ಪೋಸ್ಟ್‌ಗಳು

ಚಾಕೋಲೇಟ್ ಕೊಡ್ಲಾ??

ಇಮೇಜ್
ತಮ್ಮದೇ ಮಕ್ಕಳಿಗೆ ಅತಿಯಾಗಿ ಚಾಕೊಲೇಟ್ ಕೊಡಿಸುವ ಪಾಲಕರು ಮತ್ತು ನೆಂಟರಿಷ್ಟರಾಗಿ ಮಕ್ಕಳಿರುವ ಮನೆಗೆ ಚಾಕೊಲೇಟ್ ಕೊಂಡೊಯ್ಯುವವರ ಗಮನಕ್ಕೆ! ಮಕ್ಕಳು ಮತ್ತು ಚಾಕೊಲೇಟಿಗೆ ಅವಿನಾಭಾವ ಸಂಬಂಧ. ಬರ್ತಡೇ ಎಂದರೆ ಚಾಕೊಲೇಟು ಹಂಚಿಕೆ ಖಾಯಂ. ಚಿಕ್ಕ ಮಕ್ಕಳಿರುವ ಮನೆಗೆ ಮನೆಯವರೂ ಸೇರಿದಂತೆ, ಸ್ನೇಹಿತರು ಬಂಧುಗಳು ಚಾಕೊಲೇಟನ್ನು ತೆಗೆದುಕೊಂಡು ಹೋಗಿ ಕೊಡುವುದು ಸರ್ವೇ ಸಾಮಾನ್ಯ. ಯಾಕೆ? ಮಕ್ಕಳು ಸಿಹಿ ತಿಂದು ಖುಷಿಯಾಗಲಿ, ತಮ್ಮನ್ನು ಒಳ್ಳೆಯವರೆಂದು ಗುರುತಿಸಿಕೊಳ್ಳಲು ಸಿಗಬಹುದಾದ ಅತ್ಯಂತ ಕಡಿಮೆ ಖರ್ಚಿನ ತಿಂಡಿ ಚಾಕೊಲೇಟು. ಆದರೆ ಈ ಭರದಲ್ಲಿ, ಏನೂ ಅರಿಯದ ಮಕ್ಕಳಲ್ಲಿ, ಚಾಕೊಲೇಟಿನ ಅತಿಯಾದ ಬಳಕೆಯ ಚಟವನ್ನು, ಅನಾರೋಗ್ಯವನ್ನು ನಾವೇ ಧಾರೆಯೆರೆಯುತ್ತಿದ್ದೇವೆ.  ಅಧ್ಯಯನಗಳ ಪ್ರಕಾರ ಕೋಕೋ ಬೀನ್ಸ್ ಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿ ಇರುತ್ತವಯಾದ್ದರಿಂದ  ಚಾಕೊಲೇಟ್ಸ್ಗಳು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಚಾಕೊಲೇಟು ಬಾಯಲ್ಲಿಟ್ಟರೆ ಕರಗುವಂತೆ ಮಾಡಲು ಸಸ್ಯಜನ್ಯವಾದ ಕೋಕೋ ಬೆಣ್ಣೆಯನ್ನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬಳಸಿ, ಹಾಲಿನ ಕೆನೆ ಮತ್ತು ಸಕ್ಕರೆಯ ಪ್ರಮಾಣವನ್ನು ಕನಿಷ್ಠವಾಗಿರಿಸಬೇಕು ಎನ್ನುತ್ತದೆ ಕಾನೂನು. ಖಾದ್ಯ ತೈಲಗಳ ಬಳಕೆ ಸಂಪೂರ್ಣ ನಿಷಿದ್ಧವಿದೆ. ಆದರೂ ಕೆಲವು ಚಾಕೊಲೇಟುಗಳಿಗೆ,  ತಾಳೆ, ಶೇಂಗಾ, ಸೂರ್ಯಕಾಂತಿಯ್ಕೆ ಎಣ್ಣೆಯನ್ನು ಬಳಸುವುದು ಗಮನಿಸಬಹುದು. ಎಷ್ಟೋ ಕಡೆ ಹೈಡ್ರೋಜೆನೆರೇಟೆಡ್ ಖಾದ...

ಮಕ್ಕಳಿಗೆ ಚಿತ್ರಕಲೆ ಏಕೆ ಮುಖ್ಯ?

