ಸಿರಿಕಲ್ಚರ್ - ರೇಷ್ಮೆ ಸಾಕಾಣಿಕೆ
ಬೇಸಿಗೆ ರಜೆಗೆ ಸಾಮಾನ್ಯವಾಗಿ ಅಕ್ಕ ಮತ್ತು ನಾನು ಊರ ಕಡೆ ಸಿಕ್ಕೇ ಸಿಗುತ್ತೇವೆ. ನಮ್ಮ ನಮ್ಮ ಮಕ್ಕಳು ಕೂಡ ಒಬ್ಬರಿಗೊಬ್ಬರು ಹೊಂದಿಕೊಂಡು ಪ್ರೀತಿಯಿಂದ ರಜೆಯನ್ನು ಕಳೆಯುತ್ತಾರೆ. ಪ್ರತಿ ಸಲವೂ, ಹೊಸತನ್ನು ಹುಡುಕುತ್ತೇವೆ ಸಂಭ್ರಮಿಸಲು, ಕಲಿಯಲು. ಈ ಸರ್ತಿಯ ರಜೆಯಲ್ಲಿ, ಸಂಬಂಧಿಕರೊಬ್ಬರು ಮಾಡಿಕೊಂಡಿರುವ ರೇಷ್ಮೆ ಸಾಕಾಣಿಕೆ ಕೃಷಿಯನ್ನು ನೋಡಲು ಹೋಗಿದ್ದೆವು. ಇದರ ಬಗ್ಗೆ ಕಂಡು, ಕೇಳಿ, ತಿಳಿದುಕೊಂಡ ವಿಷಯಗಳ ಪುಟ್ಟ ಸಾರಾಂಶ. ನಾಗೇಶ ಭಟ್ಟರು, ಹೊಡಬಟ್ಟೆ ಇವರು ಮೂಲತಃ ಕೃಷಿಕರು, ಅಡಿಕೆ, ಬಾಳೆ, ತೆಂಗು, ರಬ್ಬರ್, ಫೈನ್ಯಾಪಲ್ ಹೀಗೆ ವಿವಿಧ ಬಗೆಯ ಬೆಳೆಯನ್ನು ಬೆಳೆಯುತ್ತಿರುವ ಇವರು ಹೊಸತಾಗಿ ರೇಷ್ಮೆ ಹುಳುಗಳ ಸಾಕಾಣಿಕೆಯನ್ನು ಪ್ರಾರಂಭಿಸಿದ್ದಾರೆ ಎಂದು ಕೇಳಿಬಂದಾಗ, ಸಹಜವಾಗಿಯೇ ಕಿವಿ ನೆಟ್ಟಗಾಯಿತು. ಮಕ್ಕಳೆಂತೂ ಪಿಕ್ನಿಕ್ ಗೆ ಯಾವಾಗಲೂ ತಯಾರು. ಸರಿ, ಒಂದು ಹೊತ್ತಿನ ಭೇಟಿ ನಿರ್ಧರಿಸಿ ಹೊರೆಟೆವು. ಸಿರಿಕಲ್ಚರ್ (ರೇಷ್ಮೆ ಸಾಕಾಣಿಕೆ) ಜಾಗದ ಮುಂಭಾಗಕ್ಕೆಯೇ ನಮ್ಮನ್ನು ಹಚ್ಚಹಸಿರಿನಿಂದ ಸ್ವಾಗತಿಸಿದ್ದು, ಸಾಲಾಗಿ ತಲೆ ಎತ್ತಿ ನಿಂತ ಹಿಪ್ಪು ನೇರಳೆ ಗಿಡಗಳು (Mulberry plants). ಒಳ್ಳೆಯ ಜಾಗ ಮತ್ತು ನೀರಿನ ವ್ಯವಸ್ಥೆಯಿದ್ದರೆ, ರೇಷ್ಮೆ ಸಾಕಾಣಿಕೆ ಸುಲಭ ಸಾಧ್ಯ ಎಂದೇ ಮಾತು ಶುರುಮಾಡಿದ, ನಾಗೇಶಣ್ಣ, ನಮ್ಮನೆಲ್ಲಾ, ರೇಷ್ಮೆ ಸಾಕಾಣಿಕಾ ಮನೆಗೆ ಕರೆದೊಯ್ದರು. ಹೆಚ್ಚು ಬಿಸಿಲಿನ ಝಳ ತಾಗದಂತೆ ಎಲ್ಲ ಬದಿಯಿಂದಲೂ ಹಸಿರು ಬಟ್ಟ