ಮಂದರಗಿರಿ ಬೆಟ್ಟ - ಮಕ್ಕಳೊಡನೆ ಚಾರಣ ನಡೆಸಲೊಂದು ವೀಕೆಂಡ್ ಗೇಟ್ವೆ
ಮಕ್ಕಳೊಡನೆ ಚಾರಣ ನಡೆಸಲೊಂದು ವೀಕೆಂಡ್ ಗೇಟ್ವೆ - ಮಂದರಗಿರಿ ಬೆಟ್ಟ! ಮಂದರಗಿರಿ ಬೆಟ್ಟ ಅಥವಾ ಬಸದಿ ಬೆಟ್ಟ ಎಂಬ ಹೆಸರಿನ ಈ ಬೆಟ್ಟವು ತುಮಕೂರಿನಿಂದ ೧೨ ಕಿಮೀ ಮತ್ತು ಬೆಂಗಳೂರಿನಿಂದ ೭೦ ಕಿಮೀ ದೂರದಲ್ಲಿದೆ. ಪ್ರಯಾಣದ ಅವಧಿ - ಬೆಳಿಗ್ಗೆ ಬೇಗನೆ ಹೊರಟು, ಸಂಚಾರ ದಟ್ಟಣೆ ಹೆಚ್ಚೇನೂ ಎದುರಿಸದೆ, ೧.೫ ಗಂಟೆಗಳಲ್ಲಿ ತಲುಪಬಹುದು. ಈ ಜಾಗದ ಪರಿಚಯ ಹೇಳುವುದಾದರೆ, ಪಂಡಿತನಹಳ್ಳಿ/ ಪುರೋಹಿತರ ಗ್ರಾಮ ಎಂಬ ಹಳ್ಳಿಯಲ್ಲಿ, ಒಂದು ದೈತ್ಯ ಏಕಶಿಲೆಯ ಬಲು ಎತ್ತರವಾದ ಬಂಡೆಯೊಂದಿದೆ. ಈ ಬೆಟ್ಟದ ಮೇಲೊಂದು ಜೈನ ಬಸದಿ. ಹಾಗಾಗಿಯೇ, 'ಬಸದಿ ಬೆಟ್ಟ' ಎಂಬ ಹೆಸರೂ ಕೂಡ ಇದಕ್ಕಿದೆ. ೮ ರಿಂದ ೧೨ ವರ್ಷದ ಮಕ್ಕಳಿಗೆ ಸುತ್ತು ಹಾಕಿದರೆ ಆರಾಮದಲ್ಲಿ ೭-೮ ಕಿಮೀ ಚಾರಣ, ಅದೂ ನೈಸರ್ಗಿಕ ಸ್ಥಳದ ಪರಿಚಯ ಮಾಡಿಸುತ್ತ ಓಡಾಡಿಸಲು ಹೇಳಿ ಮಾಡಿಸಿದಂತಹ ಜಾಗ! ಪಿಂಚಿ ಧ್ಯಾನ ಮಂದಿರ : ಈ ಬ್ರಹತ್ ಬೆಟ್ಟದ ಬುಡದಲ್ಲಿ ಒಂದು ಮಹಾವೀರನ ದೈತ್ಯ ಪ್ರತಿಮೆ ಇದೆ. ಬೆಳಗಿನ ಎಳೆಬಿಸಿಲಿಗೆ ಮತ್ತು ಸಂಜೆಯ ಇಳಿತಂಪಿಗೆ, ಇಲ್ಲಿ ಕೂತು ಧ್ಯಾನ ಮಾಡುವುದು ಆಹ್ಲಾದಕರವೆನಿಸುತ್ತದೆ. ಈ ಬ್ರಹತ್ ಪೂರ್ತಿಯ ಕೆಳಗಡೆ, ಹುಲಿಯೊಂದು ಆಕಳಿನ ಕರುವಿಗೆ ಹಾಲನ್ನುಣಿಸುವುದು, ಹುಲಿಯ ಮರಿಗೆ ಆಕಳು ಹಾಲನ್ನುಣಿಸುವ ಪ್ರಾತ್ಯಕ್ಷಿಕೆ ಮೂರ್ತಿಗಳು, ಪ್ರೀತಿ ಮತ್ತು ಶಾಂತಿಯ ಪಾಠವನ್ನು ತಿಳಿಸುತ್ತದೆ. ಅದರ ಪಕ್ಕದಲ್ಲಿಯೇ ಧ್ಯಾನ ಮಂದಿರ ಒಂದಿದೆ. ಜೈನ ಸ...