ಇಮೇಜ್
ಚಿತ್ರಕಲೆ ಒಂದು ವಿಶ್ವ ಭಾಷೆ. ಎಲ್ಲ ಜಾತಿ, ಧರ್ಮ, ಲಿಂಗ, ವಯಸ್ಸಿನ ಬೇಧವಿಲ್ಲದೆ ಎಲ್ಲರನ್ನೂ ಸೆಳೆದುಕೊಳ್ಳುವ ಭಾಷೆಯಿದು. ಅದರಲ್ಲೂ ಮುಖ್ಯವಾಗಿ ಮಕ್ಕಳು ಅತ್ಯಂತ ಸಹಜವಾಗಿಯೇ ತಮ್ಮನ್ನು ತಾವೇ ತೊಡಗಿಸಿಕೊಳ್ಳಬಹುದಾದಂತಹ ಚಟುವಟಿಕೆಯಿದು. ಚಿತ್ರಕಲೆಗಳಲ್ಲಿ ಆಸಕ್ತಿಯಿಲ್ಲ ನಮ್ಮ ಮಗುವಿಗೆ ಎನ್ನುವ ಪೋಷಕರಿಗಾಗಿ ಇಂದಿನ ಈ ಲೇಖನ.  ಕಲೆ ಎಂದರೆ ವಿಶಿಷ್ಟವಾದ ಚಟುವಟಿಕೆ ಮತ್ತು ಚಿತ್ರಕಲೆ ಎಂದರೆ, ಚಿತ್ರಗಳ ಮೂಲಕ ಆ ಭಾವವನ್ನು ಬಿಂಬಿಸುವ ಪ್ರಯತ್ನ ಎಂದರ್ಥ. ಮನುಷ್ಯನಾಗಿ ರೂಪಿತವಾಗುತ್ತಿರುವ ಹಂತದಲ್ಲೇ, ಗುಹೆಗಳ ಮೇಲೆ ಚಿತ್ರಗಳ ಕೆತ್ತನೆ ಮಾಡುತ್ತ ಆನಂದವನ್ನು ಕಾಣುತ್ತಿದ್ದ ನಮ್ಮ ಪೂರ್ವಿಕರ ಇತಿಹಾಸವಿದೆ. ಪ್ರತಿ  ಮಗುವಿನಲ್ಲೂ ಹುಟ್ಟಿನಿಂದಲೇ ಕಲಾಜ್ಞಾನ ಇರುತ್ತದೆ. ಅದಕ್ಕೆ ಪೆನ್ಸಿಲ್ಲು, ಕುಂಚ-ಬಣ್ಣಗಳ ಬಳಕೆಯೇ ಆಗಿರಬೇಕೆಂದಿಲ್ಲ. ನೈಜತೆಗೆ ಹತ್ತಿರುವಾಗುವಂತಹ ಚಿತ್ರಗಳು ಬರೆದರೆ ಮಾತ್ರ ಅದು ಚಿತ್ರಕಲೆಯಲ್ಲ. ಅಮ್ಮ ಆರಿಸುವ ಅಕ್ಕಿಯ ಬಟ್ಟಲಲ್ಲಿ ಮಗು ಬೆರಳಿನಿಂದ ಗುಂಡನೆಯ ಸೂರ್ಯನನ್ನು ಯೋಚಿಸಿಕೈಯಾಡುತ್ತದೆ. ಆಡುವ ಮಣ್ಣಿನಲ್ಲಿ, ಕೋಲಿನಿಂದ ಕೋಳಿ ಬರೆದಿರುತ್ತಾರೆ ನಮ್ಮ ಮಕ್ಕಳು. "ಛೀ! ಮಣ್ಣಾಡಬೇಡ", "ನೀರು ಪೋಲು ಮಾಡ್ತೀಯ", "ಕೊಡಿಲ್ಲಿ ಅಕ್ಕಿ ಹಾಳು ಮಾಡ್ತೀಯ ನೀನು" ಎಂಬಿತ್ಯಾದಿ ಸ್ವಚ್ಛತೆಯೆಡೆಗಿನ ಪೂರ್ವನಿರ್ಧಾರಿತ ಮಾತುಗಳು, ಆ ಸಮಯಕ್ಕೆ ಎಳೆಗೂಸುಗಳ ಚಿತ್ರ...

