ" ಎಂದು ಬರೆದಿರುತ್ತದೆ. ಅಹಂಕಾರ, ಅಸೂಯೆ, ಅಜ್ಞಾನ, ದುರಾಸೆ ...

ಟಿಬೆಟಿಯನ್ ಘುಮ್ ಮೊನಸ್ಟರಿ

ಇಮೇಜ್
ದಾರ್ಜೀಲಿಂಗ್ ಸುತ್ತಮುತ್ತಲಿನ ಪ್ರಾಕೃತಿಕ ಸೌಂದರ್ಯವಂತೂ ವರ್ಣಿಸಲಸದಳ. ಅದರ ಜೊತೆಯಲ್ಲಿ, ದಸರಾ ಸಮಯದಲ್ಲಿ ದಾರ್ಜೀಲಿಂಗ್ ಪ್ರವಾಸ ಹೋದದ್ದು, ಅಲ್ಲಿನ ಅನೇಕ ಧರ್ಮಗಳ ಹಬ್ಬಗಳ ಆಚರಣೆಯ ಕುರಿತಾಗಿಯೂ ತಿಳಿಯಲು ಸಹಾಯಕವಾಯಿತು. ಅಂತದೇ ಒಂದು ದೇವಿ ಪೂಜೆಯ ಆಚರಣೆಯ ವಿಶೇಷತೆ ಕಂಡದ್ದು ಅಲ್ಲಿನ ಟಿಬೆಟಿಯನ್ ಘುಊಮ್ಮೊನಸ್ಟರಿಯಲ್ಲಿ.    ದಾರ್ಜೀಲಿಂಗ್ ನಲ್ಲಿರುವ ಟಿಬೆಟಿಯನ್ ಘುಮ್ ಮೊನಸ್ಟರಿಗೆ (ಮಠ) ಭೇಟಿ ಇತ್ತ ಕ್ಷಣ. ಭವಿಷ್ಯದ ಬುದ್ಧ ಎಂದು ಕರೆಯಲಾಗುವ ಗೌತಮ ಬುದ್ಧನ ಉತ್ತರಾಧಿಕಾರಿ, 'ಮೈತ್ರೇಯ' ಬುದ್ಧನ ದೇವಾಲಯವಿದು. ಟಿಬೆಟಿಯನ್ ಶೈಲಿಯಲ್ಲಿ ನಿರ್ಮಾಣವಾಗಿರುವ ಈ ಧರ್ಮಮಠದ ಬಾಗಿಲಿನ ಕಮಾನಿನಲ್ಲಿ ಗರುಡನ ಕೆತ್ತನೆಯಿದೆ.  ಮೈತ್ರೇಯ ಬುದ್ಧನ ೧೫ ಅಡಿ ಎತ್ತರದ ಸಿಂಗರಿಸಿದ ಅದ್ಭುತ ಮೂರ್ತಿಯನ್ನು ಟಿಬೆಟಿನ್ನಿಂದಲೇ ಮಣ್ಣನ್ನು ತರಿಸಿ ಮಾಡಿದ ಮೂರ್ತಿಯಂತೆ! ಇದರ ಮುಂದಿರುವ ಎರಡು ದೊಡ್ಡ ಎಣ್ಣೆಯ ದೀಪಗಳು ಈ ವರೆಗೆ ಆರಿದ ದಾಖಲೆಯಿಲ್ಲ ಎನ್ನುತ್ತಾರೆ ಅಲ್ಲಿನ ಬೌದ್ಧ ಸನ್ಯಾಸಿಯೊಬ್ಬರು. ದೀಪದ  ಸುತ್ತಲಿನ ಗೋಡೆಗಳಮೇಲೆ ಬುದ್ಧನ ಕುರಿತಾದ ವರ್ಣರಂಜಿತ ಕಿರುಚಿತ್ರಗಳು,ಅಲ್ಲಿ ಟಿಬೆಟಿಯನ್ ಬೌದ್ಧರು ಸಾಲಾಗಿ ಕುಳಿತುಕೊಂಡು ಒಂದೇ ರಾಗದಲ್ಲಿ ಮಂತ್ರ ಪಠನೆ ಮಾಡುತ್ತಿದ್ದುದು, ಡ್ರಮ್ಸ್ ಮತ್ತು ಸಿಂಬಲ್ಸ್ ಬಡಿತ, ಪೈಪ್ಮಾದರಿಯ ಸಂಗೀತ ವಾದ್ಯಗಳ ನುಡಿಸುತ್ತ ಮಾಡಿದ ಪ್ರಾರ್ಥನೆ ಎಲ್ಲವೂ ಸೇರಿ ಒಂದು ರೀತಿಯ ಮಾಂತ್ರಿಕ ಭಾವನೆ ನೀಡ...

