ಲಿವಿಂಗ್ ರೂಟ್ ಬ್ರಿಡ್ಜ್
ಪ್ರಪಂಚದಾದ್ಯಂತ ಅದೆಷ್ಟೋ ಸೇತುವೆಗಳು, ತಮ್ಮ ನಿರ್ಮಾಣದ ಐತಿಹಾಸಿಕತೆಗೆ, ವಿಜ್ಞಾನ ಮತ್ತು ತಂತ್ರವಿದ್ಯೆಗೆ ಪ್ರಸಿದ್ಧಿಯನ್ನು ಪಡೆದಿದೆ. ಮಾನವನ ಆವಿಷ್ಕಾರಗಳ ಚಾಣಾಕ್ಷ್ಯತೆಯ ಇಂತಹ ಕೊಡುಗೆಗಳ ಪೈಕಿ, ಕಲ್ಲು, ಇಟ್ಟಿಗೆ, ಕಬ್ಬಿಣ, ಉಕ್ಕು, ಕಾಂಕ್ರೀಟ್ ಇತ್ಯಾದಿ ಯಾವುದೇ ವಸ್ತುಗಳನ್ನು ಬಳಸದೇ, ಪ್ರಕೃತಿಯನ್ನೇ ಸಂಪರ್ಕ ಕೊಂಡಿಯಾಗಿ ಬಳಸಿಕೊಂಡು ನಿರ್ಮಿಸಿರುವ, ನೂರಾರು ವರ್ಷಗಳಷ್ಟು ಹಳೆಯ ಆದರೂ ಸುಧೃಡವಾಗಿ ಚಾಲ್ತಿಯಲ್ಲಿರುವ, ಸೇತುವೆಗಳ ದಾಖಲೆಯೊಂದು ನಮ್ಮ ಭಾರತದಲ್ಲಿದೆ. ಅದುವೇ ಪ್ರಪಂಚದ ಅದ್ಭುತ ಅಚ್ಚರಿಗಳಲ್ಲಿ ಒಂದಾದ ಮೇಘಾಲಯದ ನಿಸರ್ಗವುದು ಕೇವಲ ಮರಗಳ ಬೇರುಗಳಿಂದ! ಭಾರತದ ಆರ್ದ್ರ ಸ್ಥಳ ಎಂಬ ಮನ್ನಣೆಗೆ ಪಾತ್ರಗೊಂಡಿರುವ ಮೇಘಾಲಯದ ಚಿರಾಪುಂಜಿಯಲ್ಲಿ ವರ್ಷವಿಡೀ ಮಳೆ. ಸರ್ವ ನಿರ್ಮಿತ ಸೇತುವೆ - ಲಿವಿಂಗ್ ರೂಟ್ ಬ್ರಿಡ್ಜ್. 'ಲಿವಿಂಗ್ ರೂಟ್ ಬ್ರಿಡ್ಜ್' ಹೆಸರೇ ಸೂಚಿಸುವಂತೆ, ಈ ಸೇತುವೆಗಳು ನಿರ್ಮಾಣಗೊಂಡಿರುವುದು ಜೀವಂತ ಮರದ ಬೇರುಗಳಿಂದ! ಸಂಪನ್ನ ಅರಣ್ಯ ರಾಶಿ ಇಲ್ಲಿನ ವರವೇನೋ ಹೌದು. ಆದರೆ ಈ ಮಳೆ ನಾಡಿನಲ್ಲಿ ಮೂಲನಿವಾಸಿಗಳ ಕಾಲದಿಂದಲೂ ನದಿ ಮತ್ತು ಹೊಳೆಗಳನ್ನು ದಾಟಲು ಸಂಪರ್ಕ ಕೊಂಡಿಯ ವ್ಯವಸ್ಥೆ ಅತ್ಯಂತ ದೊಡ್ಡ ಸವಾಲು. ಹಿಂದೆ, ಬಿದಿರು ಮತ್ತು ಇತರ ಮರಮುಟ್ಟುಗಳನ್ನು ನೀರಿಗ...