ಮನೆಯಾಗಲಿ ಮೊದಲ ಗ್ರಂಥಾಲಯ

ಇಮೇಜ್
"ಅಮ್ಮಾ, ಒಂದು ಪ್ಲಾನ್ ಮಾಡನ, ನನ್ನ ಹತ್ರ ಇರ ಪುಸ್ತಕ ನಾನು ಮೌಲ್ಯನಿಗೆ ಕೊಡ್ತಿ, ಅವಳತ್ರ ಇರೋ ಪುಸ್ತಕ ನಾನು ಇಸ್ಕತ್ತಿ. ಅವಾಗ ಇಬ್ರು ಮನೇಲೂ ರಾಶಿ ದುಡ್ಡು ಕೊಟ್ಟು ಅದೇ ಬುಕ್ ತಗಳದು ಬ್ಯಾಡ ಮತ್ತೆ ಇಬ್ರಿಗೂ ತುಂಬಾ ಬುಕ್ಸ್ ಓದಕ್ಕೆ ಸಿಗ್ತು.."  ಎಂದು ೯ ವರ್ಷಕ್ಕೆ ಮಗಳು ಹೇಳಿದ್ದಾಗ, ಅವಳ ಪುಸ್ತಕ ಓದುವ ಹಂಬಲ ಮತ್ತು ಕಥೆಪುಸ್ತಕಗಳ ಪೂರೈಕೆಯ ಕುರಿತು ಹೊಸತೊಂದು ಆಲೋಚನೆ ಬಂದಿತು. ಅದುವೆ ಮನೆಯಲ್ಲಿಯೇ ಮಕ್ಕಳ ಲೈಬ್ರರಿ ಮಾಡುವುದು!  ಹಿಂದಿನ ಕಾಲದಲ್ಲಿ ಸಮಯ ಕಳೆಯಲು ಪುಸ್ತಕ ಓದುವುದು ಒಂದೊಳ್ಳೆಯ ವಿಷಯವಾಗಿತ್ತು. ಆಗೆಲ್ಲ ಫಕ್ರು ಡಿಂಗ ಬೇತಾಳನ ಸೋಲಿಸುವ ವಿಕ್ರಮ ಎಲ್ಲರೂ ಸೂಪರ್ ಹೀರೋಗಳ, ಕತೆ ಕಾದಂಬರಿಗಳ ಚರ್ಚಾಕೂಟ ನಡೆಯುತ್ತಿತ್ತು. ಈಗ ಓದಿನ ಗೀಳಿರುವವರು ಬೆರಳಣಿಕೆಯಷ್ಟು ಮಾತ್ರ.  ಹೊತ್ತು ಕಳೆಯಲು, ಜ್ಞಾನ ಪಡೆಯಲು ಈಗಿರುವ ಮೊಬೈಲ್ ಸಾಧನಗಳು, ಅಂತರ್ಜಾಲ ಹಾಗೂ ಸಾಮಾಜಿಕ ಮಾಧ್ಯಮಗಳೀಗ ಓದಲು ವಿನಿಯೋಗಿಸುತ್ತಿದ್ದ ಸಮಯವನ್ನು ಕಸಿದುಕೊಂಡಿದೆ. ಬೇಕಾದಾಗ ಅನಿಮೇಟೆಡ್ ಫಿಲ್ಮ್ಗಳು ಸಿಗುವುದಕ್ಕಾಗಿ, ಮ್ಯಾಗಜೀನ್ ಬಂದಿತಾ ಎಂಬ ಹಪಹಾಪಿ ಮಕ್ಕಳಲ್ಲಿ ಅಪರೂಪ. ಹಿಂದೆ ನಾವೆಲ್ಲಾ ಒದ್ದಾಡಿ, ಕಾದು, ಕಡ ತೆಗೆದುಕೊಂಡು ಪುಸ್ತಕ ಓದಿದಷ್ಟು ಸಾಹಸ ಈಗಿನ ಹೆಚ್ಚಿನವುಕ್ಕಿಲ್ಲ. ಮಕ್ಕಳ ಹೊಂವರ್ಕ್ ಮಾಡಿಸಿ ಟೀವಿ ಕೊಟ್ಟು ಕೂರಿಸುವ ಬದುಕು ಎಲ್ಲರಿಗೂ ಹಿತವಾಗಿರುತ್ತದೆ. ಶೈಕ್ಷಣಿಕ ಫಲಿತಾಂಶ ಮುಖ್ಯ ಇತರ ಪುಸ್ತ...

