ಒಂದು ದ್ವೀಪದ ಕಥೆ!!
ಮಕ್ಕಳ ಪಾರ್ಕಿನಲ್ಲಿ ಮಗಳ ಆಟದ ದಿನಚರಿ. ಅಲ್ಲೊಂದು ಪುಟ್ಟ ಮಗು ಕಲ್ಲು ಮಣ್ಣುಗಳನ್ನು ಹೆಕ್ಕಿ ತಂದು ಜೋಡಿಸಿ ತನ್ನದೇ ಆದ ಆಟವನ್ನು ಆಡುತ್ತಿತ್ತು. ಅಣತಿ ದೂರದಲ್ಲಿ ಅವರಪ್ಪ ಫೋನಿನಲ್ಲಿ ಮಾತನಾಡುತ್ತಾ ಓಡಾಡುತ್ತಿದ್ದರು. ಮಗುವಿನ ಜೋಡಣಾ ಶೈಲಿ ನನಗಿಷ್ಟವಾಗಿ ಹೋಗಿ ಮಾತನಾಡಿಸಿ ಗೆಳೆತನ ಮಾಡಿಕೊಂಡೆ. ನಾಲ್ಕು ವರ್ಷದ ಹುಡುಗ ಅವನು. ಮಾಶಾ ಅಂಡ್ ದಿ ಬೇರ್ ಕಾರ್ಟೂನ್ ನಲ್ಲಿ ಬರುವ ಸಂದರ್ಭವನ್ನು ತನ್ನ ಮನಸ್ಸಿನಲ್ಲಿಟ್ಟುಕೊಂಡು, ಕ್ಯಾಂಪ್ಫೈರ್ ಗೆ ತಯಾರಿ ನಡೆಸುತ್ತಿದ್ದ. ಸರಿ, ಅವನ ಕಲ್ಪನೆಯ ಕಥೆಗೆ ತಕ್ಕಂತೆ , ಇಬ್ಬರು ಸೇರಿ ವಸ್ತುಗಳ ಒಟ್ಟು ಮಾಡುವುದು ಇನ್ನಿತರ ಚಟುವಟಿಕೆ ನಡೆಸುತ್ತಾ ಹೋದೆವು. ನನ್ನ ಮಗಳಿಗೋ ವ್ಯಾಯಮದ ಪಾರ್ಕಿನಲ್ಲಿ ಕಸರತ್ತು ಮಾಡುವ ಹುಚ್ಚು. ಆದರೆ ಈ ಕಡೆಗೂ ಒಲವು. ಆಗಾಗ ಬಂದು ನಮ್ಮನ್ನು ಮಾತನಾಡಿಸುತ್ತಾ, ಕಥೆಯನ್ನು ಕೇಳುತ್ತಾ, ಮಧ್ಯೆಮಧ್ಯೆ ಸಹಾಯ ಮಾಡಿ ಹೋಗುತ್ತಿದ್ದಳು. ಇದ್ದಕ್ಕಿದ್ದಂತೆ, ಯಾವುದೋ ಒಂದು ದ್ವೀಪದಲ್ಲಿದ್ದ ನಾವು ಕ್ಯಾಂಪ್ ಫೈರ್ ತಯಾರಿ ನಡೆಸುತ್ತಿದ್ದವರು, ಹಾಸ್ಪಿಟಲ್ ಗೆ ಹೋಗುವ ಕಥೆಯ ಮೂಲಕ, ನಮ್ಮೆಲ್ಲ ಜೋಡಣೆಯನ್ನು ಆ ಹುಡುಗ ಬದಲಾಯಿಸುತ್ತಾ ಬಂದ. ಯಾವುದಕ್ಕೂ ಒಪ್ಪದಾದ. ನನಗೋ ಆ ಕಾರ್ಟೂನ್ ನ ಹಿಂದೆ ಮುಂದೆ ತಿಳಿಯದು. ನಾನು ಜೋಡಿಸಿಟ್ಟಿದ್ದನ್ನೆಲ್ಲ ಆತ ಮುರಿಯುತ್ತಿದ್ದ. ನಾನು ಕಷ್ಟಪಡುತ್ತಿದ್ದುದ್ದನ್ನು ಕಂಡು ಮಗಳು ಓಡಿಬಂದಳು. ಆಸ್ಪತ್ರೆಯ ಕಥೆ ಮಾಷಾ ಅಂಡ್ ದ ಬೇರ...