ಪೋಸ್ಟ್‌ಗಳು

2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಾಮಾನ್ಯರಲ್ಲಿ ಅಸಾಮಾನ್ಯರು..!

ಇಮೇಜ್
ನನ್ನ ಕರ್ಮಯೋಗ ನಾನು ಚಾರಣಕ್ಕೆ ಹೋದ ಸ್ಥಳವನ್ನು ಕಂಡು ಆಹ್ಲಾದಿಸಿ ವಾಪಸು ಬರುವಾಗ, ನನ್ನ ಕೈಲಾದಷ್ಟು ಅಲ್ಲಿ ಇಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಕಸಗಳನ್ನು ಎತ್ತಿ ತಂದು ಕಸದಬುಟ್ಟಿಗೆ ಸೇರಿಸುವುದು. ಪರ್ವತಗಳನ್ನು ಹತ್ತುವಾಗ, ಹಸಿರು ಗುಡ್ಡ ಬೆಟ್ಟಗಳ ಕಣ್ತುಂಬಿಕೊಳ್ಳುವಾಗ, ನದಿಗಳ ನಾದವನ್ನು ಕೇಳುವಾಗ, ಹೂವು ಹುಲ್ಲುಗಳ ಸುಗಂಧವನ್ನು ಎಲ್ಲಕ್ಕಿಂತ ಮಿಗಿಲಾಗಿ ಸ್ವಚ್ಛ ಆರೋಗ್ಯಕರ ಗಾಳಿಯನ್ನು ಸೇವಿಸಿರುವಾಗ ನಮ್ಮ ದೇಹ ಮತ್ತು ಮನಸ್ಸಿಗೆ ಸಿಗುವ ಆ ಆನಂದಕ್ಕೆ ಪ್ರತ್ಯುಪಕಾರವಾಗಿ, ಅದನ್ನು ಸ್ವಚ್ಛವಾಗಿ ಉಳಿಸುವುದು ನಮ್ಮದೊಂದು ಕರ್ತವ್ಯ. ನನ್ನೊಡನೆ ಯಾರು ಮಾಡುತ್ತಾರೆ ಬಿಡುತ್ತಾರೆ ಎಂಬುದ ನೋಡುವುದಿಲ್ಲ, ನನ್ನ ಪಾಡಿಗೆ ನಾನು ಶಕ್ತಿ ಇದ್ದಷ್ಟೂ ಹೊತ್ತು, ಹಾದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ಗಳನ್ನು ಆರಿಸಿಕೊಂಡು ಬರುತ್ತೇನೆ.  ಕಳೆದ ವಾರ ಸಮಾನ ಮನಸ್ಕರರ ಗುಂಪಿನೊಂದಿಗೆ ನಮ್ಮ ಚಾರಣ ಪ್ರವಾಸ ಏರ್ಪಟ್ಟಿತ್ತು. ಚಾರಣವನ್ನು ಏರ್ಪಡಿಸಿದ ಸ್ನೇಹಿತರಾದ ಮಹಾವೀರ್ ಅವರೂ ಕೂಡ ಪರಿಸರ ಪ್ರೇಮಿಯೇ ಆದ ಕಾರಣ, ಸಾಧ್ಯವಾದಷ್ಟು ಪ್ಲಾಸ್ಟಿಕ್ ಕಡಿಮೆ ಬಳಸುವ ಉದ್ದೇಶದಿಂದ, ಚಾರಣಿಗರೆಲ್ಲರಿಗೂ ಅವರವರದ್ದೇ ಆದ ಸ್ಟೀಲ್ ಡಬ್ಬಿಗಳನ್ನು ತರಬೇಕೆಂದು ಆದೇಶಿಸಿ, ಅದರಲ್ಲಿ ನಮಗೆ ನಮ್ಮ ಆಹಾರವನ್ನು ನೀಡಿದ ವಿಧಾನ ಮೆಚ್ಚುಗೆಯಾಯಿತು. ೨೫-೩೦ ಜನರ ಗುಂಪೊಂದರ ಒಂದೊಂದು ಹೊತ್ತಿನ ಒನೆಟೈಮ್ ಪ್ಲಾಸ್ಟಿಕ್ ಬಾಕ್ಸುಗಳ ಉಳಿತಾಯವೇ ಸಾಕಷ್ಟಾಗುತ್ತದ...

