ನಿಮ್ಮ ಮಗು ಸರಿಯಾಗಿ ಊಟ-ತಿಂಡಿ ಮಾಡುತ್ತಿಲ್ಲವೇ?
"ನಮ್ ಹುಡ್ಗ ಏನೂ ಸರಿ ಊಟನೇ ಮಾಡಲ್ಲ ಕಣ್ರೀ", "ತುಂಬಾ ಹಠ ನಂ ಮಗಳದ್ದು ಊಟ ತಿಂಡಿಗೆ, ಅರ್ಧಕ್ಕರ್ಧ ಚೆಲ್ಲಿ ರಂಪಾಟ ಮಾಡ್ತಾಳೆ", "ಕಾರ್ಟೂನ್ ಇಲ್ಲ ಅಂದ್ರೆ ಊಟ ತಿಂಡೀನೇ ಮಾಡಲ್ಲ, ಮಗು ತಿಂದ್ರೆ ಸಾಕು ಅಂತ ಟಿ.ವಿ ಹಾಕ್ಕೊಂಡು, ಹೇಗೋ ಹೊಟ್ಟೆ ತುಂಬಿಸೋದು", "ಮನೆ ಊಟ ಸೇರಲ್ಲ, ಹೊರಗಡೆ ತಿಂಡಿ, ಕ್ಯಾನ್ಡಿ, ಚೊಕೊಲೇಟ್ಸ್ ಎಲ್ಲ, ಎಷ್ಟು ಚೆನ್ನಾಗಿ ತಿನ್ತಾಳೆ"."ಸ್ಕೂಲ್ ಇಂದ ಡಬ್ಬಿ ಹೇಗೆ ಕಳ್ಸಿದೀನೋ ಹಾಗೇ ವಾಪಸ್ ಬರತ್ತೆ", "ನಮ್ಮ ಮಗುವಿನದು, ಶಾಲೆಯಲ್ಲಿ ಡಬ್ಬಿ ಖಾಲಿಯಾಗತ್ತೆ, ಮನೇಲಿ ಊಟ ತಿಂಡಿಗೆ ರಗಳೆ", "ಊಟದ ಜೊತೆ ಚಿಪ್ಸ್ ಏನಾದ್ರು ಕುರುಕಲು ಬೇಕೇ ಬೇಕು ಇವನಿಗೆ, ಇಲ್ಲಾಂದ್ರೆ ಊಟನೇ ಆಗಲ್ಲ", "ಮಗು ಚೆನ್ನಾಗಿ ತಿಂತಾನೇ ಇಲ್ಲ, ಡಾಕ್ಟರ್ ಕೇಳ್ಬೇಕ್ರಿ ನಾನು, ತಿನ್ನಕ್ಕೆ ಏನಾದ್ರು ಟಾನಿಕ್ ಕೊಡ್ಸಬೇಕು", "ಹಾಲು ಕಂಡ್ರೆ ಮಾರು ದೂರ ಓಡ್ತಾಳೆ, ಬೈದು ಹೊಡೆದು ಎಲ್ಲಾ ಮುಗೀತು, ಪ್ರಯೋಜನವೇ ಇಲ್ಲ", "ಇತರರ ಮನೆಗಳಿಗೆ ಹೋದ್ರೆ ಮಾತ್ರ ಸ್ವಲ್ಪವೂ ತಕರಾರಿಲ್ಲದೆ ಚೆನ್ನಾಗಿ ತಿಂದು ಬರುತ್ತಾನೇರೀ ನಮ್ಮ ಮಗ, ಮನೇಲಿ ಮಾತ್ರ ಗಲಾಟೆ ಎಲ್ಲಾ ತಿಂಡಿಗಳಿಗೂ", "ಮನೇಲಿ ಯಾವ ತಿಂಡಿ ನೋಡಿದರೂ ಬೋರ್ ಅಂತಾಳೆ ಮಗಳು" ... ಅಬ್ಬಾ! ಇವೆಲ್ಲಾ ಮಕ್ಕಳ ಪೋಷಕರಾಗಿ ನಾವು ನಡೆಸುವ ಅತ್ಯಂತ ಸರ್ವೇ ಸಾಮ...