ಡಬ್ಬಿ ತುಂಬುವ ಮುನ್ನ

ಇಮೇಜ್
  "ಅಯ್ಯೋ ಶಾಲೆ ಶುರು ಆಯ್ತು, ಮಕ್ಕಳ ಬಾಕ್ಸ್ ಮಾಡೋ ಕರ್ಮ ಶುರುಆಯ್ತಲ್ರೀ", "ಏನ್ ಡಬ್ಬಿಗೆ ಹಾಕೋದು ಅನ್ನೋದೇ ಗೊತ್ತಾಗಲ್ಲ, ಊಟ ಬೇಜಾರು, ವೆರೈಟಿ ತಿಂಡಿ ಹಾಕು, ಎಲ್ರೂ ಎಷ್ಟು ಒಳ್ಳೊಳ್ಳೆ ತಿಂಡಿ ತರ್ತಾರೆ ಗೊತ್ತಾ ಅಂತಾಳೆ ಮಗಳು", "ಏನ್ ಕಳಿಸಿದ್ರೂ ಅರ್ಧಕ್ಕರ್ಧ ಡಬ್ಬೀಲಿ ಹಂಗೆ ಬಿಟ್ಕೊಂಡ್ ಬರ್ತಾನೆ"," ಸ್ಕೂಲಲ್ಲಿ ಊಟಾನೇ ಮಾಡಲ್ಲ, ಮನೆಗ್ ಬಂದು, ಕುರ್ಕುರೆ ಅದು ಇದು ತಿಂದು ಹೊಟ್ಟೆ ತುಂಬಿಸಿಕೊಂಡು ಆಡಕ್ಕೆ ಓಡ್ತಾಳೆ, ಮೋಶನ್ನು ಸರಿಯಾಗಾಗ್ದೆ ಆಮೇಲೆ ಹೊಟ್ಟೆನೋವಿಗೆಅಳ್ತಾಳೆ" ಇವೆಲ್ಲ ಮಾತುಗಳು ನಮ್ಮ ನಿಮ್ಮವೇ ಅಲ್ವ? ತಾಯಂದಿರ ಕಳಕಳಿಯ ಕಂಪ್ಲೇಯಿಂಟ್ಗಳು ಇವು. ಮಕ್ಕಳು ಊಟದ ಡಬ್ಬಿಯ ಆಹಾರ ಸಂತೋಷದಿಂದ ತಿನ್ನುತ್ತಿಲ್ಲವೆಂದರೆ ಅದಕ್ಕೆ ಮಕ್ಕಳನ್ನು ದೂಷಿಸುವ ಮುನ್ನ ಒಮ್ಮೆ ಯೋಚಿಸಿ, ನಾವು ಮಕ್ಕಳು ನಿಜವಾಗಿಯೂ ಎಂಜಾಯ್ ಮಾಡುವ ಆಹಾರವನ್ನು ನೀಡುತ್ತಿದೇವೆಯೇ?  ಮಕ್ಕಳ ಡಬ್ಬಿ ಬಗ್ಗೆ ಸ್ಪೆಷಲ್ ಗಮನ ಏಕೆ ಬೇಕು ? 'ಆಹಾರ' ಎಂದರೆ ಸುಮ್ಮನೆ ಹಸಿವು ನೀಗಿಸುವ ಹಿಟ್ಟು ಎಂದಲ್ಲ. ನಮ್ಮ ದೇಹ ಮತ್ತು ಮನಸ್ಸು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲು ನಾವು ನೀಡಬೇಕಾದ ಸತ್ವಗಳು.  ಮಕ್ಕಳು ಇಡೀದಿನ  ಶಾಲೆಯಲ್ಲಿಯೇ ಕಳೆಯುವಂತಿದ್ದರೆ, ಅವರಿಗೆ ಅವಶ್ಯಕತೆ ಇರುವಷ್ಟು ಪೌಷ್ಟಿಕಾಂಶ ಪಡೆಯುವುದು ಊಟದ ಡಬ್ಬಿಯಲ್ಲಿಯೇ. ಈಗಿನ ಬಿಡುವಿಲ್ಲದ ಜೀವನದಲ್ಲಿ, ಕುಟುಂಬದವರೆಲ್ಲ ...