ಮಂದರಗಿರಿ ಬೆಟ್ಟ - ಮಕ್ಕಳೊಡನೆ ಚಾರಣ ನಡೆಸಲೊಂದು ವೀಕೆಂಡ್ ಗೇಟ್ವೆ

ಇಮೇಜ್
ಮಕ್ಕಳೊಡನೆ ಚಾರಣ ನಡೆಸಲೊಂದು ವೀಕೆಂಡ್ ಗೇಟ್ವೆ - ಮಂದರಗಿರಿ ಬೆಟ್ಟ! ಮಂದರಗಿರಿ ಬೆಟ್ಟ ಅಥವಾ ಬಸದಿ ಬೆಟ್ಟ ಎಂಬ ಹೆಸರಿನ ಈ ಬೆಟ್ಟವು ತುಮಕೂರಿನಿಂದ ೧೨ ಕಿಮೀ ಮತ್ತು ಬೆಂಗಳೂರಿನಿಂದ ೭೦ ಕಿಮೀ ದೂರದಲ್ಲಿದೆ. ಪ್ರಯಾಣದ ಅವಧಿ - ಬೆಳಿಗ್ಗೆ ಬೇಗನೆ ಹೊರಟು, ಸಂಚಾರ ದಟ್ಟಣೆ ಹೆಚ್ಚೇನೂ ಎದುರಿಸದೆ, ೧.೫ ಗಂಟೆಗಳಲ್ಲಿ ತಲುಪಬಹುದು. ಈ ಜಾಗದ ಪರಿಚಯ ಹೇಳುವುದಾದರೆ, ಪಂಡಿತನಹಳ್ಳಿ/ ಪುರೋಹಿತರ ಗ್ರಾಮ ಎಂಬ ಹಳ್ಳಿಯಲ್ಲಿ, ಒಂದು ದೈತ್ಯ ಏಕಶಿಲೆಯ ಬಲು ಎತ್ತರವಾದ ಬಂಡೆಯೊಂದಿದೆ. ಈ ಬೆಟ್ಟದ ಮೇಲೊಂದು ಜೈನ ಬಸದಿ. ಹಾಗಾಗಿಯೇ, 'ಬಸದಿ ಬೆಟ್ಟ' ಎಂಬ ಹೆಸರೂ ಕೂಡ ಇದಕ್ಕಿದೆ. ೮ ರಿಂದ ೧೨ ವರ್ಷದ ಮಕ್ಕಳಿಗೆ ಸುತ್ತು ಹಾಕಿದರೆ ಆರಾಮದಲ್ಲಿ ೭-೮ ಕಿಮೀ ಚಾರಣ, ಅದೂ ನೈಸರ್ಗಿಕ ಸ್ಥಳದ ಪರಿಚಯ ಮಾಡಿಸುತ್ತ ಓಡಾಡಿಸಲು ಹೇಳಿ ಮಾಡಿಸಿದಂತಹ ಜಾಗ! ಪಿಂಚಿ ಧ್ಯಾನ ಮಂದಿರ : ಈ ಬ್ರಹತ್ ಬೆಟ್ಟದ ಬುಡದಲ್ಲಿ ಒಂದು ಮಹಾವೀರನ ದೈತ್ಯ ಪ್ರತಿಮೆ ಇದೆ. ಬೆಳಗಿನ ಎಳೆಬಿಸಿಲಿಗೆ ಮತ್ತು ಸಂಜೆಯ ಇಳಿತಂಪಿಗೆ, ಇಲ್ಲಿ ಕೂತು ಧ್ಯಾನ ಮಾಡುವುದು ಆಹ್ಲಾದಕರವೆನಿಸುತ್ತದೆ.  ಈ ಬ್ರಹತ್ ಪೂರ್ತಿಯ ಕೆಳಗಡೆ, ಹುಲಿಯೊಂದು ಆಕಳಿನ ಕರುವಿಗೆ ಹಾಲನ್ನುಣಿಸುವುದು, ಹುಲಿಯ ಮರಿಗೆ ಆಕಳು ಹಾಲನ್ನುಣಿಸುವ ಪ್ರಾತ್ಯಕ್ಷಿಕೆ ಮೂರ್ತಿಗಳು, ಪ್ರೀತಿ ಮತ್ತು ಶಾಂತಿಯ ಪಾಠವನ್ನು ತಿಳಿಸುತ್ತದೆ. ಅದರ ಪಕ್ಕದಲ್ಲಿಯೇ  ಧ್ಯಾನ ಮಂದಿರ ಒಂದಿದೆ. ಜೈನ ಸ...

