ಪೋಸ್ಟ್‌ಗಳು

ಜಲಕ್ಷಾಮ..ತಪ್ಪಿಸಿಕೊಂಡರೆ ಆರಾಮ

ಇಮೇಜ್
ನೀರಿನ ಮಹತ್ವ ತಿಳಿಯುವುದೇ ನೀರಿನ ಕೊರತೆಯಾದಾಗ. ವರ್ಷಪೂರ್ತಿ ನೀರಿನ ಪ್ರಾಮುಖ್ಯತೆ ಬಗ್ಗೆ ಅರಿಯದೆ, ಬೇಕಾಬಿಟ್ಟಿ ಬಳಸಿ ಬೇಸಿಗೆಗಾಲದಲ್ಲಿ ನೀರಿಲ್ಲದೆ ಒದ್ದಾಡುವುದು ಸರ್ವೇ ಸಾಮಾನ್ಯವಾಗುತ್ತಿದೆ. ಎಷ್ಟೇ ದೊಡ್ಡವರಾಗಿದ್ದರೂ, ನೀರಿನ ಸದ್ಬಳಕೆ ಕುರಿತಾದ ಜ್ಞಾನ ಎಲ್ಲರಿಗೂ ಇರುವುದಿಲ್ಲ. .. ನೀರನ್ನು ಯೋಚಿಸಿ ಬಳಸುವುದು ಕೇವಲ ಜಲಕ್ಷಾಮದ ಸಮಯದಲ್ಲಿನ ಚಟುವಟಿಕೆಯಾಗದೆ ಅದೊಂದು ಜೀವನಶೈಲಿ ಆಗಬೇಕು. ಒಂದಷ್ಟು ಟಿಪ್ಸ್ ಬೇಸಿಗೆಯಲ್ಲಿ ನೀರನ್ನು ಹೇಗೆ  ಹಿತಮಿತವಾಗಿ ಬಳಕೆ ಮತ್ತು ಮರುಬಳಕೆ ಮಾಡಬಹುದು ಎಂಬುದುದರ ಕುರಿತಾಗಿ.  ಅಂಗಳ ಮತ್ತು ವಾಹನಗಳ ಸ್ವಚ್ಛತೆ : ನಿತ್ಯ ರಂಗೋಲಿ ಹಾಕುವ ಜಾಗವನ್ನಷ್ಟೇ ಸಾರಿಸಿ ಉಳಿದ ಜಾಗವನ್ನು ಗುಡಿಸಿ, ವಾರಕ್ಕೊಮ್ಮೆ ಸ್ಪ್ರಿಂಕ್ಲರ್ ಅಳವಡಿಸಿದ ಪೈಪಿನಿಂದ ಇಡೀ ಅಂಗಳವನ್ನು ನೀರಿನಿಂದ ಚೊಕ್ಕವಾಗಿ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಬಹುದು.  ಕಾರು ಬೈಕುಗಳನ್ನು ಪ್ರತೀ ಸಲವೂ ಪೈಪ್ ನೀರಿನಿಂದ ತೊಳೆದು ಹೆಚ್ಚಿನ ನೀರನ್ನು ಪಾಲುಗೊಳಿಸುವುದಕ್ಕಿಂತ, ಬಕೆಟ್ ನೀರಿನಲ್ಲಿ ಬಟ್ಟೆಯ ಬಳಸಿ ಧೂಳನ್ನು ಒರೆಸಿ ತೆಗೆಯಬಹುದು. ಅವಶ್ಯಕತೆ ಇದ್ದರೆ ಜೆಟ್ ಸ್ಪ್ರೇಯರ್ ಬಳಸಿದರೆ ಗಾಡಿ ತೊಳೆಯಲು ಕಡಿಮೆ ನೀರು ಸಾಕು ಅಡುಗೆ ಮನೆಗೆ ಬಳಸುವ ನೀರು  : ತೊಳೆಯಲು ಇಡುವ ಪಾತ್ರೆ ಒಣಗಿದಷ್ಟೂ ಅದನ್ನು ತಿಕ್ಕಿ ತೊಳೆಯಲು ನೀರು ಜಾಸ್ತಿ ಬೇಕು. ಹಾಗಾಗಿ ಸಿಂಕಿನಲ್ಲಿ, ಒಂದೊಂದೇ ಪಾತ್ರೆಯನ್ನು ತೊಳೆಯುವ ಬದಲು, ತೊಳ...

