ಪೋಸ್ಟ್‌ಗಳು

ಲಂಕಾವಿ - ಸ್ಕೈಕ್ಯಾಬ್ ಮತ್ತು ಸ್ಕೈಬ್ರಿಜ್

ಇಮೇಜ್
ಮಲೇಷಿಯಾದಲ್ಲಿ ಎರಡನೇ ದಿನಕ್ಕೆ ನಮ್ಮ ತಿರುಗಾಟ ಮಚಿನ್‌ಚಾಂಗ್ ಕ್ಯಾಂಬ್ರಿಯನ್ ಜಿಯೋಫಾರೆಸ್ಟ್ ಪಾರ್ಕ್‌ನಲ್ಲಿರುವ ಸ್ಕೈಕ್ಯಾಬ್ ಮತ್ತು ಸ್ಕಾಯ್ಬ್ರಿಡ್ಜ್ ನ ಕಡೆಗಿತ್ತು. ಲಂಕಾವಿಯಿಂದ ಟಾಕ್ಸಿ ಅಥವಾ ಸ್ವಂತ ಗಾಡಿಯಲ್ಲಿ ಹೋಗಬಹುದಾದ ೩೫ ನಿಮಿಷಗಳ ಹಾದಿ ಮಚಿನ್‌ಚಾಂಗ್ ಕ್ಯಾಂಬ್ರಿಯನ್ ಜಿಯೋಫಾರೆಸ್ಟ್ ಪಾರ್ಕ್‌ ಹತ್ತಿರವಾಗುತ್ತಿದ್ದಂತೆಯೂ, ತನ್ನ ಹಸುರಿನ ಹಾದಿಯೊಂದಿಗೆ ನಮ್ಮನ್ನು ಸ್ವಾಗತಿಸುತ್ತದೆ. ಲಂಕಾವಿಯ ವಾಯುವ್ಯದಲ್ಲಿರುವ ಮಚಿನ್‌ಚಾಂಗ್  ಸುಮಾರು ೧೦,೦೦೦ ಹೆಕ್ಟೇರ್ ವಿಸ್ತೀರ್ಣಕ್ಕೆ ಹಬ್ಬಿರುವ ಖಾಯಂ ಅರಣ್ಯ ಮೀಸಲು ಪ್ರದೇಶವನ್ನು ಒಳಗೊಂಡಿದೆ.  ಯುನೆಸ್ಕೋ ಸಂರಕ್ಷಿತ ಈ ಪಾರ್ಕ್ ಪ್ರದೇಶಗಳಲ್ಲಿ ಒಂದಾದ ಮಚಿನ್‌ಚಾಂಗ್‌ನ ಪರ್ವತ ಶ್ರೇಣಿ ಸಾವಿರಾರು ವರ್ಷಗಳಿಂದ ಮೂಡಿರುವ ಸುಣ್ಣದ ಕಲ್ಲಿನ ರಚನೆಗಳು, ಆಗ್ನೇಯ ಏಷ್ಯಾದ ಅತ್ಯಂತ ಹಳೆಯ ಸಂಚಿತ ಶಿಲಾ ಪದರಗಳ ರಚನೆಗಳಿಂದ ರೂಪುಗೊಂಡಿವೆ. ೫೦೦-೫೫೦ ಮಿಲಿಯನ್ ವರ್ಷಗಳಷ್ಟೇ ಹಳೆಯವವು ಎಂದು ಊಹಿಸಲಾಗಿದೆ.  ಎತ್ತರೆತ್ತರ ಬೆಟ್ಟ ಗುಡ್ಡಗಳು, ಸಾವಿರಾರು ಬಗೆಯ ಸಸ್ಯಕಾಶಿ, ಜಲಪಾತ, ನೂರಾರು ಬಗೆಯ ಮೃಗ ಪಕ್ಷಿಗಳಗಳ ವೈವಿಧ್ಯತೆಯಿಂದ ಕೂಡಿದ್ದು, ತನ್ನ ಭೂವೈಜ್ಞಾನಿಕ ಅದ್ಭುತಗಳು ಮತ್ತು ಅಗಾಧ ಪರಿಸರ ಸಂಪತ್ತಿಗೆ ಹೆಸರಾಗಿದೆ. ಪ್ರವಾಸೋದ್ಯಮದ ಆಕರ್ಷಣೆಯಾಗಿ, ಮಾರ್ಗದರ್ಶಿತ ಚಾರಣ, ಜಲಪಾತದ ವೀಕ್ಷಣೆ, ಓರಿಯಂಟಲ್ ವಿಲ್ಲೇಜ್ ಎಂಬ ಸ್ಥಳದಲ್ಲಿ ಸ್ಕೈ ಕ್ಯಾಬ್ ಮೂಲಕ, ಎತ್ತ...

