ಪೋಸ್ಟ್‌ಗಳು

ರಂಗೋಲಿಯೊಂದು ಧ್ಯಾನ!

ಇಮೇಜ್
ಮುಂಜಾನೆ  ವಾಕಿಂಗ್ ಹೋಗುವಾಗ ಹೆಂಗಳೆಯರು ಬಾಗಿಲ ಹೊರಗೆ, ಅಂಗಳಕ್ಕೆ ರಂಗೋಲಿ ಹಾಕುವ ದೃಶ್ಯ ಸರ್ವೇ ಸಾಮಾನ್ಯ.  ಅದರಲ್ಲೂ ಈಗ ಹಬ್ಬದ ಸೀಸನ್. ಬಗೆಬಗೆಯ ಸುಂದರ, ಬಣ್ಣ ಬಣ್ಣದ ದೊಡ್ಡ ರಂಗೋಲಿಗಳು ಮನಸ್ಸನು ಮುದಗೊಳಿಸುತ್ತದೆ. ಮನೆ ಮುಂದೆ ರಂಗೋಲಿ ಹಾಕುವುದು ಭಾರತೀಯರ ಬಹಳ ಹಳೆಯ ಸಂಪ್ರದಾಯ. ಒಂದು ಆಚರಣೆಯಾಗಿ ಇದನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆಯಾದರೂ ಇದರ ಹಿಂದಿರುವ ವೈಜ್ಞಾನಿಕ ಕಾರಣ ಅನೇಕರಿಗೆ ತಿಳಿದಿಲ್ಲ.ರಂಗೋಲಿ ಕಂಡಾಗ ಮನಸ್ಸು ಅರಳುವುದೇಕೆ? ರಂಗೋಲಿ ಹಾಕುವುದರಿಂದ ನಮಗೆ ಏನಾದರೂ ಲಾಭ ಇದೆಯಾ? ಓದೋಣ ಬನ್ನಿ. ಈ ರಂಗೋಲಿ ಹಾಕುವುದು ಎನ್ನುವುದು ಮನೆಮನೆಗಳಲ್ಲಿ ಹಿಂದಿನ ಕಾಲದಿಂದಲೂ ಪಾಲಿಸಿಕೊಂಡು ಬರಲಾಗುತ್ತಿರುವ ಒಂದು ನಿತ್ಯ ಸಂಪ್ರದಾಯ. ಈಗೀಗ ಸಮಯವಿಲ್ಲದ ಬದುಕಿಗೆ, ಆಧುನಿಕತೆಗೆ, ರಂಗೋಲಿ ಹಾಕುವ ಗೋಜಿಗೆ ಹೋಗದೆ, ರಂಗೋಲಿ ಸ್ಟಿಕ್ಕರ್ಗಳನ್ನು ಬಾಗಿಲ ಹೊರಗೆ ಅಂಟಿಸುವ ಪರ್ಯಾಯ ಮಾರ್ಗವನ್ನೂ ನಾವು ಪಡೆದಿದ್ದೇವೆ. ಆದರೂ, ಯಾವುದೇ ಧಾರ್ಮಿಕ ಆಚರಣೆ ಇರಲಿ, ಹಬ್ಬ ಹರಿದಿನಗಳು ಇರಲಿ ಅವೆಲ್ಲ ದೇವರನ್ನು ಆದರಿಸುವ ತತ್ವಕ್ಕೆ ಸಂಬಂಧಿಸಿರುವುದರಿಂದ, ಕೈಯಾರೆ ರಂಗೋಲಿ ಹಾಕುವುದು ಶುಭದ ಸಂಕೇತವೆಂದು,  ಕಾರ್ಯಕ್ರಮದ ಸೌಂದರ್ಯದ ಅವಶ್ಯಕತೆಯೆಂದು ಪರಿಗಣಿಸಲಾಗುತ್ತದೆ.  ರಂಗೋಲಿಯೊಂದು ಧ್ಯಾನ! ಸಂಸ್ಕೃತ ಪದ' ರಂಗವಲ್ಲಿ'ಯಿಂದ ರೂಪಾಂತರಗೊಂಡಿರುವ ರಂಗೋಲಿ ಪ್ರಾಚೀನ ಭಾರತೀಯ ಕಲೆ, ಶಿಲ್ಪಕಲೆ ಹಾಗ...