"ಅವರುಣಿಸಿದ ಪ್ರೀತಿಯ ಪಾಠ"

ಇಮೇಜ್
ಅವರುಣಿಸಿದ ಪ್ರೀತಿಯ ಪಾಠ" 28 ಕಿಲೋಮೀಟರ್‌ಗಳ ಕಠಿಣ ಟ್ರೆಕ್ಕಿಂಗ್‌ ಮುಗಿಸಿ ಟ್ರೇನ್ ಹತ್ತುವಾಗ, ದೇಹ ತನ್ನ ಒಂದೊಂದೇ ಭಾಗ ಕಳಚಿ ಇಟ್ಟು ಬಿಡಲೇ ಎಂದು ಕೇಳುತ್ತಿರುವಂತೆ ಭಾಸವಾಗುತ್ತಿದ್ದರೂ, ಮನಸ್ಸು ಮಾತ್ರ ನಗು, ಹರಟೆ, ಮೋಜಿನಿಂದ ಉಕ್ಕುತ್ತಿದ್ದಿತ್ತು. ಸಿಕ್ಕಷ್ಟು ಸಮಯದಲ್ಲೇ ಇನ್ನೂ ಎರಡಾಟ ಮುಗಿಸಿ ಬಿಡೋಣ ಎನ್ನುವ ಹುಮ್ಮಸ್ಸು ಎಲ್ಲರದ್ದಿತ್ತು. ಕುಳಿತು ಪಟ್ಟಂಗ ಹೊಡೆಯುತ್ತಿದ್ದ ನಾವು ಹದಿನೈದು ಮಂದಿ ಸ್ನೇಹಿತರ ಗುಂಪಿನ ಮಧ್ಯೆ ಅಲ್ಲಿ ಸಹಪ್ರಯಾಣಿಕರೊಬ್ಬರು ಕಿಟಕಿಯ ಬುಡ ಹಿಡಿದು ತಣ್ಣಗೆ ಕುಳಿತಿದ್ದರು. ನೋಡಲು ಸರ್ವೇ ಸಾಮಾನ್ಯ ವ್ಯಕ್ತಿ, ಹಾವ-ಭಾವ, ಬಟ್ಟೆಬರೆ ಯಾವುದರಲ್ಲೂ ವಿಶೇಷತೆ ಇಲ್ಲ; ಆದರೆ, ಅವರ ಕಣ್ಣುಗಳಲ್ಲಿ ಒಂಥರ ಕುತೂಹಲದ ಹೊಳೆ ನಮಗೆ ತಟ್ಟಿತು. ಅವರೊಂದಿಗೆ ಸಣ್ಣದೊಂದು ನಗು ವಿನಿಮಯ ಮಾಡಿಕೊಂಡು, ನಾವು ನಮ್ಮ ನಮ್ಮ ಕತೆ ಪುರಾಣಗಳಲ್ಲಿ ಮುಳುಗಿದ್ದೆವು. ನಿಧಾನಕ್ಕೆ ಆ ಜನ ನಮ್ಮನ್ನು ಮಾತನಾಡಿಸಲು ಪ್ರಾರಂಭಿಸಿದರು. ಪ್ರಯಾಣ ಎಂದ ಮೇಲೆ ಕೇಳಬೇಕೆ? ನಮ್ಮ ಗುಂಪಿನವರೂ ಕೂಡ ಹುರುಪಿನಿಂದ ಮಾತಿಗಿಳಿದದ್ದಾಯಿತು. ಪರಸ್ಪರ ಪರಿಚಯ, ಲೋಕಾಭಿರಾಮ ಮಾತು ಅಷ್ಟೇ. ಅಲ್ಲಿಗೆ ಮುಗಿಯಿತು. ನಾವುಗಳು ಮತ್ತೆ ನಮ್ಮದೇ ಲೋಕದೊಳಗೆ..  ತುಸು ಹೊತ್ತಿನಲ್ಲೆ, ನಾವು ರಾತ್ರಿ ಊಟಕ್ಕೆಂದು ಕಟ್ಟಿಕೊಂಡ ಪಾರ್ಸೆಲ್‌ಗಳನ್ನು ತೆರೆದು ಊಟ ಪ್ರಾರಂಭಿಸಿದ್ದಾಗ, ಅವರೂ ಕೂಡ ನಿಧಾನವಾಗಿ ತಮ್ಮ ಕೈಚೀಲ ತೆರೆದರು. ಆ ಚೀಲದಿಂದ ಹೊ...