ಮಲ್ಲಿಕಾ ಮತ್ತು ಮನೆಯವರು

ಇಮೇಜ್
ಮಲ್ಲಿಕಾ ಮತ್ತು ಮನೆಯವರು ಪ್ರೀತಿಯನ್ನು ಹಂಚಿದ ಬಗೆ  ವಸಂತ ಋತು, ಎಲ್ಲೆಡೆ ಮಾವಿನ ಹಣ್ಣಿನ ಘಮಲು. ಕೇಜಿಗಟ್ಟಲೆ ಮಾವಿನಹಣ್ಣು ತಂದು ತಿನ್ನುವುದು, ಮಾವಿನ ತರಹೇವಾರಿ ಪದಾರ್ಥ ಮಾಡುವುದು, ಹಲಸು ಮತ್ತು ಮಾವಿನ ಹಣ್ಣಿನ ಮೇಳಕ್ಕೆ ಭೇಟಿ..ಹೀಗೆ ಪ್ರತೀ ವರ್ಷ ಅವವೇ ತಪ್ಪದ ವಾರ್ಷಿಕ ಕಾರ್ಯಕ್ರಮಗಳು..  ಆದರೂ ಕೂಡಾ..  ಊರಲ್ಲಿ ಮನೆಯಲ್ಲಿ ಮಲ್ಲಿಕಾ ಮಾವಿನ ಹಣ್ಣುಗಳು ತಿನ್ನಲು ಸಿದ್ಧವಾಗುತ್ತಿದೆ ಎಂಬ ವಿಷಯ ಕೇಳಿ, ತುಂಬಿದ ಹೊಟ್ಟೆಯ ನಂತರವೂ ಬಾಯಲ್ಲಿ ಜೊಲ್ಲು. ಯಾಕಷ್ಟು ಪ್ರಾಮುಖ್ಯತೆ? ಕಾರಣಗಳು ಸಾಕಷ್ಟು. ಮೊದಲನೆಯದಾಗಿ, ಅಪ್ಪಾಜಿಯ ಪ್ರೀತಿ ಮತ್ತು ಆರೈಕೆಯಲ್ಲಿ ಸಿಗುವ ರಾಸಾಯನಿಕ ಮುಕ್ತ ಹಣ್ಣುಗಳವು. ಮನೆಯ ಹಸಿ ತ್ಯಾಜ್ಯದ ಗೊಬ್ಬರದಲ್ಲೇ ಆ ಪುಟ್ಟ ಮರ ಸಿಹಿಯಾದ ಮಾವಿನ ಹಣ್ಣುಗಳನ್ನು ಕೊಡುತ್ತದೆ. ಶ್ರಮಕ್ಕೆ ತಕ್ಕ ಫಲ, ತಾಳ್ಮೆಗೆ ಸಿಕ್ಕ ಸಿಹಿ ಎಲ್ಲವೂ ನಿಜ ಆದರೆ ಈ ಸೀಸನ್ನಿನಲ್ಲಿ ನಮ್ಮ ಮಲ್ಲಿಕಾರನ್ನು ದಕ್ಕಿಸಿಕೊಳ್ಳುವುದು ಮಾತ್ರ ಬಲು ಕಷ್ಟದ ಕೆಲಸ. ಶುರುವಿಗೆ ಮೈ ತುಂಬಾ ಹೂವು ಬಿಟ್ಟು ಸೊಕ್ಕಿದರೂ, ಕಡೆಗೆ ಬರುವ ಹಳೆಮಳೆಗೆ ಸುಮಾರಷ್ಟು ಹೂವನ್ನು ಉದುರಿಸಿಕೊಂಡು ತನ್ನ ಫಸಲನ್ನು ಮಿತಿಗೊಳಿಸಿ ಮುಂದಕ್ಕೆ ದಕ್ಕುವ ಕಾಯಿಗಳೆಲ್ಲವನ್ನೂ ಮಕ್ಕಳಂತೆ ಕಾಪಾಡಿಕೊಳ್ಳುವಷ್ಟು ನಮ್ಮ ಪರಿಸ್ಥಿತಿಯನ್ನು ಅನಿವಾರ್ಯಗೊಳಿಸುತ್ತದೆ. ಹಂಗೂ ಹಿಂಗೂ ಕಾಯಿ ಹಿಡಿದು ಸುಮಾರು ೨೦೦ ಹಣ್ಣು ಸಿಗಬಹುದು ಎಂದು ಲೆಕ್ಕಾಚಾರ ಹಾಕುವುದಷ್ಟೇ, ಮ...

