mother
ಕೋವಿಡ್ ೧೯ ಸೋಂಕು ರೋಗ ಪ್ರಾರಂಭವಾದಾಗಿನಿಂದ ಅನಿತಾ ಮತ್ತವಳ ಗಂಡನಿಗೆ, ಮನೆಯಿಂದಲೇ ಆಫೀಸು ಕೆಲಸ ಮಾಡಿಕೊಳ್ಳುವ ಅನಿವಾರ್ಯತೆ. ಹಿಂದೆ ಮನೆಗೆಲಸಕ್ಕೆ ಹೆಲ್ಪರ್ ಇಟ್ಟುಕೊಂಡು, ದೊಡ್ಡ ಮಗನನ್ನು ಸ್ಕೂಲ್ ಮುಗಿದ ನಂತರ ಫುಟಬಾಲ್ ಆಟಕ್ಕೆ ಕಳಿಸಿಕೊಂಡು, ಪುಟ್ಟ ಮಗಳನ್ನು ಡೇ ಕೇರ್ ನಲ್ಲಿ ಬಿಟ್ಟುಕೊಂಡು, ಇಬ್ಬರೂ ತಮ್ಮ ತಮ್ಮ ಆಫೀಸು ಕೆಲಸ ಮುಗಿಸಿಕೊಂಡು ಸಂಜೆ ಎಲ್ಲರೂ ಗೂಡು ಸೇರಿಕೊಂಡರೆ, ಸಿಕ್ಕಷ್ಟು ಸಮಯ ಒಟ್ಟಿಗೆ ಕಳೆದು, ಮಕ್ಕಳ ಓದು ಬರಹ ಆಟಗಳನ್ನು ಮುಗಿಸಿಕೊಳ್ಳುವ ದಿನಚರಿಯಿದ್ದವರಿಗೆ, ಈಗ ಒಂದೇ ಸೂರಿನಡಿಯಲ್ಲಿ ನಾಲ್ಕು ಅನ್ಯಮನಸ್ಕರರ ಜೀವನ ಎಲ್ಲಿಲ್ಲದ ಅಸಮತೋಲನ ತಂದೊಡ್ಡುತ್ತಿದೆ. ಗಂಡನ ಮೀಟಿಂಗ್ ಸಮಯದಲ್ಲಿ ಮಕ್ಕಳು ಗಲಾಟೆ ಮಾಡಿದರೆ, ಅವರನ್ನು ಸರಿಯಾಗಿ ಮ್ಯಾನೇಜ್ ಮಾಡುತ್ತಿಲ್ಲ ಎಂಬ ಬೈಗುಳ ತಿನ್ನುವುದು ಅನಿತಾ. ಆಫೀಸು ತಲೆಬಿಸಿಯ ಜೊತೆಗೆ, ಮನೆಗೆಲಸವನ್ನು ಮಾಡಿಕೊಂಡು, ಟೈಮ್ ಪಾಸ್ ಆಗದೆ ಒಂದೇ ಸಮನೆ ತಿನ್ನುವ ಅಭ್ಯಾಸ ಮಾಡಿಕೊಂಡ ಮಕ್ಕಳಿಗೆ ತಿಂಡಿ ಒದಗಿಸಿಕೊಳ್ಳುತ್ತ, ಕೊರೋನಾ ಸಮಯದಲ್ಲಿ ಸೋಂಕುಗಳಿಂದ ದೊರವಿರಲು ವಹಿಸಬೇಕಾದ ಎಲ್ಲ ಜಾಗ್ರತೆಗಳನ್ನು ಮಾಡಿಕೊಳ್ಳುವಷ್ಟರಲ್ಲಿ, ಅನಿತಾ ಬಸವಳಿದು ಹೋಗುತ್ತಿದ್ದಾಳೆ.ಶಾಲೆಯಿಲ್ಲದೆ ಓದು ಬರಹದ ಅಭ್ಯಾಸವೇ ಬಿಟ್ಟು ಅಶಿಸ್ತು ಮೈಗೂಡಿಸಿಕೊಂಡಿರುವ ಮಕ್ಕಳ ಬೆಳಗು ಪ್ರಾರಂಭವಾಗುವುದೇ ಟೀವಿಯಿಂದ! ವಿಡಿಯೋ ಗೇಮ್ಸ್ ಆಟಕ್ಕೆ ಮಗ ಅಂಟಿಕೊಂಡಿದ್ದರೆ ,ರೈಮ್ಸ್ ಹಾಡುಗಳಿ...