ಕಲಾಪ್ರದರ್ಶನಕ್ಕೆ ಭೇಟಿ ನೀಡುವದು ಯಾಕೆ ಮುಖ್ಯ??

ಇಮೇಜ್
1. ಮನಸ್ಸಿಗೆ ಶಾಂತಿ ಮತ್ತು ವಿಶ್ರಾಂತಿ ಇಂದಿನ ಒತ್ತಡಪೂರ್ಣ ಜೀವನದಲ್ಲಿ ಶಾಂತಿ ಹುಡುಕುವುದು ಅತ್ಯಗತ್ಯ. ಕಲೆಯು ಮನಸ್ಸಿಗೆ ವಿಶ್ರಾಂತಿ ನೀಡುವ ಮಾಂತ್ರಿಕ ಶಕ್ತಿ ಹೊಂದಿದೆ. ಮಂಡಲ ಕಲೆಯಂತah ಧ್ಯಾನಾತ್ಮಕ ಕಲೆಗಳು ನೋಡುವವರಲ್ಲಿ ಆಂತರಿಕ ಶಾಂತಿಯನ್ನು ಉಂಟುಮಾಡುತ್ತವೆ. 2. ಸೃಜನಾತ್ಮಕತೆಗೆ ಆಹಾರ ಕಲೆಯನ್ನು ನೋಡುವುದು ಮನಸ್ಸಿನ ಹೊಸ ದಿಕ್ಕುಗಳನ್ನು ತೆರೆದು ಬಿಡುತ್ತದೆ. ಇದರಿಂದ ಸೃಜನಾತ್ಮಕ ಆಲೋಚನೆಗಳು ಹುಟ್ಟುತ್ತವೆ ಮತ್ತು ಪ್ರತಿಯೊಬ್ಬರೂ ತಮ್ಮದೇ ಆದ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸಬಹುದು. 3. ಸ್ಥಳೀಯ ಕಲಾವಿದರಿಗೆ ಬೆಂಬಲ ಕಲಾ ಪ್ರದರ್ಶನಕ್ಕೆ ಬಂದು ನೀವು ಸ್ಥಳೀಯ ಕಲಾವಿದರ ಕೆಲಸವನ್ನು ನೋಡಿ, ಶ್ಲಾಘಿಸಿ ಅಥವಾ ಕೊಳ್ಳುವ ಮೂಲಕ ಅವರ ಜೀವನದ ಭಾಗವಾಗಬಹುದು. ಇದು ಅವರ ಕಲೆಯನ್ನು ಉತ್ತೇಜಿಸುವಷ್ಟೇ ಅಲ್ಲ, ಅವರ ಬದುಕಿಗೂ ಸಹ ಆರ್ಥಿಕ ಪ್ರೋತ್ಸಾಹ ನೀಡುತ್ತದೆ. 4. ಮಕ್ಕಳಿಗೆ ಕಲಾ ಶಿಕ್ಷಣ ಮಕ್ಕಳಿಗೆ ಕಲೆ, ಬಣ್ಣಗಳು, ಆಕಾರಗಳು, ಪಾತ್ರಗಳು—all these stimulate imagination. ಇಂಥ ಪ್ರದರ್ಶನಗಳು ಮಕ್ಕಳಿಗೆ ಕಲೆಯ ಮಹತ್ವವನ್ನು ತಿಳಿಸಬಹುದಾದ ಉತ್ತಮ ವೇದಿಕೆ. 5. ಸಾಂಸ್ಕೃತಿಕ ಜ್ಞಾನವರ್ಧನೆ ಪ್ರತಿಯೊಂದು ಚಿತ್ರಕಲೆಯ ಹಿಂದೆ ಒಂದು ಕಥೆಯಿರುತ್ತದೆ, ಸಂಸ್ಕೃತಿಯೊಂದಿರುತ್ತದೆ. ಇಂಥ ಪ್ರದರ್ಶನಗಳು ನಮ್ಮ ಸಂಸ್ಕೃತಿಯ ಎಳೆಯ ಪಲ್ಲಟಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡ...

ಪ್ಲೇಟು ಲೋಟ ಸುದ್ದಿ!

