ಶಿಶಿಮಾ
ಟಿಕ್ ಟಾಕ್ ಟೋ ಯಾರು ಕೇಳಿಲ್ಲ? ಸಾಮಾನ್ಯವಾಗಿ ಎಲ್ಲರಿಗೂ ಈ ಆಟದ ಪರಿಚಯ ಇದ್ದೇ ಇರುತ್ತದೆ. ಎಲ್ಲೋ ಪೇಪರ್ರು ಪೆನ್ನು ಕಂಡರೆ ಸಾಕು, ಅಲ್ಲೇ ಮೂರು ಅಡ್ಡ ಉದ್ದ ಗೆರೆ ಹಾಕಿ ಒಂಭತ್ತು ಮನೆ ಮಾಡಿ, ಬಾ ಆಡು.." ಎಂದು ಪಕ್ಕದವರನ್ನು ಕರೆದು ಆಡಿಬಿಡುವಷ್ಟುಸರ್ವೇ ಸಾಮಾನ್ಯ ಆದರೂ ತಂತ್ರ ಹೂಡಿ ಆಡುವ ಆಟವದು. ಬೋರ್ಡ್ ಗೇಮ್ಸ್ ಗಳ ಹುಚ್ಚಿರುವ ಮಗಳಿಗೆ ಎಲ್ಲೆಲ್ಲಿ ಏನೇನು ಹೊಸ ಆಟಗಳ ಬಗೆ ಸಿಗುತ್ತದೋ ಅವೆಲ್ಲ ತೋರಿಸುವ, ಕಲಿಸುವ ಹುಚ್ಚು ನನಗೂ ಇದೆ. ಹೀಗೆಯೇ ಸಿಕ್ಕ ಮತ್ತೊಂದು ಬೋರ್ಡ್ ಗೇಂ - 'ಶಿಶಿಮಾ' ಕೀನ್ಯಾ ಮೂಲದಿಂದ ಬಂದಿರುವ ಶಿಶಿಮಾ ಆಟ ಹೆಚ್ಚು ಕಮ್ಮಿ ಟಿಕ್ ಟ್ಯಾಕ್ ಟೋ ಆಟವೇ ಆದರೆ ಅಷ್ಟಭುಜಾಕೃತಿಯಲ್ಲಿ ರೂಪಿಸಲಾಗಿದೆ. ಕೀನ್ಯಾದ ಸ್ಥಳೀಯ ಭಾಷೆಯೊಂದರ ಪ್ರಕಾರ ಶಿಶಿಮಾ ಪದದ ಅರ್ಥ ನೀರಿನ ಹಳ್ಳ. ಈ ಆಟವನ್ನು ಆಡಲು ಬಳಸುವ ಕಾಯಿಗಳನ್ನು ಇಂಬಲವಲಿ ಎಂದು ಕರೆಯುತ್ತಾರೆ. ಅದು ನೀರ ಮೇಲೆ ಚುರುಕಾಗಿ ಓಡಾಡುವ ಕೀಟಗಳು ಎಂಬ ಅರ್ಥ. ಒಂದು ವರ್ತುಲವನ್ನು ನಾಲ್ಕು ರೇಖೆಗಳು ಮಧ್ಯ ಬಿಂದುವಿನಿಂದ ಹಾದು ಹೋಗಿ ಎಂಟು ಸ್ಥಾನಗಳನ್ನು ಹೊಂದಿರುವಂತಹ ಅಷ್ಟಭುಜಾಕೃತಿಯ ಪಟವಿದು. ಎರಡು ಜನರು ಆಡಬಹುದಾದಂತಹ ಈ ಆಟದಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೂರು ಕಾಯಿಗಳು ಇರುತ್ತವೆ. ಮೊದಲಿಗೆ ಆಟಗಾರರು ಒಂದು ಸಲಕ್ಕೆ ಒಂದು ಕಾಯಿಯಂತೆ ಮೂರು ಬಿಂದುಗಳ ಮೇಲೆ ಇಡಬೇಕು. ನಂತರಕ್ಕೆ ಎದುರಾಳಿಯ ಆಟದ ...