ಸ್ತ್ರೀ 'ಯೋಗ'ಕ್ಷೇಮ

ಇಮೇಜ್
ಯೋಗ ಎನ್ನುವುದು ಭಾರತವು ಪ್ರಪಂಚಕ್ಕೆ ನೀಡಿದ ಒಂದು ದೊಡ್ಡ ಕೊಡುಗೆ. ದೈಹಿಕ ಆರೋಗ್ಯ ಮತ್ತು ಮಾನಸಿಕ ಸಮತೋಲನ ಕಾಪಾಡಿಕೊಳ್ಳಲು ಯೋಗ ಅತ್ಯಂತ ಸಹಕಾರಿ. ೬೦೦೦ ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ, ಆದರೆ ಸರ್ವಕಾಲಕ್ಕೂ ಅನ್ವಯವಾಗುವ ಭೌತಿಕ, ಆಧ್ಯಾತ್ಮಿಕ ಅಭ್ಯಾಸವಾಗಿದೆ. ಯೋಗದ ಮಹತ್ವವನ್ನು ಪ್ರಪಂಚದಾದ್ಯಂತ ಸಾರುವ ಉದ್ದೇಶದಿಂದ, ಅಂತರಾಷ್ಟೀಯ ಯೋಗ ದಿನಾಚರಣೆಯ ಕರಡು ಪ್ರಸ್ತಾವನೆಯನ್ನು ೨೦೧೪ ರಲ್ಲಿ, ವಿಶ್ವ ಸಂಸ್ಥೆಗೆ ಮಂಡಿಸಿದ್ದರು. ೧೯೩ ರಾಷ್ಟ್ರಗಳ ಪೈಕಿ ೧೭೭ ದೇಶಗಳ ಪ್ರತಿನಿಧಿಗಳು  ತಕ್ಷಣಕ್ಕೆ ತಮ್ಮ ಅನುಮೋದನೆ ನೀಡಿದ ಐತಿಹಾಸಿಕ ಕ್ಷಣವದು! ೨೦೧೫ ಜೂನ್ ೨೧ ರಿಂದ ಪ್ರಾರಂಭವವಾಗಿ ಪ್ರತಿವರ್ಷ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಜೂನ್ ೨೧, ಭೂಮಿಯ ಉತ್ತರ ಗೋಳಾರ್ಧದ ದಲ್ಲಿ ಅತ್ಯಂತ ದೀರ್ಘ ಹಗಲು ಹೊಂದಿರುವ ದಿನ. ಈ ದಿನ ಸೂರ್ಯ ಬೇಗನೆ ಉದಯಿಸುತ್ತಾನೆ ಮತ್ತು ತಡವಾಗಿ ಅಸ್ತಮಿಸುತ್ತಾನೆ. ಸೂರ್ಯನಿಂದ ಬರುವ ಶಕ್ತಿಯು ಈ ದಿನಕ್ಕೆ ವೈಜ್ಞಾನಿಕವಾಗಿ ಹೆಚ್ಚು ಪರಿಣಾಮವನ್ನು ಬೀರುವ ದಿನವಾಗಿರುವುದರಿಂದ, ಪ್ರಕೃತಿಯ ಧನಾತ್ಮಕ ಶಕ್ತಿಯೊಂದಿಗೆ, ಯೋಗ ಸಾಧನೆ ನಮ್ಮ ಆರೋಗ್ಯಕ್ಕೆ ಅನುಕೂಲಕರವಾಗುತ್ತದೆ.  ೨೦೨೪ ನೇ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್ "ಮಹಿಳಾ ಸಬಲೀಕರಣಕ್ಕಾಗಿ ಯೋಗ".  ಮಹಿಳೆಯರ ಆರೋಗ್ಯ : ಮಹಿಳೆಯ...