ಬೆಂಕಿ ಕಡ್ಡಿ ಆಟ

ಇಮೇಜ್
ಸುತ್ತ ಮುತ್ತ ಎಲ್ಲಾ ಕಡೆಗೂ ಸ್ಕ್ರೀನ್ ಇರುವಾಗ, ಮಕ್ಕಳಿಗೆ ಟೀವಿ ನೋಡಬೇಡಿ, ಮೊಬೈಲ್ ನೋಡಬೇಡಿ ಅಂತ ಹೇಳ್ತಿದ್ರೆ, ಮನೇಲಿರೋ ಮಕ್ಕಳಾದರೂ ಏನು ಮಾಡಬೇಕು? ಹೊರಾಂಗಣ ಆಟಕ್ಕೆ ಅವಕಾಶ, ಸಮಯ ಸಂದರ್ಭ, ಸ್ನೇಹಿತರು ಇತ್ಯಾದಿ ಇದ್ದಾಗ ಓಕೆ ಒಪ್ಪಬಹುದು. ಮನೇಲಿದ್ದಾಗ ಮಕ್ಕಳ ಜೊತೆ ಏನೇನು ಆಟಗಳನ್ನು ಆಡಬಹುದು? ಆಟದ ಸಾಮಾನುಗಳನ್ನು ತಂದು ಪೂರೈಸುವುದು ಹೌದ? ಎಂಬಿತ್ಯಾದಿ ಯೋಚನೆಗಳು ನಮಗೂ ಒಂದು ಸಲ ತಲೆ ಕೆರೆದುಕೊಳ್ಳುವಂತೆ ಮಾಡುತ್ತೆ ಅಲ್ವ? ಹಿಂಗಿದ್ದೇ ಒಂದು ಟೈಮ್ ಪಾಸ್ ಆಟ, ಆದ್ರೆ ತಲೆಗೆ ಭಾರೀ ಕೆಲಸ ಕೊಡುವ ಆಟ, ನಮ್ಮ ಬಾಲ್ಯದ ಚೀಪ್ ಅಂಡ್ ಬೆಸ್ಟ್ ಆಟ - ಬೆಂಕಿ ಕಡ್ಡಿ ಆಟ! ದೇವರಿಗೆ ದೀಪ ಹಚ್ಚಲು, ಅಡುಗೆ ಮನೇಲಿ ಮ್ಯಾಚ್ ಬಾಕ್ಸೆನ್ತು ಸಾಮಾನ್ಯ ಎಲ್ಲರ ಮನೆಯಲ್ಲಿ ಇದ್ದೇ ಇರುತ್ತದೆ. ಅಷ್ಟೇ ನಮ್ಮ ಆಟದ ವಸ್ತು :) ಬೆಂಕಿ ಕಡ್ಡಿ ಬಳಸಿ, ಸಂಖ್ಯೆಗಳ ಸಮೀಕರಣ ಬಗೆಹರಿಸುವುದೇ ನಮ್ಮ ಆಟ. ಯಾವ ವಯಸ್ಸಿನವರಿಗೆ ಈ ಆಟ ಅಂತ ಕೇಳಿದ್ರ? ಪ್ಲಸ್ಸು ಮೈನಸ್ಸು  ಲೆಕ್ಕ ಗೊತ್ತಿರೋ ಎಲ್ಲ ಸಣ್ಣ ದೊಡ್ಡ ಮಕ್ಕಳಿಗೆ ಈ ಆಟ. ಒಂದಷ್ಟು ಬೆಂಕಿ ಕಡ್ಡಿಗಳ ಜೋಡಿಸಿ ಅಂಕೆಗಳ ಮಾದರಿ ಮಾಡಿ, ಕೂಡು ಕಳೆಯೋ ಲೆಕ್ಕಾಚಾರದ ರಸಪ್ರಶ್ನೆ ಹಾಕಿ, ಒಂದೆರಡು ಕಡ್ಡಿಗಳ ಮಾತ್ರ ಬದಲಾಯಿಸಿ ಬಗೆಹರಿಸಬೇಕು ಎಂದು ಕೇಳಿ, ತಲೆಗೆ ಸ್ವಲ್ಪ ಕೆಲಸ ಕೊಡುವುದೇ ಈ ಆಟ ಆಡುವ ಬಗೆ.  ಚಿಕ್ಕಂದಿನಲ್ಲಿ ಈ ಆಟದ ಪ್ರಶ್ನೆ ಹಾಕುವವರೇ ದೊಡ್ಡ ಗಣಿತ ಶಾಸ್ತ್ರಜ್ಞರಂತೆ ಅನ...

