ಪೋಸ್ಟ್‌ಗಳು

2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಂದ್ರಕಾಣಿ ಪಾಸ್ ಚಾರಣ, ಕುಲು - ಭಾಗ 1

ಇಮೇಜ್
ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ದೆಹಲಿ, ಸಂಸ್ಕೃತ ಭಾರತಿ ಶಿವಮೊಗ್ಗ, ಯೂಥ್ ಹಾಸ್ಟೆಲ್ಸ್ ಅಸ್ಸೊಸಿಯೆಷನ್ ಆಫ್ ಇಂಡಿಯಾ ತರಣೋದಯ ಘಟಕ ಇವರುಗಳ ಸಹಭಾಗಿತ್ವದಲ್ಲಿ ಹಿಮಾಚಲ ಪ್ರದೇಶದ ಚಂದ್ರಕಾಣಿ ಪಾಸ್ ನ ೧೨೫೦೦ ಅಡಿ ಎತ್ತರದ ಪ್ರದೇಶಕ್ಕೆ ನಾವು ೪೨ ಜನರು, ಮೇ ತಿಂಗಳಿನಲ್ಲಿ ಪರ್ವತಾರೋಹಣ ಮಾಡಿದ್ದೆವು. ಚಂದ್ರಕಾಣಿ ಪಾಸ್ ಹಿಮಾಲಯ ಶ್ರೇಣಿಯ ಚಾರಣ ಹೋಗುವವರಿಗೆ ಮಾಹಿತಿ ಉಪಯುಕ್ತವಾಗಬಹುದು ಎಂಬ ಅನಿಸಿಕೆಯಿಂದ ಅನುಭವ ಕಥನ ಹಂಚಿಕೆ.  ದಿನ ೧ : ಚಾರಣಕ್ಕೆ ಹೋಗಿ ಸೇರಿಕೊಳ್ಳುವ ದಿನ. ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜಾಗಗಳಿಂದ ಎಲ್ಲರೂ ಒಟ್ಟು ಸೇರಿ ಡೆಲ್ಲಿಯವರೆಗೆ, ಡೆಲ್ಲಿಯಿಂದ ಚಂಡಿಗರ್ವರೆಗೆ ರೈಲು ಪ್ರಯಾಣದೊಂದಿಗೆ ನಮ್ಮ ಚಾರಣ ತಂಡ ಹೊರಟಿತ್ತು. ನಾವಿಬ್ಬರು ಆಫೀಸು ರಜೆಗಳ ಉಳಿಸುವುದಕ್ಕಾಗಿ ವಿಮಾನದಲ್ಲಿ ಪ್ರಯಾಣಿಸಿ ನಮ್ಮ ತಂಡವನ್ನು ಸೇರಿಕೊಂಡೆವು.  ಬೇರೆ ಬೇರೆ ಭಾಷೆ, ಬೇರೆ ಬೇರೆ ಸಂಸ್ಕೃತಿ, ದೇಶವೊಂದೇ ಭಾರತ. ದೆಹಲಿ, ಉತ್ತರಾಖಂಡ, ಉತ್ತರಪ್ರದೇಶ, ಝಾರ್ಖಂಡ್ ಇನ್ನಿತರ ಸ್ಥಳಗಳಿಂದ ಕೇಂದ್ರೀಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಕೂಡ ಭಾಗವಹಿಸುತ್ತಿದ್ದಾದ್ದರಿಂದ ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಸಂಸ್ಕೃತ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ಇದಾಗಿತ್ತು.  ಚಂಡೀಘರ್ಇಂದ ಬಸ್ ಮಾಡಿಕೊಂಡು ರಾತ್ರಿ ಪ್ರಯಾಣ ಬೆಳೆಸಿದ್ದು,  ಹಾದಿಯುದ್ದಕ್ಕೂ ಎತ್ತರೆತ್ತರ ಪರ್ವತಗಳ ಮಧ್ಯೆ, ಬಿಯಾಸ್ ನದಿಯ ಪಕ್ಕದಲ್ಲಿ...