walk2HEAL - ನಡಿಗೆ

ಇಮೇಜ್
 ನಡಿಗೆ ಆರೋಗ್ಯಕ್ಕೆ ಒಳ್ಳೆಯದು. ಅದು ನನ್ನ ಪ್ರತಿನಿತ್ಯದ ಚಟುವಟಿಕೆ. ಕಬ್ಬನ್ ಪಾರ್ಕಿನಲ್ಲಿ ನಾಲ್ಕು ಕಿಲೋಮೀಟರ್ ನಡಿಗೆಯ ವಾಕಥಾನ್ ಕಾರ್ಯಕ್ರಮದ ಬಗ್ಗೆ ತಿಳಿದು, ಭಾನುವಾರ ಬೆಳಿಗ್ಗೆಗೆ ಮಗಳ ಜೊತೆ ವಾಕ್ ಮಾಡುವ ಪ್ರೋಗ್ರಾಂ ಫಿಕ್ಸ್ ಆಯಿತು.  ಅದು ಗೋಪಾಲ್ಸ್ ಸ್ವಯಂ ಸೇವಾ ಸಂಸ್ಥೆಯಿಂದ "walk2HEAL" ಎಂಬ ಸಂದೇಶದೊಂದಿಗೆ ಆಯೋಜಿಸಿದ್ದ ಆರೋಗ್ಯಕ್ಕಾಗಿ ನಡಿಗೆ. HEAL stands for - H - Health, E - Environment A - Agriculture L - Lifestyle ನಮ್ಮ ಆರೋಗ್ಯ, ಪ್ರಕೃತಿಯೊಂದಿಗಿನ ಬೆಸುಗೆ, ಮಾಲಿನ್ಯ ರಹಿತ ಕೃಷಿ - ಆ ಮೂಲಕ ನಮಗೆ ದೊರಕುವ ಆಹಾರ ಹಾಗೂ ಇವೆಲ್ಲದರ ಜೊತೆ ಅಡಕವಾಗಿರುವ ನಮ್ಮ ಜೀವನಶೈಲಿ ಇವೆಲ್ಲವೂ ಒಂದಕ್ಕೊಂದು ಪೂರಕವಾದ ಅಂಶಗಳು. ಇವೆಲ್ಲದರ ಕುರಿತಾದ ಜಾಗೃತಿಗಾಗಿ ನಡೆಸಿದ ಜಾಥಾ ಈ ನಡಿಗೆ ಕಾರ್ಯಕ್ರಮ.  ದೇಸಿ ಹಸುಗಳ ಸಂರಕ್ಷಣೆ ಮತ್ತು ಪಾಲನೆಯ ಸದುದ್ದೇಶದಿಂದ ಹುಟ್ಟಿಕೊಂಡಿರುವ, ಒಂದು ಸ್ವಯಂ ಸೇವಾ ಸಂಸ್ಥೆ ಗೋಪಾಲ್ಸ್. ಇಲ್ಲಿ ಗೋ ಎಂದರೆ ಗೋವು ಎಂದರ್ಥ ಮತ್ತು ಪಾಲ್ಸ್ ಎಂದರೆ ಇಂಗ್ಲೀಷಿನಲ್ಲಿ, ಸ್ನೇಹಿತರು ಎಂಬುದಕ್ಕೆ ಸೂಚಿಸುವ ಪದ. ಹಸುವಿನ ಸ್ನೇಹಿತರು ನಾವು ಎಂಬರ್ಥ ಈ ಸೇವಾ ಸಂಸ್ಥೆಯ ಹೆಸರೇ ತುಂಬಾ ಕ್ರಿಯಾತ್ಮಕವೆನಿಸಿತು. ಈ ಸಂಸ್ಥೆಗಾಗಿ ಕೆಲಸ ಮಾಡುವವರ್ಯಾರೂ ತಮ್ಮ ಹೊಟ್ಟೆಪಾಡಿನ ದುಡಿಮೆಗೋಸ್ಕರ ಈ ಸಂಸ್ಥೆಯನ್ನು ನೆಚ್ಚಿಕೊಂಡವರಲ್ಲ, ಅವರ ಜೀವನಧಾರದ ದುಡಿಮೆಯ ಹೊರತಾಗ...

ಕೆಲವು ಸಿಹಿಗಳು ಅದೆಷ್ಟು ಮಧುರ!