ಬಾಲ್ಕನಿ ಗಾರ್ಡನಿಂಗ್

ಇಮೇಜ್
ನಗರ ಪಟ್ಟಣಗಳಲ್ಲಿ ವಾಸಿಸುವವರಿಗೆ ಹೂದೋಟ ಅಥವಾ ಅಗತ್ಯ ಗಿಡಗಳ ಆಸೆ ಇದ್ದರೂ ಅವಕಾಶವಿರುವುದಿಲ್ಲ. ಗಿಡದ ಬಗ್ಗೆ ಆಸಕ್ತಿ ಇರುವವರು, ಮನಸ್ಸಿದ್ದರೆ ಬಾಲ್ಕನಿಯನ್ನೇ ಸುಂದರ ಹೂದೊಟವಾಗಿಸಬಹುದು. ಕೈತೋಟ ಮಾಡುವುದು ಮನೆಗೆ ಅಂದ, ಮನಸ್ಸಿಗೆ ಚೆಂದ ಎನ್ನಿಸುವಂತಹ ಒಂದು ಹವ್ಯಾಸ. ಯಾವ್ಯಾವ ಗಿಡಗಳಿಂದ ಯಾವೆಲ್ಲ ಪ್ರಯೋಜನವಿದೆ ಎಂದು ತಿಳಿದುಕೊಂಡು ಸಣ್ಣ ಪ್ರಮಾಣದಲ್ಲಿಯಾದರೂ ಸ್ವತಃ ತರಕಾರಿ ಸೊಪ್ಪು ಬೆಳೆಯುವುದು ಆರೋಗ್ಯಕ್ಕೂ ಅನುಕೂಲ. ಬಾಲ್ಕನಿ ಗಾರ್ಡನಿಂಗ್ ಬಗ್ಗೆ ಹೀಗೊಂದಷ್ಟು ಟಿಪ್ಸ್.  ಮೊದಲಿಗೆ, ಬಾಲ್ಕನಿಯ ನೆಲದ ಜಾಗ, ನೇತು ಹಾಕಬಹುದಾದ ಗಿಡಗಳಿಗೆ ವ್ಯವಸ್ಥೆ, ಗೋಡೆಗಳಿಗೆ ಸ್ಟಾಂಡ್ ಮಾಡಿಸಬಹುದಾದ ಸಾಧ್ಯತೆ ಇತ್ಯಾದಿಯಾಗಿ ಒಂದು ಗಾರ್ಡನ್ ಲೇಔಟ್ ಪ್ಲಾನ್ ಮಾಡಿಕೊಳ್ಳಿ. ಹೆಚ್ಚಿನ ಜಾಗವಿದ್ದರೂ ಸಹ, ಸಣ್ಣದಾಗಿ ಪ್ರಾರಂಭ ಮಾಡಿ ಆರು ತಿಂಗಳುಗಳ ಕಾಲ ಸಾಧ್ಯತೆ ಅಸಾಧ್ಯತೆಗಳ ಪರಿಶೀಲಿಸಿಕೊಂಡು ಮುಂದುವರೆಯಿರಿ. ಪ್ರಾರಂಭದಲ್ಲಿ, ವಿಶೇಷ ಬಗೆಯ ಪಾಟ್ಗಳಿಗಿಂತ, ಉತ್ತಮ ಸತ್ವವಿರುವ ಮಣ್ಣಿಗೆ ಬಂಡವಾಳ ಹೂಡುವುದು ಜಾಣ್ಮೆಯ ನಿರ್ಧಾರ. ಭಾರದ ಸಿಮೆಂಟ್ ಅಥವಾ ಕಲ್ಲಿನ ಪಾಟ್ಗಳಿಗಿಂತ, ಮಣ್ಣಿನ, ಸೆಣಬಿನ ಚೀಲಗಳು ಒಳ್ಳೆಯದು. ಹೆಚ್ಚಿನ ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯ ಬಾಲ್ಕನಿಗಿದ್ದರೆ, ಲಂಬವಾದ ಕಬ್ಬಿಣದ ಅಥವಾ ಮರದ ಸ್ಟ್ಯಾಂಡ್ ಕಪಾಟುಗಳನ್ನು ಮಾಡಿಸಿಕೊಂಡರೆ, ಸರಳುಗಳಿಗೆ ನೇತು ಹಾಕುವ ಪಾಟ್ಗಳನ್ನು ಕೊಂಡರೆ ಬಾಲ್ಕನಿಯಲ್ಲಿ ಓಡಾಡುವ ಅವಕಾಶ...