ಪರಿಸರ ಪರಿವೃತ್ತ - ವಿಶ್ವ ಪರಿಸರ ದಿನ

ಇಮೇಜ್
ಈ ಸಲದ ಬೇಸಿಗೆಯಲ್ಲಿ ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ದಾಖಲಾದ ಗರಿಷ್ಟ ತಾಪಮಾನ ೪೧ ಡಿಗ್ರಿ! ಮಳೆ ಪ್ರಾರಂಭವಾಗಿ ಎರಡು ದಿನಗಳ ಸತತ ಮಳೆಗೆ, ಮರಗಳು ಧರೆಗುರುಳಿ, ಮನೆಗಳಿಗೆ ನೀರು ನುಗ್ಗಿ ಅದೆಷ್ಟೆಷ್ಟೋ ಆವಾಂತರಗಳಾಗಿವೆ. ವಾತಾವರಣ ಮುಂಚಿನಂತಿಲ್ಲ; ಬದಲಾಗುತ್ತಿದೆ, ನಮ್ಮ ನಿಯಂತ್ರಣಕ್ಕೆ ದಕ್ಕುವುದಲ್ಲ ಇದಿನ್ನು ಎಂದು ಹಿರಿಯರೊಬ್ಬರು ಹೇಳುತ್ತಿರುವುದ ಕಂಡೆ. ನಾವಿರುವ ಊರಿನಲ್ಲೇ ಆಗುತ್ತಿರುವ, ನಮಗೆ ಅಹಿತಕರ ಎನಿಸುವ ಬದಲಾವಣೆಗಳು, ನಮ್ಮ ಗಮನಕ್ಕೆ ಸಿಗುತ್ತಲಿವೆ, ಆದರೆ ಈ ವಿಶ್ವಕ್ಕೆ, ಪರಿಸರಕ್ಕೆ, ಅರಣ್ಯನಾಶ, ಗಣಿಗಾರಿಕೆ, ಕೈಗಾರಿಕೀಕರಣ ಸೇರಿದಂತೆ ಮಾನವನ ಹಸ್ತಕ್ಷೇಪದಿಂದ ಆಗುತ್ತಿರುವ ಹಾನಿ ಮಾತ್ರ ಇನ್ನೂ ಕೂಡ ನಮ್ಮ ನಿಲುಕೆಗೆ ಸಿಕ್ಕಿಲ್ಲ.  ಪರಿಸರವು ಪ್ರತಿಯೊಂದು ಜೀವರಾಶಿಗೆ ಅತ್ಯಂತ ಅಮೂಲ್ಯ ಕೊಡುಗೆಯಾಗಿದೆ ಅದರಲ್ಲಿ ಮನುಷ್ಯರೇ ಸರ್ವಸ್ವ ಅಲ್ಲ, ನಾವು ಒಂದು ಭಾಗ ಮಾತ್ರ. ಪರಿಸರದಲ್ಲಿನ ಗಾಳಿ, ನೀರು, ಮಣ್ಣು, ಮರಗಳು, ಕಾಡುಗಳು, ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಎಲ್ಲರಿಗಾಗಿಯೂ ಉಳಿಯುವುದು ಬಹಳ ಮುಖ್ಯ. ಯಾವುದೇ ಒಂದು ಸಂಪನ್ಮೂಲದ ಸಮತೋಲನ ಕಳೆದರೂ ನಮಗೇ ಉಳಿಗಾಲವಿಲ್ಲ.  ಅದೇ ಉದ್ದೇಶದಿಂದ  .  ಜನರಿಗೆ ಪರಿಸರದ ಮಹತ್ವ ಸಾರುವ ಹಾಗೂ ಜನರಲ್ಲಿ  ಪರಿಸರದ ಕಾಳಜಿಯನ್ನು  ಜಾಗೃತಿಗೊಳಿಸುವ ಉದ್ದೇಶದಿಂದ ವಿಶ್ವಸಂಸ್ಥೆಯು ೧೯೭೪ ರಿಂದ ಪ್ರಾರಂಭಿಸಿ, ಪ್ರತಿವರ್ಷ, ಜೂನ್ ೫ ರಂದು 'ವಿಶ್ವ ಪರ...

ಚಾರಣ ಕಥೆ - ಕುಮಾರ ಪರ್ವತ!