ಇಮೇಜ್
ಆರ್ಟ್ ವರ್ಕ್ ಕೆಲಸಕ್ಕಾಗಿ ಗೆಳತಿಯ ಮನೆಗೆ ಹೋಗಿದ್ದೆ. ಅವರದ್ದು ಒಂದು ಲೇಔಟಿನಲ್ಲಿ ಸ್ವಂತ ಮನೆ. ಅಲ್ಲಿ ಸುಮಾರು ೧೨೦೦ ಕ್ಕೂ ಹೆಚ್ಚು ಮನೆಗಳಿವೆ. ಅಲ್ಲಿಗೊಂದು ದೇವಸ್ಥಾನ. ಧಾರ್ಮಿಕ ಕಾರ್ಯಕ್ರಮಗಳು ನಡೆಸುವುದರ ಜೊತೆಗೆ ದಾನಿಗಳ ಕೊಡುಗೆಗಳಿಂದ ಪ್ರತೀ ಶನಿವಾರ ಮಧ್ಯಾಹ್ನ ಒಂದು ೨೫೦ ಮಂದಿಗೆ ಊಟಕ್ಕೆ ಅವಕಾಶವಾಗುವಂತೆ ಅನ್ನ ಸಂತರ್ಪಣೆ ಕೂಡ ನಡೆಯುತ್ತದೆ. ಪ್ರತೀ ಶನಿವಾರ! ಯಾರಾದರೂ ಬಂದು ಪ್ರಸಾದ ಸ್ವೀಕರಿಸಬಹುದು. ನಿನ್ನೆ ಹನುಮ ಜಯಂತಿ. ನಮ್ಮದೂ ಕೂಡ ಒಂದು ಭೇಟಿ ನಿಕ್ಕಿಯಾಗಿತ್ತು. ಅಲ್ಲಿಯ ಅನ್ನ ಸಂತರ್ಪಣೆ ವ್ಯವಸ್ಥೆ ನೋಡಿದೆ. ಸ್ಟೀಲ್ ತಟ್ಟೆಗಳಲ್ಲಿ ಊಟ ವಿತರಣೆ. ಮಕ್ಕಳಿಗೆ ತುಸು ಚಿಕ್ಕ ಪ್ಲೇಟ್. ಕೈಯಲ್ಲಿ ಹಿಡಿದರೆ ಭಾರವಾಗದಿರಲೆಂದು. ಉಳಿದದ್ದೆಲ್ಲ ದೊಡ್ಡ ತಟ್ಟೆಗಳು. ದೇವಸ್ಥಾನದ ಪಕ್ಕದಲ್ಲಿಯೇ ತಟ್ಟೆಗಳನ್ನು ತೊಳೆದು ಬುಟ್ಟಿಯೊಂದಕ್ಕೆ ಹಾಕುವ ವ್ಯವಸ್ಥೆ. ತಟ್ಟೆ ತೊಳೆಯುವುದು ನಮ್ಮ ಕರ್ತವ್ಯವಾಗಿರಬೇಕು. ಕೆಲವರು ತಟ್ಟೆಯನ್ನು ಶಿಸ್ತಿನಿಂದ ತೊಳೆಯಬಹುದು. ಕೆಲವರು ಅದರಲ್ಲಿಯೂ ಮಕ್ಕಳಿಗೆ ಸರಿಯಾಗಿ ತೊಳೆಯಲು ಬಾರದೆ ಇರಬಹುದು. ಅದಕ್ಕೂ ವ್ಯವಸ್ಥೆ ಇದೆ. ಮಹಿಳೆಯೊಬ್ಬಳು ಆ ಬುಟ್ಟಿಯಲ್ಲಿರುವ ತಟ್ಟೆಯನ್ನು ಇನ್ನೊಮ್ಮೆ ಚೆನ್ನಾಗಿ ತೊಳೆದು ಕೊಡುತ್ತಾಳೆ. ಪಾತ್ರೆ ತೊಳೆದ ನೀರೆಲ್ಲ ವ್ಯವಸ್ಥಿತವಾಗಿ ಉದ್ಯಾನವನದ ಗಿಡಗಂಟೆಗಳಿಗೆ ಮರುಬಳಕೆಗೆ. ಹೆಚ್ಚು ನಿವಾಸಿಗಳು ಇರುವ ಇಂತಹ ಸ್ಥಳಗಲ್ಲಿ ಹಂಚಿಕೊಂಡಾಗ ಹೆಚ್ಚೇನೂ ಖರ್ಚು ಬರು...