ರಾಖಿಯಾಗಲಿ ಪರಿಸರಮುಖಿ

ಇಮೇಜ್
ಶ್ರಾವಣ ಪೂರ್ಣಿಮೆಯ ದಿನದಂದು, ಸಹೋದರಿಕೆಯ ಪ್ರಾಮುಖ್ಯತೆಯನ್ನು ಸಾರಲು ರಕ್ಷಾಬಂಧನ ಹಬ್ಬವನ್ನುಆಚರಿಸಲಾಗುತ್ತದೆ. ಅಕ್ಕ ತಂಗಿಯರು ಅಣ್ಣ ತಮ್ಮಂದಿರಿಗೆ ಈ ದಿನ ರಾಖಿ ಕಟ್ಟಿ ಅವರ ದೀರ್ಘಾಯುಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಕೆಲವರು ಸಹೋದರನ ಹಣೆಗೆ ತಿಲಕವನ್ನಿಟ್ಟು, ಆರತಿ ಬೆಳಗಿ ಆತನ ಯೋಗಕ್ಷೇಮಕ್ಕಾಗಿ ದೇವರಲ್ಲಿ ಬೇಡುತ್ತಾರೆ. ಸಹೋದರರು ಸಹೋದರಿಯರನ್ನು ಇಂದಿನ ದಿನ ಹರಸಿ ಆಶೀರ್ವದಿಸಿ, ಅವರ ರಕ್ಷಣೆಗಾಗಿ ಪಣ ತೊಟ್ಟು, ಹಣ ಅಥವಾ ಉಡುಗೊರೆಯನ್ನು ನೀಡಿ ತಮ್ಮ ಪ್ರೀತಿಯನ್ನು ತೋರ್ಪಡಿಸುತ್ತಾರೆ.  ರಾಖಿ ಹಬ್ಬದ ಇತಿಹಾಸವೇನು? ಹಿಂದೂ ಧರ್ಮದಲ್ಲಿ ರಕ್ಷಾಬಂಧನ ಆಚರಣೆಗೆ ಸಾಕಷ್ಟು ಮಹತ್ವವಿದೆ. ಪುರಾಣದ ದಂತಕಥೆಗಳಲ್ಲಿ ಒಂದಾದ ಮಹಾಭಾರತದ ಪ್ರಕಾರ, ಒಮ್ಮೆ ಶ್ರೀಕೃಷ್ಣನ ಬೆರಳು ಆಕಸ್ಮಿಕವಾಗಿ ಸುದರ್ಶನ  ಸಿಲುಕಿ ಕತ್ತರಿಸಿ ಹೋಗುತ್ತದೆ. ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದ ದ್ರೌಪದಿ ಹಿಂದೆ ಮುಂದೆ ನೋಡದೆ, ಓಡಿ ಹೋಗಿ, ತನ್ನ ಸೀರೆಯ ತುಂಡನ್ನು ಹರಿದು, ಕೃಷ್ಣನ ಬೆರಳಿಗೆ ಕಟ್ಟಿ ರಕ್ತ ಸುರಿಯುವುದನ್ನು ನಿಲ್ಲಿಸಲು ಪ್ರಯತ್ನಿಸುತ್ತಾಳೆ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟದಿದ್ದರೂ ಆ ಪೋಷಿಸುವ ಗುಣವನ್ನು ಕಂಡು ಕೃಷ್ಣ ದ್ರೌಪದಿಯನ್ನು ತನ್ನ ತಂಗಿಯಾಗಿ ಮನಸ್ಸಿನಲ್ಲೇ ಸ್ವೀಕರಿಸುತ್ತಾನೆ. ಅದೇ ಕಾರಣಕ್ಕಾಗಿ, ಮುಂದೆ ಕೌರವರು ತುಂಬು ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹಾರಣ ಮಾಡುವ ಪ್ರಯತ್ನ ಪಟ್ಟಾಗ, ತಂಗಿಯ ಮಾನ ಕಾಪಾಡಲು ಕೃಷ್...

