HPE_CSR ಸ್ವಯಂ ಸೇವೆ
HPE_CSR ಟೀಮ್ ನಿಂದ, ಸರ್ಕಾರಿ ಶಾಲಾ ಮಕ್ಕಳಿಗೆ ಟೀಮ್ ಬಿಲ್ಡಿಂಗ್ ಆಕ್ಟಿವಿಟಿ ನೀಡುವ ಸ್ವಯಂ ಸೇವೆ ನೀಡಲು ನಾವು ಕಳೆದ ಶನಿವಾರ, ೨೦ನೇ ಏಪ್ರಿಲ್, ದೊಡ್ಡಬನಹಳ್ಳಿ ಶಾಲೆಯ ಸರ್ಕಾರೀ ಪ್ರಾಥಮಿಕ ಶಾಲೆಯೊಂದಕ್ಕೆ ಭೇಟಿ ನೀಡಿದೆವು. ಬೇಸಿಗೆ ರಜೆ, ಶಾಲೆ ನಡೆಯುವ ಕಾಲವಲ್ಲ, ಎಷ್ಟು ಮಕ್ಕಳು ಬಂದಾರು ಎಂಬ ಅಳುಕಿನಿಂದಲೇ ನಾವು ೬ ಜನರ ತಂಡ ದೊಡ್ಡಬನಹಳ್ಳಿಗೆ ಭೇಟಿನೀಡಿದೆವು. ೩೮ ಮಕ್ಕಳ ಉತ್ಸಾಹದ ಪಾಲ್ಗೊಳ್ಳುವಿಕೆ ನಮ್ಮನ್ನು ಅಚ್ಚರಿ ಮಾಡಿಸಿತು ಮತ್ತು ನಮ್ಮ ಉತ್ಸಾಹ ದುಪ್ಪಟ್ಟಾಗುವಂತೆ ಮಾಡಿತು. ಮಕ್ಕಳೊಂದಿಗೆ ಮಾತುಕತೆ, ಅವರೊಂದಿಗೆ ಕೂಡಿ ನಡೆಸಿದ ಮಂಡಲ ಚಿತ್ರಕಲೆ, ನಕ್ಕು ನಲಿದು ತಿಂಡಿ ಹಣ್ಣುಗಳ ತಿಂದು, ಕಥೆ ಪುಸ್ತಕಗಳ ನೀಡಿ ಬರುವುದರೊಂದಿಗೆ, ೪ ತಾಸುಗಳ ಈ ಕಾರ್ಯಕ್ರಮ, ಮಕ್ಕಳು ಮತ್ತು ನಮ್ಮ ಪಾಲಿಗೆ ಅತ್ಯಂತ ಯಶಸ್ವೀ ಕಾರ್ಯಕ್ರಮ. ಸ್ವಯಂ ಸೇವೆ ಒಂದು ಕರ್ಮಯೋಗ. ಲೆಟ್ಸ್ ಗ್ರೋ ಟುಗೆದರ್ ಎಂದಾಗ ಮಾತ್ರ ನಮ್ಮ ಯಶಸ್ಸು ಎಂಬುವುದು ಪರಿಪೂರ್ಣವಾಗುವುದು. ಅದೇ ಪರಿಕಲ್ಪನೆಯಲ್ಲಿ ನಮ್ಮ HPE_CSR ಟೀಮ್, ಕಂಪೆನಿಯ ಸಹಕಾರದಿಂದ ಸಮಾಜಕ್ಕಾಗಿ, ಪರಿಸರಕ್ಕಾಗಿ ಅನೇಕ ಕಾರ್ಯಕ್ರಮಗಳ ಮೂಲಕ ತಮ್ಮನ್ನು ತಾವೇ ಕೆಲಕಾಲದಿಂದ ತೊಡಗಿಸಿಕೊಳ್ಳುತ್ತ ಬರುತ್ತಿದೆ. ಈ ವಾರ, ನಾವು ಏಳು ಮಂದಿ, ಲೋಕೇಶ್, ಮಹಂತೇಶ್, ಅರುಣಾ, ಸೌಮ್ಯ, ಪಾರುಲ್, ಮಹೇಶ್, ದೀಪಮಾಲಾ ಈ ಸರ್ತಿಯ ಕಾರ್ಯಕ್ರಮಕ್ಕೆ ತಯಾರಾದೆವು. Child Right Foundation ...