ಪೋಸ್ಟ್‌ಗಳು

ನುಗ್ಗೆ ಸೊಪ್ಪಿನ ಚಟ್ನಿ ಪುಡಿ

ಇಮೇಜ್
ನನಗೆ ಸಿಕ್ಕಾಪಟ್ಟೆ ಅಡುಗೆಯ ಕ್ರೇಜ್ ಇಲ್ಲದಿದ್ದರೂ, ಆದಷ್ಟು ಮನೆಯಲ್ಲಿಯೇ ಹೊಸ ಬಗೆಯ ಅಡುಗೆ ಪದಾರ್ಥಗಳನ್ನು, ಬಾಯ್ಬಡುಗೆಗೆ ಕುರುಕಲು ಮಾಡುತ್ತಿರುತ್ತೇನೆ. ಮಗಳು ಚಟ್ನಿಪುಡಿಯ ಗೊಣಮಿ. ಹಾಗಾಗಿ ಒಂದಾದ ಮೇಲೊಂದು ಬಗೆಯ ಚಟ್ನಿಪುಡಿ ಮನೆಯಲ್ಲಿ ಮಾಡುತ್ತಿರುತ್ತೇನೆ.  ಚಳಿಗಾಲ ಈಗ ನುಗ್ಗೆ ಸೊಪ್ಪಿನ ಸೀಸನ್. ಆಯಾಯ ಸೀಸನ್ನಿನ ಸೊಪ್ಪು ತರಕಾರಿ  ಹಣ್ಣುಗಳ ಬಳಕೆ ಆರೋಗ್ಯಕರ. ನುಗ್ಗೆ ಸೊಪ್ಪು ಮನುಷ್ಯನ ಹೃದಯವನ್ನು ಮತ್ತು ಲಿವರ್ ಅನ್ನು ಹಾನಿಮಾಡುವ ವಿಷಕಾರಿ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳಿಂದ ರಕ್ಷಣೆ ಮಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾಗಿ ಆಂಟಿ - ಆಕ್ಸಿಡೆಂಟ್ ಗಳು, ವಿಟಮಿನ್ ' ಸಿ ', ಜಿಂಕ್ ಇತ್ಯಾದಿ ಅವಶ್ಯಕ ಪೋಷಕಾಂಶ ದೊರೆಯುತ್ತದೆ. ಮಕ್ಕಳಿಗೆ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆ ಪರಿಹಾರಕ್ಕೆ ಸಹಕಾರಿ. ಚಳಿಗಾಲದಲ್ಲಿ ಎಲ್ಲ ತಿಂಡಿ ಬಿಸಿ ಬಿಸಿ ಬೇಕೆನಿಸುತ್ತದೆ. ಅದರ ಜೊತೆಗೆ ಈ ನುಗ್ಗೆ ಸೊಪ್ಪಿನ ಚಟ್ನಿಪುಡಿ ಮತ್ತು ಕೊಬ್ಬರಿ ಎಣ್ಣೆಯ ಕಾಂಬಿನೇಷನ್ ಅಂತೂ ವರ್ಣಿಸಲಸದಳ!! ಯಾಕೋ ಇವತ್ತು ಹಂಚಿಕೊಳ್ಳೋಣ ಯಾರಿಗಾದರೂ ಉಪಯೋಗವಾದಿತು ಎನಿಸಿ ಈ ಪೋಸ್ಟ್. ಸಾಮಾಗ್ರಿಗಳನ್ನು ಚೆನ್ನಾಗಿ ಜೋಡಿಸಿಕೊಂಡು ಫೋಟೋ ತೆಗೆದು, ಮಾಡುವ ವಿಧಾನದ ವಿಡಿಯೋ ಮಾಡಿ ಎಡಿಟಿಂಗ್ ಮಾಡುವಷ್ಟು ತಾಳ್ಮೆಕಿಂತಲೂ ಹೆಚ್ಚಾಗಿ ಆಸಕ್ತಿ ಇಲ್ಲ. ಹಾಗಾಗಿ ಮಾಡುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ  ನುಗ್ಗೆಸೊಪ್ಪು ಬಾಣಲ...