ಡಿಕ್ಲಟ್ಟರಿಂಗ್

ಇಮೇಜ್
ಮನುಷ್ಯ ಎಂದ ಮೇಲೆ ಉತ್ತಮ ಬದುಕಿನ ಆಸೆ ಇದ್ದೇ ಇರುತ್ತದೆ. ಇತರರಂತೆ ಐಷಾರಾಮಿ ಬದುಕು ಬೇಕೆಂಬ ತುಡಿತ ಅನೇಕರಿಗಿರುತ್ತದೆ. ಮೂಲಭೂತ ಸೌಕರ್ಯಗಳು ಎಲ್ಲರಿಗೂ ಬೇಕು ನಿಜ, ಆದರೆ ನಮಗೆ ಅವಶ್ಯಕತೆಯೇ ಇಲ್ಲದ, ಅದೆಷ್ಟೋ ವಸ್ತುಗಳ ಹೊಣೆಗಾರಿಕೆ ಹೊತ್ತು, ಉಸಿರುಗಟ್ಟಿಕೊಂಡು ನಾವು ಬದುಕುತ್ತಿದ್ದೇವೆ ಎಂಬುದನ್ನು ಯಾರಾದರು ಗಮನಿಸಿದ್ದೀರಾ?  ಇದು ಚೆಂದ, ಇದು ಟ್ರೆಂಡಿ ಎನ್ನುತ್ತಾ ಕೊಂಡ ೪೦ ಶರ್ಟುಗಳು ಕಪಾಟಿನಲ್ಲಿದ್ದರೂ ಇಷ್ಟವಾಗುವ ಬಟ್ಟೆ ಅರ್ಜೆಂಟಾಗಿ ಬೇಕಾದಾಗ ಸಿಗುವುದಿಲ್ಲ. ಅಜ್ಜಿಯ ಕಾಲದಿಂದ ಬಳುವಳಿಯಾಗಿ ಬಂದ ೧೫೦ ಪಾತ್ರೆಗಳು ಇದ್ದರೂ, ಬೇಕಾದ ಸೌಟು ಎಲ್ಲಿದೆ ಎಂದು ಹುಡುಕುವುದು ತಪ್ಪುವುದಿಲ್ಲ. ಫ್ರಿಡ್ಜಿನಿಂದ  ಬೀಳುವ ವಸ್ತುಗಳ ಹಿಡಿದುಕೊಂಡು ಸರ್ಕಸ್ ಮಾಡಿ ಕೊತ್ತಂಬರಿ ಸೊಪ್ಪು ತೆಗೆಯಬೇಕು. ಮನೆ ಹೆಂಗೂ ದೊಡ್ಡದು, ಮುಂದೆ ಯಾವಾಗಲಾದರೂ ಬೇಕಾಗುತ್ತದೆ ಎಂದು ಪೇರಿಸಿಟ್ಟ ವಸ್ತುಗಳ ಮೇಲೆಲ್ಲಾ ಧೂಳು, ಆಪ್ತರ ನೆನಪಿನ ಕಾಣಿಕೆ ಎಂದು ಅಟ್ಟ ಹತ್ತಿಸಿ ಇಟ್ಟಿದ್ದ ವಸ್ತುಗಳು ಇಲಿ ಜಿರಳೆಗೆ ಆಹಾರವಾಗಿರುತ್ತದೆ,  ನಮ್ಮ ಪ್ರೆಸ್ಟೀಜ್ ಗೆ ತಂದುಕೊಂಡಿರುವ ಪೀಠೋಪರಕರಣಗಳು ಮಕ್ಕಳಿಗೆ ಆಟವಾಡಲು ಜಾಗವಿಲ್ಲದಂತೆ ಮಾಡಿವೆ. ಹೀಗೆ ಮನೆಯ ಅಥವಾ ಕೆಲಸದ ಸ್ಥಳದಲ್ಲಿನ ಭೌತಿಕ ವಸ್ತುಗಳಾಗಲಿ ಅಥವಾ ಎಲ್ಲರೊಂದಿಗೆ ಸಂಪರ್ಕದಲ್ಲಿರುವ ಇಚ್ಛೆಗೆ, ಇತರ ವ್ಯವಹಾರಗಳಿಗೆ, ಗುಡ್ಡೆ ಆಗುವ ಇನ್ಬಾಕ್ಸ್ ಮತ್ತು ಇತರ ಗ್ಯಾಡ್ಜೆಟ್ ನೋಟಿಫಿಕೇಷನ್ನುಗಳ...