ಕಾಲಿಂಪಾಂಗ್ ಸೈನ್ಸ್ ಸೆಂಟರ್

ಇಮೇಜ್
 ದಾರ್ಜೀಲಿಂಗ್ ನ ಕಾಲಿಂಪಾಂಗ್ ಅದರ ಮನೋಹರ ಪ್ರಾಕೃತಿಕ ಸೌಂದರ್ಯಕ್ಕೆ, ಬೌದ್ಧ ಧಾರ್ಮಿಕ ಕೇಂದ್ರಗಳಿಗೆ, ವಿಶಾಲವಾದ ಹಿಮಾಲಯ ಪರ್ವತಗಳ ನಡುವೆ ಉದಯಿಸುವ, ಮುಳುಗುವ ಸೂರ್ಯನ ಸೌಂದರ್ಯಕ್ಕೆ ಪ್ರಸಿದ್ಧಿಯಾಗಿದೆ. ಇಲ್ಲಿನ ಕ್ಯಾಕ್ಟಸ್ಆರ್ಕಿಡ್ ಹೂಗಳಷ್ಟೇ ಪ್ರಸಿದ್ಧಿ ಆಗಸದಲ್ಲಿ ಹಕ್ಕಿಯಂತೆ ಹಾರುವ ಪ್ಯಾರಾಗ್ಲೈಡಿಂಗ್ ಸಾಹಸ ಕ್ರೀಡೆ. ಇವೆಲ್ಲದರ ಜೊತೆಗೆ ಇನ್ನೊಂದು ಆಕರ್ಷಕ ಪ್ರವಾಸೀ ಸ್ಥಳ, ಕಾಲಿಂಪಾಂಗ್ ಸೈನ್ಸ್ ಸೆಂಟರ್. ಈ ವಿಜ್ಞಾನ ಕೇಂದ್ರ ಸ್ಥಾಪನೆಗೊಂಡಿದ್ದು, ಸಮಾಜದಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸುವ ಉದ್ದೇಶದಿಂದ, ಶಿಕ್ಷಣಕ್ಕೆ ಸಂಬಂಧಿಸಿದಂತೆ, ಶೈಕ್ಷಣಿಕ ಸಂಸ್ಥೆಗಳಿಗಾಗಿ, ವಿದ್ಯಾರ್ಥಿಗಳಿಗಾಗಿ ೨೦೦೮ ರಲ್ಲಿ. ಭಾರತ ಸರ್ಕಾರ ಸಂಸ್ಕೃತಿ ಸಚಿವಾಲಯದ ವತಿಯಿಂದ ನಿರ್ಮಿತ, ಏಳು ಎಕರೆಯಷ್ಟು ವಿಶಾಲ ಜಾಗದಲ್ಲಿರುವ ಈ ವಿಜ್ಞಾನ ಕೇಂದ್ರವನ್ನು, ಮಕ್ಕಳು ದೊಡ್ಡವರು ಎನ್ನದೇ ಎಲ್ಲರೂ ಒಮ್ಮೆ ನೋಡಿಬರಬೇಕಾದಂತಹ ಸ್ಥಳವಿದು.  ಪ್ರಾರಂಭದಲ್ಲಿಯೇ ವಿಜ್ಞಾನ ಕೇಂದ್ರದ ಹೊರಾಂಗಣದಲ್ಲಿ ದೊಡ್ಡ ಡೈನೊಸಾರ್ಸ್ಗಳು ನಮ್ಮನ್ನು ಸ್ವಾಗತಿಸುತ್ತವೆ. ಪ್ರಸಿದ್ಧ ಗಣಿತ ಮತ್ತು ವಿಜ್ಞಾನ ಶಾಸ್ತ್ರಜ್ಞರ ಪುತ್ತಳಿಗಳು ನಮ್ಮ ದೇಶಕ್ಕೆ ಸಿಕ್ಕ ಅಮೂಲ್ಯ ಕೊಡುಗೆಗಳ ನೆನಪಿಸುತ್ತವೆ. ಹೊರಾಂಗಣ ದೊಡ್ಡ ವಿಸ್ತೀರ್ಣದ ಜಾಗದ...