ಸಿಕ್ಕಿಂನ ತ್ಸೋಮಗೊ ಸರೋವರ

ಇಮೇಜ್
ಸಿಕ್ಕಿಂನ ತ್ಸೋಮಗೊ ಸರೋವರದ ಬಿಂಬ - ಪ್ರತಿಬಿಂಬ  ತ್ಶೋಮ್ಗೊ ಸರೋವರವು ನಾಥುಲಾ ಪಾಸ್‌ಗೆ ಹೋಗುವ ಮಾರ್ಗದಲ್ಲಿ 4,045 ಮೀಟರ್ ಎತ್ತರದಲ್ಲಿದೆ. ಸಾಮಾನ್ಯವಾಗಿ ಸರೋವರಗಳು ಸಾಗರತಟಕ್ಕೆ ಸಮಾನಾಂತರವಾಗಿ ಇರುತ್ತವೆ. ಆದರೆ ಇದು ಸಮುದ್ರತಟದಿಂದ ಸುಮಾರು ಹನ್ನೆರಡೂವರೆ ಸಾವಿರ ಅಡಿ ಎತ್ತರದಲ್ಲಿದ್ದು ದೇಶದ ಅತೀ ಎತ್ತರದಲ್ಲಿರುವ ಸರೋವರಗಳಲ್ಲೊಂದಾಗಿದೆ. ಚಳಿಗಾಲದಲ್ಲಿ ಹೆಪ್ಪುಗಟ್ಟುವ ಇದರ ನೀರು ಬೇಸಿಗೆಯಲ್ಲಿ ಹಸಿರು ಮಿಶ್ರಿತ ನೀಲಿ ಬಣ್ಣದ ತಿಳಿನೀರಾಗಿ ಪರಿವರ್ತಿತವಾಗುತ್ತದೆ. ಆ ನೀರಿನಲ್ಲಿ ಕಾಣುವ ಅಕ್ಕಪಕ್ಕದ ಶಿಖರಗಳ ಮತ್ತು ಶುಭ್ರ ನೀಲಾಕಾಶದ ಬಿಂಬ ನಯನಮನೋಹರವಂತೆ. Tsomgo ಸರೋವರವು ಸುಮಾರು 1 ಕಿಮೀ ಉದ್ದವಿದೆ;ಅಂಡಾಕಾರದ ಆಕಾರ, 15 ಮೀಟರ್ ಆಳ ಮತ್ತು ಸ್ಥಳೀಯ ಜನರು ಪವಿತ್ರವೆಂದು ಪರಿಗಣಿಸುತ್ತಾರೆ. ಅಂದಿನ ದಿನ ಮೋಡ ಮಿಶ್ರಿತ ಮಳೆಯ ದಿನವಾದ್ದರಿಂದ ನಮಗೆ ಸಿಕ್ಕ  ಬಿಂಬ ಪ್ರತಿಬಿಂಬವಿಷ್ಟು. ಪೂರ್ವ ಸಿಕ್ಕಿಂನ ಪಾಥಿಂಗ್ ಪ್ರದೇಶದ ಸ್ಥಳೀಯ ಕುಲಪತಿಗಳ ಪ್ರಕಾರ ಸರೋವರದ ಮೂಲ ಹೆಸರು "ತಾನ್ಯೆಕ್ ತ್ಶೋ". ಸೈನ್ಯದಿಂದ "ಎಲಿಫೆಂಟಾ ಲೇಕ್". 'ನಬ್ ತಾನೆಕ್ ತ್ಶೋ' ಎಂದರೆ-'ಪಶ್ಚಿಮದಲ್ಲಿ ಕುದುರೆ ಬಾಲದ ಸರೋವರ, ಇದು ಪ್ರಸ್ತುತ ತ್ಸೋಮ್ಗೊ ಸರೋವರವನ್ನು ಸೂಚಿಸುತ್ತದೆ. ಸಿಕ್ಕಿಂನ ಗ್ಯಾಸೆಟಿಯರ್ ಇದನ್ನು "ತಾನಿಟ್ಜೋ= ತಾನ್ಯೆಕ್ತ್ಶೋ, ಕುದುರೆ ಬಾಲದ ಸರೋವರ ಅಥವಾ ಕುದುರೆ ಕೂದಲಿನ ...

ಕೊತ್ತಂಬರಿ ಸೊಪ್ಪಿನ ದಂಟಿನ ಗಟ್ಟಿ ಚಟ್ನಿ - ದೇಹದ ಸ್ವಚ್ಛತೆಗೆ ರಾಮಬಾಣ!