ಚಾಕೋಲೇಟ್ ಕೊಡ್ಲಾ??

ಇಮೇಜ್
ತಮ್ಮದೇ ಮಕ್ಕಳಿಗೆ ಅತಿಯಾಗಿ ಚಾಕೊಲೇಟ್ ಕೊಡಿಸುವ ಪಾಲಕರು ಮತ್ತು ನೆಂಟರಿಷ್ಟರಾಗಿ ಮಕ್ಕಳಿರುವ ಮನೆಗೆ ಚಾಕೊಲೇಟ್ ಕೊಂಡೊಯ್ಯುವವರ ಗಮನಕ್ಕೆ! ಮಕ್ಕಳು ಮತ್ತು ಚಾಕೊಲೇಟಿಗೆ ಅವಿನಾಭಾವ ಸಂಬಂಧ. ಬರ್ತಡೇ ಎಂದರೆ ಚಾಕೊಲೇಟು ಹಂಚಿಕೆ ಖಾಯಂ. ಚಿಕ್ಕ ಮಕ್ಕಳಿರುವ ಮನೆಗೆ ಮನೆಯವರೂ ಸೇರಿದಂತೆ, ಸ್ನೇಹಿತರು ಬಂಧುಗಳು ಚಾಕೊಲೇಟನ್ನು ತೆಗೆದುಕೊಂಡು ಹೋಗಿ ಕೊಡುವುದು ಸರ್ವೇ ಸಾಮಾನ್ಯ. ಯಾಕೆ? ಮಕ್ಕಳು ಸಿಹಿ ತಿಂದು ಖುಷಿಯಾಗಲಿ, ತಮ್ಮನ್ನು ಒಳ್ಳೆಯವರೆಂದು ಗುರುತಿಸಿಕೊಳ್ಳಲು ಸಿಗಬಹುದಾದ ಅತ್ಯಂತ ಕಡಿಮೆ ಖರ್ಚಿನ ತಿಂಡಿ ಚಾಕೊಲೇಟು. ಆದರೆ ಈ ಭರದಲ್ಲಿ, ಏನೂ ಅರಿಯದ ಮಕ್ಕಳಲ್ಲಿ, ಚಾಕೊಲೇಟಿನ ಅತಿಯಾದ ಬಳಕೆಯ ಚಟವನ್ನು, ಅನಾರೋಗ್ಯವನ್ನು ನಾವೇ ಧಾರೆಯೆರೆಯುತ್ತಿದ್ದೇವೆ.  ಅಧ್ಯಯನಗಳ ಪ್ರಕಾರ ಕೋಕೋ ಬೀನ್ಸ್ ಗಳಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಾಗಿ ಇರುತ್ತವಯಾದ್ದರಿಂದ  ಚಾಕೊಲೇಟ್ಸ್ಗಳು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಚಾಕೊಲೇಟು ಬಾಯಲ್ಲಿಟ್ಟರೆ ಕರಗುವಂತೆ ಮಾಡಲು ಸಸ್ಯಜನ್ಯವಾದ ಕೋಕೋ ಬೆಣ್ಣೆಯನ್ನು ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಬಳಸಿ, ಹಾಲಿನ ಕೆನೆ ಮತ್ತು ಸಕ್ಕರೆಯ ಪ್ರಮಾಣವನ್ನು ಕನಿಷ್ಠವಾಗಿರಿಸಬೇಕು ಎನ್ನುತ್ತದೆ ಕಾನೂನು. ಖಾದ್ಯ ತೈಲಗಳ ಬಳಕೆ ಸಂಪೂರ್ಣ ನಿಷಿದ್ಧವಿದೆ. ಆದರೂ ಕೆಲವು ಚಾಕೊಲೇಟುಗಳಿಗೆ,  ತಾಳೆ, ಶೇಂಗಾ, ಸೂರ್ಯಕಾಂತಿಯ್ಕೆ ಎಣ್ಣೆಯನ್ನು ಬಳಸುವುದು ಗಮನಿಸಬಹುದು. ಎಷ್ಟೋ ಕಡೆ ಹೈಡ್ರೋಜೆನೆರೇಟೆಡ್ ಖಾದ...

