ಪರಿಸರದಿನ_ಆಗಲಿಪ್ರತಿದಿನ
ಒಂದೆರಡು ಅನುಭವಗಳೊಂದಿಗೆ: ಬಂಧು ಒಬ್ಬರ ಮನೆಗೆ ಹೋಗಿದ್ದೆವು. ಎಲ್ಲರೂ ಕೂತು ಮಾತನಾಡುತ್ತ ಇರುವಾಗ ಅದು ಇದು ಸುದ್ದಿ ಬಂದು, ಒಂದು ಸುಂದರವಾದ ಆಕರ್ಷಣೀಯ ಬಣ್ಣದ ಪ್ಲಾಸ್ಟಿಕ್ ಬೌಲ್ ಒಂದನ್ನು ತೋರಿಸಿ, "ಈ ಬೌಲ್ ಅಂಗಡಿಲಿ ನೋಡಿ ಎಷ್ಟು ಇಷ್ಟ ಆತು ಅಂದ್ರೆ, ಈ ಬೌಲ್ ಗಾಗಿಯೇ ೪ ದೊಡ್ಡ ಪ್ಯಾಕೆಟ್ ಮ್ಯಾಗಿ ತಗಂಡಿದ್ದು ನಾನು, ಅದರಲ್ಲಿ ಫ್ರೀ ಬತ್ತು .." ಎಂದು ಅವರು ಹೆಮ್ಮೆಯಿಂದ ಹೇಳುವಾಗ ಒಮ್ಮೆಲೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯಲಿಲ್ಲ. ಆದರೆ ಪರಿಸರಕ್ಕೆ ನಮ್ಮ ಕೊಡುಗೆ ಎನ್ನುವುದು - ಕೇವಲ ನಮ್ಮ ಸ್ವಂತ ಪ್ರಯತ್ನ ಒಂದೇ ಅಲ್ಲದೆ, ಅದರ ಕುರಿತಾಗಿ ಒಂದಷ್ಟು ಅರಿವು ನೀಡಬೇಕ್ಕಾದ್ದು ಕೂಡ ಅಷ್ಟೇ ಮುಖ್ಯ. ಸಂದರ್ಭ ನೋಡಿ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ನಮ್ಮಲ್ಲೇ ಇರುವಂತಹ ವಸ್ತುಗಳ ಮರುಬಳಕೆಯ ಕುರಿತು ವಿನಂತಿಸಿಯೇ ಬಂದೆ. ಈಗ ಸಂತೋಷದ ವಿಚಾರವೆಂದರೆ, ಅವರು ತರಕಾರಿ ಚೀಲಗಳನ್ನು ಬಟ್ಟೆಯಿಂದಲೇ ಹೊಲೆದು ಪ್ಲಾಸ್ಟಿಕ್ ಕಡಿಮೆ ಮಾಡಿದ್ದರ ಕುರಿತಾಗಿ ಹೇಳಿಕೊಂಡಿದ್ದಾರೆ. ಉತ್ತರಾಖಂಡ್ ಟ್ರೆಕ್ ಹೋದ ಸಮಯದಲ್ಲಿ, ಚಾರಣದ ಹಾದಿಯ ಮಧ್ಯೆ ಚಾ ಅಂಗಡಿಯಲ್ಲಿ ಒಂದು ಸ್ಟಾಪು ಕೊಟ್ಟುಕೊಂಡೆವು. ಸಾಕಷ್ಟು ಸಿಖ್ಖ ಯಾತ್ರಿಗಳು ಅಲ್ಲಿ ಇದ್ದರು. ಅವರಲ್ಲೊಬ್ಬ 'ಚಿರಯುವಕ' ಅಂಗಡಿಯವನ ಬಳಿ ಬಿಸ್ಕತ್ತಿನ ಪಟ್ಟಣ ಕೊಂಡುಕೊಂಡು ಅಲ್ಲೇ ನಾಲಿಗೆ ಚಾಚಿ ಮುಖ ಮುಖ ನೋಡುತ್ತಿದ್ದ ನಾಯಿಗೆ ಅಷ್ಟೂ ಬಿಸ್ಕತ್...