ಇಮೇಜ್
ಸಾಗರಕ್ಕೆ ಹೋದಾಗ, ಸ್ನೇಹಿತೆಯ ಮನೆಗೆ ಭೇಟಿ ನೀಡುವುದಿತ್ತು. ಅದೂ ನಾನು, ನನ್ನ ಬಾಲ್ಯವನ್ನು ಕಳೆದ ಶ್ರೀನಗರ ಏರಿಯಾದಲ್ಲೇ ಇರುವವರ ಮನೆಗೆ. ಸ್ನೇಹಿತೆಯ ಮಗನಿಗೆ, ಹತ್ತಿರದಲ್ಲಿದ್ದ ಅಂಗಡಿಯಲ್ಲಿ ಹುರಿದ ಶೇಂಗಾ ತೆಗೆದುಕೊಳ್ಳಲು ಹೋದೆ. ಅದು ನಾವೆಲ್ಲ ಸಣ್ಣವರಿದ್ದಾಗ ಹೋಗುತ್ತಿದ್ದ ದಿನಸಿ ಅಂಗಡಿ -  "ವೆಂಟಕೇಶನ ಅಂಗಡಿ". ಅಂಗಡಿಯ ಮುಂದೆ ವಯಸ್ಸಾದ ವ್ಯಕ್ತಿ ಕುಳಿತಿದ್ದರು. ಅದು ನಮ್ಮ ಗಣೇಶಣ್ಣ ಅಂಗಡಿಯ ಮಾಲೀಕ. ಬೇಕಾದ ವಸ್ತುವನ್ನು ಕೇಳಿ ಪಡೆದುಕೊಂಡು, "ನಾನ್ಯಾರು ಗೊತ್ತಾಯ್ತ?" ಎಂದು ಕೇಳಿದೆ, ಸಂಜೆಯ ಮುಸುಕಿಗೆ ಅವರಿಗೆ ನನ್ನ ಗುರುತು ಸಿಗಲಿಲ್ಲ. ಹೊರಗಡೆ ಬಂದು ಬೀದಿ ದೀಪದ ಕಡೆಗೆ ನನ್ನ ತಿರುಗಿಸಿ, ಚಹರೆ ಹುಡುಕಲು ಪ್ರಯತ್ನಿಸಿದರು, ಗೊತ್ತಾಗಲಿಲ್ಲ. "ಗಣೇಶಣ್ಣ ನಾನು ಸೌಮ್ಯ, ಬಿ ಏನ್ ರಾಮಚಂದ್ರ ಅವ್ರ ಮಗಳು, ಯಶೋದಕ್ಕ ನ  ಮಗಳು, ಎರಡನೇವಳು" ಎಂದು ಹೇಳಿದ್ದೆ ತಡ, "ಅಯ್ಯೋ ಹುಡುಗಿ ಗುರ್ತೇ ಸಿಗಲಿಲ್ಲ ನಂಗೆ ಮೊದಲು, ಮಾರಾಯ್ತಿ ಎಷ್ಟು ಟೈಮ್ ಆಯ್ತು ನಿನ್ನ ನೋಡದೆ, ಆಗಿದ್ದಂಗೆ ಇದೀಯಲ ಮಾರಾಯ್ತಿ ಯಾವ್ದೋ ಸ್ಕೂಲ್ ಹುಡುಗಿ ಅಂತ ಅಂದುಕೊಂಡೆ.." ಎಂಬಿತ್ಯಾದಿ ಆಶ್ಚರ್ಯಚಕಿತ ಮಾತುಗಳೆಲ್ಲ ಪುಂಖಾನುಪುಂಖವಾಗಿ ಒಂದೇ ಉಸಿರಿಗೆ ಹೇಳುತ್ತಾ ಹೋದರು. ಅವರ ಮುಖದಲ್ಲಿ ಹಳೆಯ ಗುರ್ತದ ಜನ ಸಿಕ್ಕು ಮಾತನಾಡಿಸಿದ ಖುಷಿ ಎದ್ದು ಕಾಣುತ್ತಿತ್ತು. "ಇಲ್ಲಿ ಬಾಯಿಲ್ಲಿ, ನೀನು ಇಷ್ಟು ಪುಟ್ಟುಗಿ...