ಮಕ್ಕಳಿಗೆ ಚಿತ್ರಕಲೆ ಏಕೆ ಮುಖ್ಯ?

ಇಮೇಜ್
ಚಿತ್ರಕಲೆ ಒಂದು ವಿಶ್ವ ಭಾಷೆ. ಎಲ್ಲ ಜಾತಿ, ಧರ್ಮ, ಲಿಂಗ, ವಯಸ್ಸಿನ ಬೇಧವಿಲ್ಲದೆ ಎಲ್ಲರನ್ನೂ ಸೆಳೆದುಕೊಳ್ಳುವ ಭಾಷೆಯಿದು. ಅದರಲ್ಲೂ ಮುಖ್ಯವಾಗಿ ಮಕ್ಕಳು ಅತ್ಯಂತ ಸಹಜವಾಗಿಯೇ ತಮ್ಮನ್ನು ತಾವೇ ತೊಡಗಿಸಿಕೊಳ್ಳಬಹುದಾದಂತಹ ಚಟುವಟಿಕೆಯಿದು. ಚಿತ್ರಕಲೆಗಳಲ್ಲಿ ಆಸಕ್ತಿಯಿಲ್ಲ ನಮ್ಮ ಮಗುವಿಗೆ ಎನ್ನುವ ಪೋಷಕರಿಗಾಗಿ ಇಂದಿನ ಈ ಲೇಖನ.  ಕಲೆ ಎಂದರೆ ವಿಶಿಷ್ಟವಾದ ಚಟುವಟಿಕೆ ಮತ್ತು ಚಿತ್ರಕಲೆ ಎಂದರೆ, ಚಿತ್ರಗಳ ಮೂಲಕ ಆ ಭಾವವನ್ನು ಬಿಂಬಿಸುವ ಪ್ರಯತ್ನ ಎಂದರ್ಥ. ಮನುಷ್ಯನಾಗಿ ರೂಪಿತವಾಗುತ್ತಿರುವ ಹಂತದಲ್ಲೇ, ಗುಹೆಗಳ ಮೇಲೆ ಚಿತ್ರಗಳ ಕೆತ್ತನೆ ಮಾಡುತ್ತ ಆನಂದವನ್ನು ಕಾಣುತ್ತಿದ್ದ ನಮ್ಮ ಪೂರ್ವಿಕರ ಇತಿಹಾಸವಿದೆ. ಪ್ರತಿ  ಮಗುವಿನಲ್ಲೂ ಹುಟ್ಟಿನಿಂದಲೇ ಕಲಾಜ್ಞಾನ ಇರುತ್ತದೆ. ಅದಕ್ಕೆ ಪೆನ್ಸಿಲ್ಲು, ಕುಂಚ-ಬಣ್ಣಗಳ ಬಳಕೆಯೇ ಆಗಿರಬೇಕೆಂದಿಲ್ಲ. ನೈಜತೆಗೆ ಹತ್ತಿರುವಾಗುವಂತಹ ಚಿತ್ರಗಳು ಬರೆದರೆ ಮಾತ್ರ ಅದು ಚಿತ್ರಕಲೆಯಲ್ಲ. ಅಮ್ಮ ಆರಿಸುವ ಅಕ್ಕಿಯ ಬಟ್ಟಲಲ್ಲಿ ಮಗು ಬೆರಳಿನಿಂದ ಗುಂಡನೆಯ ಸೂರ್ಯನನ್ನು ಯೋಚಿಸಿಕೈಯಾಡುತ್ತದೆ. ಆಡುವ ಮಣ್ಣಿನಲ್ಲಿ, ಕೋಲಿನಿಂದ ಕೋಳಿ ಬರೆದಿರುತ್ತಾರೆ ನಮ್ಮ ಮಕ್ಕಳು. "ಛೀ! ಮಣ್ಣಾಡಬೇಡ", "ನೀರು ಪೋಲು ಮಾಡ್ತೀಯ", "ಕೊಡಿಲ್ಲಿ ಅಕ್ಕಿ ಹಾಳು ಮಾಡ್ತೀಯ ನೀನು" ಎಂಬಿತ್ಯಾದಿ ಸ್ವಚ್ಛತೆಯೆಡೆಗಿನ ಪೂರ್ವನಿರ್ಧಾರಿತ ಮಾತುಗಳು, ಆ ಸಮಯಕ್ಕೆ ಎಳೆಗೂಸುಗಳ ಚಿತ್ರ...