ಕೈವಾರ ಬೆಟ್ಟ ಮತ್ತು ಕೈಲಾಸಗಿರಿ ಗುಹೆ

ಇಮೇಜ್
ಬೆಂಗಳೂರಿನಿಂದ ೬೫ ಕಿಮೀ ದೂರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿದೆ ಕೈವಾರವೆಂಬ ಊರು. ಆಸ್ತಿಕರಿಗೆ ಇದೊಂದು ಪುಣ್ಯಕ್ಷೇತ್ರ, ಚಾರಣಿಗರಿಗೆ ಮತ್ತೊಂದು ಸ್ವರ್ಗ.  ಕರ್ನಾಟಕ ಅರಣ್ಯ ಇಲಾಖೆಯವರ ನಿರ್ವಹಣೆಯಲ್ಲಿರುವ ಇಲ್ಲಿನ ಕೈವಾರ ಬೆಟ್ಟಕ್ಕೆ ಟ್ರೆಕಿಂಗ್ ಹೋಗಲು ಮುಂಚಿತವಾಗಿ ಅನುಮತಿ ಪಡೆಯಬೇಕಾಗುತ್ತದೆ. karnatakatourism.org   ನಲ್ಲಿ ಕೂಡ ಆನ್ಲೈನ್ ಟಿಕೆಟ್ ಬುಕಿಂಗ್ ಮಾಡಬಹುದು. ಬೆಂಗಳೂರಿನಿಂದ ಹೊರಟು ಹೊಸಕೋಟೆ ಮಾರ್ಗವಾಗಿ ಅಥವಾ ದೇವನಹಳ್ಳಿ-ಬಿಜಯಪುರ ಮಾರ್ಗವಾಗಿ ಬಸ್ಸು ಅಥವಾ ಸ್ವಂತ ವಾಹನದಲ್ಲಿ ಕೈವಾರವನ್ನು ತಲುಪಬಹುದು. ನಾವು ಹೋದದ್ದು ನಮ್ಮ ಯೋಗ ಶಿಕ್ಷಣ ಕೇಂದ್ರದ ವತಿಯಿಂದ, ಸಂಚಾರದ ವ್ಯವಸ್ಥೆ, ಊಟ ತಿಂಡಿಗಳ ವ್ಯವಸ್ಥೆ ಮುಂಚಿತವಾಗಿಯೇ ನಮ್ಮ ತಂಡದ ನೇಕಾರರಿಂದ ಆದ್ದ ಕಾರಣ, ನಮಗೆ ಹೆಚ್ಚಿನ  ನಿರ್ವಹಣಾ ಜವಾಬ್ಧಾರಿ ಬೀಳಲಿಲ್ಲ. ಚಾರಣ ಯೋಗಬಂಧುಗಳ ಜೊತೆಯಾದ್ದರಿಂದ ದೇಹದ ಸ್ನಾಯುಗಳನ್ನು ಚಲನಶೀಲವಾಗಿರಿಸಲು ಆಸಕ್ತಿ ಹೊಂದಿರುವ ಸಮಾನ ಮನಸ್ಕರರ ಗುಂಪು ದೊರೆತಂತಾಗಿತ್ತು. ಇದರ ಜೊತೆಯಲ್ಲಿ, ಈ ಸ್ಥಳದ ಮಹಿಮೆಯನ್ನು ಅತ್ಯಂತ ನಿಖರವಾಗಿ ಬಲ್ಲವರಾದ ನಮ್ಮ ಗುರುಗಳಾದ ಸುಬ್ಬು ಬೈಯ್ಯ ಮತ್ತು ಅಶೋಕ್ ಸರ್ ನ ನೇತೃತ್ವದ ಯೋಗಯಾತ್ರೆ ಇದಾದ್ದರಿಂದ, ಸ್ಥಳ ಮಹಿಮೆಯನ್ನು ವಿಸ್ತಾರವಾಗಿ ತಿಳಿಯಲು ಇನ್ನಷ್ಟು ಸಹಾಯಕವಾಯಿತು. ಈ ಸ್ಥಳ ಸಂತ ಕೈವಾರ ತಾತಯ್ಯ ಆಶ್ರಮ ಮತ್ತು ದೇವಾಲಯದ ಸಂಕೀರ್ಣಕ್ಕೆ ಹೆಸ...

ತಗೊಳ್ಳಿ ತಿನ್ನುವಷ್ಟೇ ಊಟ!