ಮಕ್ಕಳ ಮನಿ ಮ್ಯಾನೇಜ್ಮೆಂಟ್

ಇಮೇಜ್
ಮಗಳ ಶಾಲೆಯಲ್ಲಿ, ಆರನೇ ತರಗತಿಯ ಮೇಲ್ಪಟ್ಟ ಮಕ್ಕಳು ತಮಗೆ ಆಸಕ್ತಿಯಿರುವ ಸಾಮಗ್ರಿ ಅಥವಾ ಸೇವೆಗಳ ಅಂಗಡಿಗಳನ್ನು ಹಾಕಿದ್ದ ಎಕ್ಷಿಬಿಷನ್ ಕಮ್ ಸೇಲ್ ಕಾರ್ಯಕ್ರಮವಿತ್ತು. ವಿವಿಧ ಬಗೆಯ ತಿಂಡಿಗಳು, ಆಟಗಳು, ಕ್ರಾಫ್ಟ್, ಮೆಹಂದಿ, ಟ್ಯಾಟೂ, ಹೀಗೆ ನಾನಾ ಬಗೆಯ ವ್ಯಾಪಾರ ವಹಿವಾಟು ಎಲ್ಲವೂ ಮಕ್ಕಳಿಂದಲೇ. ಮಾರಾಟದ ವಸ್ತುಗಳ ನಿಗದಿತ ಬೆಲೆ, ಚೌಕಾಸಿ ಬೆಲೆ, ಅಚ್ಚುಕಟ್ಟಾದ ಬೋರ್ಡ್ಗಳು,  ದುಡ್ಡು ಚಿಲ್ಲರೆಗಳ ವಹಿವಾಟು, ಖರ್ಚಾದ ವಸ್ತುಗಳ ಪಟ್ಟಿ ಮತ್ತು ತಮಗೆ ಸಂದುತ್ತಿರುವ ದುಡ್ಡಿನ ಲೆಕ್ಕಾಚಾರ ಎಲ್ಲದರ ದಾಖಲೆ ಬರೆದುಕೊಂಡು ತಮಗೆಷ್ಟು ಲಾಭ ಸಂದಿದೆ ಇತ್ಯಾದಿ ತಮ್ಮ ತಮ್ಮಲ್ಲೆ ಮಾತುಕತೆ ಮಾಡಿಕೊಳ್ಳುತ್ತಿದ್ದ ಮಕ್ಕಳ ನೋಡಿ ಸಂತೋಷವಾಯಿತು. ಅಲ್ಲಿ ಮಕ್ಕಳ ಆರ್ಥಿಕ ಸಾಕ್ಷರತೆ ಪ್ರಾಯೋಗಿಕವಾಗಿ ಕಂಡುಬರುತ್ತಿತ್ತು.  ಆರ್ಥಿಕ ಸಾಕ್ಷರತೆ ಎಂದರೇನು? ನಾವು ಹೆಚ್ಚಿನ ಭಾರತೀಯ ಪೋಷಕರು ನಮ್ಮ ಮಕ್ಕಳು ಹಣವನ್ನು ನಿಭಾಯಿಸಲು ಅಥವಾ ಅದರ ಕುರಿತು ಮಾತನಾಡಲು ಇನ್ನೂ ತುಂಬಾ ಚಿಕ್ಕವರು ಎಂದು ಭಾವಿಸುತ್ತೇವೆ. ಮಕ್ಕಳಿಗೆ ಏನೂ ತಿಳಿಯುವುದಿಲ್ಲ ಎಂಬ ಅಸಡ್ಡೆಯ ಮಾತು, ಮಕ್ಕಳಲ್ಲಿ ಅವರಲ್ಲಿನ ಆತ್ಮವಿಶ್ವಾಸವನ್ನು ಕುಂದಿಸುತ್ತದೆ. ಮುಂದೆ ಹದಿಹರೆಯದಲ್ಲಿ ವ್ಯವಹಾರದಲ್ಲಿ ಹೆಚ್ಚಿನ ಜ್ಞಾನ ಇಲ್ಲದೆ ಮಕ್ಕಳು ಕೆಲವೊಮ್ಮೆ ವಂಚನೆಗೆ ಗುರಿಯಾಗುವ ಸಾಧ್ಯತೆಯಿರುತ್ತದೆ.  ಅಂತೆಯೇ ಕೆಲವರ ಮನೆಯಲ್ಲಿ ಸ್ವೇಚ್ಛೆಯ ಬದುಕು ಅಭ್ಯಾ...