ಇಮೇಜ್
ಮದುವೆ ಮನೆಯೊಂದಕ್ಕೆ ಹೋದಾಗ, ಎಲ್ಲ ಕಸಿನ್ಸ್ ಜೊತೆ ಲೋಕಾಭಿರಾಮದೊಂದಿಗೆ ಪ್ರಾರಂಭವಾದ ಮಾತುಕತೆ, ಎಲ್ಲರೂ ಸೇರಿ ಕುಮಾರ ಪರ್ವತ ಟ್ರೆಕಿಂಗ್ ಮಾಡೋಣ ಎಂಬಲ್ಲಿಗೆ ಕೊನೆಗೊಂಡಿತು. ಒಟ್ಟಾಗಿದ್ದ ಜನ ೧೨. ಕುಮಾರಪರ್ವತದಂತಹ ಅತಿ ಸುಂದರ ತಾಣಕ್ಕೆ ಚಾರಣ ಏರ್ಪಡಿಸುವುದು ಇಂದು ಕೆಲವರಿಗೆ ಸಣ್ಣ ಮಟ್ಟದ ಬಿಸಿನೆಸ್ ಸಹ ಆಗಿದೆ. ವಾರಾಂತ್ಯಗಳಲ್ಲಿ ಬೆಂಗಳೂರು ಮತ್ತು ಇತರ ಪ್ರದೇಶಗಳಿಂದ ಬರುವ ಸರಾಸರಿ ಚಾರಣಿಗರ ಸಂಖ್ಯೆ ೩೦೦-೪೦೦ ಮೀರಬಹುದು ಎಂಬ ಮಾಹಿತಿ ಕೇಳಿ ನಮ್ಮ ಪ್ಲಾನ್ ಯಾವ ಕಾರಣಕ್ಕೂ ರದ್ಧಾಗದೆ ಜಾರಿಯಲ್ಲಿರಲಿ ಎಂದು, ಏಜೆನ್ಸಿಯೊಂದನ್ನು  ಹಿಡಿದು ಮೂರು ತಿಂಗಳ ಮುಂಚೆ, ಸುಬ್ರಮಣ್ಯಕ್ಕೆ ಪ್ರಯಾಣ ಸಹಿತವಾಗಿ ಚಾರಣದ ಅನುಮತಿ ತೆಗೆದುಕೊಂಡದ್ದಾಯಿತು.   ತಯಾರಿ..  ಚಾರಣ ಯೋಜನೆಗೆ ಒಂದು ವಾಟ್ಸಪ್ಪ್ ಗ್ರೂಪ್ಮಾಡಿಕೊಂಡು, ಅದರಲ್ಲೊಂದಷ್ಟು ಕತೆ ಹರಟೆ, ಎಲ್ಲರೂ ಪ್ರತಿದಿನ ಇಂತಿಷ್ಟು ವಾಕಿಂಗ್ ಮಾಡಬೇಕು ಎಂಬಿತ್ಯಾದಿ ಪ್ಲಾನಿಂಗ್ ಎಲ್ಲವೂ ನಡೆಸಿದ್ದಾಯಿತು. ವಾಕಿಂಗ್ ನಿತ್ಯದ ಚಟುವಟಿಕೆ ಆಗಿದ್ದರೂ, ಕುಮಾರಪರ್ವತ ಟ್ರೆಕ್ ಅಷ್ಟು ಸುಲಭವಿಲ್ಲ, ಜನರು ಸೋತು ಮರಳಿ ಬರುತ್ತಾರೆ ಎಂಬಿತ್ಯಾದಿ ಮಿಶ್ರ ಅಭಿಪ್ರಾಯ ಹೋಗಿಬಂದವರ ಬಾಯಲ್ಲಿ ಕೇಳಿದ್ದರಿಂದಲೋ ಏನೋ, ವಾಕಿಂಗ್ ಸಾಲಲಿಕ್ಕಿಲ್ಲ ಎಂದು ಅಪಾರ್ಟ್ಮೆಂಟ್ ನ ಮೆಟ್ಟಿಲುಗಳನ್ನೇ, ೩-೪ ಮೆಟ್ಟಿಲುಗಳ ದಾಟಿ ದಾಟಿ ಏರುವ ವ್ಯಾಯಾಮ, ಸ್ಕ್ವಾಟ್ಸ್ ಇತ್ಯಾದಿ ಕವಾಯಿತುಗಳು ಚಾರಣಕ್ಕೂ ಒಂದು ...