ಇಮೇಜ್
ಸಂಬಂಧಿಕರ ಒಂದು ಗೃಹಪ್ರವೇಶ ಸಮಾರಂಭಕ್ಕೆ ಹೋಗಿದ್ದೆ. ಊಟಕ್ಕೆ ಕುಳಿತಾಗ ನನ್ನೆದುರಿನಲ್ಲಿ, ಒಬ್ಬ ತಾಯಿ, ಪಕ್ಕದಲ್ಲಿ ಅವಳ ಸುಮಾರು 6 ವರ್ಷದ ಒಂದು ಮಗು, ಪಕ್ಕದಲ್ಲಿ ಮಗುವಿನ ಆರೈಕೆಗೆ ಮೀಸಲಾಗಿರುವ ಒಬ್ಬಳು ಹೆಣ್ಣು ಮಗಳು ಮತ್ತು ಕಾರಿನ ಡ್ರೈವರ್ ಇಷ್ಟು ಜನ ಊಟಕ್ಕೆ ಕುಳಿತಿದ್ದರು. ಮೇಲ್ನೋಟಕ್ಕೆ ಮಗು ತುಸು ಅನಾರೋಗ್ಯದಿಂದ ಮಂದವಾಗಿರುವುದು ತೋರುತ್ತಿತ್ತು. ಈಗಿನ ಕಾಲದಲ್ಲಿ, ಸಮಾರಂಭಗಳಲ್ಲಿ ಯಾವುದಕ್ಕೆ ಕೊರತೆಯಾದರೂ ಕೂಡ ಭೋಜನ ಮಾತ್ರ ಅದ್ದೂರಿಯಾಗಿರಬೇಕು. ಜನರಿಗೆ ತಿನ್ನಲು ಸಾಧ್ಯವೋ ಇಲ್ಲವೋ ೨೦-೩೦ ಬಗೆ ಐಟಮ್ಸ್ಗಳೆಂತೂ ಊಟದ ಬಾಳೆ ಎಲೆ ಮೇಲಿರಬೇಕು. ನಗರ ಪ್ರದೇಶಗಳಲ್ಲಂತೂ, ಎಲ್ಲವೂ ಈಗ ಕಾಂಟ್ರಾಕ್ಟ್ ಲೆಕ್ಕ. ವಿವಿಧ ಭಕ್ಷ್ಯಗಳನ್ನು ಒಳಗೊಂಡ ಪ್ರತೀ ಬಾಳೆಗೆ ನಿಗದಿತ ಬೆಲೆ. ಊಟ ಪ್ರಾರಂಭವಾಯಿತು.  ಬಾಳೆಯ ತುಂಬಾ ಸಾಲಾಗಿ ಒಂದಾದ ಮೇಲೊಂದು ಭಕ್ಷ್ಯಗಳನ್ನು ಬಡಿಸುತ್ತಾ ಹೋದರು. ಸಾಮಾನ್ಯವಾಗಿ ಮಕ್ಕಳ ಊಟದ ಶೈಲಿ ಪಾಲಕರಿಗೆ ತಿಳಿದಿರುತ್ತದೆ. ಊಟದ ಶಿಸ್ತು ಬರುವರೆಗೂ ತಮಗಿಷ್ಟವಾದ ಒಂದಷ್ಟು ಸಿಹಿ ಮತ್ತು ಕರಿದ ಪದಾರ್ಥಗಳನ್ನಷ್ಟೇ ತಿಂದು ಎದ್ದೇಳುವುದು ಮಕ್ಕಳ ರೂಢಿ. ಬಡಿಸುತ್ತಿರುವ ಯಾವ ಭಕ್ಷ್ಯಗಳನ್ನೂ ಬೇಡವೆನ್ನದೆ ಎಲ್ಲವನ್ನು ಅವರೆಲ್ಲರೂ ಹಾಕಿಸಿಕೊಂಡರು. ಮಗುವಿನ ಆರೋಗ್ಯ ಯಾಕೋ ಅನುಮಾನವಾಸ್ಪದವಾಗಿದ್ದರಿಂದ, ತಾಯಿ ಮಗುವಿನ ಸಹಾಯಕಿಗೆ ಊಟ ಮಾಡದೆ ಕಾಯುವಂತೆ ಸೂಚನೆ ನೀಡಿದಳು. ಅನ್ನ ಸಾರು ಪೂರಿ ಸಾಗು ಎಲ್ಲವೂ ಆ ಸಹಾಯಕಿಯ ...