ಇಮೇಜ್
ಬೇಡಿಕೆಗೆ ತಕ್ಕಂತೆ ಪೂರೈಕೆ ಎಂಬ ಈಗಿನ ಮಾರುಕಟ್ಟೆಯ ವೇಗಕ್ಕೆ, ಎಲ್ಲೆಯಿಲ್ಲದಂತೆ ಸಾಗುತ್ತಿರುವ ರಾಸಾಯನಿಕ ಸಿಂಪಡಿತ, ತರಕಾರಿ ಹಣ್ಣುಗಳನ್ನೇ ಲಾಭಕ್ಕಾಗಿ ಬೆಳೆಯುತ್ತಿರುವವರ ಮಧ್ಯೆ, ಸಾವಯವ ಬೆಳೆ ಬೆಳೆಯುವವರ ಸಂಖ್ಯೆ ಕಡಿಮೆಯೇ. ಸ್ನೇಹದ ಸಂಕೇತವಾಗಿ, ತಾವು ಬೆಳೆದ ಸಾವಯವ ತರಕಾರಿಗಳನ್ನು ಕಳೆದ ವಾರ ಮಾನಸ ಗಿರೀಶ್ ನಮ್ಮ ಮನೆಗೆ ಬಂದು ತಂದು ಕೊಟ್ಟಾಗ, ಸಂತೋಷ ಮತ್ತು ಕೃತಜ್ಞತೆಗೆ ಮಾತೇ ಹೊರಡದಾಯಿತು ಒಮ್ಮೆ ನನಗೆ. ಅವರು ನೀಡಿದ ಪ್ರತಿಯೊಂದು ತರಕಾರಿ ಸೊಪ್ಪುಗಳನ್ನು, ಒಂದಂಶ ಕೂಡ ನಿರುಪಯುಕ್ತವಾಗಿ ಹೋಗದಂತೆ, ಸಾಂಬಾರು, ಸಾಸ್ವೆ, ಪರೋಟ, ತರಕಾರಿ ಸಿಪ್ಪೆಯ ತರಹೇವಾರಿ ಚಟ್ನೆಗಳು ಇತ್ಯಾದಿಯಾಗಿ ಸಂತೋಷದಿಂದ ಬಳಸಿಕೊಂಡು ಉಂಡೆವು.  ಸೊಪ್ಪಿನ ವಿಷಯಕ್ಕೆ ಬಂದರೆ, ಸಾಮಾನ್ಯವಾಗಿ ನಾವು ಸೊಪ್ಪನ್ನು ತೊಳೆದು, ಅದರಲ್ಲಿ ಬಲಿತ, ಬಾಡಿದ, ಕೊಳೆತ ಇತ್ಯಾದಿ ಭಾಗಗಳನ್ನು ಬಿಡಿಸಿ ತೆಗೆದು ಬಳಸುವಷ್ಟರಲ್ಲಿ ಅರ್ಧಕ್ಕರ್ಧ ಸೊಪ್ಪು ನಿರರ್ಥಕವಾಗಿ ಕಸದಬುಟ್ಟಿಗೆ ಹೋಗುತ್ತದೆ. ನಾನೇ ನೋಡಿದಂತೆ, ಕೊತ್ತಂಬರಿ ಸೊಪ್ಪಿನ ಕಟ್ಟನ್ನು ತಂದರೆ, ಅದೆಷ್ಟೋ ಜನ ಕೇವಲ ಹಸಿರು ಸೊಪ್ಪನ್ನಷ್ಟೇ ಬಳಸಿಕೊಂಡು, ಅದರ ದಂಟನ್ನು ಬಿಸಾಡುತ್ತಾರೆ. ಆದರೆ ವಿಟಾಮಿನ್ ಏ, ಸೀ ಮತ್ತು ಕೆ, ಫೋಲೇಟ್ ಪೊಟ್ಯಾಸಿಯಮ್ ಮ್ಯಾಂಗನೀಸ್ ಪೌಷ್ಟಿಕಾಂಶದ ಆಗರವಾಗಿರುವ ಕೊತ್ತಂಬರಿ ಸೊಪ್ಪಲ್ಲಿ, ಅದರ ಎಲೆಗಳು ಮಾತ್ರವಲ್ಲದೆ, ದಂಟಿನಲ್ಲಿಯೂ ಕೂಡಾ ಈ ಎಲ್ಲಾ ಅಂಶಗಳು ಅಡಕವಾಗಿ...