ರಾಕ್ಷಸಿಗೊಂದು ದೇವಾಲಯ - ಹಡಿಂಬ ದೇವಿ ದೇವಾಲಯ, ಮನಾಲಿ

ಇಮೇಜ್
ಚಂದ್ರಕಾಣಿ ಪಾಸ್ ಚಾರಣದ ನೆಪದಲ್ಲಿ ಕುಲು ತಲುಪಿಯಾಗಿತ್ತು. ಚಾರಣದ ಹಿಂದಿನ acclimatisation ಟ್ರೆಕ್ ದಿನವನ್ನು ಅರ್ಧ ದಿನ ಮುಗಿಸಿ ಇನ್ನರ್ಧ ದಿನ, ೪-೫ ತಾಸುಗಳ ಮಟ್ಟಿಗೆ ಹಿಮಾಚಲ ಪ್ರದೇಶದ ಸುಂದರ ಗಿರಿಧಾಮ ಮನಾಲಿ ಸುತ್ತುವುದು ಎಂಬ ಪ್ಲಾನ್ ಮಾಡಿಕೊಂಡೆವು. ಅಲ್ಲಿ ಭೇಟಿ ನೀಡಬೇಕೆಂದು ಸೂಚಿಸಲಾದ ಸ್ಥಳಗಳು ಹಡಿಂಬ ದೇವಿ ದೇವಾಲಯ ಮತ್ತು ಒಂದಷ್ಟು ಶಾಪಿಂಗ್ಗಾಗಿ ಮಾಲ್ ರೋಡ್ ಸುತ್ತುವುದು ಎಂದು ತಿಳಿಸಿದರು. ಯಾಕೋ ಅನುಮಾನವಾಯಿತು ಮತ್ತೆ ಮತ್ತೆ ಕೇಳಿದೆ. ಮಹಾಭಾರತದಲ್ಲಿ, ಭೀಮ ಮದುವೆಯಾಗಿದ್ದ ಆ  ರಾಕ್ಷಸ ಕುಲದ ಹಿಡಿಂಬೆಗೆ ದೇವಸ್ಥಾನವೇ ? ಎಂದು ಎರಡು-ಮೂರು ಗೈಡ್ ಗಳನ್ನು ಕೇಳಿದೆ. ಹೌದು ಹೌದು ಎಂದರು. ೧೪ ವರ್ಷಗಳ ಹಿಂದೊಮ್ಮೆ ಮನಾಲಿಗೆ ಬಂದಿದ್ದಾಗ ವಿಷ್ಣುವಿನ ದೇವಾಲಯದಕ್ಕೆ ಭೇಟಿ ನೀಡಿದ್ದೆವು, ಈ ದೇವಾಲಯದ ಬಗ್ಗೆ ಕೇಳಿರಲಿಲ್ಲ. ಆಶ್ಚರ್ಯವಾಯಿತು.  ೧೨ನೇ ಮೈಲು ಎಂಬ ಊರಿಂದ ಸ್ಥಳೀಯ ಬಸ್ಸಿನಲ್ಲಿ ಪ್ರಯಾಣ. ೩೦ ನಿಮಿಷಕ್ಕೆಲ್ಲ ಮನಾಲಿಯಲ್ಲಿದ್ದೆವು. ಸ್ಥಳೀಯ ಬಸ್ಸುಗಳಲ್ಲಿ ಕೇಳಸಿಗುವ ಅಲ್ಲಿಯ  ಜನರ ಪಹಾಡಿ ಭಾಷೆ, ಡ್ರೈವರುಗಳ ಜೊತೆ ಮಾತುಕತೆ ಎಲ್ಲವೂ ಮಜಾ ಕೊಡುತ್ತದೆ. ಹಿಮಾಲಯ ಪರ್ವತಗಳ ನಡುವೆ ಇರುವ ಸುಂದರ ಗಿರಿಧಾಮ ಮನಾಲಿ.  ಜೂನ್ ತಿಂಗಳು, ಚುಮು ಚುಮು ಚಳಿ, ತುಂತುರು ಮಳೆ. ಪ್ರವಾಸೋದ್ಯಮವೇ ಮುಖ್ಯ ಆದಾಯವಾದ ಮನಾಲಿ ಒಂದು ಚಿಕ್ಕ ಊರು. ನಮಗೆ ಮನಾಲಿ ೧೪ ವರ್ಷಗಳ ನಂತರ ಎರಡನೇ ಸಲ ನೋಡುತ್ತಿರುವ ಅನುಭವ...