ಮಕ್ಕಳನ್ನು ದಂಡಿಸದಿರಿ
ಸರಿಯಾದ ಕ್ರಮದಲ್ಲಿ ಕುಳಿತು ಅಭ್ಯಾಸ ಮಾಡು' ಎಂದು ತಾಕೀತು ಮಾಡಿ ಶಿಕ್ಷೆ ನೀಡಿದ ತಾಯಿಯ ಮೇಲೆ ಕೋಪಗೊಂಡು ಹದಿನಾರು ವರ್ಷದ ಬಾಲಕನೊಬ್ಬ ಅಮ್ಮ ಕೊಡಿಸಿದ ಬ್ಯಾಟಿನಿಂದಲೇ ತಾಯಿಯನ್ನು ಹೊಡೆದು ಸಾಯಿಸಿದ ದಾರುಣ ಘಟನೆ ಉತ್ತರ ಪ್ರದೇಶದ ನೋಯಿಡಾ ದಿಂದ ವರದಿಯಾಗಿದೆ. ಕೀಳರಿಮೆ ಹಾಗೂ ಮತ್ಸರದಿಂದ ಹನ್ನೆರಡು ವರ್ಷದ ತನ್ನ ತಂಗಿಯನ್ನೂ ಜೊತೆಯಲ್ಲಿಯೇ ಕೊಂದಿದ್ದಾನೆ. ಘಟನೆಯ ವಿವರಣೆಯ ಹೀಗಿದೆ - ನೋಯಿಡಾದ ಪ್ಲಾಟ್ ಒಂದರಲ್ಲಿ ಮಗ ಹಾಗೂ ಮಗಳಿನೊಂದಿಗೆ ತಂದೆ ತಾಯಿ ವಾಸವಿದ್ದಾರೆ. ಮಗನಿಗೆ ಓದಿನಲ್ಲಿ ಆಸಕ್ತಿ ಇಲ್ಲ. ಪರಿಣಾಮವಾಗಿ ಶೆಕ್ಷಣಿಕ ಪ್ರಗತಿ ಕಡಿಮೆ. ಮಗಳು ಓದಿನಲ್ಲಿ ಜಾಣೆ. ಪರಿಣಾಮ ಮನೆಯಲ್ಲಿ ಮಗಳಿಗೆ ಹೆಚ್ಚು ಪ್ರೀತಿ ಸಿಗುತ್ತಿದೆ. ತಂಗಿಯ ಪ್ರಗತಿಗೆ ಹೋಲಿಕೆ ಮಾಡಿ ಮಗನಿಗೆ ಯಾವಾಗಲೂ ನಿಂದನೆ, ಬೈಗುಳ. ಈ ಘಟನೆ ನಡೆದ ದಿನ ರಾತ್ರಿ ಊಟಕ್ಕೂ ಮೊದಲು ಮಗ ಅನಿಲ್ (ಹೆಸರು ಬದಲಾಯಿಸಲಾಗಿದೆ) ಸೋಫಾದ ಮೇಲೆ ಕುಳಿತು ಟೀವಿ ನೋಡುತ್ತಾ ಅಭ್ಯಾಸ ಮಾಡುತ್ತಿರುತ್ತಾನೆ. ಇದನ್ನು ಗಮನಿಸಿದ ತಾಯಿ ಕೊಠಡಿಗೆ ಹೋಗಿ, ಓದಿಕೊಳ್ಳುವಂತೆ ಮಗನಿಗೆ ತಾಕೀತು ಮಾಡಿದ್ದಾಳೆ. ಆದರೆ ಮಗ ತಾಯಿಯ ಮಾತನ್ನು ಕೇಳದೆ ಸೋಫಾ ಮೇಲೆ ಕುಳಿತು ಟಿವಿ ನೋಡುವುದನ್ನು ಮುಂದುವರೆಸಿಯೇ ಇದ್ದ. ಇದರಿಂದ ಕೋಪಗೊಂಡ ತಾಯಿ ಮಗನಿಗೆ ನಾಲ್ಕು ಏಟು ಕೊಟ್ಟು ಕೊಠಡಿಗೆ ಹೋಗಿ ಓದಿಕೊಳ್ಳುವಂತೆ ಮತ್ತೊಮ್ಮೆ ಎಚ್ಚರಿಸಿದ್ದಾಳೆ. ತಾಯಿಯ ಈ ಕ್ರಮಕ್ಕೂ ಮಗ ಬಗ್ಗದಿದ್ದಾ...