ಮಹಾಕುಂಭಮೇಳ - ಆರಕ್ಷಕರ ವಿನಮ್ರತೆ

ವಿಮಾನದಿಂದಿಳಿದು ವಾರಾಣಸಿ ತಲುಪಿದ್ದೆವು ಆ ದಿನ ರಾತ್ರಿ. ಮರುದಿನಕ್ಕೆ ಪ್ರಯಾಗರಾಜ್ಗೆ ಹೊರಡುವ ಮುನ್ನ, ಕಾಶೀ ವಿಶ್ವನಾಥನನ್ನೊಮ್ಮೆ ಸ್ಪರ್ಶದರ್ಶನ ಮಾಡಿ ಹೊರಡುವುದು ಎಂದು ಪ್ಲಾನ್ ಆಗಿತ್ತು. ೪ ಗಂಟೆಯ ದರ್ಶನಕ್ಕೆ ಬೆಳಗಿನ ಜಾವ ೨.೩೦ ಎದ್ದು ಹೋಗಿಯಾಗಿತ್ತು. ಗಲ್ಲಿಗಲ್ಲಿಗಳ ದಾಟಿ, ಮಾತಾ ಅನ್ನಪೂರ್ಣ ಭವನದ ಪಕ್ಕದಲ್ಲಿ ಸರತಿಯಲ್ಲಿ ನಿಂತೆವು. ಕೊರೆವ ೭ ಡಿಗ್ರಿ ಚಳಿ ಇನ್ನೂ ಒಂದು ಗಂಟೆ ಕಾಯಬೇಕು ಗೇಟು ತೆರೆಯಲು. ನಮ್ಮ ಗುಂಪಿನಲ್ಲಿದ್ದ ಹಿರಿಯರೊಬ್ಬರಿಗೆ ಬಾಯಾರಿಕೆ ಆಗತೊಡಗಿತು. ಆದರೆ ಗಡಿಬಿಡಿಯಲ್ಲಿ ನೀರು ತಂದಿಲ್ಲ. ಸುತ್ತಮುತ್ತ ಎಲ್ಲಿ ನೋಡಿದರೂ ಬಾಗಿಲು ಮುಚ್ಚಿ ನಿದ್ರಿಸುತ್ತಿರುವ ಗಲ್ಲಿಗಳಷ್ಟೇ. ೩.೪೦ ಸುಮಾರಿಗೆ ಆ ರಸ್ತೆಯ ಒಬ್ಬ ಪೂಜಾಸಾಮಗ್ರಿ ಅಂಗಡಿಯವ ಬಾಗಿಲು ತೆರೆಯಲಾರಂಭಿಸಿದ. ತಕ್ಷಣವೇ ಹೋಗಿ ನೀರಿನ ಬಾಟಲಿ ಕೇಳಿದೆ. ಇಲ್ಲ ಎಂಬ ಉತ್ತರ ನಿರಾಸೆ ತಂದಿತು. ಅಕ್ಕನಿಗೆ ಬಿಕ್ಕಳಿಕೆ ಕೂಡ ಪ್ರಾರಂಭವಾಯಿತು ಈಗ ನೀರಿನ ಅವಶ್ಯಕತೆ ತುಂಬಾ ಇತ್ತು. ಭಕ್ತರ ಕ್ಯೂ ಸಂಭಾಳಿಸಲು ಅಲ್ಲಿ ಪೊಲೀಸ್ ಗಸ್ತು ಇರುತ್ತದೆ. ಇದು ವೈಯುಕ್ತಿಕ ವಿಷಯ, ಆರಕ್ಷಕರ ಸಹಾಯ ಸಿಗುವ ಸಾಧ್ಯತೆ ಕಮ್ಮಿ ಎಂದೆನಿಸಿದರೂ ಒಂದು ಪ್ರಯತ್ನ ಮಾಡಿದೆ. ಹತ್ತಿರದಲ್ಲಿ ಗಸ್ತಿನಲ್ಲಿದ್ದ ಒಬ್ಬರಿಗೆ, ನಮಗೆ ನೀರಿನ ಅವಶ್ಯಕತೆ ಇರುವುದಾಗಿ ತಿಳಿಸಿದೆ. ಒಮ್ಮೆ ನನ್ನನ್ನೂ, ಮುಂದಕ್ಕೆ ಸರತಿಯಲ್ಲಿ ನಿಂತಿರುವ ನನ್ನ ಹಿರಿಯ ಸ್ನೇಹಿತರನ್ನೂ ದುರುಗುಟ್ಟಿ ನೋಡಿದ. "ನಿಮ...