ಲೇ-ಪಾಕ್ಷಿ!

ಇಮೇಜ್
 ದಕ್ಷಿಣ ಭಾರತದಲ್ಲಿ ಐತಿಹಾಸಿಕ ಸ್ಥಳಗಳಲ್ಲಿ ಒಂದು ಪ್ರಮುಖವಾದ ಸ್ಥಳ ಎನಿಸಿಕೊಂಡ, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ದೇವಾಲಯ, ಪಕ್ಕಾ ಆಗಿನ ಸಾಂಪ್ರದಾಯಿಕ ವಾಸ್ತುಶೈಲಿಯಲ್ಲಿ ೧೬ ನೇ ಶತಮಾನದಲ್ಲಿ ನಿರ್ಮಾಣಗೊಂಡ ದೇವಾಲಯ ಲೇಪಾಕ್ಷಿ ದೇವಾಲಯ. ಮುಖ್ಯವಾಗಿ ವೀರಭದ್ರ ಸ್ವಾಮಿ, ಶಿವ ಮತ್ತು ವಿಷ್ಣುವಿನ ಪೂಜೆಗೆ ಬದ್ಧವಾದ ದೇವಾಲಯ. ಬೆಂಗಳೂರಿನಿಂದ ೧೨೦ ಕಿಮೀ ದೂರದಲ್ಲಿರುವ ಈ ದೇವಾಲಯ, ಒಂದು ದಿನದ ಪ್ರವಾಸಕ್ಕೆ  ಸೂಕ್ತವಾದ ತಾಣವಾಗಿದೆ. ನೋಡ ನೋಡುತ್ತಿದ್ದಂತೆಯೇ ೨.೫ ತಾಸಿನಲ್ಲಿ ಕರ್ನಾಟಕ ದಾಟಿ ಪಕ್ಕದ ರಾಜ್ಯಕ್ಕೆ ದಾಟುವ ಖುಷಿ ೯.೫ ವರ್ಷದ ಮಗಳಿಗೆ.  ಲೇಪಾಕ್ಷಿ ಊರು ತಲುಪುತ್ತಿದ್ದಂತೆಯೇ ದೊಡ್ಡದೊಂದು ಬಂಡೆ ಕಲ್ಲಿನ ಮೇಲೆ ದೊಡ್ಡದಾದ ಜಟಾಯುವಿನ ಮೂರ್ತಿಯೊಂದನ್ನು ಪ್ರತಿಷ್ಠಾಪಿಸಲಾಗಿದೆ. (ಆ ಬಂಡೆಕಲ್ಲಿನ ಸ್ಥಳಕ್ಕೆ ಹೋಗಲು ದಾರಿಯಿದೆ ಮತ್ತು ಮೇಲಿನವರೆಗೆ ಹೋಗಲು ಮೆಟ್ಟಿಲುಗಳಿವೆ) ಈ ಊರಿನ ಹೆಸರಿಗೂ ಆ ಮೂರ್ತಿ ಕಾಣುವುದಕ್ಕೂ, ಒಂದು ರೀತಿಯ ಸಂಭ್ರಮ ಅಲ್ಲಿಂದಲೇ ಪ್ರಾರಂಭವಾಗುತ್ತದೆ.  ಪುರಾಣ ಕಥೆಗಳ ಪ್ರಕಾರ, ಸೀತೆಯನ್ನು ರಾವಣನು ಅಪಹರಿಸಿಕೊಂಡು ಹೋಗುವ ಸಮಯದಲ್ಲಿ ಜಟಾಯು ಪಕ್ಷಿಯು ತನ್ನ ಕೈಲಾದಷ್ಟು ರಕ್ಷಿಸುವ ಪ್ರಯತ್ನ ಮಾಡುತ್ತದೆ. ಆದರೆ ಕೊನೆಯಲ್ಲಿ, ರಾವಣನ ಪರಾಕ್ರಮದ ಮುಂದೆ ಜಟಾಯುವು ರೆಕ್ಕೆ ಕತ್ತರಿಸಿದ ಅಸಹಾಯಕ ಪಕ್ಷಿಯಾಗಿ ಕೆಳಗೆ ಬೀಳುತ್ತದೆ. ಆನಂತರ ರಾಮ...