ನುಗ್ಗೆ ಸೊಪ್ಪಿನ ಚಟ್ನಿ ಪುಡಿ

ಇಮೇಜ್
ನನಗೆ ಸಿಕ್ಕಾಪಟ್ಟೆ ಅಡುಗೆಯ ಕ್ರೇಜ್ ಇಲ್ಲದಿದ್ದರೂ, ಆದಷ್ಟು ಮನೆಯಲ್ಲಿಯೇ ಹೊಸ ಬಗೆಯ ಅಡುಗೆ ಪದಾರ್ಥಗಳನ್ನು, ಬಾಯ್ಬಡುಗೆಗೆ ಕುರುಕಲು ಮಾಡುತ್ತಿರುತ್ತೇನೆ. ಮಗಳು ಚಟ್ನಿಪುಡಿಯ ಗೊಣಮಿ. ಹಾಗಾಗಿ ಒಂದಾದ ಮೇಲೊಂದು ಬಗೆಯ ಚಟ್ನಿಪುಡಿ ಮನೆಯಲ್ಲಿ ಮಾಡುತ್ತಿರುತ್ತೇನೆ.  ಚಳಿಗಾಲ ಈಗ ನುಗ್ಗೆ ಸೊಪ್ಪಿನ ಸೀಸನ್. ಆಯಾಯ ಸೀಸನ್ನಿನ ಸೊಪ್ಪು ತರಕಾರಿ  ಹಣ್ಣುಗಳ ಬಳಕೆ ಆರೋಗ್ಯಕರ. ನುಗ್ಗೆ ಸೊಪ್ಪು ಮನುಷ್ಯನ ಹೃದಯವನ್ನು ಮತ್ತು ಲಿವರ್ ಅನ್ನು ಹಾನಿಮಾಡುವ ವಿಷಕಾರಿ ಬ್ಯಾಕ್ಟೀರಿಯಾ ಅಥವಾ ವೈರಸ್ ಗಳಿಂದ ರಕ್ಷಣೆ ಮಾಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಯಥೇಚ್ಛವಾಗಿ ಆಂಟಿ - ಆಕ್ಸಿಡೆಂಟ್ ಗಳು, ವಿಟಮಿನ್ ' ಸಿ ', ಜಿಂಕ್ ಇತ್ಯಾದಿ ಅವಶ್ಯಕ ಪೋಷಕಾಂಶ ದೊರೆಯುತ್ತದೆ. ಮಕ್ಕಳಿಗೆ ಮಲಬದ್ಧತೆ ಮತ್ತು ಅಜೀರ್ಣದಂತಹ ಸಮಸ್ಯೆ ಪರಿಹಾರಕ್ಕೆ ಸಹಕಾರಿ. ಚಳಿಗಾಲದಲ್ಲಿ ಎಲ್ಲ ತಿಂಡಿ ಬಿಸಿ ಬಿಸಿ ಬೇಕೆನಿಸುತ್ತದೆ. ಅದರ ಜೊತೆಗೆ ಈ ನುಗ್ಗೆ ಸೊಪ್ಪಿನ ಚಟ್ನಿಪುಡಿ ಮತ್ತು ಕೊಬ್ಬರಿ ಎಣ್ಣೆಯ ಕಾಂಬಿನೇಷನ್ ಅಂತೂ ವರ್ಣಿಸಲಸದಳ!! ಯಾಕೋ ಇವತ್ತು ಹಂಚಿಕೊಳ್ಳೋಣ ಯಾರಿಗಾದರೂ ಉಪಯೋಗವಾದಿತು ಎನಿಸಿ ಈ ಪೋಸ್ಟ್. ಸಾಮಾಗ್ರಿಗಳನ್ನು ಚೆನ್ನಾಗಿ ಜೋಡಿಸಿಕೊಂಡು ಫೋಟೋ ತೆಗೆದು, ಮಾಡುವ ವಿಧಾನದ ವಿಡಿಯೋ ಮಾಡಿ ಎಡಿಟಿಂಗ್ ಮಾಡುವಷ್ಟು ತಾಳ್ಮೆಕಿಂತಲೂ ಹೆಚ್ಚಾಗಿ ಆಸಕ್ತಿ ಇಲ್ಲ. ಹಾಗಾಗಿ ಮಾಡುವ ವಿಧಾನವನ್ನು ಇಲ್ಲಿ ಬರೆದಿದ್ದೇನೆ  ನುಗ್ಗೆಸೊಪ್ಪು ಬಾಣಲ...

