ಎಸ್.ಪಿ.ಎಸ್ ಫೋಟೋಗ್ರಫಿ ಕಾರ್ಯಾಗಾರ ೨೦೧೯

ಒಂದು ಸೂರು, ೬೦ ಜನ, ೩ ದಿನ, ಬೆಳಿಗ್ಗೆ ೭ ರಿಂದ ರಾತ್ರೆ ೯.೩೦ ವರೆಗಿನ ೧೪ ತಾಸುಗಳ ಲವಲವಿಕೆಯ ಕಾರ್ಯಕ್ರಮ..ಪಾಠ, ಚರ್ಚೆ, ಮಾತು-ಕಥೆ, ಹರಟೆ, ತಿರುಗಾಟ, ಒಳ್ಳೆ ಊಟ ಎಲ್ಲವೂ ಅಲ್ಲೇ ಅಡಕ.. ಹೈಸ್ಕೂಲಿನಲ್ಲಿ ಓದುತ್ತಿರುವ ಹುಡುಗನಿಂದ ಹಿಡಿದು ನಿವೃತ್ತರವರೆಗೆ ಎಲ್ಲರೂ ಅಲ್ಲಿ ಉತ್ಸಾಹಿಗಳು.ಅಲ್ಲಿದ್ದವರೆಲ್ಲ ಒಂದೇ ಊರಿನವರಲ್ಲ, ಕರ್ನಾಟಕದ ನಾನಾ ಪ್ರದೇಶಗಳಿಂದ ಬಂದವರು. ಹಿನ್ನೆಲೆ ಕೇಳಿದರೆಂತೂ ಒಬ್ಬೊಬ್ಬರೂ ಒಂದೊಂದು ತರ. ಪಾಠ ಹೇಳುವ ಟೀಚರ್ರುಗಳು, ವಿದ್ಯಾಭ್ಯಾಸ ಮಾಡುತ್ತಿರುವ ಸ್ಟೂಡೆಂಟ್ಸ್, ಎಂಜಿನೀಯರ್ಗಳು, ಬ್ಯಾಂಕ್, ಅನೇಕ ಖಾಸಗೀಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಸ್ಟುಡಿಯೋ, ಕಲೆ, ಸಾಹಿತ್ಯ, ಕೃಷಿ, ಹೀಗೆ ನಾನಾ ಬಗೆಯ ಕ್ಷೇತ್ರದಿಂದ ಬಂದವರು...ಏಕರೂಪತೆ ಇದ್ದಿದ್ದು ಮಾತ್ರ ಒಂದೇ ವಿಷಯದಲ್ಲಿ.. ಎಲ್ಲರ ಕುತ್ತಿಗೆಗೆ ಇಳಿಬಿಟ್ಟ ಕ್ಯಾಮೆರಾ!!ಕೆಲವರು ವೃತ್ತಿಪರ ಫೋಟೋಗ್ರಾಫರ್ಸುಗಳಾಗಿದ್ದರೆ, ಮತ್ತೆ ಹಲವರು ಹವ್ಯಾಸಿ ಛಾಯಾಗ್ರಾಹಕರು..ಕೆಲವರು ಮೊದಲನೇ ಸಲ ಕ್ಯಾಮೆರಾವನ್ನು ನಡುಗುವ ಕೈಗಳಿಂದ ಹಿಡಿಯುವವರಾಗಿದ್ದರೆ, ಮತ್ತೆ ಕೆಲವರು ಫೋಟೋಗ್ರಫಿಯನ್ನೇ ತಮ್ಮ ಬದುಕನ್ನಾಗಿಸಿಕೊಂಡವರು. ಅಪ್ಪಿ ತಪ್ಪಿ ಹೊರಗಿನವರ್ಯಾರಾದರೂ ಈ ಕಾರ್ಯಕ್ರಮ ನಡೆಯುತ್ತಿರುವ ಸ್ಥಳಕ್ಕೆ ಹೋಗಿ ನಿಂತರೆ, ಅಲ್ಲಿ ಕಲಿಯಕ್ಕೆ ಬಂದವರ್ಯಾರು? ಕಲಿಸುವವರ್ಯಾರು? ಸಂಘಟಕ...