ಬೆಟ್ಟಗಳ ರಾಣಿ - ದಾರ್ಜೀಲಿಂಗ್

ಇಮೇಜ್
ಹಿಮಾಲಯದ ಪರ್ವತ ಶ್ರೇಣಿಗಳೆಂದರೆ ನನಗೇಕೋ ಮುಗಿಯದ ಆಸೆ. ಈ ಸಲದ ಪ್ರವಾಸಕ್ಕೆ ನಮ್ಮ ಗಮನ ಸೆಳೆದದ್ದು ಪಶ್ಚಿಮ ಬಂಗಾಳ.  ದಾರ್ಜೀಲಿಂಗ್ ಒಂದು ಅತ್ಯಂತ ಸುಂದರವಾದ ಗಿರಿಧಾಮ, ಹಿಮಾಲಯದ ಪರ್ವತ ಶ್ರೇಣಿಯ ಕೆಳಭಾಗದಲ್ಲಿ ಇರುವ ಈ ಪಟ್ಟಣ, ಯುನೆಸ್ಕೋ ದ ವಿಶ್ವ ಪರಂಪರೆಯ ತಾಣದಲ್ಲಿ ಒಂದು. ಪ್ರವಾಸಿಗರಾಗಿ ಈ ಪ್ರದೇಶದ ಸೌಂದರ್ಯವನ್ನು ಸವಿಯಬೇಕೆಂದರೆ, ಡಿಸೇಂಬರ್ ನಂತರದ ಹಿಮಸುರಿತವನ್ನು ಅನುಭವಿಸಬೇಕು ಎಂದು ಕೆಲವರು ಹೇಳಿದ್ದನ್ನು ಕೇಳಿದ್ದೆವು. ಆದರೂ ವರ್ಷವಿಡೀ ಮಂಜು ಕವಿದಿರುವ ಊರು, ಹಿಮಾಲಯದ ಮಹೋನ್ನತ ಶ್ರೇಣಿಯ ಪ್ರದೇಶ ಎಂಬ ಅರಿವಿದ್ದರಿಂದ, ಈ ಸಮಯಕ್ಕೆ ಕಾಣಸಿಗುವ ವೈವಿದ್ಯತೆಯನ್ನು ನೋಡಲು ನಾವು ತಯಾರಾಗಿಯೇ ಹೋಗಿದ್ದೆವು.  ದಾರ್ಜೀಲಿಂಗ್ ಅನ್ನು ಹೆಚ್ಚು ಕಮ್ಮಿ ಬ್ರಿಟಿಷರು ಕಟ್ಟಿದ ನಾಡು ಎಂದೇ ಹೇಳಬಹುದು. ದಾರ್ಜೀಲಿಂಗ್ ನ ಉತ್ತಮ ಹವಾಗುಣದಿಂದ ಆಕರ್ಷಿತವಾಗಿ, ಈಸ್ಟ್ ಇಂಡಿಯಾ ಕಂಪೆನಿಯ ಅಧಿಕಾರಿಗಳ ನಿಯೋಗ, ಈ ಊರನ್ನು ಸಿಕ್ಕಿಂ ರಾಜರಿಂದ ಗುತ್ತಿಗೆಪಡೆದಿದ್ದು. ತೀಕ್ಷ ಉಷ್ಟತೆಯಿಂದ ರಕ್ಷಿಸಿಕೊಳ್ಳಲು ಬ್ರಿಟಿಷರಿಗೆ ಇದೊಂದು ಅತ್ಯಂತ ಪ್ರಿಯವಾದ ಸ್ಟಳವಾಗಿತ್ತು. ಗಿರಿಧಾಮದ ನಿರ್ಮಾಣ, ಪ್ರಾಯೋಗಿಕ ಚಹಾ ತೋಟದ ಹುಟ್ಟು, ಅಲ್ಲಿ ಬಂದು ತಂಗುವ ಬ್ರಿಟಿಷ್ ಜನರಿಗಾಗಿ ಶಿಕ್ಷಣ ಮತ್ತು ಅನೇಕ ಬಗೆಯ ಕ್ಷೇಮಾಭಿವೃದ್ಧಿ ಕೇಂದ್ರಗಳ ನಿರ್ಮಾಣ ಹೀಗೆ ಹಂತಹಂತವಾಗಿ ಮೂಡಿತು ದಾರ್ಜೀಲಿಂಗ್ ಪಟ್ಟಣ. ಅಂದಿನ ದಾರ್...