ಕೈವಾರ ಬೆಟ್ಟ ಮತ್ತು ಕೈಲಾಸಗಿರಿ ಗುಹೆ

ಇಮೇಜ್
ಬೆಂಗಳೂರಿನಿಂದ ೬೫ ಕಿಮೀ ದೂರದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿದೆ ಕೈವಾರವೆಂಬ ಊರು. ಆಸ್ತಿಕರಿಗೆ ಇದೊಂದು ಪುಣ್ಯಕ್ಷೇತ್ರ, ಚಾರಣಿಗರಿಗೆ ಮತ್ತೊಂದು ಸ್ವರ್ಗ.  ಕರ್ನಾಟಕ ಅರಣ್ಯ ಇಲಾಖೆಯವರ ನಿರ್ವಹಣೆಯಲ್ಲಿರುವ ಇಲ್ಲಿನ ಕೈವಾರ ಬೆಟ್ಟಕ್ಕೆ ಟ್ರೆಕಿಂಗ್ ಹೋಗಲು ಮುಂಚಿತವಾಗಿ ಅನುಮತಿ ಪಡೆಯಬೇಕಾಗುತ್ತದೆ. karnatakatourism.org   ನಲ್ಲಿ ಕೂಡ ಆನ್ಲೈನ್ ಟಿಕೆಟ್ ಬುಕಿಂಗ್ ಮಾಡಬಹುದು. ಬೆಂಗಳೂರಿನಿಂದ ಹೊರಟು ಹೊಸಕೋಟೆ ಮಾರ್ಗವಾಗಿ ಅಥವಾ ದೇವನಹಳ್ಳಿ-ಬಿಜಯಪುರ ಮಾರ್ಗವಾಗಿ ಬಸ್ಸು ಅಥವಾ ಸ್ವಂತ ವಾಹನದಲ್ಲಿ ಕೈವಾರವನ್ನು ತಲುಪಬಹುದು. ನಾವು ಹೋದದ್ದು ನಮ್ಮ ಯೋಗ ಶಿಕ್ಷಣ ಕೇಂದ್ರದ ವತಿಯಿಂದ, ಸಂಚಾರದ ವ್ಯವಸ್ಥೆ, ಊಟ ತಿಂಡಿಗಳ ವ್ಯವಸ್ಥೆ ಮುಂಚಿತವಾಗಿಯೇ ನಮ್ಮ ತಂಡದ ನೇಕಾರರಿಂದ ಆದ್ದ ಕಾರಣ, ನಮಗೆ ಹೆಚ್ಚಿನ  ನಿರ್ವಹಣಾ ಜವಾಬ್ಧಾರಿ ಬೀಳಲಿಲ್ಲ. ಚಾರಣ ಯೋಗಬಂಧುಗಳ ಜೊತೆಯಾದ್ದರಿಂದ ದೇಹದ ಸ್ನಾಯುಗಳನ್ನು ಚಲನಶೀಲವಾಗಿರಿಸಲು ಆಸಕ್ತಿ ಹೊಂದಿರುವ ಸಮಾನ ಮನಸ್ಕರರ ಗುಂಪು ದೊರೆತಂತಾಗಿತ್ತು. ಇದರ ಜೊತೆಯಲ್ಲಿ, ಈ ಸ್ಥಳದ ಮಹಿಮೆಯನ್ನು ಅತ್ಯಂತ ನಿಖರವಾಗಿ ಬಲ್ಲವರಾದ ನಮ್ಮ ಗುರುಗಳಾದ ಸುಬ್ಬು ಬೈಯ್ಯ ಮತ್ತು ಅಶೋಕ್ ಸರ್ ನ ನೇತೃತ್ವದ ಯೋಗಯಾತ್ರೆ ಇದಾದ್ದರಿಂದ, ಸ್ಥಳ ಮಹಿಮೆಯನ್ನು ವಿಸ್ತಾರವಾಗಿ ತಿಳಿಯಲು ಇನ್ನಷ್ಟು ಸಹಾಯಕವಾಯಿತು. ಈ ಸ್ಥಳ ಸಂತ ಕೈವಾರ ತಾತಯ್ಯ ಆಶ್ರಮ ಮತ್ತು ದೇವಾಲಯದ ಸಂಕೀರ್ಣಕ್ಕೆ ಹೆಸ...